ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾದಲ್ಲೂ ಕೊರೊನಾಗೆ ರಾಮಬಾಣ: ಸ್ಪುಟ್ನಿಕ್-ವಿ ಬಳಕೆಗೆ ಸರ್ಕಾರ ಆದೇಶ

|
Google Oneindia Kannada News

ನವದೆಹಲಿ, ಡಿಸೆಂಬರ್.02: ಕೊರೊನಾವೈರಸ್ ಸೋಂಕಿಗೆ ಲಸಿಕೆ ಯಾವಾಗ ಸಿಗುತ್ತದೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಇಂಗ್ಲೆಂಡ್ ಬೆನ್ನಲ್ಲೇ ರಷ್ಯಾದಲ್ಲೂ ಕೊವಿಡ್-19 ಲಸಿಕೆಯ ಸಾರ್ವಜನಿಕ ಬಳಕೆಗೆ ಸರ್ಕಾರ ಅನುಮೋದನೆ ನೀಡಿದೆ.

ರಷ್ಯಾದಲ್ಲಿ ಮುಂದಿನ ವಾರದಿಂದಲೇ ಸ್ಪುಟ್ನಿಕ್-ವಿ ಕೊರೊನಾವೈರಸ್ ಲಸಿಕೆಯನ್ನು ಸಾರ್ವಜನಿಕವಾಗಿ ಬಳಸುವುದಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಧಿಕೃತವಾಗಿ ಆದೇಶಿಸಿದ್ದಾರೆ. ರಷ್ಯಾ ಪ್ರಜೆಗಳಿಗೆ ಈ ಲಸಿಕೆಯನ್ನು ಉಚಿತವಾಗಿ ನೀಡುವುದಕ್ಕೆ ಸರ್ಕಾರವು ತೀರ್ಮಾನಿಸಿದೆ.

ಕೊವಿಡ್-19 ಲಸಿಕೆ ಪೈಪೋಟಿ: ಕೊವಿಡ್-19 ಲಸಿಕೆ ಪೈಪೋಟಿ: "Cheap And Best" ಬೆಲೆಗೆ ಸ್ಪುಟಿಕ್-ವಿ

ಜರ್ಮನ್ ಫಾರ್ಮಾಸೆಂಟಿಕಲ್ ಕಂಪನಿ ಆಗಿರುವ ಬಯೋನೆಟೆಕ್ ಮತ್ತು ಯುನೈಟೆಡ್ ಸ್ಟೇಟ್ಸ್ ಸಹಭಾಗಿತ್ವದ ಫೈಜರ್ ಕಂಪನಿ ಸಂಶೋಧಿಸಿರುವ ಕೊವಿಡ್-19 ಲಸಿಕೆಗಳನ್ನು ಇಂಗ್ಲೆಂಡ್ ಸರ್ಕಾರವು ಅನುಮೋದನೆ ನೀಡಿತ್ತು. ಇದರ ಬೆನ್ನಲ್ಲೇ ರಷ್ಯಾ ಸರ್ಕಾರ ಸ್ಪುಟ್ನಿಕ್-ವಿ ಲಸಿಕೆಯ ಬಳಕೆಗೆ ಅನುಮೋದನೆ ನೀಡಿದೆ.

ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ಇತರೆ ಲಸಿಕೆಗಿಂತ ಅಗ್ಗ

ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ಇತರೆ ಲಸಿಕೆಗಿಂತ ಅಗ್ಗ

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಸಿದ್ಧವಾಗುತ್ತಿರುವ ಕೊವಿಡ್-19 ಲಸಿಕೆಗಿಂತ ಕಡಿಮೆ ದರದಲ್ಲಿ ರಷ್ಯಾದ ಸ್ಪುಟ್ನಿಕ್-ವಿ ಲಸಿಕೆ ಸಿಗಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಪಿ-ಫಿಜರ್ ಮತ್ತು ಮಾಡರ್ನಾ ಕಂಪನಿಯ ಕೊರೊನಾವೈರಸ್ ಲಸಿಕೆಗಿಂತ ರಷ್ಯಾದ ಸ್ಪುಟ್ನಿಕ್-ವಿ ಲಸಿಕೆ ದರವು ತೀರಾ ಕಡಿಮೆಯಾಗಿರಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಇಂಗ್ಲೆಂಡ್ ನಲ್ಲಿ ಮೊದಲ ಕೊವಿಡ್-19 ಲಸಿಕೆಗೆ ಸಮ್ಮತಿ

ಇಂಗ್ಲೆಂಡ್ ನಲ್ಲಿ ಮೊದಲ ಕೊವಿಡ್-19 ಲಸಿಕೆಗೆ ಸಮ್ಮತಿ

ಬಯೋನೆಟೆಕ್ ಮತ್ತು ಫೈಜರ್ ಲಸಿಕೆಗೆ ಇಂಗ್ಲೆಂಡ್ ಸರ್ಕಾರ ಈಗಾಗಲೇ ಅನುಮೋದನೆ ನೀಡಿದೆ. ಮುಂದಿನ ವಾರದಲ್ಲೇ ಇಂಗ್ಲೆಂಡ್ ನಲ್ಲಿ ಕೊರೊನಾವೈರಸ್ ಲಸಿಕೆ ಬಳಕೆಗೆ ಬರಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಕೊವಿಡ್-19 ಲಸಿಕೆಯು ಉತ್ತಮ ಗುಣಮಟ್ಟ, ಸುರಕ್ಷಿತ ಹಾಗೂ ಪರಿಣಾಮಕಾರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಲಾಗಿದೆ ಎಂದು ಇಂಗ್ಲೆಂಡ್ ಮಡಿಸನ್ಸ್ ಆಂಡ್ ಹೆಲ್ತ್ ಕೇರ್ ಪ್ರಾಡೆಕ್ಟ್ಸ್ ರೆಗ್ಯುಲೆಟರ್ ಏಜೆನ್ಸಿ ತಿಳಿಸಿದೆ. ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗಾಗಿ ಸಿದ್ಧಪಡಿಸಿದ BNT162b2 ಮಾದರಿಯ ಲಸಿಕೆಗೆ ಅನುಮೋದನೆ ಸಿಕ್ಕಿದ್ದಲ್ಲಿ 2020ರಲ್ಲೇ ಈ ಲಸಿಕೆ ಬಳಕೆಗೆ ತರಲಾಗುತ್ತದೆ ಎಂದು ಬಯೋನೆಟೆಕ್ ಕಂಪನಿ ಮೊದಲೇ ಹೇಳಿದೆ. ಈ ಸಂಬಂಧ ನವೆಂಬರ್.20ರಂದೇ ಎರಡೂ ಕಂಪನಿಗಳು ಕೊರೊನಾವೈರಸ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡುವಂತೆ ಯುನೈಟೆಡ್ ಸ್ಟೇಟ್ಸ್ ಆಹಾರ ಮತ್ತು ಔಷಧೀಯ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದವು.

ಜಗತ್ತಿನಲ್ಲಿ ಮೊದಲು ನೋಂದಾಯಿತ ಲಸಿಕೆ

ಜಗತ್ತಿನಲ್ಲಿ ಮೊದಲು ನೋಂದಾಯಿತ ಲಸಿಕೆ

ರಷ್ಯಾದ ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ಸೂಕ್ಷ್ಮ ಜೀವವಿಜ್ಞಾನದ ಗಮಾಲಿಯಾ ನ್ಯಾಷನಲ್ ರಿಸರ್ಚ್ ಸೆಂಟರ್ ಅಭಿವೃದ್ಧಿಪಡಿಸಿರುವ ಸ್ಪುಟ್ನಿಕ್-ವಿ ಲಸಿಕೆ ಆಗಸ್ಟ್.11ರಂದೇ ನೋಂದಾಯಿಸಲಾಗಿತ್ತು. ವಿಶ್ವದಲ್ಲೇ ಕೊವಿಡ್-19 ಲಸಿಕೆ ನೋಂದಾಯಿಸಿದ ಮೊದಲ ರಾಷ್ಟ್ರ ಎಂದು ರಷ್ಯಾ ಎನಿಸಿಕೊಂಡಿದೆ. ಕೊರೊನಾವೈರಸ್ ಸೋಂಕಿತರ ಮೇಲೆ ಪ್ರಯೋಗಿಸುವುದಕ್ಕೆ ರಷ್ಯಾದಲ್ಲಿ ಸಿದ್ಧಪಡಿಸಿರುವ ಸ್ಟುಟ್ನಿಕ್-ವಿ ಲಸಿಕೆಯು ಶೇ.95ರಷ್ಟು ಪರಿಣಾಮಕಾರಿ ಮತ್ತು ಸುರಕ್ಷಿತವಾಗಿದೆ ಎಂದು ಕಳೆದ ನವೆಂಬರ್.11ರಂದು ಸಂಶೋಧನಾ ಸಂಸ್ಥೆಯು ಖಾತ್ರಿಪಡಿಸಿತ್ತು.

ಯಾವ ಕಂಪನಿಯ ಕೊರೊನಾವೈರಸ್ ಲಸಿಕೆ ಬೆಲೆ ಎಷ್ಟು?

ಯಾವ ಕಂಪನಿಯ ಕೊರೊನಾವೈರಸ್ ಲಸಿಕೆ ಬೆಲೆ ಎಷ್ಟು?

ಸರ್ಕಾರಕ್ಕೆ ಮಾಡರ್ನ ಕಂಪನಿಯು ಕೊರೊನಾವೈರಸ್ ಲಸಿಕೆ ಮಾರಾಟ ಮಾಡುವುದಕ್ಕೆ ಸಿದ್ಧವಾಗಿದೆ. ಒಂದು ಡೋಸ್ ಕೊವಿಡ್-19 ಲಸಿಕೆಗೆ 1854 ರೂಪಾಯಿಯಿಂದ 2744 ರೂಪಾಯಿ (25-37 ಡಾಲರ್) ನಿಗದಿಗೊಳಿಸಲಾಗುತ್ತದೆ ಎಂದು ಕಂಪನಿಯ ಸಿಇಓ ಸ್ಟೆಫನ್ ಬ್ಯಾನ್ಸಲ್ ತಿಳಿಸಿದ್ದಾರೆ. ಕೊರೊನಾವೈರಸ್ ಸೋಂಕಿತರಿಗೆ ಫೈಜರ್ ಕಂಪನಿಯ ಲಸಿಕೆಯ ಒಂದು ಡೋಸ್ ಗೆ 1447 ರೂಪಾಯಿ(19.50 ಡಾಲರ್ ) ದರ ನಿಗದಿಗೊಳಿಸಲಾಗಿದೆ. ಒಬ್ಬ ಕೊವಿಡ್-19 ಸೋಂಕಿತನಿಗೆ ಕನಿಷ್ಠ 2 ಡೋಸ್ ಲಸಿಕೆ ಅಗತ್ಯವಿರುತ್ತದೆ. ಈ ಹಿನ್ನೆಲೆ ಫೈಜರ್ ಕಂಪನಿಯ ಲಸಿಕೆ ಪಡೆದುಕೊಳ್ಳಲು ಕನಿಷ್ಠ 3708 ರೂಪಾಯಿ (50 ಡಾಲರ್) ವೆಚ್ಚವಾಗಲಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಫೈಜರ್ ಮತ್ತು ಮಾಡರ್ನಾ ಕಂಪನಿಯ ಕೊವಿಡ್-19 ಲಸಿಕೆಗಿಂತ ಅಗ್ಗದ ದರದಲ್ಲಿ ರಷ್ಯಾದ ಸ್ಪುಟ್ನಿಕ್-ವಿ ಲಸಿಕೆಯನ್ನು ನೀಡಲಾಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

English summary
Coronavirus Vaccine: Russia President Vladimir Putin Orders Mass Vaccination With Sputnik V Shot In Next Week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X