• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರಿಯಾಳ ಮಾಸ್ಕ್‌: ಕೊರೊನಾ ವಿರುದ್ಧ ಸೆಣಸುವ ಮೊದಲ ಕಾಮಿಕ್ ನಾಯಕಿ ಕಥೆ, ಇದೀಗ ಕನ್ನಡದಲ್ಲೂ ಲಭ್ಯ

|

ಚೆನ್ನೈ, ಜನವರಿ 23: ಚೆನ್ನೈನಲ್ಲಿರುವ ಅಮೆರಿಕ ದೂತಾವಾಸ ಕಚೇರಿಯು ಜನಪ್ರಿಯ ಕಾಮಿಕ್ ಸೀರಿಸ್ "ಪ್ರಿಯಾಳ ಮಾಸ್ಕ್‌" ಅವತರಣಿಕೆಯನ್ನು ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಮಾಡಿದೆ. ಎರಡು ನಿಮಿಷಗಳ ಚಲನಚಿತ್ರವಾದ ಇದು 2020ರ ಕೋವಿಡ್-19 ಸಾಂಕ್ರಾಮಿಕ ರೋಗದ ಕುರಿತಾಗಿ ಸಾರ್ವಜನಿಕ ಸೇವಾ ಪ್ರಕಟಣೆಯಾಗಿದೆ.

ಸಾಂಕ್ರಾಮಿಕ ರೋಗವು ಮಕ್ಕಳು, ಹದಿಹರೆಯದವರು ಮತ್ತು ಅವರ ಕುಟುಂಬಗಳಿಗೆ ದೈನಂದಿನ ಜೀವನದಲ್ಲಿ ಬದಲಾವಣೆಗಳನ್ನು ತರುವ ಮೂಲಕ ತೊಂದರೆಗಳನ್ನು ಸೃಷ್ಟಿಸಿದೆ. ಪ್ರಿಯಾಳ ಮಾಸ್ಕ್‌ ಕಾಮಿಕ್ ಅಂತಹ ಯುವಜನರ ಹೋರಾಟಗಳು ಮತ್ತು ಸಾಂಕ್ರಾಮಿಕ ರೋಗದ ಪರಿಣಾಮಗಳ ಬಗ್ಗೆ ಸ್ವಲ್ಪ ಒಳನೋಟವನ್ನು ತರುವ ಗುರಿಯನ್ನು ಹೊಂದಿದೆ. ಇದು ಕಥಾ ನಾಯಕಿಯನ್ನು ಹೊಂದಿದ ಭಾರತದ ಮೊಟ್ಟಮೊದಲ ಕಾಮಿಕ್ ಪುಸ್ತಕವಾಗಿದೆ.

ಪ್ರಿಯಾ ಜಗತ್ತಿನ ಎಲ್ಲಾ ಹುಡುಗಿಯರಿಗೆ ಸಾಮರ್ಥ್ಯ ಹಾಗೂ ಬದಲಾವಣೆಯ ಪ್ರೇರಕ ಶಕ್ತಿಯ ಸಂಕೇತವಾಗಿದ್ದಾಳೆ. ಎಲ್ಲಾ ದೇಶಗಳಲ್ಲಿ ಜನರ ಆರೋಗ್ಯ ಮತ್ತೆ ಸುರಕ್ಷೆತೆಗೆ ಆತಂಕ ತಂದೊಡ್ಡಿರುವ ಕೋವಿಡ್-19 ಸಾಂಕ್ರಾಮಿಕ ಹಾಗೂ ಅದರ ಸುತ್ತ ಹರಡಿರುವ ತಪ್ಪು ಮಾಹಿತಿ ಮತ್ತು ಭಯದ ವಿರುದ್ಧ ಹೋರಾಡುತ್ತಾಳೆ.

