ಸೂರ್ಯ ಗ್ರಹಣ ಆಚರಣೆ ಇಲ್ಲ, ಆದರೆ ಈ ರಾಶಿಯವರ ಮೇಲೆ ಪ್ರಭಾವ

By: ರವಿಕಾಂತ್
Subscribe to Oneindia Kannada

ಆಗಸ್ಟ್ 21ರ ಸೋಮವಾರ ಸೂರ್ಯಗ್ರಹಣ ಎಂಬುದು ನಿಮಗೆ ಗೊತ್ತಿದೆ ಅನ್ನೋದಾದರೆ, ಅದು ಭಾರತದಲ್ಲಿ ಕಾಣಿಸುವುದಿಲ್ಲ ಎಂಬ ಸಂಗತಿ ಗಮನದಲ್ಲಿರಲಿ. ಆದರೆ ಈ ಗ್ರಹಣದ ಪ್ರಭಾವ ಅಂತೂ ಮನುಷ್ಯರ ಮೇಲಿರುತ್ತದೆ. ಮಖಾ ನಕ್ಷತ್ರದಲ್ಲಿ ರವಿ, ಚಂದ್ರ ಹಾಗೂ ರಾಹು ಗ್ರಹ ಸೇರಲಿವೆ.

ಖಗ್ರಾಸ ಸೂರ್ಯಗ್ರಹಣ ಎಲ್ಲೆಲ್ಲಿ ವೀಕ್ಷಣೆಗೆ ಲಭ್ಯ

ಅಂದ ಹಾಗೆ ಇದೇ ವೇಳೆ ಆಶ್ಲೇಷ ನಕ್ಷತ್ರದಲ್ಲಿ ಕುಜ ಗ್ರಹಕ್ಕೆ ಸಮೀಪದಲ್ಲಿ ಇರಲಿದೆ. ಹಾಗೂ ವಕ್ರೀ ಬುಧ ಪುಬ್ಬಾ ನಕ್ಷತ್ರದಲ್ಲಿ ಸ್ಥಿತವಾಗಿದೆ. ಈ ಐದು ಗ್ರಹಗಳ ಕೂಟವು ಇಪ್ಪತ್ತು ಡಿಗ್ರಿಯೊಳಗೆ ಇದ್ದು, ಧನಿಷ್ಠ ನಕ್ಷತ್ರದಲ್ಲಿ ಕೇತು ಗ್ರಹವಿದೆ.

Solar eclipse not visible in India, but impact on Zodiac signs

ಈ ಆರು ಗ್ರಹಗಳು ಅಂದರೆ ರವಿ, ಕುಜ, ಚಂದ್ರ, ರಾಹು, ಕೇತು, ಬುಧ ಸೇರಿ ಕುಂಭ, ಕರ್ಕಾಟಕ ಹಾಗೂ ಸಿಂಹ ರಾಶಿಯವರ ಮೇಲೆ ತೀವ್ರ ಪರಿಣಾಮ ಬೀರುತ್ತವೆ. ನಿದ್ರೆ ಇಲ್ಲದ ರಾತ್ರಿಗಳನ್ನು ಕಳೆಯಬೇಕಾದ ಸ್ಥಿತಿ ತಂದೊಡ್ಡುತ್ತವೆ.

ಆಗಸ್ಟ್ 21ರ ಖಗ್ರಾಸ ಸೂರ್ಯಗ್ರಹಣಕ್ಕೆ ನಾಸಾ ಭರದ ಸಿದ್ಧತೆ

ಕುಜ ಗ್ರಹದ ಸ್ಥಿತಿಯು ಮೇಷ ಹಾಗೂ ವೃಶ್ಚಿಕ ರಾಶಿ ಜಾತಕರಿಗೆ ಒಳ್ಳೆ ಸಮಯವಲ್ಲ ಎಂಬುದನ್ನು ಸೂಚಿಸುತ್ತಿದೆ. ಅಪರಾಧಿ ಪ್ರಜ್ಞೆಯೊಂದು ಕಾಡುತ್ತದೆ. ಈ ಹಿಂದೆ ಕೊಟ್ಟ ಮಾತಿನ ಒತ್ತಡ ಈಗ ಕಾಣಿಸಿಕೊಳ್ಳುತ್ತದೆ.

ಬುಧ ಹಾಗೂ ಶನಿ ಗ್ರಹದ ಸ್ಥಿತಿಯನ್ನು ಗಮನಿಸಿದರೆ ಪ್ರಾಮಾಣಿಕರಿಗೆ ವಂಚನೆಗಳಾಗುವ ಸಾಧ್ಯತೆಗಳು ಕಾಣುತ್ತಿವೆ. ಆಶ್ಲೇಷ ನಕ್ಷತ್ರದಲ್ಲಿ ಕುಜ ಇರುವುದರಿಂದ ಹಾಗೂ ಶನಿ ವೃಶ್ಚಿಕದಲ್ಲಿರುವುದು ಬಿಡುವಿಲ್ಲದ ಕೆಲಸಗಳನ್ನು ತರುತ್ತವೆ. ವದಂತಿಗಳು ಹಬ್ಬುವುದನ್ನು ನಿಲ್ಲಿಸಿ.

ಸೂರ್ಯ ಗ್ರಹಣವು ವಂಶಾಡಳಿತ ಆಡಳಿತ ಹಾಗೂ ಸರ್ವಾಧಿಕಾರಿಗಳಿಗೆ ತೊಂದರೆಯನ್ನು ಸೂಚಿಸುತ್ತದೆ. ಯುಕೆ, ಜರ್ಮನಿ, ಫ್ರಾನ್ಸ್, ಕೆನಡಾ ಹಾಗೂ ಅಮೆರಿಕದಲ್ಲಿ ವಲಸಿಗರಿಂದ ಪ್ರಮುಖ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮುಂದಿನ ಕೆಲವು ತಿಂಗಳಲ್ಲಿ ಅಮೆರಿಕ ಖಂಡದಲ್ಲಿ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತವೆ.

ಮೀನ, ಮಿಥುನ ಹಾಗೂ ತುಲಾ ರಾಶಿಯವರಿಗೆ ಈ ಸೂರ್ಯ ಗ್ರಹಣವು ಶುಭವಾಗಿ ಪರಿಣಮಿಸುತ್ತದೆ. ಅಶ್ವಿನಿ, ಮಖೆ ಹಾಗೂ ಮೂಲಾ ನಕ್ಷತ್ರದಲ್ಲಿ ಜನಿಸಿದವರಾಗಿದ್ದು, ಸದ್ಯ ರವಿ ದಶೆ ನಡೆಯುತ್ತಿದ್ದರೆ ಮುಂದಿನ ಎರಡು ತಿಂಗಳಲ್ಲಿ ಪ್ರಮುಖ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ.

ಆದರೆ, ಸೂರ್ಯ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಆದ್ದರಿಂದ ಯಾವುದೇ ಆಚರಣೆ ಅಗತ್ಯವಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
August 21st solar eclipse not visible in India. But, It has an impact on zodiac signs. Here is the details.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