ತುಳಸಿ ಬೀಜಗಳನ್ನು ಮನೆಯ ಈ ಜಾಗದಲ್ಲಿಟ್ಟರೆ ಕಡಿಮೆಯಾಗುವುದು ಹಣದ ಸಮಸ್ಯೆ, ಇಳಿಯುವುದು ಸಾಲದ ಹೊರೆ
ತುಳಸಿ ಗಿಡವು ಭಾರತೀಯ ಸಂಪ್ರದಾಯದಲ್ಲಿ ಅತ್ಯಂತ ಪವಿತ್ರವಾದ ಮತ್ತು ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯವಾಗಿದೆ. ಇದು ಧಾರ್ಮಿಕ ನಂಬಿಕೆಗಳ ಜೊತೆಗೆ ಆರೋಗ್ಯ ಮತ್ತು ಪರಿಸರದ ದೃಷ್ಟಿಯಿಂದಲೂ ಅಪಾರ ಮಹತ್ವವನ್ನು ಹೊಂದಿದೆ.ಸನಾತನ ಧರ್ಮದಲ್ಲಿ, ತುಳಸಿ ಕೇವಲ ಒಂದು ಸಸ್ಯವಲ್ಲ, ಇದು ವಿಶೇಷ ಧಾರ್ಮಿಕ ಮಹತ್ವವನ್ನು ಹೊಂದಿದೆ. ತುಳಸಿ ಎಸಳುಗಳು ಮಾತ್ರವಲ್ಲ ಅದರ ಹೂವು, ಬೀಜ, ಬೇರು ಎಲ್ಲವೂ ಅತ್ಯಂತ ಪವಿತ್ರ ಎಂದೇ ಹೇಳಲಾಗುತ್ತದೆ. ಅವುಗಳನ್ನು ವಿವಿಧ ಧಾರ್ಮಿಕ ಆಚರಣೆಗಳಲ್ಲಿ ಬಳಸಲಾಗುತ್ತದೆ.
ಧಾರ್ಮಿಕ ನಂಬಿಕೆಗಳ ಪ್ರಕಾರ, ತುಳಸಿಯನ್ನು ಬಳಸಿ ಮಾಡುವ ಕೆಲವು ಸರಳ ಪರಿಹಾರ ಕ್ರಮಗಳಿಂದ ಮನೆಯ ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು. ಆರ್ಥಿಕ ತೊಂದರೆಗಳನ್ನು ಹೋಗಲಾಡಿಸಬಹುದು. ಮನೆಯೊಳಗೆ ಸಕಾರಾತ್ಮಕ ಶಕ್ತಿಯು ನೆಲೆಯಾಗುವಂತೆ ಮಾಡಬಹುದು. ಅಲ್ಲದೆ, ಮದುವೆಗೆ ಸಂಬಂಧಿಸಿದ ಎಲ್ಲಾ ಅಡೆತಡೆಗಳನ್ನು ಕೂಡಾ ನಿವಾರಿಸಬಹುದು ಎನ್ನಲಾಗಿದೆ.

ಲಕ್ಷ್ಮಿ ಸ್ವರೂಪ ತುಳಸಿ: ತುಳಸಿ ಗಿಡವನ್ನು ಲಕ್ಷ್ಮಿ ದೇವಿಯ ಸಾಕ್ಷಾತ್ ರೂಪವೆಂದು ಹೇಳಲಾಗುತ್ತದೆ. ಇದನ್ನು ಪೂಜಿಸುವುದರಿಂದ ಮನೆಯಲ್ಲಿ ಐಶ್ವರ್ಯ, ಶಾಂತಿ ಮತ್ತು ಸಕಾರಾತ್ಮಕ ಶಕ್ತಿ ನೆಲೆಸುತ್ತದೆ ಎನ್ನುವುದು ನಂಬಿಕೆ. ಇನ್ನು ತುಳಸಿ ಎಂದರೆ ವಿಷ್ಣುವಿಗೆ ಬಲು ಪ್ರೀತಿ. ತುಳಸಿ ಎಲೆಗಳಿಲ್ಲದೆ ವಿಷ್ಣುವಿನ ಯಾವುದೇ ಪೂಜೆ ಅಥವಾ ನೈವೇದ್ಯವು ಪರಿಪೂರ್ಣವಾಗುವುದಿಲ್ಲ ಎನ್ನಲಾಗುತ್ತದೆ. ಶ್ರೀಕೃಷ್ಣ ಮತ್ತು ಶ್ರೀರಾಮರಿಗೂ ತುಳಸಿ ಎಂದರೆ ಅತ್ಯಂತ ಪ್ರಿಯ.
ಜ್ಯೋತಿಷ್ಯ ಮತ್ತು ಧಾರ್ಮಿಕ ಗ್ರಂಥಗಳ ಪ್ರಕಾರ, ತುಳಸಿ ಹೂವು ಮತ್ತು ಬೀಜಗಳು ಕೂಡಾ ಪವಾಡದ ರೀತಿಯಲ್ಲಿ ಕೆಲಸ ಮಾಡುತ್ತದೆ ಎನ್ನಲಾಗಿದೆ. ಅವುಗಳಿಗೆ ಸಂಬಂಧಿಸಿದ ಪರಿಹಾರಗಳನ್ನು ಮಾಡುವುದರಿಂದ, ಲಕ್ಷ್ಮಿ ದೇವಿಯ ಆಶೀರ್ವಾದವು ಮನೆಯಲ್ಲಿ ನೆಲೆಯಾಗುತ್ತದೆ ಎಂದು ಹೇಳಲಾಗುತ್ತದೆ. ತುಳಸಿ ಬೀಜ ಅಥವಾ ಮಂಜರಿ ಮೂಲಕ ಮಾಬಹುದಾದ ಪರಿಹಾರ ಕಾರ್ಯ ಯಾವುದು ಎಂದು ನೋಡುವುದಾದರೆ...