ಈ ಜನಪ್ರಿಯ ಕಾಮಿಕ್ ಸೀರಿಸ್ ಅನ್ನು ಅಮೆರಿಕ ಮೂಲದ ಮಾಧ್ಯಮ ಸಂಸ್ಥೆಯ ಸಂಸ್ಥಾಪಕರು, ಸಾಕ್ಷ್ಯಚಿತ್ರ ನಿರ್ದೇಶಕರು ಹಾಗೂ ತಂತ್ರಜ್ಞಾನ ಪರಿಣಿತರು ಆಗಿರುವ ರಾಮ್ ದೇವಿನೇನಿ ಅವರು ಸೃಷ್ಟಿಸಿದ್ದು, ನವದೆಹಲಿಯ ಅಮೆರಿಕ ದೂತಾವಾಸ ಕಚೇರಿಯ ಶುಭ್ರಾ ಪ್ರಕಾಶ್ ಅವರು ಉತ್ತರ ಭಾರತ ಕಚೇರಿಯ(North India Office) ಸಹಾಯದೊಂದಿಗೆ ಇದನ್ನು ಬರೆದಿದ್ದಾರೆ.

ಪ್ರಿಯಾ, ಯುವತಿಯಾದ ಮೀನಾಳೊಂದಿಗೆ ಸ್ನೇಹ ಬೆಳೆಸುತ್ತಾಳೆ, ಅವರ ತಾಯಿ ನರ್ಸ್ ಆಗಿದ್ದು, ತಾಯಿಯ ಕೆಲಸದ ಮಹತ್ವವನ್ನು ಗಮನಿಸುತ್ತಾಳೆ ಮತ್ತು ಸಮಾಜದ ಹೆಚ್ಚಿನ ಒಳಿತಿಗಾಗಿ ತಾಯಿ ತನ್ನ ಮಗಳೊಂದಿಗಿನ ಸಮಯವನ್ನು ಹೇಗೆ ತ್ಯಾಗ ಮಾಡುತ್ತಿದ್ದಾಳೆಂದು ತಿಳಿಯುತ್ತದೆ.

ಈ ವೀಡಿಯೋದಲ್ಲಿ ತಾಯಿ ಮನೆಗೆ ಹಿಂದಿರುಗಿದಾಗ ನೆರೆಹೊರೆಯವರಿಗೆ ಕಿಟಕಿಗಳ ಬಳಿಗೆ ಬರಲು ಆಯೋಜಿಸುತ್ತಾಳೆ, ಜೊತೆಗೆ ಎಲ್ಲರೂ ಚಪ್ಪಾಳೆ ತಟ್ಟುವ ಮೂಲಕ ಕೃತಜ್ಞತೆ ಸಲ್ಲಿಸುತ್ತಾರೆ.

ಕೋವಿಡ್-19 ಸಂಕಷ್ಟವನ್ನು ಎದುರಿಸುವ, ಧೈರ್ಯ ತುಂಬುವ ಈ ಕಾಮಿಕ್ ಪುಸ್ತಕದ ಜೊತೆಗೆ ಭಾರತ ಮತ್ತು ಅಮೆರಿಕದ ಸೆಲೆಬ್ರೆಟಿಗಳಾದ ರೊಸಾನ ಆರ್ಕೆಟ್, ವಿದ್ಯಾ ಬಾಲನ್, ಮೃಣಾಲ್ ಠಾಕುರ್ ಮತ್ತು ಸೈರಾ ಕಬೀರ್ ಅವರ ಧ್ವನಿಗಳನ್ನು ಹೊಂದಿದ ಅನಿಮೇಟೆಡ್ ಕಿರುಚಿತ್ರ ಕೂಡ ಹೊರಬರಲಿದೆ.

ಪ್ರಿಯಾಳ ಮಾಸ್ಕ್‌ ಚಿತ್ರಕಥೆಯು ಈಗ ತಮಿಳು, ಕನ್ನಡ ಮತ್ತು ಮಲಯಾಳಂ ಭಾಷಾ ಅವೃತ್ತಿಗಳನ್ನು ಉಚಿತವಾಗಿ https://www.priyashakti.com/priyas-mask ಇಲ್ಲಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

English summary
Priya's Mask is a two-minute film that is also a Public Service Announcement about the COVID-19 Coronavirus Pandemic of 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X