ಆಟೋ ಚಾಲಕನ 'ಕಾರ್ಪೊರೇಟ್' ಸ್ಟೈಲ್‌ ರಿಪ್ಲೈಗೆ ದಂಗಾದ ಯುವತಿ: ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್

ಆಟೋದಲ್ಲಿ ಪ್ರಯಾಣಿಸುವಾಗ ಯುಪಿಐ ಮೂಲಕ ಹಣ ಪಾವತಿಸುವುದು ಇಂದಿನ ದಿನಗಳಲ್ಲಿ ಅತ್ಯಂತ ಸಾಮಾನ್ಯ. ಆದರೆ, ಆ ಹಣ ಪೇ ಮಾಡಲು ಹೋದಾಗ ಸರ್ವರ್‌ ಡೌನ್‌ ಅಥವಾ ಇನ್ಯಾವುದೋ ವಿಷಯಕ್ಕೆ ಹಣ ಪಾವತಿಯಾಗದಿದ್ರೆ ಆಗ ನಡೆಯುವ ಮಾತುಕತೆಗಳು ಕೆಲವೊಮ್ಮೆ ತಮಾಷೆಯಾಗಿರುತ್ತವೆ.

ಇಲ್ಲೊಬ್ಬ ಆಟೋ ಚಾಲಕ, ಪಾವತಿ ವಿಫಲವಾದ ಬಗ್ಗೆ ಮಹಿಳೆ ಮೆಸೇಜ್ ಮಾಡಿದಾಗ, ಕಾರ್ಪೊರೇಟ್ ಕಂಪನಿಯ ಎಚ್‌ಆರ್ ಅಥವಾ ಬಾಸ್ ಶೈಲಿಯಲ್ಲಿ ವೃತ್ತಿಪರ ಉತ್ತರ ನೀಡಿ ಎಲ್ಲರ ಹುಬ್ಬೇರಿಸಿದ್ದಾನೆ. ಒಂದು ಸಣ್ಣ ಯುಪಿಐ ಪಾವತಿ ವೈಫಲ್ಯವು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ನಗುವಿನ ಅಲೆ ಎಬ್ಬಿಸಿದ್ದು, ಈ ತಮಾಷೆಯ ವಿಡಿಯೋ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ.

Viral Story

ವೈರಲ್‌ ವಿಡಿಯೋದಲ್ಲಿ ಏನಿದೆ?

ನಿಷ್ಠಾ ಶೆಟ್ಟಿ ಎಂಬ ಯುವತಿ ಇತ್ತೀಚೆಗೆ ಕೆಲಸಕ್ಕೆ ಹೋಗಲು ಆಟೋ ಬುಕ್ ಮಾಡಿದ್ದರು. ತಾವು ತಲುಪಬೇಕಾದ ಸ್ಥಳಕ್ಕೆ ಬಂದ ನಂತರ ಅವರು ಆಟೋ ಚಾಲಕನಿಗೆ ಗೂಗಲ್ ಪೇ ಮೂಲಕ ಹಣ ಪಾವತಿಸಿದ್ದರು. ಆದರೆ, ಸ್ವಲ್ಪ ಸಮಯದ ನಂತರ ಪಾವತಿ ಐಡಿಯಲ್ಲಿನ ಸಮಸ್ಯೆಯಿಂದಾಗಿ ಹಣ ಸಂದಾಯವಾಗಿಲ್ಲ ಎಂಬುದು ಅವರಿಗೆ ತಿಳಿದುಬಂದಿದೆ. ಇದನ್ನು ಚಾಲಕನಿಗೆ ತಿಳಿಸುವ ಉದ್ದೇಶದಿಂದ ನಿಷ್ಠಾ ಅವರು ಹಿಂದಿಯಲ್ಲಿ ಮೆಸೇಜ್ ಮಾಡಿದ್ದಾರೆ.

"ನಿಮ್ಮ ಪಾವತಿ ವಿಫಲವಾಗಿದೆ, ಏಕೆಂದರೆ ಈ ಐಡಿಯಲ್ಲಿ ಏನೋ ಸಮಸ್ಯೆ ಆಗುತ್ತಿದೆ" ಎಂದು ಅವರು ಚಾಲಕನಿಗೆ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಿದ್ದರು. ಸಾಮಾನ್ಯವಾಗಿ ಇಂಥ ಸಂದರ್ಭಗಳಲ್ಲಿ ಆಟೋ ಚಾಲಕರು ಫೋನ್ ಮಾಡಿ ಹಣ ಕೇಳುವುದು ಅಥವಾ ಬೇರೆ ನಂಬರ್ ನೀಡುವುದು ನಮಗೆಲ್ಲರಿಗೂ ಗೊತ್ತೇಯಿದೆ. ಆದರೆ, ಈ ಆಟೋ ಚಾಲಕನ ಉತ್ತರ ಮಾತ್ರ ಸಂಪೂರ್ಣ ಭಿನ್ನವಾಗಿತ್ತು.

Video: ಬೆಂಗಳೂರು ಆಟೋ ಡ್ರೈವರ್
Video: ಬೆಂಗಳೂರು ಆಟೋ ಡ್ರೈವರ್ "ಅಂಕಲ್' AI ಜ್ಞಾನಕ್ಕೆ ನೆಟ್ಟಿಗರು ಫಿದಾ: ಕನ್ನಡದಲ್ಲೇ ಪ್ರತಿಕ್ರಿಯಿಸಿದ OpenAI

ಚಾಲಕನಿಂದ ಅಚ್ಚರಿಯ ವೃತ್ತಿಪರ ಪ್ರತಿಕ್ರಿಯೆ

ನಿಷ್ಠಾ ಅವರ ಸಂದೇಶಕ್ಕೆ ಆಟೋ ಚಾಲಕ ಅತ್ಯಂತ ಶಾಂತ ಹಾಗೂ ವೃತ್ತಿಪರ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾನೆ. ಒಂದು ಔಪಚಾರಿಕ ಕಸ್ಟಮರ್ ಕೇರ್ ಇಮೇಲ್‌ನಂತೆ ಆತನ ಪ್ರತಿಕ್ರಿಯೆ ಇತ್ತು.

"ನೀವು ಕೆಲಸ ಮುಗಿಸಿ ಮತ್ತೆ ಆಟೋದಲ್ಲಿಯೇ ವಾಪಸ್ ಹೋಗುವುದಾದರೆ, ನಾನೇ ಬಂದು ನಿಮ್ಮನ್ನು ಡ್ರಾಪ್ ಮಾಡುತ್ತೇನೆ. ಆಗ ಸಾಧ್ಯವಾದರೆ ನೀವು ನನಗೆ ನಗದು ರೂಪದಲ್ಲಿ ಹಣ ನೀಡಬಹುದು, ಇದು ನಿಮಗೆ ಓಕೆನಾ? ಅಥವಾ ನಾನು ನಿಮ್ಮನ್ನು ಡ್ರಾಪ್ ಮಾಡಿದ ಜಾಗಕ್ಕೇ ಬರುತ್ತೇನೆ, ನಿಮ್ಮ ಬಳಿ ಹಣವಿದ್ದರೆ ಅಲ್ಲಿಯೇ ಪಡೆಯುತ್ತೇನೆ," ಎಂದು ಆತ ಇಂಗ್ಲಿಷ್‌ನಲ್ಲಿ ಮೆಸೇಜ್ ಮಾಡಿದ್ದಾನೆ.

ಚಾಲಕನ ಈ ಪ್ರತಿಕ್ರಿಯೆ ಕಂಡು ನಿಷ್ಠಾ ಶೆಟ್ಟಿ ಅಕ್ಷರಶಃ ದಂಗಾಗಿದ್ದಾರೆ. ಆತ ಯಾವುದೋ ಅಧಿಕೃತ ಇಮೇಲ್‌ಗೆ ರಿಪ್ಲೈ ಮಾಡುವಂತೆ ಮಾತನಾಡುತ್ತಿದ್ದಾನಲ್ಲ ಎಂದು ಆಶ್ಚರ್ಯಪಟ್ಟಿದ್ದಾರೆ. ಚಾಲಕನ ಈ 'ಪ್ರೊಫೆಷನಲ್' ಶೈಲಿಯಿಂದ ತುಸು ಹಿಂದೆ ಸರಿದ ನಿಷ್ಠಾ, ತಕ್ಷಣವೇ ತಮ್ಮ ಭಾಷೆಯನ್ನು ಬದಲಾಯಿಸಿ ಇಂಗ್ಲಿಷ್‌ನಲ್ಲಿಯೇ ಮೆಸೇಜ್ ಮಾಡಿದ್ದಾರೆ.

"ದಯವಿಟ್ಟು ಸಂಜೆ 6 ಗಂಟೆಗೆ ವಾಪಸ್ ಹೋಗುವಾಗ ಬನ್ನಿ," ಎಂದು ಅವರು ಸಂದೇಶ ಕಳುಹಿಸಿದ್ದಾರೆ. ಇದಕ್ಕೆ ಆಟೋ ಚಾಲಕ ನೀಡಿದ ಮತ್ತೊಂದು ಉತ್ತರ ಇನ್ನಷ್ಟು ಮಜವಾಗಿದೆ. ಆತ ಕೇವಲ "Noted" (ಗಮನಕ್ಕೆ ಬಂದಿದೆ) ಎಂದು ಒಂದೇ ಪದದಲ್ಲಿ ಗಂಭೀರವಾಗಿ ಉತ್ತರಿಸಿದ್ದಾನೆ.

ಕಾರ್ಪೊರೇಟ್ ಶೈಲಿಗೆ ಮಾರುಹೋದ ನೆಟ್ಟಿಗರು

ಈ ಇಡೀ ಸಂಭಾಷಣೆಯನ್ನು ನಿಷ್ಠಾ ಶೆಟ್ಟಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. "ನಾನು ಕೆಲಸ ಮಾಡಿರುವ ಅರ್ಧಕ್ಕಿಂತ ಹೆಚ್ಚು ಜನರಿಗಿಂತ ಈತನ ಕಾರ್ಪೊರೇಟ್ ಸಂವಹನ ಕೌಶಲ್ಯ ಉತ್ತಮವಾಗಿದೆ" ಎಂದು ಅವರು ತಮಾಷೆಯಾಗಿ ಹೇಳಿಕೊಂಡಿದ್ದಾರೆ. "ಆತನ ವೃತ್ತಿಪರತೆಗೆ ತಕ್ಕಂತೆ ನಾನೂ ಬದಲಾದ ಪರಿ" ಎಂಬ ಶೀರ್ಷಿಕೆಯಡಿ ಹಂಚಿಕೊಳ್ಳಲಾದ ಈ ವಿಡಿಯೋ ಇದೀಗ ಆನ್‌ಲೈನ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ.

ತಿಂಗಳಿಗೆ 71,000 ರೂ. ಖರ್ಚು ಮಾಡುತ್ತಿರುವ ಬೆಂಗಳೂರು ಟೆಕ್ಕಿ: ಮನೆ ಬಾಡಿಗೆಯೇ 28 ಸಾವಿರ! ಇಂಟರ್ನೆಟ್‌ನಲ್ಲಿ ಭಾರಿ ಚರ್ಚೆ
ತಿಂಗಳಿಗೆ 71,000 ರೂ. ಖರ್ಚು ಮಾಡುತ್ತಿರುವ ಬೆಂಗಳೂರು ಟೆಕ್ಕಿ: ಮನೆ ಬಾಡಿಗೆಯೇ 28 ಸಾವಿರ! ಇಂಟರ್ನೆಟ್‌ನಲ್ಲಿ ಭಾರಿ ಚರ್ಚೆ

ವಿಡಿಯೋ ನೋಡಿದ ನೆಟ್ಟಿಗರು ವಿವಿಧ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. "ಈ ಆಟೋ ಚಾಲಕನಿಗೆ ಒಂದು ಲಿಂಕ್ಡ್‌ಇನ್ ಪ್ರೊಫೈಲ್ ಇರಲೇಬೇಕು," ಎಂದು ಒಬ್ಬ ಬಳಕೆದಾರರು ಪ್ರತಿಕ್ರಿಯಿಸಿದರೆ, ಮತ್ತೊಬ್ಬರು, "ಆತ ಕೊನೆಯಲ್ಲಿ ಕಳುಹಿಸಿದ 'Noted' ಎಂಬ ಪದವು ಕಾರ್ಪೊರೇಟ್ ನಡವಳಿಕೆಯ ಪರಾಕಾಷ್ಠೆ," ಎಂದು ಕಾಲೆಳೆದಿದ್ದಾರೆ. ಒಟ್ಟಿನಲ್ಲಿ, ಒಂದು ಸಾಮಾನ್ಯ ಪಾವತಿ ಸಮಸ್ಯೆಯು ಆಟೋ ಚಾಲಕನ ವೃತ್ತಿಪರತೆಯಿಂದಾಗಿ ಜನರಿಗೆ ಭರ್ಜರಿ ಮನರಂಜನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+