RCB: ಫೈನಲ್ ಪಂದ್ಯ ಆಡದೆಯೂ ಆರ್‌ಸಿಬಿಗೆ ಟ್ರೋಫಿ ಗೆಲ್ಲುವ ಅವಕಾಶ, ಇಲ್ಲಿದೆ ಮಾಹಿತಿ
RCB Vs GT RCB IPL 2026 Trophy: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ (ಮೇ 31) ನಡೆಯಲಿರುವ ಐಪಿಎಲ್ 2026ರ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ರೋಚಕದ ಪಂದ್ಯ ನಡೆಯದಿದ್ದರೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟ್ರೋಫಿ ಗೆಲ್ಲುತ್ತದೆ. ಹೇಗೆ ಸಾಧ್ಯ ಅಂತೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಐಪಿಎಲ್ 2026ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಇಡೀ ಕ್ರಿಕೆಟ್ ಜಗತ್ತು ಈ ಹೈ-ವೋಲ್ಟೇಜ್ ಪಂದ್ಯ ವೀಕ್ಷಣೆಗಾಗಿ ಕಾತರದಿಂದ ಕಾಯುತ್ತಿದೆ. ಆದರೆ ಈ ಮಹಾಸಮರಕ್ಕೆ ಮಳೆ ಅಡ್ಡಿಪಡಿಸಿದರೆ ಬಿಸಿಸಿಐನ ನಿಯಮಗಳ ಪ್ರಕಾರ ವಿಜೇತರನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಯಿರಿ.

ಪಂದ್ಯ ರದ್ದಾದ್ರೆ ಮುಂದಿನ ನಿರ್ಧಾರ ಏನು?
ನಿಗದಿತ ದಿನದಂದು ಮಳೆಯ ಕಾರಣದಿಂದಾಗಿ ಫೈನಲ್ ಪಂದ್ಯವನ್ನು ಸಂಪೂರ್ಣವಾಗಿ ನಡೆಸಲು ಸಾಧ್ಯವಾಗದಿದ್ದರೆ, ಪಂದ್ಯವನ್ನು ಮರುದಿನಕ್ಕೆ ಮುಂದೂಡಲಾಗುತ್ತದೆ. ಅಂದರೆ ಭಾನುವಾರ ಎಲ್ಲಿಗೆ ಆಟ ನಿಂತಿರುತ್ತದೆಯೋ ಅಲ್ಲಿಂದಲೇ ಸೋಮವಾರ ಪಂದ್ಯ ಮುಂದುವರಿಯುತ್ತದೆ. ಒಂದು ವೇಳೆ ಭಾನುವಾರ ಟಾಸ್ ಮಾತ್ರ ಆಗಿ ಪಂದ್ಯ ಆರಂಭವಾಗದಿದ್ದರೆ ರಿಸರ್ವ್ ಡೇ ದಿನ ಮತ್ತೆ ಹೊಸದಾಗು ಪಂದ್ಯ ಶುರುವಾಗಲಿದೆ.
ಮೀಸಲು ದಿನ: ಐಪಿಎಲ್ ಫೈನಲ್ ಪಂದ್ಯಕ್ಕೆ ಮಾತ್ರ ವಿಶೇಷ ಮೀಸಲು ದಿನದ ವ್ಯವಸ್ಥೆ ಇರುತ್ತದೆ. ನಿಗದಿತ ದಿನದಂದು ಮಳೆಯಿಂದಾಗಿ ಒಂದೂ ಎಸೆತ ಆಗದೆ ಪಂದ್ಯ ರದ್ದಾದರೆ, ಮರುದಿನ ಪಂದ್ಯವನ್ನು ಹೊಸದಾಗಿ ಆರಂಭಿಸಲಾಗುತ್ತದೆ. ಒಂದು ವೇಳೆ ನಿಗದಿತ ದಿನದಂದೇ ಪಂದ್ಯ ಆರಂಭವಾಗಿ ಅರ್ಧಕ್ಕೆ ನಿಂತರೆ ಮರುದಿನ ಎಲ್ಲಿಗೆ ನಿಂತಿರುತ್ತದೆಯೋ ಅಲ್ಲಿಂದಲೇ ಪಂದ್ಯ ಮುಂದುವರಿಯುತ್ತದೆ.
ಓವರ್‌ಗಳ ಕಡಿತ: ಪಂದ್ಯದ ಫಲಿತಾಂಶಕ್ಕಾಗಿ ಕನಿಷ್ಠ ತಲಾ 5 ಓವರ್‌ಗಳ ಪಂದ್ಯವನ್ನಾದರೂ ನಡೆಸಲು ಅಂಪೈರ್‌ಗಳು ಪ್ರಯತ್ನಿಸುತ್ತಾರೆ. ಇದಕ್ಕಾಗಿ ಪಂದ್ಯದ ಸಮಯವನ್ನು ಹೆಚ್ಚುವರಿಯಾಗಿ 120 ನಿಮಿಷಗಳವರೆಗೆ ವಿಸ್ತರಣೆ ಮಾಡಲಾಗುತ್ತದೆ.
ಸೂಪರ್ ಓವರ್ ಯಾವಾಗ ಆಡಿಸಲಾಗುತ್ತದೆ?
ಮೀಸಲು ದಿನದಂದು ಕೂಡ ನಿರಂತರ ಮಳೆ ಬಂದು ಕನಿಷ್ಠ 5 ಓವರ್‌ಗಳ ಪಂದ್ಯವನ್ನು ಆಡಿಸಲು ಸಾಧ್ಯವಾಗದಿದ್ದಾಗ ಮಾತ್ರ ಸೂಪರ್ ಓವರ್ ಆಯ್ಕೆಯ ಮೊರೆ ಹೋಗಲಾಗುತ್ತದೆ. ಮೈದಾನ ಮತ್ತು ಪಿಚ್‌ನ ಪರಿಸ್ಥಿತಿ ಸೂಪರ್ ಓವರ್ ಆಡಲು ಯೋಗ್ಯವಾಗಿದ್ದರೆ ಮತ್ತು ಮಳೆ ನಿಂತಿದ್ದರೆ ಮಾತ್ರ ಅಂಪೈರ್‌ಗಳು ಸೂಪರ್ ಓವರ್ ಆಡಿಸಲು ನಿರ್ಧರಿಸುತ್ತಾರೆ. ನಿಯಮಗಳ ಪ್ರಕಾರ ಫೈನಲ್ ಪಂದ್ಯದ ಸೂಪರ್ ಓವರ್ ಆರಂಭಿಸಲು ಸಮಯ ಮಧ್ಯರಾತ್ರಿ 1:20 ಗಂಟೆ ಆಗಿರುತ್ತದೆ
ಸೂಪರ್ ಓವರ್ ಸಾಧ್ಯವಾಗದಿದ್ದರೆ ಮುಂದಿನ ನಿರ್ಧಾರವೇನು?
ಒಂದು ವೇಳೆ ಮೀಸಲು ದಿನದಂದೂ ಮಳೆ ನಿಲ್ಲದೆ ಮೈದಾನದ ಪರಿಸ್ಥಿತಿ ಹದಗೆಟ್ಟು ಸೂಪರ್ ಓವರ್ ಕೂಡ ನಡೆಸಲು ಸಾಧ್ಯವಾಗದಿದ್ದರೆ ಐಪಿಎಲ್ ಲೀಗ್ ಹಂತದ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನ ಪಡೆದ ತಂಡವನ್ನು ನೇರವಾಗಿ ವಿನ್ನರ್ ಎಂದು ಘೋಷಿಸಿ ಟ್ರೋಫಿ ನೀಡಲಾಗುತ್ತದೆ. ಆದರೆ ಇಂತಹ ಪರಿಸ್ಥತಿ ಎದುರಾಗುವುದು ತುಂಬಾ ಅಪರೂಪ. ಒಂದು ವೇಳೆ ಇದು ಸಂಭವಿಸಿದರೆ ಮಾತ್ರ ಆರ್‌ಸಿಬಿ ವಿನ್ನರ್ ಎಂದು ಘೊಷಣೆ ಮಾಡಲಾಗುತ್ತದೆ. ಯಾಕೆಂದ್ರೆ ಲೀಗ್ ಹಂತದಲ್ಲಿ ರನ್ ರೇಟ್‌ನಲ್ಲಿ ಅಗ್ರ ಸ್ಥಾನದಲ್ಲಿರುವುದು ಆರ್‌ಸಿಬಿ ತಂಡ.
ಅಹಮದಾಬಾದ್ ಹವಾಮಾನ ವರದಿ
ಅಕ್ಯುವೆದರ್ ವರದಿಯ ಪ್ರಕಾರ, ಪಂದ್ಯಕ್ಕೆ ಮಳೆಯ ಯಾವುದೇ ಅಡ್ಡಿ ಇರುವುದಿಲ್ಲ. ಆದರೆ ಅಹಮದಾಬಾದ್‌ನಲ್ಲಿ ವಿಪರೀತ ಸೆಖೆ ಇರಲಿದ್ದು, ಹಗಲಿನ ವೇಳೆ ತಾಪಮಾನ ಪ್ರಮಾಣ 41 ಡಿಗ್ರಿ ಸೆಲ್ಸಿಯಸ್‌ವರೆಗೆ ತಲುಪುವ ಸಾಧ್ಯತೆಯಿದೆ. ಸಂಜೆಯ ವೇಳೆಯೂ ತಾಪಮಾನ 30 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿರಲಿದೆ.
ಒಟ್ಟಿನಲ್ಲಿ ಹೇಳುವುದಾರೆ ಒಂದು ವೇಳೆ ಮಳೆ ಬಂದು ಒಂದು ಎಸೆತವೂ ಆಗದಿದ್ದರೆ ಮೀಸಲು ದಿನವಾಗಿ ಮಾರನೇ ದಿನಕ್ಕೆ ಪಂದ್ಯವನ್ನು ಮುಂದೂಡಲಾಗುತ್ತದೆ. ಅಂದು ಸಹ ಇದೇ ಮತ್ತೆ ಮುಂದುವರೆದರೆ ಅಂಕಪಟ್ಟಿಯಲ್ಲಿ ನೆಟ್ ರನ್ ರೇಟ್‌ನಲ್ಲಿ ಅಗ್ರಸ್ಥಾನದಲ್ಲಿರುವ ತಂಡವನ್ನು ಚಾಂಪಿಯನ್ ಎಂದು ಘೋಷಣೆ ಮಾಡಲಾಗುತ್ತದೆ.












Click it and Unblock the Notifications