40 ನಿಮಿಷ ಕಾಯಿಸಿದರೂ 'ಸಾರಿ' ಹೇಳಲಿಲ್ಲ! ಉದ್ಯೋಗವನ್ನೇ ತಿರಸ್ಕರಿಸಿದ ಬೆಂಗಳೂರು ಉದ್ಯಮಿ

ಸಂದರ್ಶನಕ್ಕೆ ಸಮಯಕ್ಕೆ ಸರಿಯಾಗಿ ಹಾಜರಾಗುವುದು ಕೇವಲ ಅಭ್ಯರ್ಥಿಯ ಕರ್ತವ್ಯ ಅಷ್ಟೇ ಅಲ್ಲ, ಇದು ಸಂದರ್ಶನ ನಡೆಸುವವರ ಜವಾಬ್ದಾರಿಯೂ ಹೌದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಇಂಟರ್‌ವ್ಯೂಗೆ ಬಂದವರನ್ನು ಬರೋಬ್ಬರಿ 40 ನಿಮಿಷಗಳ ಕಾಲ ಕಾಯಿಸಿ, ಕನಿಷ್ಠ ಸೌಜನ್ಯಕ್ಕಾದರೂ ಒಂದು ಕ್ಷಮೆ ಕೇಳದ ಸ್ಟಾರ್ಟ್‌ಅಪ್ ಸಂಸ್ಥಾಪಕರೊಬ್ಬರ ವರ್ತನೆಯಿಂದ ಬೆಂಗಳೂರು ಮೂಲದ ಉದ್ಯಮಿಯೊಬ್ಬರು ತೀವ್ರ ಅಸಮಾಧಾನಗೊಂಡಿದ್ದಾರೆ. ಇಂತಹ ಅಹಂಕಾರದ ನಡವಳಿಕೆಯಿಂದಾಗಿ ತಮಗೆ ಸಿಕ್ಕ ಉದ್ಯೋಗದ ಅವಕಾಶವನ್ನೇ ಅವರು ನೇರವಾಗಿ ನಿರಾಕರಿದಸಿದ್ದಾರೆ. ಈ ಘಟನೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಪೊರೇಟ್ ಸಂಸ್ಕೃತಿಯ ಕುರಿತು ಭಾರಿ ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರು ಮೂಲದ ನೇಮಕಾತಿ ಸ್ಟಾರ್ಟ್‌ಅಪ್ ಬೈನರಿ (Binary) ಸಂಸ್ಥಾಪಕ ಶಿಖರ್ ಸಕ್ಸೇನಾ ಅವರು ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಹಂಚಿಕೊಂಡಿದ್ದಾರೆ.

Rejects Job Offer

ಕಾರ್ಪೊರೇಟ್ ಜಗತ್ತಿನಲ್ಲಿ ಸಮಯದ ಪ್ರಜ್ಞೆ ಮತ್ತು ಕನಿಷ್ಠ ಸೌಜನ್ಯ ಎಷ್ಟು ಮುಖ್ಯ ಎಂಬುದಕ್ಕೆ ಶಿಖರ್ ಸಕ್ಸೇನಾ ಎಂಬುವವರು ಹಂಚಿಕೊಂಡಿರುವ ಈ ಅನುಭವವೇ ಸಾಕ್ಷಿ. "ನಾನು ಒಮ್ಮೆ ಜಗತ್ತಿನಾದ್ಯಂತ ಭಾರಿ ಸದ್ದು ಮಾಡಿದ್ದ ಪ್ರಸಿದ್ಧ ಸ್ಟಾರ್ಟ್‌ಅಪ್ ಸಂಸ್ಥೆಯೊಂದರ ಸಂಸ್ಥಾಪಕರನ್ನು (Founder) ಸಂದರ್ಶನ ಮಾಡಲು ಹೋಗಿದ್ದೆ. ಆದರೆ ಅವರು ನನ್ನನ್ನು ಬರೋಬ್ಬರಿ 40 ನಿಮಿಷಗಳ ಕಾಲ ಕಾಯಿಸಿದರು. ಅಷ್ಟೇ ಅಲ್ಲದೆ, ಬಂದ ನಂತರ ಕನಿಷ್ಠ ಪಕ್ಷ ಸೌಜನ್ಯಕಾದರು 'ಕ್ಷಮಿಸಿ' (Sorry) ಎನ್ನುವ ಮಾತನ್ನೂ ಆಡಲಿಲ್ಲ," ಎಂದು ಶಿಖರ್ ಬೇಸರದಿಂದ ಬರೆದುಕೊಂಡಿದ್ದಾರೆ. ಈ ಒಂದು ಘಟನೆ ಅವರ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದರಿಂದ, ಭವಿಷ್ಯದಲ್ಲಿ ಆ ಸಂಸ್ಥೆಯಲ್ಲಿ ಎಂದಿಗೂ ಕೆಲಸ ಮಾಡಬಾರದು ಎಂದು ಅವರು ತಕ್ಷಣವೇ ನಿರ್ಧರಿಸಿದರಂತೆ.