ಸುರಕ್ಷತೆಗಾಗಿ ತುಳಸಿ ಬೀಜಗಳು:
ಧಾರ್ಮಿಕ ನಂಬಿಕೆಗಳ ಪ್ರಕಾರ, ನಿಮ್ಮ ಮನೆಯಲ್ಲಿನ ಆರ್ಥಿಕ ತೊಂದರೆಗಳನ್ನು ನಿವಾರಿಸಲು, ಒಣಗಿದ ತುಳಸಿ ಬೀಜಗಳನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ನಿಮ್ಮ ಮನೆಯ ತಿಜೋರಿಯಲ್ಲಿ ಅಥವಾ ನೀವು ಹಣವನ್ನು ಇಡುವ ಇತರ ಸ್ಥಳದಲ್ಲಿ ಇರಿಸಬೇಕು. ಇದು ಬಡತನವನ್ನು ತೊಡೆದುಹಾಕುತ್ತದೆ ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದವು ಮನೆಯಲ್ಲಿ ದೃಢವಾಗಿ ಉಳಿಯುತ್ತದೆಯಂತೆ. ಹೀಗೆ ಮಾಡಿದರೆ ಮನೆಯಲ್ಲಿ ಸಂಪತ್ತು ಹೆಚ್ಚಾಗುವುದರ ಜೊತೆಗೆ ಸಮೃದ್ಧಿಗೆ ಯಾವುದೇ ಕೊರತೆ ಇರುವುದಿಲ್ಲ.
ಲಕ್ಷ್ಮಿ ದೇವಿಯ ಕೃಪೆಗಾಗಿ ಅನುಸರಿಸಬೇಕಾದ ಮಾರ್ಗಗಳು:
ಲಕ್ಷ್ಮಿ ದೇವಿಯನ್ನು ಪೂಜಿಸಿ ನಂತರ ತುಳಸಿ ಹೂವನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಗಟ್ಟಿಯಾಗುತ್ತದೆ. ಸಂಪತ್ತಿಗೆ ಹೊಸ ಮಾರ್ಗ ತೆರೆದುಕೊಳ್ಳುತ್ತದೆ. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಪೂಜೆಯನ್ನು ಭಕ್ತಿಯಿಂದ ಮಾಡಿ ಮತ್ತು ನಿಗದಿತ ಆಚರಣೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿದರೆ ಮನೆಯಲ್ಲಿ ಯಾವಾಗಲೂ ಲಕ್ಷ್ಮೀ ವಾಸ ಇರುತ್ತದೆ ಎನ್ನಲಾಗಿದೆ.
ಮದುವೆಯಲ್ಲಿನ ಅಡೆತಡೆಗಳನ್ನು ನಿವಾರಿಸಲು ಪರಿಹಾರ:
ಮದುವೆಗೆ ಅಡೆತಡೆಗಳು ಎದುರಾಗುತ್ತಿದ್ದರೆ, ನೀವು ಈ ಪರಿಹಾರವನ್ನು ಪ್ರಯತ್ನಿಸಬಹುದು. ಧಾರ್ಮಿಕ ನಂಬಿಕೆಗಳ ಪ್ರಕಾರ, ವಿಷ್ಣುವನ್ನು ಪೂಜಿಸಿದರೆ, ತುಳಸಿ ಮೊಗ್ಗುಗಳನ್ನು ಅರ್ಪಿಸಬೇಕು. ಇದರಿಂದ ವಿಷ್ಣು ತುಂಬಾ ಸಂತೋಷಪಡುತ್ತಾನೆ. ಬೇಗ ಮದುವೆ ಭಾಗ್ಯ ಒಲಿಯಲಿ ಎಂದು ವಿಷ್ಣುವನ್ನು ಪ್ರಾರ್ಥಿಸಿ ಪೂಜೆ ಸಲ್ಲಿಸಬೇಕು. ಹೀಗೆ ಮಾಡುವುದರಿಂದ ಮದುವೆಗೆ ಎದುರಾಗಿದ್ದ ಅಡೆತಡೆಗಳು ನಿವಾರಣೆಯಾಗುವುದು.
ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಲು ಪರಿಹಾರ:
ನಿಮ್ಮ ಮನೆಯಲ್ಲಿ ನಿರಂತರವಾಗಿ ಜಗಳ, ಕೋಪ, ಅಶಾಂತಿ, ಯಾತನೆ ಮತ್ತು ನಕಾರಾತ್ಮಕತೆಯಿಂದ ತುಂಬಿದ್ದರೆ, ಈ ಪರಿಹಾರವನ್ನು ಪ್ರಯತ್ನಿಸಬಹುದು: ತುಳಸಿ ಎಲೆಗಳನ್ನು ನೀರಿನಲ್ಲಿ ನೆನೆಸಿ ನಂತರ ಅದನ್ನು ಮನೆಯ ಪ್ರತೀ ಮೂಲೆಗೂ ಸಿಂಪಡಿಸಬೇಕು. ಧಾರ್ಮಿಕ ನಂಬಿಕೆಯ ಪ್ರಕಾರ, ಹಾಗೆ ಮಾಡುವುದರಿಂದ ವಾತಾವರಣವು ಶುದ್ಧವಾಗುತ್ತದೆ ಮತ್ತು ನಿಮ್ಮ ಜೀವನದಲ್ಲಿ ಸಕಾರಾತ್ಮಕ ಶಕ್ತಿ ಬರುತ್ತದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications