Get Updates
Get notified of breaking news, exclusive insights, and must-see stories!

ಫೈಜರ್‌ ಕೊರೊನಾ ಲಸಿಕೆಗೆ ಯುಕೆ ಬಳಿಕ ಮತ್ತೊಂದು ರಾಷ್ಟ್ರ ಒಪ್ಪಿಗೆ

ಬಹ್ರೇನ್, ಡಿಸೆಂಬರ್ 05: ಬಯೋಎನ್‌ಟೆಕ್‌ನ ಫೈಜರ್ ಕೊರೊನಾ ಲಸಿಕೆಗೆ ಯುಕೆ ಬಳಿಕ ಮತ್ತೊಂದು ರಾಷ್ಟ್ರ ಒಪ್ಪಿಗೆ ನೀಡಿದೆ.

ಹೌದು ಫೈಜರ್ ಕೊರೊನಾ ಲಸಿಕೆಗೆ ಬ್ರಿಟನ್ ಸರ್ಕಾರ ಗ್ರೀನ್‌ಸಿಗ್ನಲ್ ನೀಡಿದ ಬಳಿಕ ಇದೀಗ ಬಹ್ರೇನ್ ಕೂಡ ಸಮ್ಮತಿಸಿದೆ. ಮುಂದಿನ ವಾರದಿಂದಲೇ ತನ್ನ ಎಲ್ಲಾ ಪ್ರಜೆಗಳಿಗೆ ಫೈಜರ್-ಬಯೋ ಎನ್ ಟೆಕ್‌ ಸಂಸ್ಥೆಯ ಕೊರೊನಾ ಲಸಿಕೆಯನ್ನು ನೀಡಲು ಬ್ರಿಟನ್ ಸರ್ಕಾರ ನಿರ್ಧರಿಸಿದೆ.

ಫೈಜರ್-ಬಯೋ ಎನ್ ಟೆಕ್‌ ಸಂಸ್ಥೆ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೊರೊನಾ ವೈರಸ್ ಲಸಿಕೆಗೆ ಮಾನ್ಯತೆ ನೀಡಿದ ಹಾಗೂ ಈ ಲಸಿಕೆಯನ್ನು ಜನರ ಮೇಲೆ ಪ್ರಯೋಗ ನಡೆಸಲು ಒಪ್ಪಿಗೆ ನೀಡಿದ ವಿಶ್ವದ ಮೊದಲ ದೇಶವಾಗಿ ಬ್ರಿಟನ್ ಹೊರಹೊಮ್ಮಿದೆ.

Bahrain Becomes Second Country To Approve Pfizer-BioNTech Corona Vaccine

ಇನ್ನು ಬ್ರಿಟನ್ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ಫೈಜರ್-ಬಯೋ ಆ್ಯಂಡ್‌ ಟೆಕ್ ಸಂಸ್ಥೆ, ಸಂಸ್ಥೆಯ ಪಾಲಿಗೆ ಇದೊಂದು ಹೆಮ್ಮೆಯ ಮತ್ತು ಐತಿಹಾಸಿಕ ಕ್ಷಣ ಎಂದು ಸಂತಸ ವ್ಯಕ್ತಪಡಿಸಿದೆ.

ಫೈಜರ್ ಕೊರೊನಾ ಲಸಿಕೆಯ ಸಾರ್ವತ್ರಿಕ ಬಳಕೆಗೆ ಆರೋಗ್ಯ ಉತ್ಪನ್ನಗಳ ನಿಯಂತ್ರಣ ಸಂಸ್ಥೆ (MHRA) ಮಾಡಿದ್ದ ಶಿಫಾರಸನ್ನು ಸ್ವೀಕರಿಸಿರುವುದಾಗಿ ಬ್ರಿಟನ್ ಸರ್ಕಾರ ಘೋಷಿಸಿದೆ. ಇನ್ನು ಯಾರಿಗೆ ಯಾವ ಹಂತದಲ್ಲಿ ಕೊರೊನಾ ಲಸಿಕೆ ನೀಡಬೇಕು ಹಾಗೂ ಮೊದಲ ಪ್ರಾಶಸ್ತ್ಯ ಪಟ್ಟಿ ಸಿದ್ಧಪಡಿಸುವ ಜವಾಬ್ದಾರಿಯನ್ನು ಬ್ರಿಟನ್‌ನ ಲಸಿಕಾ ಸಮಿತಿಗೆ ನಿರ್ವಹಿಸಲಾಗಿದೆ.

ಬ್ರಿಟನ್ ಸರ್ಕಾರದ ಆದ್ಯತಾ ಪಟ್ಟಿಯನ್ನು ಅನುಸರಿಸಿ ಹಂತ ಹಂತವಾಗಿ ದೇಶದಲ್ಲಿ ಕೊರೊನಾ ಲಸಿಕೆ ಬಿಡುಗಡೆಗೆ ತುರ್ತು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ಈ ಸಮಿತಿ ನೀಡುವ ಆದ್ಯತಾ ಪಟ್ಟಿಯನ್ನು ಆಧರಿಸಿ ಹಂತ ಹಂತವಾಗಿ ಬ್ರಿಟನ್‌ನ ಎಲ್ಲಾ ನಾಗರಿಕರಿಗೆ ಕೊರೊನಾ ಲಸಿಕೆ ನೀಡಲು ಸರ್ಕಾರ ಸಿದ್ಧವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+