ಮನೆಯಲ್ಲಿ ತುಳಸಿ ಗಿಡವಿದ್ದರೆ ಈ 5 ವಿಷಯಗಳೂ ನೆನಪಿರಲಿ! ಹಣ ಉಳಿಯಬೇಕಾದರೆ ಇದು ಬಹಳ ಮುಖ್ಯ

ಹೆಚ್ಚಿನ ಮನೆಯಲ್ಲಿ ತುಳಸಿ ಗಿಡವಿರುತ್ತದೆ. ಹಿಂದೂ ಸಂಪ್ರದಾಐದ ಪ್ರಕಾರ ಮನೆಯಲ್ಲಿ ತುಳಸಿ ಗಿಡ ಇರಬೇಕು ಎನ್ನುವುದು ಸಮಪ್ರದಾಯ. ಮನೆಯಲ್ಲಿ ತುಳಸಿ ಗಿಡವನ್ನು ಇಟ್ಟುಕೊಳ್ಳುವುದರಿಂದ ಹಲವು ಪ್ರಯೋಜನಗಳಿವೆ. ಈ ಪವಿತ್ರ ಸಸ್ಯವು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ ಒಂದು ರೂಪವಾಗಿದೆ. ಹಾಗಾಗಿ ಇದನ್ನು ಮನೆಯಲ್ಲಿ ಇರಿಸುವಗ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಈ ನಿಯಮಗಳನ್ನು ನಿರ್ಲಕ್ಷಿಸಿದರೆ, ಲಕ್ಷ್ಮಿ ದೇವಿಯು ಅಸಮಾಧಾನಗೊಳ್ಳುತ್ತಾಳೆ. ಅಂತಹ ಮನೆಯಲ್ಲಿ, ಲಕ್ಷ್ಮಿ ದೇವಿಯು ವಾಸಿಸುವುದಿಲ್ಲ. ಅಲ್ಲದೆ ಆ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಸಕಾರಾತ್ಮಕತೆ ನೆಲೆಸಲು ಸಾಧ್ಯವೂ ಇಲ್ಲ ಎನ್ನಲಾಗಿದೆ. ಬದಲಾಗಿ, ಅನಾರೋಗ್ಯ ಮತ್ತು ಬಡತನ ಮನೆಯನ್ನು ಆವರಿಸಿಕೊಳ್ಳುತ್ತದೆ. ನಿಮ್ಮ ಮನೆಯಲ್ಲಿ ತುಳಸಿ ಗಿಡವಿದ್ದರೆ, ಅದಕ್ಕೆ ಅನುಗುಣವಾಗಿ ಅಗತ್ಯ ನಿಯಮಗಳನ್ನು ಪಾಲಿಸುವುದು ಕೂಡಾ ಅನಿವಾರ್ಯವಾಗಿರುತ್ತದೆ.

ಮನೆಯಲ್ಲಿ ತುಳಸಿ ಗಿಡ ಇಡಲು ಪ್ರಮುಖ ನಿಯಮಗಳು:

ತುಳಸಿ ಗಿಡವನ್ನು ಇಡಲು ಸರಿಯಾದ ಸ್ಥಳ: ತುಳಸಿ ಗಿಡವನ್ನು ಯಾವ ದಿಕ್ಕಿನಲ್ಲಿ ಇಡುತ್ತೇವೆ ಎನ್ನುವುದು ಬಹಳ ಮುಖ್ಯವಾಗಿರುತ್ತದೆ. ನಮ್ಮ ಮನೆಯ ಅಭಿವೃದ್ಧಿಯನ್ನು ಇದೇ ಅಂಶ ನಿರ್ಧರಿಸುತ್ತದೆ ಎನ್ನಲಾಗಿದೆ. ತುಳಸಿ ಗಿಡವನ್ನು ದಕ್ಷಿಣ ದಿಕ್ಕಿನಲ್ಲಿ ಎಂದಿಗೂ ಇಡಬಾರದು. ಈ ದಿಕ್ಕು ಯಮನನ್ನು ಪ್ರತಿನಿಧಿಸುತ್ತದೆ. ಇಲ್ಲಿ ನೀವು ಮಾಡುವ ತಪ್ಪು ಕುಟುಂಬಕ್ಕೆ ತೊಂದರೆ ತರಬಹುದು. ತುಳಸಿ ಗಿಡವನ್ನು ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡುವುದು ಅತ್ಯಂತ ಶುಭ.

Tulsi Plant Vastu Tips

ತುಳಸಿಗೆ ನೀರನ್ನು ಯಾವಾಗ ಅರ್ಪಿಸಬೇಕು ?:

ಪ್ರತಿದಿನ ಬೆಳಿಗ್ಗೆ ಸ್ನಾನದ ನಂತರ ತುಳಸಿಗೆ ನೀರನ್ನು ಅರ್ಪಿಸಬೇಕು. ಇದರಿಂದ ನಾವು ಅಂದುಕೊಂಡ ಕೆಲಸ ಸರಾಗವಾಗಿ ಸಾಗುತ್ತದೆಯಂತೆ. ಆದರೆ ಭಾನುವಾರ ಅಥವಾ ಏಕಾದಶಿ ತಿಥಿಯಂದು ತುಳಸಿಗೆ ನೀರು ಹಾಕಲೇಬಾರದು. ಆ ದಿನ ತುಳಸಿ ವಿಷ್ಣುವಿಗಾಗಿ ಉಪವಾಸ ವ್ರತವನ್ನು ಆಚರಿಸುತ್ತಾಳೆಯಂತೆ. ಈ ದಿನಗಳಲ್ಲಿ ತುಳಸಿಗೆ ನೀರುಣಿಸಿದರೆ ಅದು ಆಕೆಯ ವೃತವನ್ನು ಭಂಗ ಮಾಡಿದ ಹಾಗೆ. ಆದ್ದರಿಂದ ಈ ದಿನಗಳಲ್ಲಿ ತುಳಸಿಗೆ ನೀರನ್ನು ಅರ್ಪಿಸುವುದನ್ನು ನಿಷೇಧಿಸಲಾಗಿದೆ.

ಯಾರ ಪಾದಗಳು ಹೀಗಿರುತ್ತದೆಯೋ ಅವರು ಹುಟ್ಟು ಅದೃಷ್ಟವಂತರು!ಸೋಲೇ ಇಲ್ಲದ ಸರದಾರರು
ಯಾರ ಪಾದಗಳು ಹೀಗಿರುತ್ತದೆಯೋ ಅವರು ಹುಟ್ಟು ಅದೃಷ್ಟವಂತರು!ಸೋಲೇ ಇಲ್ಲದ ಸರದಾರರು

ತುಳಸಿ ಗಿಡದ ಬಳಿ ಸಂಜೆ ದೀಪ ಬೆಳಗಿಸುವುದು:

ಪ್ರತಿದಿನ ಸಂಜೆ ತುಳಸಿ ಗಿಡದ ಬಳಿ ಹಸುವಿನ ತುಪ್ಪದಿಂದ ತುಂಬಿದ ದೀಪವನ್ನು ಹಚ್ಚಬೇಕು. ಹೀಗೆ ಮಾಡುವುದರಿಂದ ಲಕ್ಷ್ಮೀ ದೇವಿ ಸಂತೋಷಗೊಳ್ಳುತ್ತಾಳೆ. ಲಕ್ಷ್ಮೀ ಸಂತುಷ್ಟಳಾದರೆ ಮನೆಗೆ ಸಂಪತ್ತು ಹರಿದು ಬರುತ್ತದೆ. ತುಳಸಿ ಗಿಡಕ್ಕೆ ದೀಪ ಹಚ್ಚಿಲ್ಲ ಎಂದಾದರೆ ಅದನ್ನು ನೆಟ್ಟ ಪೂರ್ಣ ಪ್ರಯೋಜನ ದೊರೆಯುವುದಿಲ್ಲ.

