Viral News: ಗ್ರಾಹಕರಿಗೆ ಮಟನ್ ಬದಲಿಗೆ ಬೀಫ್ ಬಡಿಸಿದ ರೆಸ್ಟೋರೆಂಟ್, ಮಾಲೀಕರಿಬ್ಬರ ಬಂಧನ
ಬೆಂಗಳೂರು: ಆಹಾರದ ವಿಚಾರದಲ್ಲಿ ಮನುಷ್ಯ ಹೆಚ್ಚು ಜಾಗರೂಕನಾಗಿರುತ್ತಾನೆ. ಹೀಗಿದ್ದರೂ ಒಮ್ಮೊಮ್ಮೆ ಮೋಸಕ್ಕೆ ಒಳಗಾಗುತ್ತಾನೆ. ಅದೇ ರೀತಿ ಇಲ್ಲೊಂದು ನಾನ್ ವೇಜ್ ರೆಸ್ಟೋರೆಂಟ್ ನಲ್ಲಿ ತಿನ್ನಲು ಬಂದವರಿಗೆ ಮೋಸ ಮಾಡಿ ಸಿಕ್ಕಿದ್ದ ಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಟನ್ ಬದಲಿಗೆ ಬೀಫ್ ಮಾಂಸ ನೀಡಿದ ರೆಸ್ಟೋರೆಂಟ್ ಮಾಲೀಕರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಮಟನ್ ಎಂದು ಗ್ರಾಹಕರಿಗೆ ಬೀಫ್ ಬಡಿಸಲಾಗಿದೆ. ಇದನ್ನು ಗ್ರಾಹಕ ಪತ್ತೆ ಮಾಡುತ್ತಿದ್ದಂತೆ ಇಬ್ಬರ ಮೇಲೆ ದೂರು ನೀಡಲಾಗಿದ್ದು, ರೆಸ್ಟೋರೆಂಟ್ ಮಾಲೀಕರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬೈರತಿ ಗ್ರಾಮದ ಜಿಜು ಅಲೆಕ್ಸಾಂಡರ್ ಮತ್ತು ತಿಪ್ಪಣ್ಣ ಲೇಔಟ್‌ನ ಶಿಬು ಕೆಬಿ ಬಂಧಿತರು. ಇವರು ಕೇರಳ ಮೂಲದವರಾಗಿದ್ದು ಬೈರತಿಯಲ್ಲಿ ವಾಸವಾಗಿದ್ದು. ಬೊಮ್ಮನಹಳ್ಳಿಯ 'ಐಸಿರಿ ಹಬ್ ಕಾಯಲೋರಂ ರೆಸ್ಟೋರೆಂಟ್'ನ ಮಾಲೀಕರಾಗಿದ್ದಾರೆ. ಗ್ರಾಹಕರಿಗೆ ಮಟನ್ ಬದಲಾಗಿ ಬೀಪ್ ಬಡಿಸಿದ್ದಕ್ಕೆ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ.

ಆಹಾರ ಮೆನುವಿನಲ್ಲಿ ಬೀಫ್ ಇಲ್ಲ
ಬೊಮ್ಮನಹಳ್ಳಿಯ ರೆಸ್ಟೋರೆಂಟ್‌ವೊಂದರಲ್ಲಿ ಮಾಂಸದ ಆಹಾರ ಕುರಿತು ವಂಚನೆಗೆ ಒಳಗಾದ ಗ್ರಾಹಕರು ದೂರು ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಮಟನ್ ಆಹಾರ ಕುರಿತು ಹೋಟೆಲ್‌ನಿಂದ ಜಾಹೀರಾತು ನೀಡಲಾಗಿದೆ. ಆದರೆ ಇಲ್ಲಿ ಬೀಫ್ ಬಗ್ಗೆ ಯಾವುದೇ ಜಾಹೀರಾತು, ಮೆನು ಕಾರ್ಡ್‌ನಲ್ಲಿ ಮಾಹಿತಿ ಇಲ್ಲ. ಹೀಗಿದ್ದರು ಮಟನ್ ಸವಿಯುವಾಗ ಮಾಂಸದ ರುಚಿ ಮತ್ತು ವಿನ್ಯಾಸ ಮಟನ್‌ಗಿಂತ ಭಿನ್ನವಾಗಿರುವುದನ್ನು ಕಂಡು ಗ್ರಾಹಕರೊಬ್ಬರು ಅನುಮಾನ ವ್ಯಕ್ತಪಡಿಸಿದ್ದಾರೆ.
