ಆಗೋದೆಲ್ಲಾ ಒಳ್ಳೇದಕ್ಕೆ, ನಾಯಿಯಿಂದ ತಪ್ಪಿತು ಕೊರೊನಾ ವೈರಸ್!
Recommended Video
ಬೀಜಿಂಗ್, ಜನವರಿ 30: ನಾಯಿಯೊಂದರ ಕೃತ್ಯದಿಂದಾಗಿ ತೈವಾನ್ ನ ಮಹಿಳೆಯೊಬ್ಬರು ಚೀನಾಗೆ ಪ್ರವಾಸ ತೆರಳುವುದು ತಪ್ಪಿಹೋಗಿದೆ. ಆದರೆ ಅದೇ ಅವರಿಗೆ ವರವಾಗಿ ಪರಿಣಮಿಸಿದೆ. ಪ್ರವಾಸಕ್ಕೆ ಹೋಗಲು ಸಾಧ್ಯವಾಗದೇ ಕೊರೋನಾ ವೈರಸ್ ಗೆ ತುತ್ತಾಗುವುದನ್ನು ತಪ್ಪಿಸಿಕೊಂಡಂತೆ ಆಗಿದೆ.
ಈ ಜನವರಿ ಆರಂಭದಲ್ಲಿ ಚೀನಾದ ವುಹಾನ್ ಪ್ರಾಂತ್ಯಕ್ಕೆ ಪ್ರಯಾಣ ಬೆಳೆಸುವ ಯೋಜನೆಯನ್ನು ಹಾಕಿಕೊಂಡಿದ್ದರು. ಆದರೆ ಆಕೆಯ ಪ್ರೀತಿಯ ನಾಯಿ ಪಾಸ್ ಪೋರ್ಟನ್ನೇ ಹರಿದುಹಾಕಿತ್ತು. ಈ ಒಂದು ಕಾರಣದಿಂದಾಗಿ ಚೀನಾದಲ್ಲಿ ಮಾರಾಣಾಂತಿಕವಾಗಿ ಪರಿಣಮಿಸಿರುವ ಕೊರೋನಾ ವೈರಸ್ ಸೋಂಕಿಗೆ ತುತ್ತಾಗುವುದರಲ್ಲಿ ಸ್ವಲ್ಪದರಲ್ಲೇ ಪಾರಾಗಿದ್ದಾರೆ ಇವರು. ಹೀಗೆಂದು ಆ ಮಹಿಳೆಯೇ ತಮ್ಮ ಫೇಸ್ ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.

ಚೀನಾದಲ್ಲಿ ಅತಿಹೆಚ್ಚು ಕೊರೊನಾ ವೈರಸ್ ದಾಖಲಾಗಿರುವ ನಗರ ವುಹಾನ್. ಇಲ್ಲಿಗೆ ಪ್ರವಾಸ ಹಾಕಿಕೊಂಡಿದ್ದ ಮಹಿಳೆಗೆ ಈಗ ತನ್ನ ನಾಯಿ ಪಾಸ್ ಪೋರ್ಟ್ ಹರಿದುಹಾಕಿದ್ದು ಒಳ್ಳೆಯದೇ ಆಗಿದೆ ಎನಿಸಿದೆ. ಪಾಸ್ ಪೋರ್ಟ್ ಹರಿದ ಕ್ಷಣದಲ್ಲಿ ನಾಯಿ ಮೇಲೆ ವಿಪರೀತ ಮುನಿಸಿಕೊಂಡಿದ್ದರಂತೆ ಈ ಮಹಿಳೆ. ಕೊನೆಗೆ ಅದೇ ನಾಯಿಗೆ ಧನ್ಯವಾದ ತಿಳಿಸಿ ಫೇಸ್ ಬುಕ್ ನಲ್ಲಿ ಈ ವಿಷಯವನ್ನು ಪೋಸ್ಟ್ ಮಾಡಿದ್ದಾರೆ. "ನಾನೇನಾದರೂ ವುಹಾನ್ ಗೆ ಹೋಗಿದ್ದರೆ ಕೊರೊನಾ ವೈರಸ್ ಗೆ ಬಲಿಯಾಗುವ ಸಾಧ್ಯತೆ ಇತ್ತು. ಆದರೆ ಕಿಮಿ ನನ್ನ ಪಾಸ್ ಪೋರ್ಟ್ ಹರಿದು ಹಾಕಿದ್ದರಿಂದ ನಾನು ಮನೆಯಲ್ಲೇ ಉಳಿಯುವಂತಾಯಿತು. ನನ್ನ ಕಿಮಿ ನನ್ನನ್ನು ಕಾಪಾಡಿದಳು" ಎಂದು ಬರೆದುಕೊಂಡಿದ್ದಾರೆ.

ಊಟವಿಲ್ಲ, ನೀರಿಲ್ಲ: ಚೀನಾದಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಸ್ಥಿತಿ
ಚೀನಾದಲ್ಲಿ ಕೊರೋನಾ ವೈರಸ್ ನಿಂದ ಈಗಾಗಲೇ 170 ಜನರು ಮೃತಪಟ್ಟಿದ್ದು ವುಹಾನ್ ನಗರವೊಂದರಲ್ಲೇ 160 ಜನರು ಸಾವನ್ನಪ್ಪಿದ್ದಾರೆ. ಚೀನಾದಿಂದ ಆಗಮಿಸುವ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲೇ ತಪಾಸಣೆಗೆ ಒಳಪಡಿಸಿ, ಪ್ರತ್ಯೇಕ ಘಟಕದಲ್ಲಿ ಇರಿಸಲಾಗುತ್ತಿದೆ. ಚೀನಾದಾದ್ಯಂತ ಜನರು ಕಂಗಾಲಾಗಿದ್ದು 7700 ಮಂದಿಗೆ ಸೋಂಕು ತಗುಲಿರುವ ಅಧಿಕೃತ ಮಾಹಿತಿಯನ್ನು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications