Total Solar Eclipse 2024: ಯುಗಾದಿ ಮುನ್ನ 'ಪೂರ್ಣ ಸೂರ್ಯಗ್ರಹಣ': 4 ನಿಮಿಷ ಭೂಮಿ ಕತ್ತಲು, ಸಮಯ ವಿವರ
ಬೆಂಗಳೂರು, ಏಪ್ರಿಲ್ 08: ಯುಗಾದಿ ಹಬ್ಬದ ಒಂದು ದಿನ ಮುನ್ನ ಅಂದರೆ ಇಂದು ಸೋಮವಾರ (ಏಪ್ರಿಲ್ 8) ದಂದು ಸೂರ್ಯಗ್ರಹಣವು ಸಂಭವಿಸಲಿದೆ. ವಿಶೇಷವೆಂದರೆ ಈ 'ಸೂರ್ಯಗ್ರಹಣ'ವು (Solar Eclips 2024) ಭಾರತೀಯರಿಗೆ ಗೋಚರವಾಗುವುದಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಹೌದು, ಅಮೆರಿಕಾದ ಉತ್ತರ ಭಾಗದಲ್ಲಿ ಈ ಸೂರ್ಯಗ್ರಹಣವು ಸಂಭವಿಸಲಿದ್ದು, ಅಲ್ಲಿನ ನಿವಾಸಿಗಳು ಇದನ್ನು ಕಾಣಬಹುದಾಗಿದೆ. ಹಗಲು ಹೊತ್ತಿನಲ್ಲಿಯೇ ಕತ್ತಲು ಕವಿಯುವ ಈ ಸೂರ್ಯಗ್ರಹಣವನ್ನು ಸೆರೆ ಹಿಡಿಯಲು ಖಗೋಳ ವಿಜ್ಞಾನಿಗಳು ಸಜ್ಜಾಗಿದ್ದಾರೆ. ಇಂತಹ ಸನ್ನಿವೇಶಗಳನ್ನು ಸೆರೆ ಹಿಡಿಯಲು ಸಿಗುವ ಅವಕಾಶಗಳು ಬಹಳ ಕಡಿಮೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಸೂರ್ಯಗ್ರಹಣ ವಿದ್ಯಮಾನ ಎಂದರೇನು?
ಸೂರ್ಯಗ್ರಹಣವು ಖಗೋಳ ವಿದ್ಯಮಾನವಾಗಿದೆ. ಭೂಮಿ (Earth) ಮತ್ತು ಸೂರ್ಯನ (Sun) ನಡುವೆ ಚಂದ್ರ (Moon) ಹಾದು ಹೋಗುವುದರಿಂದ ಸೂರ್ಯ ಗ್ರಹಣ ಸಂಭವಿಸುತ್ತಿದೆ. ಈ ವೇಳೆ ಚಂದ್ರ ಸೂರ್ಯನ ಬೆಳಕನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಭೂಮಿಗೆ ಬೀಳದಂತೆ ನಿರ್ಬಂಧಿಸುತ್ತಾರೆ. ಇದು ಹಲವು ರಾಶಿಯವರ ಮೇಲೆ ಸಕಾರಾತ್ಮಕ ಪರಿಣಾಮ ಬೀರಬಹುದು ಎಂದು ಜ್ಯೋತಿಷಿಗಳು ಹೇಳುತ್ತಾರೆ.
ಭೂಮಿ ಬೆಳಕು ನೀಡುವ ಸೂರ್ಯ ಹಾಗೂ ಭೂಮಿ ಮಧ್ಯೆ ಚಂದ್ರ ಗ್ರಹ ಬಂದಾಗ ಸೂರ್ಯ ಬೆಳಕು ಮರೆಯಾಗುತ್ತದೆ. ಚಂದ್ರನ ನೆರಳು ಭೂಮಿಯ ಮೇಲೆ ಬೀಳುವ ಮುಖೇನ ಕತ್ತಲು ಆವರಿಸುತ್ತಿದೆ. ಚಂದ್ರನು ತುಲನಾತ್ಮಕವಾಗಿ ಕಿರಿದಾದ ಬ್ಯಾಂಡ್ ಆಗಿದ್ದು ಅದು ಮೇಲ್ಮೈಯಲ್ಲಿ ಚಲಿಸುತ್ತದೆ. ಈ ವೇಳೆ ಜನರು ಸಂಪೂರ್ಣ ಸೂರ್ಯಗ್ರಹಣವನ್ನು ವೀಕ್ಷಿಸಬಹುದಾಗಿದೆ.

