ರೈಲು ಪ್ರಯಾಣಿಕರಿಗೆ ಬಿಗ್ ಅಪ್‌ಡೇಟ್: ಇನ್ಮುಂದೆ ವೇಟಿಂಗ್ ಲಿಸ್ಟ್ ಟಿಕೆಟ್ ಸಿಗೋದು ಕಷ್ಟ! ರೈಲ್ವೆಯ ಹೊಸ ನಿಯಮ ಏನು?
ನವದೆಹಲಿ: ರೈಲು ಪ್ರಯಾಣವನ್ನು ಹೆಚ್ಚು ಸುರಕ್ಷಿತ ಹಾಗೂ ಆರಾಮದಾಯಕವಾಗಿಸಲು ಭಾರತೀಯ ರೈಲ್ವೆ ಇಲಾಖೆಯ ಮಹತ್ವದ ನಿರ್ಧಾರ ಕೈಗೊಂಡಿದೆ. 2026ರ ಜೂನ್ 1ರಿಂದ ರೈಲುಗಳಲ್ಲಿನ ವೇಟಿಂಗ್ ಲಿಸ್ಟ್ ಟಿಕೆಟ್‌ಗಳ ಸಂಖ್ಯೆಗೆ ಮಿತಿ ವಿಧಿಸಲು ತೀರ್ಮಾನಿಸಲಾಗಿದ್ದು, ಇದರಿಂದ AC ಮತ್ತು ಸ್ಲೀಪರ್ ಕೋಚ್‌ಗಳಲ್ಲಿ ಉಂಟಾಗುವ ಅತಿಯಾದ ಜನಸಂದಣಿಯನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ.
ಇತ್ತೀಚಿನ ವರ್ಷಗಳಲ್ಲಿ ವೇಟಿಂಗ್ ಲಿಸ್ಟ್ ಹೊಂದಿದ್ದ ಅನೇಕ ಪ್ರಯಾಣಿಕರು ರೈಲಿನಲ್ಲಿ ಏರಿ ಬೋಗಿಗಳ ಬಾಗಿಲು, ದಾರಿಗಳು ಮತ್ತು ಶೌಚಾಲಯಗಳ ಬಳಿ ನಿಂತುಕೊಂಡೇ ಪ್ರಯಾಣಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದವು. ಪ್ರಯಾಣಿಕರಿಂದ ಬಂದ ದೂರುಗಳನ್ನು ಪರಿಗಣಿಸಿ ರೈಲ್ವೇ ಮಂಡಳಿ ಈ ಕ್ರಮ ಕೈಗೊಂಡಿದೆ ಎಂದು ವರದಿಗಳು ತಿಳಿಸಿವೆ.

ಸ್ಲೀಪರ್ ಕೋಚ್‌ಗಳಿಗೆ ಹೊಸ ಮಿತಿ
ಹೊಸ ನಿಯಮದ ಪ್ರಕಾರ, ಸ್ಲೀಪರ್ ಕೋಚ್‌ಗಳಲ್ಲಿ ವೇಟಿಂಗ್ ಲಿಸ್ಟ್ ಟಿಕೆಟ್‌ಗಳ ಸಂಖ್ಯೆಯನ್ನು ಒಟ್ಟು ಆಸನ ಸಾಮರ್ಥ್ಯದ ಸುಮಾರು 30 ಶೇಕಡಾಕ್ಕೆ ಮಾತ್ರ ಸೀಮಿತಗೊಳಿಸಲಾಗುತ್ತದೆ. ಇದರ ಪರಿಣಾಮವಾಗಿ ಪ್ರತಿ ಸ್ಲೀಪರ್ ಕೋಚ್‌ಗೆ ಸರಾಸರಿ 150 ರಿಂದ 200 ವೇಟಿಂಗ್ ಲಿಸ್ಟ್ ಟಿಕೆಟ್‌ಗಳಿಗಿಂತ ಹೆಚ್ಚು ನೀಡಲಾಗುವುದಿಲ್ಲ.
AC ಕೋಚ್‌ಗಳಲ್ಲೂ ನಿಯಂತ್ರಣ
AC ಕೋಚ್ ವರ್ಗದ ಬೋಗಿಗಳಲ್ಲಿಯೂ ವೇಟಿಂಗ್ ಲಿಸ್ಟ್ ಸಂಖ್ಯೆಗೆ ಮಿತಿ ವಿಧಿಸಲಾಗುತ್ತಿದೆ. ಈವರೆಗೆ ಕೆಲವು ರೈಲುಗಳಲ್ಲಿ ನೂರಾರು ವೇಟಿಂಗ್ ಟಿಕೆಟ್‌ಗಳು ನೀಡಲಾಗುತಿತ್ತು ಆದರೆ ಇನ್ನು ಮುಂದೆ ಒಟ್ಟು ಆಸನ ಸಾಮರ್ಥ್ಯದ ಗರಿಷ್ಠ 60 ಶೇಕಡಾವರೆಗೆ ಮಾತ್ರ ವೇಟಿಂಗ್ ಲಿಸ್ಟ್ ಟಿಕೆಟ್‌ಗಳನ್ನು ನೀಡಲು ಅವಕಾಶ ಇರುತ್ತದೆ. ಇದರಿಂದ ವೇಟಿಂಗ್ ಲಿಸ್ಟ್ ಸಂಖ್ಯೆ ಕಡಿಮೆಯಾಗುವ ನಿರೀಕ್ಷೆಯಿದೆ.
ಪ್ರಯಾಣಿಕರಿಗೆ ಆಗುವ ಲಾಭವೇನು?
ರೈಲ್ವೇ ಇಲಾಖೆ ಅಧಿಕಾರಿಗಳ ಪ್ರಕಾರ, ಈ ಕ್ರಮದಿಂದ ದೃಢೀಕೃತ ಟಿಕೆಟ್ ಪಡೆಯುವ ಸಾಧ್ಯತೆ ಹೆಚ್ಚಲಿದೆ. ಜೊತೆಗೆ ಬೋಗಿಗಳಲ್ಲಿನ ಅನಗತ್ಯ ಜನಸಂದಣಿ ಕಡಿಮೆಯಾಗುವುದರಿಂದ ಪ್ರಯಾಣಿಕರು ಹೆಚ್ಚು ಆರಾಮದಾಯಕವಾಗಿ ಪ್ರಯಾಣಿಸಬಹುದು. ಸುರಕ್ಷತೆಯ ಹಿತ ದೃಷ್ಟಿಯಿಂದಲೂ ಇದು ಮಹತ್ವದ ಹೆಜ್ಜೆಯಾಗಿದೆ. ಬೋಗಿಗಳ ಒಳಗೆ ನಿಲ್ಲುವ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುವುದರಿಂದ ತುರ್ತು ಪರಿಸ್ಥಿತಿಗಳಲ್ಲಿ ಸಂಚಾರ ಮತ್ತು ರಕ್ಷಣಾ ಕಾರ್ಯಗಳು ಸುಲಭವಾಗಲಿವೆ.
ಈ ಹಿಂದೆ ಪರಿಸ್ಥಿತಿ ಹೇಗಿತ್ತು?
ಹಲವು ಜನಪ್ರಿಯ ರೈಲುಗಳಲ್ಲಿ ಸ್ಲೀಪರ್ ವರ್ಗದ ವೇಟಿಂಗ್ ಲಿಸ್ಟ್ 600 ರಿಂದ 700ರವರೆಗೆ ತಲುಪುತ್ತಿತ್ತು. ಥರ್ಡ್ AC ಕೋಚ್‌ಗಳಲ್ಲಿಯೂ 400ಕ್ಕೂ ಹೆಚ್ಚು ವೇಟಿಂಗ್ ಲಿಸ್ಟ್ ಸಾಮಾನ್ಯವಾಗಿತ್ತು. ಇದರ ಪರಿಣಾಮ ಅನೇಕ ಪ್ರಯಾಣಿಕರು ದೃಢೀಕೃತ ಆಸನವಿಲ್ಲದೇ ಪ್ರಯಾಣಿಸಬೇಕಾಗುತ್ತಿತ್ತು.
ಈ ಹಿಂದೆ ಪರಿಸ್ಥಿತಿ ಹೇಗಿತ್ತು?
ಹಲವು ಜನಪ್ರಿಯ ರೈಲುಗಳಲ್ಲಿ ಸ್ಲೀಪರ್ ವರ್ಗದ ವೇಟಿಂಗ್ ಲಿಸ್ಟ್ 600 ರಿಂದ 700ರವರೆಗೆ ತಲುಪುತ್ತಿತ್ತು. ಥರ್ಡ್ AC ಕೋಚ್‌ಗಳಲ್ಲಿಯೂ 400ಕ್ಕೂ ಹೆಚ್ಚು ವೇಟಿಂಗ್ ಲಿಸ್ಟ್ ಸಾಮಾನ್ಯವಾಗಿತ್ತು. ಇದರ ಪರಿಣಾಮ ಅನೇಕ ಪ್ರಯಾಣಿಕರು ದೃಢೀಕೃತ ಆಸನವಿಲ್ಲದೇ ಪ್ರಯಾಣಿಸಬೇಕಾಗುತ್ತಿತ್ತು. ಕೆಲವೊಮ್ಮೆ ವೇಟಿಂಗ್ ಟಿಕೆಟ್ ಹೊಂದಿದ ಪ್ರಯಾಣಿಕರು ಬೋಗಿಗಳ ದಾರಿಗಳಲ್ಲಿ ಹಾಗೂ ಬಾಗಿಲುಗಳ ಬಳಿ ನಿಂತೇ ಪ್ರಯಾಣ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಇದರಿಂದ ಇನ್ನುಳಿದ ಪ್ರಯಾಣಿಕರಿಗೆ ತೊಂದರೆಯಾಗುವುದರ ಜೊತೆಗೆ ಸುರಕ್ಷತಾ ಸಮಸ್ಯೆಗಳೂ ಹೆಚ್ಚಾಗುತ್ತಿದ್ದವು.
ದಟ್ಟಣೆ ನಿಯಂತ್ರಣಕ್ಕೆ ರೈಲ್ವೇಯ ಹೊಸ ಯೋಜನೆ
ರೈಲುಗಳಲ್ಲಿ ಹೆಚ್ಚುತ್ತಿರುವ ಜನಸಂದಣಿ ಮತ್ತು ಪ್ರಯಾಣಿಕರ ಅಸಮಾಧಾನವನ್ನು ಗಮನದಲ್ಲಿಟ್ಟುಕೊಂಡು ಈ ಹೊಸ ನಿಯಮ ಜಾರಿಗೆ ತರಲಾಗುತ್ತಿದೆ. ರೈಲ್ವೇ ಇಲಾಖೆ ಈ ಕ್ರಮದಿಂದ ದಟ್ಟಣೆ ಕಡಿಮೆಯಾಗುವುದರ ಜೊತೆಗೆ ಪ್ರಯಾಣದ ಗುಣಮಟ್ಟ ಮತ್ತು ಸುರಕ್ಷತೆ ಎರಡೂ ಸುಧಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ. ವೇಟಿಂಗ್ ಲಿಸ್ಟ್‌ಗೆ ಮಿತಿ ವಿಧಿಸುವುದರಿಂದ ಬೋಗಿಗಳಲ್ಲಿನ ಅತಿಯಾದ ಒತ್ತಡ ಕಡಿಮೆಯಾಗಿ ಪ್ರಯಾಣಿಕರಿಗೆ ಉತ್ತಮ ಅನುಭವ ಸಿಗಲಿದೆ. ಜೊತೆಗೆ, ರೈಲು ಸೇವೆಗಳ ಮೇಲಿನ ಸಾರ್ವಜನಿಕರ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುವ ದಿಕ್ಕಿನಲ್ಲಿ ಈ ಕ್ರಮ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.














Click it and Unblock the Notifications