ರಹಸ್ಯ ತನಿಖೆ ನಡೆಸಿದ ಪೊಲೀಸರಿಗೂ ಸಿಕ್ತು ಬೀಫ್
ಗ್ರಾಹಕರ ದೂರುಗಳ ಆಧಾರದ ಮೇಲೆ ಪೊಲೀಸರು ರಹಸ್ಯ ತನಿಖೆ ಆರಂಭಿಸಿದರು. ತಾವು ಗ್ರಾಹಕರಂತೆ ಇದೇ ರೆಸ್ಟೋರೆಂಟ್‌ಗೆ ತೆರಳಿ ಮೆನು ಕಾರ್ಡ್‌ನಲ್ಲಿರುವ ಮಟನ್ ಐಟಂಗಳನ್ನು ಆರ್ಡರ್ ಕೊಟ್ಟು ಟೇಬಲ್‌ಗೆ ತರಿಸಿಕೊಂಡಿದ್ದಾರೆ. ಅವುಗಳನ್ನು ಕೆಲವು ಪರೀಕ್ಷೆಯ ಮಾದರಿಗೆ ಬಳಸಿಕೊಂಡಿದ್ದಾರೆ. ಪ್ರಾಥಮಿಕ ಪರಿಶೀಲನೆಯಲ್ಲಿ ಮಟನ್ ಬದಲಿಗೆ ಬೀಫ್ ಬಡಿಸಿದ್ದು ಖಚಿತವಾಗುತ್ತಿದ್ದಂತೆ ಪೊಲೀಸರು ರೆಸ್ಟೋರೆಂಟ್ ಮಾಲೀಕರನ್ನು ಬಂಧಿಸಲಾಗಿದೆ.
ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ, 2020 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬಂಧಿತ ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ವಿಚಾರಣೆ ನಡೆದಿದೆ. ಸದ್ಯ ಅವರಿಬ್ಬರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರೆಸ್ಟೋರೆಂಟ್ ವ್ಯವಹಾರದಲ್ಲಿ ಪಾಲುದಾರ ಮಾಲೀಕ ಅಭಿಲಾಷ್ ತಲೆಮರೆಸಿಕೊಂಡಿದ್ದಾರೆ. ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಹೊರಗಿನ ಆಹಾರ ಬಗ್ಗೆ ನಾರಿಕರಲ್ಲಿ ಅನುಮಾನ
ಇಂದಿನ ಘಟನೆಯು ಆಹಾರ ಪಾರದರ್ಶಕತೆ, ಆಗಾಗ ಮತ್ತು ದಿನಪೂತಿ ಹೊರಗೆ ಹೋಟೆಲ್, ರೆಸ್ಟೋರೆಂಟ್‌ಗಳ ಊಟು-ತಿಂಡಿ ಕುರಿತು ಕಳವಳ ಉಂಟಾಗುವಂತೆ ಮಾಡಿದೆ. ಆಹಾರದ ವಿಚಾರದಲ್ಲಿ ದುರುಪಯೋಗ, ಸುರಕ್ಷತಾ ನಿಯಮಗಳ ಉಲ್ಲಂಘನೆ ಕಂಡು ಬಂದಲ್ಲಿ, ಗ್ರಾಹಕರಿಗೆ ಅನುಮಾನ ಉಂಟಾದರೆ ಕೂಡಲೇ ಪ್ರಕರಣ ದಾಖಲಿಸುವಂತೆ ತಿಳಿಸಿದ್ದಾರೆ.
ಸದರಿ ಪ್ರಕರಣದಲ್ಲಿ ತಪ್ಪು ಸಾಬೀತಾಗಿದೆ. ನಿತ್ಯ ಈ ಬೀಫ್ ಪೂರೈಕೆ ಹೇಗೆಲ್ಲ ನಡೆಯುತ್ತಿದೆ. ಎಲ್ಲಿಂದ ಬರುತ್ತದೆ. ಒಟ್ಟಾರೆ ಈ ದುಷ್ಕೃತ್ಯದ ಸಂಪೂರ್ಣ ವಿವರಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ. ಆಹಾರ ಮಾದರಿಗಳ ಪರಿಶೀಲನೆ ಮೂಲಕ ಪತ್ತೆಹಚ್ಚಲಾಗುತ್ತಿದೆ. ತನಿಖೆ ಮುಂದುವರಿದಿದ್ದು, ಶೀಘ್ರವೇ ಮೂರನೇ ಆರೋಪಿಯನ್ನು ಬಂಧಿಸಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.













Click it and Unblock the Notifications