₹45 ಲಕ್ಷ ಬಂದರೂ ನೆಮ್ಮದಿಯ ಜೀವನ ಸಿಗ್ತಿಲ್ಲ ಎಂದ ಬೆಂಗಳೂರು ಟೆಕ್ಕಿ,
₹45 ಲಕ್ಷ ಬಂದರೂ ನೆಮ್ಮದಿಯ ಜೀವನ ಸಿಗ್ತಿಲ್ಲ ಎಂದ ಬೆಂಗಳೂರು ಟೆಕ್ಕಿ, "ಬಾನಿಗೊಂದು ಎಲ್ಲೇ ಎಲ್ಲಿದೆ" ಎಂದ ನೆಟ್ಟಿಗರು

ನಂತರ ಕೇಳಿ ಬಂದ ನಕಾರತ್ಮಕ ಅನುಭವಗಳು

ಆ ಸಂಸ್ಥೆಯ ಉದ್ಯೋಗಾವಕಾಶವನ್ನು ತಿರಸ್ಕರಿಸಿದ ನಂತರ, ಅಲ್ಲಿ ಕೆಲಸಕ್ಕೆ ಸೇರಿದ್ದ ಕೆಲವರಿಂದ ಅಲ್ಲಿನ ಹಲವು ಅಹಿತಕರ ಅನುಭವಗಳ ಬಗ್ಗೆ ಕೇಳಿಬಂತು. ಆಗ ನಾನು ಕೈಗೊಂಡ ನಿರ್ಧಾರ ಎಷ್ಟು ಸರಿಯಾಗಿತ್ತು ಎಂಬುದು ನನಗೆ ಮತ್ತಷ್ಟು ಖಚಿತವಾಯಿತು, ಎಂದು ಶಿಖರ್ ಹಂಚಿಕೊಂಡಿದ್ದಾರೆ. ಮುಂದುವರಿದು ಮಾತನಾಡಿದ ಅವರು ಯಾರನ್ನಾದರು ಅನಗತ್ಯವಾಗಿ ಕಾಯಿಸಿದ ಬಳಿಕ ಅದಕ್ಕೆ ಕನಿಷ್ಟ ಕ್ಷಮೆ ಕೇಳದಿರುವುದು ಅಥವಾ ಆ ತಪ್ಪನ್ನು ಒಪ್ಪಿಕೊಳ್ಳದೇ ಇರುವುದು ಅವರಲ್ಲಿನ ಸಹಾನುಭೂತಿ ಕೊರತೆ ಎದ್ದು ಕಾಣಿಸುತ್ತದೆ. ಇಂತಹ ವ್ಯಕ್ತಿಗಳಿಂದ ಮತ್ತು ಈ ತರಹದ ವಾತಾವರಣದಿಂದ ದೂರ ಇರುವದು ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದ್ದಾರೆ.

Rejects Job Offer

ಶಿಖರ್ ಸಕ್ಸೇನಾ ಅವರು ಹಂಚಿಕೊಂಡಿರುವ ಪೋಸ್ಟ್ ಸದ್ಯ ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದು, ಕಾರ್ಪೊರೇಟ್ ಜಗತ್ತಿನ ಸಂದರ್ಶನ ಸಂಸ್ಕೃತಿಯ ಬಗ್ಗೆ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ. ಮುಖ್ಯವಾಗಿ ಉದ್ಯೋಗ ಆಕಾಂಕ್ಷಿಗಳ ಸಮಯಕ್ಕೆ ಗೌರವ ನೀಡಬೇಕು ಹಾಗೂ ಕಂಪನಿಗಳ ನಾಯಕತ್ವದ ಗುಣಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಸಂದರ್ಶನ ಪ್ರಕ್ರಿಯೆಯಲ್ಲಿ ಕಂಪನಿಯು ಅಭ್ಯರ್ಥಿಗಳೊಂದಿಗೆ ನಡೆಸಿಕೊಳ್ಳುವ ರೀತಿಯೇ, ಆ ಸಂಸ್ಥೆಯ ಆಂತರಿಕ ಕೆಲಸದ ವಾತಾವರಣ ಮತ್ತು ಸಂಸ್ಕೃತಿಗೆ ಕನ್ನಡಿ ಹಿಡಿಯುತ್ತದೆ ಎಂದು ಅನೇಕ ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

2.9 ಕೋಟಿ ರೂ. ಪ್ಯಾಕೇಜ್ ಬಿಟ್ಟು ಕಿರಾಣಿ ಅಂಗಡಿ ನಡೆಸುತ್ತಿರುವ IIT ವಿದ್ಯಾರ್ಥಿ ವೈರಲ್ ಕಥೆ ಹಿಂದಿನ ಅಸಲಿಯತ್ತೇನು?
2.9 ಕೋಟಿ ರೂ. ಪ್ಯಾಕೇಜ್ ಬಿಟ್ಟು ಕಿರಾಣಿ ಅಂಗಡಿ ನಡೆಸುತ್ತಿರುವ IIT ವಿದ್ಯಾರ್ಥಿ ವೈರಲ್ ಕಥೆ ಹಿಂದಿನ ಅಸಲಿಯತ್ತೇನು?

'ಇದು ದೊಡ್ಡ ರೆಡ್ ಫ್ಲಾಗ್' ