ಸಿಯುಇಟಿ–ಯುಜಿ ಪರೀಕ್ಷೆಯಲ್ಲಿ ತಾಂತ್ರಿಕ ದೋಷ: 3,765 ಅಭ್ಯರ್ಥಿಗಳಿಗೆ ಮರುಪರೀಕ್ಷೆ ನಡೆಸಲು ತೀರ್ಮಾನ

ಶನಿವಾರ (ಮೇ 30) ನಡೆದ ರಾಷ್ಟ್ರೀಯ ಮಟ್ಟದ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆಯ (CUET-UG) ಮೊದಲ ಅವಧಿಯ ಪರೀಕ್ಷೆಯು ತಾಂತ್ರಿಕ ಕಾರಣಗಳಿಂದಾಗಿ ಹಲವು ಕೇಂದ್ರಗಳಲ್ಲಿ ತಡವಾಗಿ ಆರಂಭವಾಗಿದೆ. ಈ ಹಠಾತ್ ದೋಷದಿಂದಾಗಿ ನೂರಾರು ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ತೀವ್ರ ಆತಂಕ ಹಾಗೂ ಗೊಂದಲ ಎದುರಿಸುವಂತಾಯಿತು. ಬಯೋಮೆಟ್ರಿಕ್ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದರೂ ಪರೀಕ್ಷೆ ವಿಳಂಬವಾದ ಕಾರಣ 3,700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯದೆಯೇ ಕೇಂದ್ರಗಳಿಂದ ಹೊರನಡೆದಿದ್ದಾರೆ.

ಹೊಸ ಪರೀಕ್ಷಾ ದಿನಾಂಕ ಶೀಘ್ರದಲ್ಲೇ ಪ್ರಕಟ

ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA), "ಪರೀಕ್ಷಾ ಕೇಂದ್ರಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಮೊದಲ ಶಿಫ್ಟ್‌ನ ಪರೀಕ್ಷೆ ತಡವಾಗಿ ಆರಂಭವಾಗಿದೆ. ಇದರಿಂದ ಅಭ್ಯರ್ಥಿಗಳಿಗೆ ಉಂಟಾದ ಮಾನಸಿಕ ಒತ್ತಡ ಮತ್ತು ಆತಂಕಕ್ಕೆ ನಾವು ಕ್ಷಮೆಯಾಚಿಸುತ್ತೇವೆ. ಈ ದೋಷಕ್ಕೆ ನಿಖರವಾದ ಕಾರಣವನ್ನು ಪತ್ತೆಹಚ್ಚಿ ತಕ್ಷಣವೇ ವರದಿ ನೀಡುವಂತೆ ತಾಂತ್ರಿಕ ಸೇವಾ ಪೂರೈಕೆದಾರ ಸಂಸ್ಥೆಯಾದ 'ಟಿಸಿಎಸ್ ಐಒಎನ್'ಗೆ ಸೂಚಿಸಲಾಗಿದೆ" ಎಂದು ತಿಳಿಸಿದೆ.

CUET UG 2026

ದೇಶದ ವಿವಿಧ ಭಾಗಗಳಲ್ಲಿ ತಾಂತ್ರಿಕ ಗೊಂದಲಗಳಿಂದಾಗಿ ಮೊದಲ ಹಂತದ ಪರೀಕ್ಷೆ ಸಮಯಕ್ಕೆ ಸರಿಯಾಗಿ ಆರಂಭವಾಗಲಿಲ್ಲ. ತಾಂತ್ರಿಕ ದೋಷದ ಪರಿಣಾಮವಾಗಿ ಪರೀಕ್ಷೆ ಬರೆಯಲು ಸಾಧ್ಯವಾಗದ 3,765 ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಮರುಪರೀಕ್ಷೆ ನಡೆಸಲಾಗುವುದು ಎಂದು ಎನ್.ಟಿ.ಎ ಸ್ಪಷ್ಟಪಡಿಸಿದೆ. ಸಮಸ್ಯೆಯ ಮೂಲ ಕಾರಣವನ್ನು ಪತ್ತೆಹಚ್ಚಲು ತಾಂತ್ರಿಕ ವಿಭಾಗಕ್ಕೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದ್ದು, ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಬಾಧಿತ ಎಲ್ಲ ಅಭ್ಯರ್ಥಿಗಳಿಗೆ ಹೊಸ ಪರೀಕ್ಷಾ ದಿನಾಂಕ ಮತ್ತು ಸಮಯದ ವಿವರಗಳನ್ನು ಶೀಘ್ರದಲ್ಲೇ ಅಧಿಕೃತ ವೆಬ್‌ಸೈಟ್ ಮೂಲಕ ಪ್ರಕಟಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ಕೆಲಸದಿಂದ ತೆಗೆಯಲು ಕರೆದಿದ್ದ ಬಾಸ್‌ಗೆ 'ಎಐ' ಐಡಿಯಾ ಕೊಟ್ಟ ಉದ್ಯೋಗಿ: ಫೈರಿಂಗ್ ಬದಲು ಸಿಕ್ತು ಪ್ರಮೋಷನ್, ನೆಟ್ಟಿಗರು ಏನಂದ್ರು?
ಕೆಲಸದಿಂದ ತೆಗೆಯಲು ಕರೆದಿದ್ದ ಬಾಸ್‌ಗೆ 'ಎಐ' ಐಡಿಯಾ ಕೊಟ್ಟ ಉದ್ಯೋಗಿ: ಫೈರಿಂಗ್ ಬದಲು ಸಿಕ್ತು ಪ್ರಮೋಷನ್, ನೆಟ್ಟಿಗರು ಏನಂದ್ರು?

ಪರೀಕ್ಷಾ ಕೇಂದ್ರಗಳ ವಿರುದ್ಧ ಪೋಷಕರ ಆಕ್ರೋಶ

"ರಾಷ್ಟ್ರೀಯ ಮಟ್ಟದ ಇಷ್ಟು ದೊಡ್ಡ ಪರೀಕ್ಷೆಯಲ್ಲಿ ಇಂತಹ ಬೇಜವಾಬ್ದಾರಿತನ ಸರಿಯಲ್ಲ. ವಿದ್ಯಾರ್ಥಿಗಳನ್ನು ಸುಮಾರು 3ರಿಂದ 4 ಗಂಟೆಗಳ ಕಾಲ ಕಾಯುವಂತೆ ಮಾಡಲಾಗಿತ್ತು. ಕೇಂದ್ರದಲ್ಲಿ ಸರಿಯಾದ ಮಾಹಿತಿ ನೀಡುವವರೇ ಇರಲಿಲ್ಲ. ಯಾವುದೇ ಕನಿಷ್ಠ ವ್ಯವಸ್ಥೆಯೂ ಅಲ್ಲಿ ಇರಲಿಲ್ಲ. ಇಷ್ಟು ಕಠಿಣವಾದ ಸೆಕೆಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ತೀವ್ರವಾಗಿ ಪರದಾಡಬೇಕಾಯಿತು" ಎಂದು ಪೋಷಕರೊಬ್ಬರು ಅಳಲು ತೋಡಿಕೊಂಡಿದ್ದಾರೆ.

ಆರಂಭಿಕ ತಾಂತ್ರಿಕ ಅಡಚಣೆಗಳ ನಂತರ ಪರೀಕ್ಷೆ ತಡವಾಗಿ ಆರಂಭವಾದರೂ, ಶೇಕಡಾ 95ರಷ್ಟು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಆದರೆ, ಕೇಂದ್ರಕ್ಕೆ ಬಂದು ಬಯೋಮೆಟ್ರಿಕ್ ನೋಂದಣಿ ಮುಗಿಸಿದ್ದರೂ ಸಹ, ವಿಪರೀತ ವಿಳಂಬದಿಂದ ಬೇಸತ್ತು ಪರೀಕ್ಷೆ ಬರೆಯದೆಯೇ ಹೊರನಡೆದ 3,765 ವಿದ್ಯಾರ್ಥಿಗಳ ಪರಿಸ್ಥಿತಿಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಗಂಭೀರವಾಗಿ ಪರಿಗಣಿಸಿದೆ.

ವಿದ್ಯಾರ್ಥಿಗಳ ಈ ಅನಿವಾರ್ಯ ನಿರ್ಧಾರ ನಮಗೆ ಅರ್ಥವಾಗುತ್ತದೆ. ಹೀಗಾಗಿ ಪರೀಕ್ಷೆ ವಂಚಿತರಾದ ಈ ಎಲ್ಲ ಅಭ್ಯರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುವುದು ಎಂದು ಎನ್‌ಟಿಎ ಭರವಸೆ ನೀಡಿದೆ. CUET-UG ದೇಶದ ಎರಡನೇ ಅತಿ ದೊಡ್ಡ ಪ್ರವೇಶ ಪರೀಕ್ಷೆಯಾಗಿ ಹೊರಹೊಮ್ಮಿದೆ. ಆದರೆ ಆರಂಭದಿಂದಲೂ ಈ ಪರೀಕ್ಷೆಯು ಗೊಂದಲ ಮತ್ತು ವಿವಾದಗಳಿಂದಲೇ ಸುದ್ದಿಯಾಗುತ್ತಿದೆ.

ಪರೀಕ್ಷೆಗೆ ಕೆಲವೇ ಗಂಟೆಗಳ ಮೊದಲು ಪರೀಕ್ಷಾ ಕೇಂದ್ರಗಳನ್ನು ಬದಲಾಯಿಸುವುದು ಮತ್ತು ಕಂಪ್ಯೂಟರ್‌ಗಳಲ್ಲಿ ಲಾಗ್-ಇನ್ ಆಗದ ತಾಂತ್ರಿಕ ದೋಷಗಳು ಪ್ರತಿ ವರ್ಷವೂ ಮರುಕಳಿಸುತ್ತಿವೆ. ತಾಂತ್ರಿಕ ದೋಷ ತಾರಕಕ್ಕೇರಿದ ಕಾರಣ ಈ ಹಿಂದೆ ಕೆಲವು ಕೇಂದ್ರಗಳಲ್ಲಿ ಪರೀಕ್ಷೆಗಳನ್ನೇ ಸಂಪೂರ್ಣವಾಗಿ ರದ್ದುಗೊಳಿಸಿದ ಉದಾಹರಣೆಗಳಿವೆ. ವಿದ್ಯಾರ್ಥಿಗಳ ಹಾಲ್ ಟಿಕೆಟ್‌ನಲ್ಲಿ ತಪ್ಪು ವಿವರಗಳು ಹಾಗೂ ಪರೀಕ್ಷಾ ದಿನಾಂಕಗಳನ್ನೇ ತಪ್ಪಾಗಿ ಮುದ್ರಿಸಿದ ಕಾರಣ, ನೂರಾರು ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಬೇಕಾದ ದುಸ್ಥಿತಿಯೂ ಎದುರಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+