• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಖಗ್ರಾಸ ಸೂರ್ಯಗ್ರಹಣ ವೀಕ್ಷಿಸಿ ಕುಣಿದು ಕುಪ್ಪಳಿಸಿದ ಜನತೆ

|

ವಾಷಿಂಗ್ಟನ್, ಆಗಸ್ಟ್ 21: ಇಡೀ ವಿಶ್ವದ ಕುತೂಹಲ ಕೆರಳಿಸಿರುವ ಖಗ್ರಾಸ ಸೂರ್ಯಗ್ರಹಣ ಅಮೆರಿಕದಲ್ಲಿ ಶುರುವಾಗಿ ಜನರನ್ನು ರಂಜಿಸಿತು.

ಎರಡು ಗಂಟೆಗಳ ಅವಧಿಯಲ್ಲಿ ಓರಾಗಾನ್ ನಿಂದ ದಕ್ಷಿಣ ಕ್ಯಾಲಿಫೋರ್ನಿಯಾವರೆಗೆ 14 ರಾಜ್ಯಗಳಲ್ಲಿ ಈ ಖಗ್ರಾಸ ಸೂರ್ಯ ಗ್ರಹಣ ಕಂಡುಬಂದಿದ್ದು, ಎರಡು ನಿಮಿಷಗಳ ಕಾಲ ಸೂರ್ಯ ಕಾಣಲಿಲ್ಲ. ಚಂದ್ರನು ಪೂರ್ತಿಯಾಗಿ ಆವರಿಸಿದಾಗ ವಜ್ರದ ಉಂಗುರದಂತೆ ಭಾಸವಾದ. ಅಮೆರಿಕದ ಹಲವಾರು ದೇಶಗಳಲ್ಲಿ ಎರಡು ನಿಮಿಷಗಳಿಗಿಂತ ಅತಿ ಹೆಚ್ಚು ಅವಧಿವರೆಗೆ ಈ ಗ್ರಹಣ ಗೋಚರಿಸಿತು. ಇದು, 99 ವರ್ಷಗಳ ನಂತರ ಅಮೆರಿಕದಲ್ಲಿ ಕಂಡುಬಂದ ಪೂರ್ಣ ಪ್ರಮಾಣದ ಗ್ರಹಣವೆಂದು ಹೇಳಲಾಗಿದೆ.

ಸೂರ್ಯ ಗ್ರಹಣ ಆಚರಣೆ ಇಲ್ಲ, ಆದರೆ ಈ ರಾಶಿಯವರ ಮೇಲೆ ಪ್ರಭಾವ

ಸೂರ್ಯ ಗ್ರಹಣವು ಈ ಕೆಳಗಿನ ಕಾಲಾವಧಿಯಂತೆ ಗೋಚರಿಸಿತ್ತು.

ಭಾರತೀಯ ಕಾಲಮಾನ ಮಧ್ಯರಾತ್ರಿ 1:45 - ಚಿಕಾಗೋ, ಕಾರ್ಬೆಂಡೇಲ್ ನಗರಗಳಲ್ಲಿ ಸಂಪೂರ್ಣ ಸೂರ್ಯಗ್ರಹಣ. ಕನ್ನಡಕ ಹಾಗೂ ವಿವಿಧ ಉಪಕರಣಗಳ ಸಹಾಯದಿಂದ ಖಗ್ರಾಸ ಗ್ರಹಣ ವೀಕ್ಷಿಸಿ ಖುಷಿಪಟ್ಟ ನಾಗರಿಕರು.

ಭಾರತೀಯ ಕಾಲಮಾನ ಮಧ್ಯರಾತ್ರಿ 11:45 - ನೆಬ್ರಸ್ಕಾದ ಬಿಟ್ರಿಸ್ ನಗರದಲ್ಲಿ ಸಂಪೂರ್ಣ ಸೂರ್ಯಗ್ರಹಣ ಗೋಚರ.

ಭಾರತೀಯ ಕಾಲಮಾನ ಮಧ್ಯರಾತ್ರಿ 11:43 - ಗ್ರಹಣದಿಂದ ಹೊರಬರುತ್ತಿರುವ ಸೂರ್ಯ. ಒರೆಗಾನ್ ನಗರದ ಮೇಲೆ ನಿಧಾನವಾಗಿ ಸೂರ್ಯನ ಕಿರಣಗಳು.

ಭಾರತೀಯ ಕಾಲಮಾನ 11:34 - ಹಲವಾರು ಕಡೆಯಲ್ಲಿ ಸೂರ್ಯಗ್ರಹಣದ ನೇರ ಪ್ರಸಾರ ಏರ್ಪಡಿಸಲಾಗಿತ್ತು. ಒಟ್ಟಾರೆಯಾಗಿ, ಓರೆಗಾನ್ ನ ಜನತೆಯು ಸೂರ್ಯಗ್ರಹಣದ ಅಲೆಯಲ್ಲಿ ಮುಳುಗಿದ್ದರು.

Solar eclipse starts in America's Oregon

ಭಾರತೀಯ ಕಾಲಮಾನ ಮಧ್ಯರಾತ್ರಿ 11:26 - ಸೂರ್ಯಗ್ರಹಣದ ಪರಿಣಾಮ. ಕತ್ತಲಿನತ್ತ ಜಾರುತ್ತಿರುವ ಒರೆಗಾನ್ ನಗರ.

ಭಾರತೀಯ ಕಾಲಮಾನ ಮಧ್ಯರಾತ್ರಿ 11:00 - ಓರೆಗಾನ್ ನ ಮಡ್ರಾಸಾ ನಗರದಲ್ಲಿ ಸೂರ್ಯಗ್ರಹಣದ ಮೊದಲ ನೋಟ ಲಭ್ಯವಾಯಿತು. ಚಂದ್ರ ಗ್ರಹವು ಸೂರ್ಯನನ್ನು ಇಷ್ಟಿಷ್ಟೇ ಆವರಿಸುತ್ತಿದ್ದುದನ್ನು ನೋಡಿ ಪುಳಕಿತರಾದರು. ಇಲ್ಲಿನ ಕಟ್ಟಡಗಳು, ಗುಡ್ಡ, ದಿಬ್ಬ.. ಹೀಗೆ ಎತ್ತರದ ಸ್ಥಳಗಳು ಎಲ್ಲೆಲ್ಲಿ ಸಿಗುವವೊ ಅಲ್ಲೆಲ್ಲಾ ಸಾವಿರಾರು ಜನರು ಸೂರ್ಯಗ್ರಹಣ ವೀಕ್ಷಣೆಯ ಕನ್ನಡಕಗಳನ್ನು ಧರಿಸಿ ಆಗಸದೆಡೆಗೆ ಮುಖ ಮಾಡಿದ್ದರು. ಸೂರ್ಯಗ್ರಹಣವನ್ನು ನೇರಪ್ರಸಾರ ರೂಪದಲ್ಲಿ ನೋಡಲು ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ) ಈ ಕೆಳಗಿನ ಲಿಂಕ್ ಗಳನ್ನು ನೀಡಿದೆ:

Facebook Live -- https://www.facebook.com/NASA/videos/10155497958441772/

Twitter/Periscope -- https://www.pscp.tv/nasa

Twitch TV -- https://twitch.tv/nasa

Ustream -- http://www.ustream.tv/nasahdtv

YouTube -- https://www.youtube.com/watch?v=wwMDvPCGeE0

English summary
Solar eclipse starts in America. Its first portion appeared in Oregon on 10:03 IST.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X