ಮೆಟ್ರೋ ಪ್ರಯಾಣಿಕರಿಗೆ ಬಿಗ್ ರಿಲೀಫ್: ಆಗಸ್ಟ್‌ ವೇಳೆಗೆ ಹಸಿರು ಮಾರ್ಗಕ್ಕೆ ಬರಲಿವೆ 3 ಹೊಸ ರೈಲುಗಳು; ರಶ್‌ಗೆ ಸಿಗಲಿದೆ ಮುಕ್ತಿ

ಬೆಂಗಳೂರು: ನಮ್ಮ ಮೆಟ್ರೋ ರೈಲುಗಳಲ್ಲಿ ಪ್ರತಿದಿನ ಪ್ರಯಾಣಿಸುವ ಲಕ್ಷಾಂತರ ಸಾರ್ವಜನಿಕರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ನೆಮ್ಮದಿಯ ಸುದ್ದಿ ನೀಡಿದೆ. ಹಸಿರು ಮಾರ್ಗದಲ್ಲಿ (Green Line) ಎದುರಾಗುತ್ತಿರುವ ಅತಿಯಾದ ಜನದಟ್ಟಣೆಯನ್ನು ನಿಯಂತ್ರಿಸಲು ಮತ್ತು ರೈಲುಗಳ ಸಂಚಾರ ಹೆಚ್ಚಿಸಲು ಬಿಎಂಆರ್‌ಸಿಎಲ್ ಇದೇ ಆಗಸ್ಟ್ ವೇಳೆಗೆ ಆರು ಬೋಗಿಗಳ (6-coach) ಮೂರು ಹೊಸ ರೈಲುಗಳನ್ನು ಕಾರ್ಯಾಚರಣೆಗೆ ಇಳಿಸಲು ಸಜ್ಜಾಗಿದೆ.

ಮೆಟ್ರೋ ಮಂಡಳಿಗೆ ಸರಬರಾಜಾಗುತ್ತಿರುವ ಹೊಸ ರೈಲುಗಳ ಪೈಕಿ ಚೀನಾ ರೈಲ್ವೇ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್ (CRRC) ಮತ್ತು ತಿತಾಗಢ್ ರೈಲ್ ಸಿಸ್ಟಮ್ಸ್ ಲಿಮಿಟೆಡ್ (TRSL) ಸಹಭಾಗಿತ್ವದಲ್ಲಿ ಈ ರೈಲುಗಳನ್ನು ಸಿದ್ಧಪಡಿಸಲಾಗಿದೆ. ಇದರ ಮೊದಲ ಮಾದರಿ ರೈಲು ಹಲವು ವಿಳಂಬಗಳ ನಂತರ ಕಳೆದ ವರ್ಷದ ಆರಂಭದಲ್ಲೇ ಬೆಂಗಳೂರಿಗೆ ತಲುಪಿತ್ತು. ಮೊದಲಿಗೆ ಈ ಪ್ರೊಟೊಟೈಪ್ ರೈಲನ್ನು ಪರ್ಪಲ್ ಲೈನ್‌ನಲ್ಲಿ (ನೇರಳೆ ಮಾರ್ಗ) ಓಡಿಸಲು ಯೋಜಿಸಲಾಗಿತ್ತು. ಆದರೆ, ಪ್ರಸ್ತುತ ಬಿಎಂಆರ್‌ಸಿಎಲ್ ತನ್ನ ನಿರ್ಧಾರವನ್ನು ಬದಲಿಸಿದ್ದು, ಇವುಗಳನ್ನು ನೇರವಾಗಿ ಗ್ರೀನ್ ಲೈನ್‌ಗೆ ನಿಯೋಜಿಸಲು ತೀರ್ಮಾನಿಸಿದೆ.