ತುಳಸಿ ಗಿಡದ ಸುತ್ತ ಸ್ವಚ್ಛತೆ:

ತುಳಸಿ ಗಿಡದ ಸುತ್ತ ಸ್ವಚ್ಛತೆ ಮತ್ತು ಪರಿಶುದ್ಧತೆಯನ್ನು ಕಾಪಾಡಿಕೊಳ್ಳಿ. ಪೊರಕೆ, ಕಸದ ಬುಟ್ಟಿ, ಚಪ್ಪಲಿ, ಮುಳ್ಳಿನ ಗಿಡ, ಮೆಣಸಿನಕಾಯಿಗಳು ಅಥವಾ ಶಮಿ ಗಿಡಗಳನ್ನು ನೆಡಬಾರದು. ಇದರಿಂದ ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳೆ. ಜೊತೆಗೆ ಇವೆಲ್ಲವೂ ಮನೆಯಲ್ಲಿ ನಕಾರಾತ್ಮಕತೆ, ಸಂಘರ್ಷ, ಬಡತನ ಮತ್ತು ಅನಾರೋಗ್ಯ ಹೆಚ್ಚಾಗುವುದಕ್ಕೆ ಕಾರಣವಾಗುತ್ತದೆ.

ಮುಖ್ಯ ದ್ವಾರದಲ್ಲಿ ಇದೊಂದು ವಸ್ತು ಇಟ್ಟರೆ ಮನೆಯೊಳಗೆ ಸದಾ ನೆಲೆಸುತ್ತಾಳೆ ಲಕ್ಷ್ಮೀ, ಹಣದ ತೊಂದರೆ ಇರುವುದೇ ಇಲ್ಲ
ಮುಖ್ಯ ದ್ವಾರದಲ್ಲಿ ಇದೊಂದು ವಸ್ತು ಇಟ್ಟರೆ ಮನೆಯೊಳಗೆ ಸದಾ ನೆಲೆಸುತ್ತಾಳೆ ಲಕ್ಷ್ಮೀ, ಹಣದ ತೊಂದರೆ ಇರುವುದೇ ಇಲ್ಲ

ತುಳಸಿ ಮೊಗ್ಗುಗಳು:

ತುಳಸಿ ಮೊಗ್ಗುಗಳು ನಿಯತಕಾಲಿಕವಾಗಿ ಕಾಣಿಸಿಕೊಳ್ಳುತ್ತವೆ. ಅವುಗಳನ್ನು ಕಾಲಕಾಲಕ್ಕೆ ಆರಿಸಿ ತೆಗೆಯಬೇಕು. ಆದರೆ ಅವುಗಳನ್ನು ಎಂದಿಗೂ ಕಸದ ಜೊತೆ ಎಸೆಯಬಾರದು. ತುಳಸಿ ಎಲೆಗಳು, ಮೊಗ್ಗುಗಳು, ಬೇರುಗಳು, ಕಾಂಡಗಳು ಮತ್ತು ಮಣ್ಣು ಕೂಡಾ ಪವಿತ್ರವಾಗಿವೆ. ಹಾಗಾಗಿ ಅವುಗಳನ್ನು ಅಗೌರವಿಸಬೇಡಿ. ಬದಲಾಗಿ, ಅವುಗಳನ್ನು ಹರಿಯುವ ನೀರಿನಲ್ಲಿ ಬಿಡಬೇಕು.

ತುಳಸಿ ಗಿಡದ ಬಳಿ ಶಿವಲಿಂಗ ಇಡಬೇಡಿ:

ಧಾರ್ಮಿಕ ನಂಬಿಕೆಗಳ ಪ್ರಕಾರ, ಶಿವಲಿಂಗ ಅಥವಾ ಶಿವನಿಗೆ ಸಂಬಂಧಿಸಿದ ಯಾವುದೇ ವಸ್ತುವನ್ನು ತುಳಸಿ ಗಿಡದ ಬಳಿ ಇಡಬಾರದು. ಶಿವನಿಗೆ ತುಳಸಿಯನ್ನು ಅರ್ಪಿಸಬಾರದು. ಈ ತಪ್ಪು ಜೀವಕ್ಕೆ ಅಪಾಯಕಾರಿಯಾಗಬಹುದು.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+