16 ಪಾಸ್‌ಪೋರ್ಟ್, 245 ದೇಶ: ಕೇವಲ 6 ವರ್ಷಗಳಲ್ಲಿ ಇಡೀ ಜಗತ್ತನ್ನೇ ಸುತ್ತಿದ ಬೆಂಗಳೂರಿನ ಬೆನ್ನಿ ಪ್ರಸಾದ್

ಇಡೀ ಜಗತ್ತನ್ನೇ ಸುತ್ತಬೇಕು ಎನ್ನುವುದು ಹಲವರ ಜೀವಮಾನದ ಕನಸಾಗಿರುತ್ತದೆ. ಪಾಶ್ಚಿಮಾತ್ಯ ದೇಶದವರಿಗೆ ಕೇವಲ ಫ್ಲೈಟ್ ಟಿಕೆಟ್ ಬುಕ್ ಮಾಡುವುದು ಮಾತ್ರ ಪ್ರವಾಸದ ಸಿದ್ಧತೆಯಾಗಿದ್ದರೆ, ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ ವೀಸಾ ಪಡೆಯುವುದು ದೊಡ್ಡ ಸವಾಲು. ಆದರೆ, ಈ ಎಲ್ಲಾ ಅಡೆತಡೆಗಳನ್ನು ಮೀರಿ ಬೆಂಗಳೂರಿನ ಸಂಗೀತಗಾರ ಬೆನ್ನಿ ಪ್ರಸಾದ್ ಅವರು ಕೇವಲ 6 ವರ್ಷ, 6 ತಿಂಗಳು ಮತ್ತು 22 ದಿನಗಳಲ್ಲಿ ಜಗತ್ತಿನ 245 ದೇಶಗಳು ಮತ್ತು ಪ್ರಾಂತ್ಯಗಳನ್ನು ಸುತ್ತುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಇವರ ಈ ಅದ್ಭುತ ಸಾಧನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.

ಭಾರತೀಯ ಪಾಸ್‌ಪೋರ್ಟ್‌ನಲ್ಲಿ ವಿಶ್ವ ದಾಖಲೆ

ಇತ್ತೀಚೆಗೆ 'ಮೋಸ್ಟ್ ಟ್ರಾವೆಲ್ಡ್ ಪೀಪಲ್' ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬೆನ್ನಿ ಪ್ರಸಾದ್ ಅವರ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದ್ದು ಮಿಲಿಯನ್‌ ಗಟ್ಟಲೆ ವಿಕ್ಷಣೆ ಪಡೆದಿದೆ. ಈ ವಿಡಿಯೋದಲ್ಲಿ, ವೀಸಾ ಮತ್ತು ಇಮಿಗ್ರೇಷನ್ ಸ್ಟಾಂಪ್‌ಗಳಿಂದ ಸಂಪೂರ್ಣವಾಗಿ ಭರ್ತಿಯಾಗಿರುವ ಅವರ 16 ಪಾಸ್‌ಪೋರ್ಟ್‌ಗಳನ್ನು ಪ್ರದರ್ಶಿಸಲಾಗಿದೆ. ಸಾಮಾನ್ಯ ಭಾರತೀಯ ಪಾಸ್‌ಪೋರ್ಟ್ ಬಳಸಿ ಭೂಮಿಯ ಮೇಲಿನ ಪ್ರತಿಯೊಂದು ದೇಶ ಮತ್ತು ಪ್ರಾಂತ್ಯಕ್ಕೆ ಭೇಟಿ ನೀಡಿದ ಅತ್ಯಂತ ವೇಗದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಬೆನ್ನಿ ಪ್ರಸಾದ್ ಪಾತ್ರರಾಗಿದ್ದಾರೆ.

Passports

245 ದೇಶಗಳ ಪ್ರವಾಸ

ವೈರಲ್ ಆಗಿರುವ ಈ ವಿಡಿಯೋದಲ್ಲಿ ಬೆನ್ನಿ ಅವರು ವರ್ಣರಂಜಿತ ಇಮಿಗ್ರೇಷನ್ ಸ್ಟಾಂಪ್‌ಗಳಿಂದ ತುಂಬಿರುವ 16 ಪಾಸ್‌ಪೋರ್ಟ್‌ಗಳ ಪುಟಗಳನ್ನು ತಿರುಗಿಸುವುದನ್ನು ಕಾಣಬಹುದು. ಹಲವು ವರ್ಷಗಳ ಪ್ರವಾಸದ ಕುರುಹಾಗಿ ಕೆಲವು ಪಾಸ್‌ಪೋರ್ಟ್‌ಗಳ ಪುಟಗಳು ಹಳದಿ ಬಣ್ಣಕ್ಕೆ ತಿರುಗಿವೆ.

ಅವರು ಅಂಟಾರ್ಕ್ಟಿಕಾ ಸೇರಿದಂತೆ ವಿಶ್ವದ 245 ಸಾರ್ವಭೌಮ ದೇಶಗಳು ಹಾಗೂ ಅವಲಂಬಿತ ಪ್ರಾಂತ್ಯಗಳನ್ನು ಸುತ್ತಿದ್ದಾರೆ. ಇತರ ದೇಶಗಳ ಪ್ರಜೆಗಳಿಗೆ ಪ್ರವಾಸ ಸುಲಭವಾಗಿರಬಹುದು, ಆದರೆ ಭಾರತೀಯ ಪ್ರಜೆಯಾಗಿ ಪ್ರತಿಯೊಂದು ಹಂತದಲ್ಲೂ ಕಠಿಣ ವೀಸಾ ನಿಯಮಗಳು ಮತ್ತು ಪ್ರಯಾಣದ ನಿರ್ಬಂಧಗಳನ್ನು ಎದುರಿಸಿಕೊಂಡು ಅವರು ಈ ಸಾಧನೆ ಮಾಡಿದ್ದಾರೆ. ಇದಕ್ಕೆ ಅಪಾರ ಸಿದ್ಧತೆ ಮತ್ತು ತಾಳ್ಮೆ ಬೇಕಾಗಿತ್ತು ಎಂದು ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಖಿನ್ನತೆಯಿಂದ ವಿಶ್ವ ದಾಖಲೆಯವರೆಗೆ

ಬೆನ್ನಿ ಪ್ರಸಾದ್ ಅವರ ಜೀವನ ಕೇವಲ ಪ್ರವಾಸದ ಕಥೆಯಲ್ಲ, ಅದು ಒಂದು ದೊಡ್ಡ ಹೋರಾಟದ ಕಥೆ ಎನ್ನಬಹುದು. ಆಗಸ್ಟ್ 6, 1975 ರಂದು ಜನಿಸಿದ ಇವರು ಚಿಕ್ಕ ವಯಸ್ಸಿನಲ್ಲೇ ತೀವ್ರವಾದ ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದರು. ಇದಕ್ಕೆ ನೀಡಲಾದ ದೀರ್ಘಕಾಲದ ಸ್ಟೀರಾಯ್ಡ್ ಚಿಕಿತ್ಸೆಯ ಅಡ್ಡ ಪರಿಣಾಮದಿಂದಾಗಿ, ಅವರಿಗೆ ಸಂಧಿವಾತ ಅಂದರೆ ಕೀಲು ನೋವಿನ ಸಮಸ್ಯೆ ಎದುರಾಯಿತು, ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಯಿತು ಮತ್ತು ಶ್ವಾಸಕೋಶವು ಶೇಕಡಾ 60 ರಷ್ಟು ಹಾನಿಗೊಳಗಾಯಿತು. ಇಷ್ಟೆಲ್ಲಾ ಕಠಿಣ ಆರೋಗ್ಯ ಸಮಸ್ಯೆಗಳ ನಡುವೆಯೂ ಅವರು ಧೃತಿಗೆಡದೆ ನಗು ನಗುತ್ತಾ ಜೀವನವನ್ನು ಮುಂದೆ ಸಾಗಿಸಿದರು.

ತಮ್ಮ 16ನೇ ವಯಸ್ಸಿನಲ್ಲಿ ತೀವ್ರ ಖಿನ್ನತೆಗೆ ಒಳಗಾಗಿದ್ದ ಬೆನ್ನಿ, ಆತ್ಮಹತ್ಯೆಯ ಆಲೋಚನೆಗಳನ್ನು ಸಹ ಮಾಡಿದ್ದರು. ಆದರೆ, ಯುವಜನರ ಶಿಬಿರ ಒಂದರಲ್ಲಿ ಪಾಲ್ಗೊಂಡ ಬಳಿಕ ಅವರು ಜೀವನವನ್ನು ನೋಡುವ ದೃಷ್ಟಿಕೋನವೇ ಬದಲಾಯಿತು. ಆ ನಂತರ ಸಂಗೀತದ ಬಗ್ಗೆ ಅಪಾರ ಒಲವು ಬೆಳೆಸಿಕೊಂಡ ಅವರು, ಅದನ್ನೇ ತಮ್ಮ ಪ್ರವಾಸದ ಪ್ರಮುಖ ಶಕ್ತಿಯನ್ನಾಗಿ ಮಾಡಿಕೊಂಡರು. ಜಗತ್ತಿನ ಎಲ್ಲೆಡೆ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾ, ಇಂದು ತಮ್ಮ ವಿಶ್ವ ದಾಖಲೆಯ ಮೂಲಕ ವಿಶ್ವಾದ್ಯಂತ ಲಕ್ಷಾಂತರ ಪ್ರವಾಸಿಗರಿಗೆ ಮತ್ತು ಯುವಕರಿಗೆ ದೊಡ್ಡ ಸ್ಫೂರ್ತಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+