ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡೋನೇಷ್ಯಾದಲ್ಲಿ ತೆಂಗಿನ ಚಿಪ್ಪನ್ನು ಮಾಸ್ಕ್‌ ಮಾಡಿ ಧರಿಸಿದ ವ್ಯಕ್ತಿಗೆ 'ಪುಶ್‌ ಅಪ್‌' ಶಿಕ್ಷೆ

|
Google Oneindia Kannada News

ಇಂಡೋನೇಷ್ಯಾ, ಸೆಪ್ಟೆಂಬರ್‌, 09: ಕೊರೊನಾ ವೈರಸ್‌ ಸೋಂಕು ಈ ವಿಶ್ವದಲ್ಲಿ ಕಾಣಿಸಿಕೊಂಡ ಬಳಿಕ ಮಾಸ್ಕ್‌ ಧರಿಸುವುದು ಅನಿವಾರ್ಯವಾಗಿ ಬಿಟ್ಟಿದೆ. ಇನ್ನು ಈ ಮಾಸ್ಕ್‌ ಧರಿಸುವುದು ನಮ್ಮ ಜೀವನದ ಒಂದು ಸಾಮಾನ್ಯ ಭಾಗವಾಗಿದೆ ಎಂದು ಕೂಡಾ ನಾವು ಹೇಳಬಹುದು. ನಾವು ಎಲ್ಲಿಗೆ ಹೋಗುವುದಾದರೂ ಬೇರೆ ಏನನ್ನೂ ಮರೆತರೂ ಮಾಸ್ಕ್‌ ಮಾತ್ರ ಹಾಕಿಕೊಂಡು ಹೋಗುವಂತಹ ಪರಿಸ್ಥಿತಿ ಈಗ ಉಂಟಾಗಿದೆ.

ಈ ನಡುವೆ ದಿನಲೂ ಅದೇ ಮಾಸ್ಕನ್ನು ಧರಿಸುವುದು ಬೇಜಾರಾಗಿ ಹಲವಾರು ಮಂದಿ ಮಾಸ್ಕ್‌ನಲ್ಲೇ ವೈವಿಧ್ಯತೆಯನ್ನು ತರುವ ಪ್ರಯತ್ನಗಳನ್ನು ಮಾಡಿದ್ದಾರೆ. ಹಲವಾರು ಮಂದಿ ತಮ್ಮ ಉಡುಗೆಗೆ ತಕ್ಕುದಾದ ಮಾಸ್ಕ್‌ ಧರಿಸಿದರೆ ಇನ್ನೂ ಕೆಲವು ಸೆಲೆಬ್ರೆಟಿಗಳು ಅತೀ ದುಬಾರಿಯಾದ ಮಾಸ್ಕ್‌ ಅನ್ನು ಧರಿಸುವುದನ್ನು ಕೂಡಾ ನಾವು ನೋಡಿದ್ದೇವೆ. ಈ ನಡುವೆ ಇಂಡೋನೇಷ್ಯಾದಲ್ಲಿ ವ್ಯಕ್ತಿಯೊಬ್ಬ ತೆಂಗಿನ ಚಿಪ್ಪಿನ ಮಾಸ್ಕ್ ಅನ್ನು ಧರಿಸಿ "ಪುಶ್‌ ಅಪ್‌" ಶಿಕ್ಷೆಗೆ ಒಳಗಾಗಿದ್ದಾನೆ.

ಕೊರೊನಾವೈರಸ್ ಕಟ್ಟಿ ಹಾಕಲು ಕೊರೊನಾವೈರಸ್ ಕಟ್ಟಿ ಹಾಕಲು "ಡಬಲ್ ಮಾಸ್ಕ್" ಸೂತ್ರ!?

ಬಂಗಾರದ ಮಾಸ್ಕ್‌, ಮುತ್ತು ರತ್ನಗಳ ಮಾಸ್ಕ್‌, ಸರ್ಜಿಕಲ್‌ ಮಾಸ್ಕ್, ಬಟ್ಟೆಯ ಮಾಸ್ಕ್ ಎಲ್ಲದರ ಬಗ್ಗೆ ನೀವು ವರದಿಯನ್ನು ಓದಿಸುವಿರಿ. ಆದರೆ ಇಂಡೋನೇಷ್ಯಾದಲ್ಲಿ ವ್ಯಕ್ತಿಯೊಬ್ಬ ಈ ಮಾಸ್ಕ್‌ನಲ್ಲಿ ಹೊಸ ಸಂಶೋಧನೆಯನ್ನು ಮಾಡಿ, ತೆಂಗಿನ ಚಿಪ್ಪಿನಲ್ಲಿ ಮಾಸ್ಕ್‌ ತಯಾರಿ ಮಾಡಿದ್ದಾನೆ. ಈ ತೆಂಗಿನ ಚಿಪ್ಪಿನ ಮಾಸ್ಕ್‌ ಸಾಮಾಜಿಕ ಜಾಲತಾಣದಲ್ಲಿ ಭಾರೀ ಗಮನವನ್ನು ಸೆಳೆದಿದೆ. ಆದರೆ ಇಲ್ಲಿನ ಸ್ಥಳೀಯ ಆಡಳಿತ ಮಾತ್ರ ಈತನ ವಿರುದ್ದ ಗುರ್‌ ಎಂದಿದೆ.

Indonesian man ordered to do push-ups for wearing coconut shell as mask

ಬಾಲಿಯ ಡೆನ್ಪಾಸರ್‌ನ 44 ವರ್ಷದ ನೆಂಗಾ ಬುದಿಯಾಸ ತೆಂಗಿನ ಚಿಪ್ಪನ್ನು ಉಪಯೋಗಿಸಿ ಮಾಸ್ಕ್‌ ಅನ್ನು ತಯಾರಿ ಮಾಡುವ ಮೂಲಕ ಪ್ರದೇಶದಲ್ಲಿ ಮನೆ ಮಾತಾಗಿದ್ದಾನೆ. ಇನ್ನು ಈ ಮಾಸ್ಕ್‌ನಲ್ಲಿ ವಿಸಲ್‌ ಅನ್ನು ಕೂಡಾ ಅಳವಡಿಕೆ ಮಾಡಲಾಗಿದೆ. ಕಾರುಗಳನ್ನು ಸರಿಯಾದ ರೀತಿಯಲ್ಲಿ ಪಾರ್ಕ್ ಮಾಡಲು ನಿರ್ದೇಶನ ಮಾಡುವ ಈತನಿಗೆ ಈ ವಿಸಲ್‌ ಮುಖ್ಯವಾದ ಕಾರಣ ತಾನೇ ತಯಾರಿ ಮಾಡಿದ ಈ ತೆಂಗಿನ ಚಿಪ್ಪಿನ ಮಾಸ್ಕ್‌ನಲ್ಲಿ ವಿಸಲ್‌ ಅನ್ನು ಅಳವಡಿಕೆ ಮಾಡಿದ್ದಾನೆ. ಆದರೆ ಈತ ಈ ತೆಂಗಿನ ಚಿಪ್ಪಿನ ಮಾಸ್ಕ್‌ ಧರಿಸಿ ಕಾರ್ಯನಿರ್ವಹಿಸುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದ್ದು, ಕೊರೊನಾ ವೈರಸ್‌ ನಿಯಮಗಳನ್ನು ಸುರಕ್ಷಿತವಾಗಿ ಪಾಲಿಸದ ಕಾರಣ ಶಿಕ್ಷೆಯನ್ನು ನೀಡಿದ್ದಾರೆ.

ಆದರೆ ನೆಂಗಾ ಬುದಿಯಾಸಗೆ ಪೊಲೀಸರು ದಂಡವನ್ನು ವಿಧಿಸಿಲ್ಲ. ಬದಲಾಗಿ ಶಿಕ್ಷೆಯಾಗಿ ಸ್ಥಳದಲ್ಲೇ "ಪುಶ್‌ ಅಪ್‌" ಮಾಡುವಂತೆ ಪೊಲೀಸರು ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಸಾರ್ವಜನಿಕ ಆದೇಶ ಸಂಸ್ಥೆಯು ಆತನಿಗೆ ಸರಿಯಾದ ಮಾಸ್ಕ್‌ ಅನ್ನು ಕೂಡಾ ಒದಗಿಸಿದೆ ಎಂದು ಕೂಡಾ ವರದಿಯಾಗಿದೆ.

 ಪ್ರಿಯಾಳ ಮಾಸ್ಕ್‌: ಕೊರೊನಾ ವಿರುದ್ಧ ಸೆಣಸುವ ಮೊದಲ ಕಾಮಿಕ್ ನಾಯಕಿ ಕಥೆ, ಇದೀಗ ಕನ್ನಡದಲ್ಲೂ ಲಭ್ಯ ಪ್ರಿಯಾಳ ಮಾಸ್ಕ್‌: ಕೊರೊನಾ ವಿರುದ್ಧ ಸೆಣಸುವ ಮೊದಲ ಕಾಮಿಕ್ ನಾಯಕಿ ಕಥೆ, ಇದೀಗ ಕನ್ನಡದಲ್ಲೂ ಲಭ್ಯ

ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ, ಸತ್ಪೋಲ್ ಪಿಪಿ ಡೆನ್ಪಾಸರ್ ಮುಖ್ಯಸ್ಥ ದೇವ ಅನೋಮ್ ಸಾಯೋಗ, "ಆತ ಕೊರೊನಾ ವೈರಸ್‌ ಸೋಂಕಿನ ನಿಯಮವನ್ನು ಉಲ್ಲಂಘನೆ ಮಾಡಬೇಕು ಎಂದು ಉದ್ದೇಶ ಹೊಂದಿರಲಿಲ್ಲ. ಆದರೆ ಆತ ಮಾಸ್ಕ್‌ ಎಂದು ಚಿಪ್ಪನ್ನು ಧರಿಸಿರುವುದು ಸರಿಯಲ್ಲ. ಯಾಕೆಂದರೆ ಸರ್ಕಾರ ಇದನ್ನು ಧರಿಸುವಂತೆ ಎಲ್ಲಿಯೂ ಸೂಚನೆ ನೀಡಿಲ್ಲ. ಆದ್ದರಿಂದ ನಾವು ಆತನಿಗೆ ಸರಿಯಾದ ಮಾಸ್ಕ್ ಅನ್ನು ನೀಡಿದ್ದೇವೆ," ಎಂದು ತಿಳಿಸಿದ್ದಾರೆ.

ಇನ್ನು ಈ ಹಿಂದೆ ಮಾಧ್ಯಮದೊಂದಿಗೆ ಮಾತನಾಡಿದ್ದ ನೆಂಗಾ ಬುದಿಯಾಸ ತಾನು ಏಕೆ ತೆಂಗಿನ ಚಿಪ್ಪನ್ನು ಮಾಸ್ಕ್‌ ಆಗಿ ಪರಿವರ್ತನೆ ಮಾಡಿದ್ದೇನೆ ಎಂದು ವಿವರಣೆ ನೀಡಿದ್ದಾನೆ. ನೆಂಗಾ ಬುದಿಯಾಸ ಪ್ರಕಾರ, ತಾನು ಕೆಲಸ ಮಾಡುವ ಸ್ಥಳದಲ್ಲಿ ಪದೇ ಪದೇ ಮಾಸ್ಕ್ ಅನ್ನು ತೆಗೆದು ವಿಸಲ್‌ ಅನ್ನು ಊದುವುದು ಬೇಡ ಎಎಂಬ ಕಾರಣಕ್ಕೆ ಆತ ಈ ವಿಸಲ್‌ ಇರುವ ಮಾಸ್ಕ್‌ ಅನ್ನು ಹಾಕಿದ್ದಾನೆ.

ತಾನು ವಿಸಲ್‌ ಅನ್ನು ಊದುವ ಉದ್ದೇಶದಿಂದ ಮಾಸ್ಕ್‌ ಅನ್ನು ಪದೇ ಪದೇ ತೆಗೆಯುವುದರಿಂದಾಗಿ ತನ್ನ ಮಾಸ್ಕ್‌ನಲ್ಲಿ ಕೊಳೆಯಾಗುವ ಕಾರಣದಿಂದಾಗಿ ಹಲವಾರು ಗ್ರಾಹಕರು ಈ ವಿಷಯದಲ್ಲಿ ತನ್ನ ಬಳಿ ವಾಗ್ವಾದ ನಡೆಸಿದ್ದಾರೆ ಎಂದು ಆತ ಹೇಳುತ್ತಾನೆ. "ಈ ತೆಂಗಿನ ಚಿಪ್ಪಿನ ಮಾಸ್ಕ್‌ ಬಳಕೆಗೆ ಅತೀ ಸುಲಭವಾಗಿದೆ ಹಾಗೂ ಯಾವುದೇ ತೊಂದರೆ ಉಂಟಾಗುವುದಿಲ್ಲ. ಹಾಗೆಯೇ ಇದು ಉತ್ತಮವೂ ಕೂಡಾ ಹೌದು," ಎಂದು ನೆಂಗಾ ಬುದಿಯಾಸ ವಾದ ಮಾಡಿದ್ದಾನೆ. ಇನ್ನು ನಾನು ಪಾರ್ಕಿಂಗ್‌ ಕೆಲಸ ಮಾಡುವ ಸಂದರ್ಭದಲ್ಲಿ ಮಾತ್ರ ಈ ತೆಂಗಿನ ಚಿಪ್ಪಿನ ಮಾಸ್ಕ್‌ ಅನ್ನು ಧರಿಸುತ್ತೇನೆ. ಉಳಿದ ಸಂದರ್ಭದಲ್ಲಿ ಈ ಮಾಸ್ಕ್‌ಗಳನ್ನು ನಾನು ಧರಿಸುವುದಿಲ್ಲ. ಹಾಗೆಯೇ ಅದನ್ನು ಪ್ರತಿ ದಿನ ತೊಳೆದು ಬಳಸುತ್ತೇನೆ," ಎಂದು ಕೂಡಾ ನೆಂಗಾ ಬುದಿಯಾಸ ಹೇಳಿದ್ದಾರೆ.

(ಒನ್‌ ಇಂಡಿಯಾ ಸುದ್ದಿ)

English summary
Indonesian man ordered to do push-ups for wearing coconut shell as mask. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X