Bengaluru Metro Green Line

ಟೆಸ್ಟಿಂಗ್ ಪ್ರಕ್ರಿಯೆ ಬಹುತೇಕ ಪೂರ್ಣ

ಹೊಸ ರೈಲುಗಳನ್ನು ಪ್ರಯಾಣಿಕರ ಸೇವೆಗೆ ಮುಕ್ತಗೊಳಿಸುವ ಮುನ್ನ ನಡೆಸಲಾಗುವ ತಾಂತ್ರಿಕ ಪರೀಕ್ಷೆಗಳು ಸದ್ಯ ಅಂತಿಮ ಹಂತಕ್ಕೆ ತಲುಪಿವೆ. ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿಯ ಪ್ರಕಾರ, ನಿಗಮಕ್ಕೆ ಈಗಾಗಲೇ ಪ್ರೊಟೊಟೈಪ್ ಸೇರಿದಂತೆ 3 ಅತ್ಯಾಧುನಿಕ ಡಿಟಿಜಿ (Distance-To-Go) ತಂತ್ರಜ್ಞಾನ ಆಧಾರಿತ ರೈಲುಗಳು ಹಸ್ತಾಂತರವಾಗಿವೆ.

Namma Metro: ಮೆಟ್ರೋ ನಿಲ್ದಾಣದಲ್ಲಿ ಮಹಿಳೆ ಆತ್ಮ*ತ್ಯೆಗೆ ಯತ್ನ, ಮುನ್ನೆಲೆಗೆ ಬಂತು PSD ವ್ಯವಸ್ಥೆ ಅಳವಡಿಕೆ
Namma Metro: ಮೆಟ್ರೋ ನಿಲ್ದಾಣದಲ್ಲಿ ಮಹಿಳೆ ಆತ್ಮ*ತ್ಯೆಗೆ ಯತ್ನ, ಮುನ್ನೆಲೆಗೆ ಬಂತು PSD ವ್ಯವಸ್ಥೆ ಅಳವಡಿಕೆ

ಟೆಸ್ಟಿಂಗ್ ತಡವಾಗಲು ಕಾರಣವೇನು?

ಗ್ರೀನ್ ಲೈನ್ ಈಗಾಗಲೇ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿರುವುದರಿಂದ, ಮೆಟ್ರೋ ರೈಲುಗಳ ನಿಯಮಿತ ಸಂಚಾರದ ಅವಧಿ ಮುಗಿದ ನಂತರ ಅಂದರೆ ತಡರಾತ್ರಿ ಮಾತ್ರವೇ ಈ ಹೊಸ ರೈಲುಗಳ ಪ್ರಾಯೋಗಿಕ ಓಟವನ್ನು ನಡೆಸಬೇಕಿತ್ತು. ಹೀಗಾಗಿ ಟೆಸ್ಟಿಂಗ್‌ಗೆ ಸಿಗುತ್ತಿದ್ದ ಸಮಯ ಕಡಿಮೆ ಇದ್ದಿದ್ದರಿಂದ ಪ್ರಕ್ರಿಯೆ ಕೊಂಚ ನಿಧಾನವಾಗಿದೆ. ಆದರೂ ಎಲ್ಲ ಮುಖ್ಯ ಹಂತಗಳನ್ನು ಯಶಸ್ವಿಯಾಗಿ ದಾಟಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾಣಿಜ್ಯ ಬಳಕೆಗೆ ಮುನ್ನ ರೈಲುಗಳು 37ಕ್ಕೂ ಹೆಚ್ಚು ಸುರಕ್ಷತಾ ಕ್ಲಿಯರೆನ್ಸ್‌ಗಳನ್ನು ಪಡೆಯಬೇಕಾಗುತ್ತದೆ. ಈ ಪೈಕಿ ರೈಲುಗಳ ಪರೀಕ್ಷೆ ಯಶಸ್ವಿಯಾಗಿ ಮುಗಿದಿದೆ. ರೈಲ್ವೇ ಮಂಡಳಿಯಿಂದ ರೋಲಿಂಗ್ ಸ್ಟಾಕ್ ಅನುಮೋದನೆ ಸಿಕ್ಕಿದೆ. ಸಿಗ್ನಲಿಂಗ್ ಇಂಟಿಗ್ರೇಷನ್ ಪರೀಕ್ಷೆಗಳೂ ಪೂರ್ಣಗೊಂಡಿವೆ. ಇನ್ನು ಕೇವಲ ಮೆಟ್ರೋ ರೈಲ್ವೆ ಸುರಕ್ಷತಾ ಕಮಿಷನರ್ (CMRS) ಅವರ ಕಡ್ಡಾಯ ಸುರಕ್ಷತಾ ತಪಾಸಣೆ ಮತ್ತು ಅಂತಿಮ ಒಪ್ಪಿಗೆ ಮಾತ್ರ ಬಾಕಿ ಉಳಿದಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಆಗಸ್ಟ್‌ನಲ್ಲಿ ಈ ರೈಲುಗಳು ಹಳಿಗೆ ಬರಲಿವೆ.

ಗ್ರೀನ್ ಮತ್ತು ಪರ್ಪಲ್ ಎರಡೂ ಲೈನ್‌ಗಳಿಗೂ ಲಾಭ

ಬಿಎಂಆರ್‌ಸಿಎಲ್ ಒಟ್ಟು 23 ಹೊಸ ಸಿಆರ್‌ಆರ್‌ಸಿ-ತಿತಾಗಢ್ ರೈಲುಗಳನ್ನು ಗ್ರೀನ್ ಲೈನ್‌ನಲ್ಲಿ ಮಾತ್ರವೇ ಬಳಸಲು ನಿರ್ಧರಿಸಿದೆ. ಸದ್ಯ 3 ರೈಲುಗಳು ಬಂದಿದ್ದು, ಇನ್ನುಳಿದ 20 ರೈಲುಗಳು ಪಶ್ಚಿಮ ಬಂಗಾಳದ ಉತ್ತರಪಾಡಾದಲ್ಲಿರುವ ಉತ್ಪಾದನಾ ಘಟಕದಲ್ಲಿ ಸಿದ್ಧಗೊಳ್ಳುತ್ತಿವೆ. ಈ ಹೊಸ ರೈಲುಗಳು ಹಸಿರು ಮಾರ್ಗದಲ್ಲಿ ಸಂಚಾರ ಆರಂಭಿಸುತ್ತಿದ್ದಂತೆ, ಪ್ರಸ್ತುತ ಗ್ರೀನ್ ಲೈನ್‌ನಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಹಳೆಯ ಮೆಟ್ರೋ ರೈಲುಗಳನ್ನು ಪರ್ಪಲ್ ಲೈನ್‌ಗೆ (ನೇರಳೆ ಮಾರ್ಗ) ವರ್ಗಾಯಿಸಲಾಗುತ್ತದೆ. ಬೆಂಗಳೂರಿನ ಮೆಟ್ರೋ ನೆಟ್‌ವರ್ಕ್‌ನಲ್ಲೇ ಅತಿ ಹೆಚ್ಚು ಪ್ರಯಾಣಿಕರನ್ನು ಹೊಂದಿರುವ ಪರ್ಪಲ್ ಲೈನ್‌ಗೆ ಈ ಹಳೆಯ ರೈಲುಗಳು ಸೇರ್ಪಡೆಯಾಗುವುದರಿಂದ, ಅಲ್ಲಿಯೂ ರೈಲುಗಳ ಲಭ್ಯತೆ ಹೆಚ್ಚಾಗಿ ಎರಡೂ ಮಾರ್ಗಗಳ ಪ್ರಯಾಣಿಕರ ದಟ್ಟಣೆ ಮತ್ತು ನೂಕುನುಗ್ಗಲು ಕ್ರಮೇಣ ಕಡಿಮೆಯಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+