ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್..! ವ್ಯಾಕ್ಸಿನ್ ಸಿಕ್ಕಿದೆ ಆದರೆ ಸೇಫ್ಟಿ ಗ್ಯಾರಂಟಿ ಇಲ್ಲ..!

|
Google Oneindia Kannada News

ಕೊರೊನಾ.. ಕೊರೊನಾ.. ಕೊರೊನಾ.. ಹೀಗೆ ಸುಮಾರು 1 ವರ್ಷದಿಂದ ಮಾನವನ ಬಾಯಲ್ಲಿ ಕೊರೊನಾ ಜಪ ನಡೆಯುತ್ತಿದೆ. ಯಾವ ಘಳಿಗೆಯಲ್ಲಿ ಭೂಮಿಗೆ ವಕ್ಕರಿಸಿತೋ ಈ ಮಹಾಮಾರಿ, ಇಡೀ ಮನುಕುಲವೇ ಅಲ್ಲಾಡುವಂತೆ ಮಾಡಿದೆ. ಹತ್ತಾರು ಲಕ್ಷ ಸಾವು, ಕೋಟ್ಯಂತರ ಜನರು ಹಾಸಿಗೆ ಹಿಡಿದ ದೃಶ್ಯಗಳು ಈಗಲೂ ಕಣ್ಣಿಗೆ ರಾಚುತ್ತಿವೆ. ಆದರೆ ಇದಕ್ಕೆಲ್ಲಾ ಅಂತ್ಯ ಹಾಡಲು ಅಸ್ತ್ರವೊಂದು ಅತ್ಯಗತ್ಯವಾಗಿದೆ. ವ್ಯಾಕ್ಸಿನ್ ರೂಪದಲ್ಲಿ ಅಸ್ತ್ರ ಸಿಕ್ಕರೂ ಕೊರೊನಾ ಲಸಿಕೆಗಳ ಸುರಕ್ಷತೆ ಬಗ್ಗೆ ಇನ್ನೂ ಗ್ಯಾರಂಟಿ ಸಿಗುತ್ತಿಲ್ಲ.

ಅತ್ತ ಬ್ರಿಟನ್, ಮತ್ತೊಂದೆಡೆ ರಷ್ಯಾ ಸಾಮೂಹಿಕ ಲಸಿಕೆ ಯೋಜನೆಗೆ ಚಾಲನೆ ನೀಡುತ್ತಿವೆ. ಶನಿವಾರದಿಂದಲೇ ರಷ್ಯಾ ತನ್ನ ದೇಶದ ಜನರಿಗೆ ಸಾಮೂಹಿಕವಾಗಿ ವ್ಯಾಕ್ಸಿನ್ ನೀಡುವ ಕಾರ್ಯಕ್ಕೆ ಚಾಲನೆ ನೀಡಿದೆ. ಡಿಸೆಂಬರ್ 8ರ ಮಂಗಳವಾರ ಬ್ರಿಟನ್‌ನ ಸರದಿ ಶುರುವಾಗಲಿದೆ. ಕೊರೊನಾ ಸೋಂಕಿನಿಂದ ಮಾನವನ ಜೀವ ಉಳಿಸಲು ವ್ಯಾಕ್ಸಿನ್ ಅಸ್ತ್ರ ಪ್ರಯೋಗಕ್ಕೆ ಮುಂದಾಗಿರುವ ಸಂದರ್ಭದಲ್ಲೇ ಹೊಸ ಭೀತಿ ಶುರುವಾಗಿದೆ. ಕೊರೊನಾ ವ್ಯಾಕ್ಸಿನ್‌ಗಳ ಸುರಕ್ಷತೆ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಹೊರಬೀಳದೇ ಇರುವುದು ಸಾಂಕ್ರಾಮಿಕ ರೋಗಗಳ ತಜ್ಞರ ಆತಂಕಕ್ಕೆ ಕಾರಣವಾಗಿದೆ.

ಒಟ್ಟು 58 ಲಸಿಕೆಗಳ ಪ್ರಯೋಗ..!

ಒಟ್ಟು 58 ಲಸಿಕೆಗಳ ಪ್ರಯೋಗ..!