ಹವಾಮಾನ ಮತ್ತು ಮೋಡಗಳು ಪೂರಕವಾಗಿದ್ದರೆ ಮಾತ್ರ ಸಂಪೂರ್ಣತೆಯ ಹಾದಿಯಲ್ಲಿ, ಚಂದ್ರನು ಆವರಿಸಿದ ಸಂದರ್ಭದಲ್ಲಿ ಬೆಳ್ಳಬೆಳ್ಳಗ್ಗೆ, ಇಲ್ಲವೇ ಇಳಿ ಸಂಜೆಯಂತಹ ವಾತಾವರಣ ನಿರ್ಮಾಣವಾಗುತ್ತದೆ. ಇದು ಕಣ್ತುಂಬಿಕೊಳ್ಳಲು ಅಮೆರಿಕಾ ಜನರು ಕಾತರರಾಗಿದ್ದಾರೆ ಎಂದು ವರದಿ ಆಗಿದೆ.
ಸಂಪೂರ್ಣ ಸೂರ್ಯಗ್ರಹಣ ದಿನ, ಸಮಯದ ವಿವರ
2024 ರ ಸಂಪೂರ್ಣ ಸೂರ್ಯಗ್ರಹಣವು ಏಪ್ರಿಲ್ 8 ರಂದು ಸೋಮವಾರ ಜರುಗಲಿದೆ. ಟೋಟಲಿಟಿ ಎಂದೂ ಕರೆಯಲ್ಪಡುವ ಆಕಾಶದ ಸಂಪೂರ್ಣ ಕತ್ತಲೆಯು ಮೆಕ್ಸಿಕೋ, ಯುಎಸ್ ಮತ್ತು ಕೆನಡಾ ನಡುವಿನ 185-ಕಿಲೋಮೀಟರ್ ವಿಸ್ತಾರದಲ್ಲಿ ಗೋಚರಿಸಲಿದೆ. ಅಮರಿಕಾದ ವಿವಿಧ 18 ರಾಜ್ಯಗಳು ಸಹ ಈ ಸೂರ್ಯಗ್ರಹ ವೀಕ್ಷಿಸಬಹುದಾಗಿದೆ. ಆದರೆ ಭಾರತೀಯರಿಗೆ ಈ ಸೂರ್ಯಗ್ರಹನ ಗೋಚರಿಸುವುದಿಲ್ಲ ಎಂದು ಖಗೋಳ ವಿಜ್ಞಾನಿಗಳು ತಿಳಿಸಿದ್ದಾರೆ.
ಭಾರತೀಯ ಸ್ಟ್ಯಾಂಡರ್ಡ್ ಟೈಮ್ (IST) ಅನ್ವಯ ಈ ಸೂರ್ಯಗ್ರಹಣವು ಏಪ್ರಿಲ್ 8 ರಂದು ರಾತ್ರಿ 9:12 ಕ್ಕೆ ಆರಂಭವಾಗುತ್ತದೆ. ಸಂಪೂರ್ಣ ರಾತ್ರಿ 10:08 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಏಪ್ರಿಲ್ 9, 2024 ರಂದು 2:22 ಗಂಟೆಗೆ ಸೂರ್ಯಗ್ರಹಣ ಅಂತ್ಯಗೊಳ್ಳಲಿದೆ.
ಸೂರ್ಯಗ್ರಹಣದ ಸಂಪೂರ್ಣತೆ 4 ನಿಮಿಷ
ಮೆಕ್ಸಿಕೋದ ಪೆಸಿಫಿಕ್ ಕರಾವಳಿಯಿಂದ ಸೂರ್ಯಗ್ರಹಣದ ಮೊದಲು ಸಂಪೂರ್ಣತೆಯನ್ನು ಅನುಭವಿಸಲಿದೆ. ಈ ಸೂರ್ಯಗ್ರಹಣವು ದೀರ್ಘ ಕಾಲದ್ದಾಗಿದೆ. ಸುಮಾರು ಎರಡೂವರೆ ಗಂಟೆಗಳ ಕಾಲ ಭೂಮಿ-ಸೂರ್ಯನ ಮಧ್ಯದ ರೇಖೆಯಲ್ಲಿ ಚಂದ್ರ ಬರಲಿದ್ದಾರೆ. ಆದರೆ ಪೂರ್ತಿ ಕತ್ತಲು ಆವರಿಸುವುದು ಅಂದರೆ ಚಂದ್ರ ಸೂರ್ಯನ ಮಧ್ಯೆ ಗ್ರಹಣ ಸಂಪೂರ್ಣವಾಗಿ ಜರುಗುವುದು ಕೇವಲ ನಾಲ್ಕು ನಿಮಿಷ ಮಾತ್ರ. ಈ ವೇಳೆ ಪೂರ್ತಿ ಕತ್ತಲಾಗಿರಲಿದೆ ಎಂದು NASA ತಿಳಿಸಿದೆ.












Click it and Unblock the Notifications