ಉಗುರಲ್ಲಿ ಹೋಗುವುದಕ್ಕೆ ಕೊಡಲಿ ಬಳಸಬಾರದು ಎಂಬ ಮಾತಿದೆ. ಕೊರೊನಾ ವೈರಸ್‌ನ ವಿಚಾರದಲ್ಲಿ ಈ ಮಾತು ಅಕ್ಷರಶಃ ಸತ್ಯ. ಕೊರೊನಾ ಸೋಂಕನ್ನ ಅಷ್ಟು ಸುಲಭವಾಗಿ ಭೂಮಿಯಿಂದ ತೊಲಗಿಸಲು ಸಾಧ್ಯವಿಲ್ಲ ಎಂಬುದು ಎಷ್ಟು ಸ್ಪಷ್ಟವೋ, ವ್ಯಾಕ್ಸಿನ್ ಪ್ರಯೋಗದಿಂದ ಎಡವಟ್ಟಾದರೆ ಸೋಂಕಿಗಿಂತ ದೊಡ್ಡ ಗಂಡಾಂತರ ಎದುರಾಗಲಿದೆ ಎಂಬುದು ಅಷ್ಟೇ ಸ್ಪಷ್ಟ. ಈಗ ಬೇಕು ಆಗ ಬೇಡ ಎಂಬಂತಹ ಸ್ಥಿತಿ ಕೂಡ ಎದುರಾಗಬಹುದು.

ಫೈಜರ್‌ ಕೊರೊನಾ ಲಸಿಕೆಗೆ ಯುಕೆ ಬಳಿಕ ಮತ್ತೊಂದು ರಾಷ್ಟ್ರ ಒಪ್ಪಿಗೆಫೈಜರ್‌ ಕೊರೊನಾ ಲಸಿಕೆಗೆ ಯುಕೆ ಬಳಿಕ ಮತ್ತೊಂದು ರಾಷ್ಟ್ರ ಒಪ್ಪಿಗೆ

ಭೂಮಿಯಲ್ಲಿ ಕೊರೊನಾ ವಕ್ಕರಿಸಿದ ನಂತರ 58 ಲಸಿಕೆಗಳ ಪ್ರಯೋಗ ನಡೆದಿದೆ. ಒಟ್ಟು 58 ಲಸಿಕೆಗಳ ಪೈಕಿ ಕೊನೇ ಹಂತಕ್ಕೆ ಬಂದಿರುವುದು ಕೇವಲ 13 ಲಸಿಕೆಗಳು. ಏಕೆಂದರೆ ಔಷಧಕ್ಕೂ, ಲಸಿಕೆ (Vaccine)ಗಳಿಗೂ ಭಾರಿ ವ್ಯತ್ಯಾಸವಿದೆ. ಈ ಔಷಧಗಳನ್ನ ಹೇಗಾದರೂ ನಿಭಾಯಿಸಬಹುದು, ಆದರೆ ಲಸಿಕೆಗಳಿಂದ ರಿಯಾಕ್ಷನ್ ಎದುರಾದರೆ ಊಹೆಗೆ ನಿಲುಕದ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಹೀಗಾಗಿಯೇ ತಜ್ಞರು ಕೊರೊನಾ ವ್ಯಾಕ್ಸಿನ್ ಬಳಕೆಗೂ ಮೊದಲು ಎಚ್ಚರವಾಗಿರಿ ಎಂದು ಸಲಹೆ ನೀಡುತ್ತಿದ್ದಾರೆ.

ರಷ್ಯಾದ ‘ಸ್ಪುಟ್ನಿಕ್-ವಿ’ ಎಷ್ಟು ಸುರಕ್ಷಿತ..?

ರಷ್ಯಾದ ‘ಸ್ಪುಟ್ನಿಕ್-ವಿ’ ಎಷ್ಟು ಸುರಕ್ಷಿತ..?

2019ರ ಡಿಸೆಂಬರ್‌ನಲ್ಲಿ ಕೊರೊನಾ ವೈರಸ್ ಮೊದಲ ಬಾರಿಗೆ ಚೀನಾದಲ್ಲಿ ಪತ್ತೆಯಾದ ಬಳಿಕ, ಈ ವೈರಸ್‌ಗೆ ವಿರುದ್ಧವಾಗಿ ಲಸಿಕೆ ಬಳಸುವುದಕ್ಕೆ ಮೊದಲು ಅನುಮತಿ ನೀಡಿದ ದೇಶ ರಷ್ಯಾ. 'ಸ್ಪುಟ್ನಿಕ್-ವಿ' ಲಸಿಕೆಯನ್ನ ರಷ್ಯಾ ಅಪ್ರೂವ್ ಮಾಡಿ ಹಲವು ತಿಂಗಳುಗಳೇ ಕಳೆದಿದೆ. ಆದರೆ ಈ ಲಸಿಕೆಯ ಅಂತಿಮ ಹಂತದ ಪ್ರಯೋಗ ಇನ್ನೂ ಪೂರ್ಣವಾಗಿಲ್ಲ ಎಂದರೆ ನೀವು ನಂಬಲೇಬೇಕು. ಒಂದು ಲಸಿಕೆಯನ್ನು 3 ಹಂತಗಳಲ್ಲಿ ಪ್ರಯೋಗಕ್ಕೆ ಒಳಪಡಿಸಿ, ವಿವಿಧ ರೀತಿಯ ದೇಹಗಳ ಮೇಲೆ ಪರೀಕ್ಷೆ ಮಾಡುತ್ತಾರೆ.

ಏಕೆಂದರೆ ಒಬ್ಬರ ದೇಹ ಪ್ರಕೃತಿಗೂ, ಮತ್ತೊಬ್ಬರ ದೇಹ ಪ್ರಕೃತಿಗೂ ವ್ಯತ್ಯಾಸ ಇರುತ್ತದೆ. ಹೀಗೆ ಕೋಟ್ಯಂತರ ಜನರಿಗೆ ಲಸಿಕೆ ನೀಡುವಾಗ ಒಂದು ಸಮೂಹದ ಮೇಲೆ ಹೊಸ ವ್ಯಾಕ್ಸಿನ್ ಹೇಗೆ ಪ್ರಭಾವ ಬೀರಲಿದೆ ಎಂಬುದನ್ನು ಮೊದಲು ಅರಿತುಕೊಳ್ಳಬೇಕು. ಹೀಗೆ 3 ಹಂತಗಳ ಪ್ರಯೋಗದ ನಂತರ ಕೂಡ ಕೆಲವು ಕ್ಲಿನಿಕಲ್ ಟೆಸ್ಟ್ ನಡೆದು, ನಂತರವಷ್ಟೇ ಲಸಿಕೆಯನ್ನ ಬಳಕೆಗೆ ಮುಕ್ತಗೊಳಿಸುತ್ತಾರೆ. ಆದರೆ ರಷ್ಯಾದ 'ಸ್ಪುಟ್ನಿಕ್-ವಿ' ಲಸಿಕೆಯನ್ನ ತರಾತುರಿಯಲ್ಲಿ, ಪ್ರಾರಂಭಿಕ ಹಂತದಲ್ಲೇ ಅಪ್ರೂವ್ ಮಾಡಿರುವ ಆರೋಪವಿದೆ.

‘ವ್ಯಾಕ್ಸಿನ್ ವಿಚಾರದಲ್ಲಿ ರೇಸ್ ಬೇಡ’..!

‘ವ್ಯಾಕ್ಸಿನ್ ವಿಚಾರದಲ್ಲಿ ರೇಸ್ ಬೇಡ’..!

ವ್ಯಾಕ್ಸಿನ್ ಸಂಶೋಧಕರು ಹಾಗೂ ಸಾಂಕ್ರಾಮಿಕ ರೋಗಗಳ ತಜ್ಞರು ಹೀಗೆ ವಿಶ್ವದ ಮುಂದೆ ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಾರೆ. ವ್ಯಾಕ್ಸಿನ್ ಒಂದು ಸ್ಪರ್ಧೆಯ ವಿಚಾರ ಅಲ್ಲವೇ ಅಲ್ಲ. ಈಗ ನಮಗೆ ಎದುರಾಗಿರುವುದು ಒಂದೇ ಸಮಸ್ಯೆ, ಅದು ಕೊರೊನಾ. ಇಂತಹ ಮಾರಣಾಂತಿಕ ಸೋಂಕಿನ ವಿರುದ್ಧ ಹೋರಾಡುವಾಗ ನಮ್ಮಲ್ಲಿ ಸ್ಪರ್ಧೆ ಬೇಡ. ಇಡೀ ಮನುಕುಲವೇ ಒಗ್ಗಟ್ಟಿನಿಂದ ಹಾಗೂ ತಾಳ್ಮೆಯಿಂದ ಕೊರೊನಾ ವಿರುದ್ಧ ಹೋರಾಟದ ಮನೋಭಾವ ತೋರಬೇಕು ಎಂದು ತಜ್ಞರು ಬೇಡಿಕೊಳ್ಳುತ್ತಿದ್ದಾರೆ. ಅಕಸ್ಮಾತ್ ವ್ಯಾಕ್ಸಿನ್ ವಿಚಾರದಲ್ಲಿ ತಪ್ಪು ನಡೆದರೆ ಘೋರ ದುರಂತ ಸಂಭವಿಸಬಹುದು ಎಂಬ ಎಚ್ಚರಿಕೆಯನ್ನ, ಅಮೆರಿಕದ ಡಾ. ಆಂಥೋನಿ ಫೌಸಿ ಸೇರಿದಂತೆ ಜಗತ್ತಿನ ಹಲವು ತಜ್ಞರು ನೀಡುತ್ತಿದ್ದಾರೆ.

ರಷ್ಯಾದಲ್ಲೂ ಕೊರೊನಾಗೆ ರಾಮಬಾಣ: ಸ್ಪುಟ್ನಿಕ್-ವಿ ಬಳಕೆಗೆ ಸರ್ಕಾರ ಆದೇಶರಷ್ಯಾದಲ್ಲೂ ಕೊರೊನಾಗೆ ರಾಮಬಾಣ: ಸ್ಪುಟ್ನಿಕ್-ವಿ ಬಳಕೆಗೆ ಸರ್ಕಾರ ಆದೇಶ

Recommended Video

ಎತ್ತರದ ಶಿಖರ Mt Everest , ಪುನಃ ಅಳತೆ ಮಾಡ್ಬೇಕಂತೆ | Oneindia Kannada
ಮಂಗಳವಾರ ಮಹತ್ವದ ದಿನ..!

ಮಂಗಳವಾರ ಮಹತ್ವದ ದಿನ..!

ಕೊರೊನಾ ಕೂಪದಲ್ಲಿ ನರಳುತ್ತಿರುವ ಬ್ರಿಟನ್ ಡಿಸೆಂಬರ್ 8 ಅಂದರೆ ಮಂಗಳವಾರದಿಂದಲೇ ಸಾಮೂಹಿಕ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದೆ. 'ಫೈಜರ್‌' ಲಸಿಕೆಯನ್ನ ಅಧಿಕೃತವಾಗಿ ಜನರಿಗೆ ನೀಡುವುದಕ್ಕಾಗಿ ಸಕಲ ಸಿದ್ಧತೆ ನಡೆದಿದೆ. ಹೀಗಾಗಿ ಮಂಗಳವಾರ ಕೇವಲ ಬ್ರಿಟನ್‌ಗೆ ಮಾತ್ರವಲ್ಲ, ಇಡೀ ಜಗತ್ತಿಗೆ ಮಹತ್ವದ ದಿನವಾಗಲಿದೆ. 'ಫೈಜರ್‌' ಲಸಿಕೆ ಸಾಕಷ್ಟು ಸದ್ದು ಮಾಡುತ್ತಿದೆ. ಬ್ರಿಟನ್‌ನಲ್ಲಿ ಸಾಮೂಹಿಕವಾಗಿ 'ಫೈಜರ್‌' ಲಸಿಕೆ ನೀಡಲಾಗುತ್ತಿದೆ. ಇಲ್ಲಿ ದೊರೆಯುವ ರಿಸಲ್ಟ್ ಜಗತ್ತಿನ ಮೇಲೆ ಪ್ರಭಾವ ಬೀರಲಿದೆ. ಒಟ್ಟಾರೆ ಈ ಎಲ್ಲಾ ಅಂಶಗಳನ್ನ ಅಳೆದು, ತೂಗಿ ಹೇಳುವುದಾದರೆ ಕೊರೊನಾ ಎಂಬ ಮಹಾಮಾರಿಗೆ ವ್ಯಾಕ್ಸಿನ್ ಸಿಕ್ಕರೂ ಲಸಿಕೆಗಳ ಸುರಕ್ಷತೆ ಬಗ್ಗೆ ಗ್ಯಾರಂಟಿ ಸಿಕ್ಕಿಲ್ಲ. ಹೀಗಾಗಿ ಲಸಿಕೆಗಳ ಮೇಲೆ ನಿರೀಕ್ಷೆಯ ಭಾರ ಹಾಕುವುದಕ್ಕಿಂತ, ಸೋಂಕು ಹರಡದಂತೆ ತಡೆಯಲು ಅಗತ್ಯವಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸಿಕೊಂಡು ಬರಬೇಕಿದೆ.

English summary
The Russia and Britain have prepared for mass vaccination, but the experts still have doubts about the safety of corona vaccines.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X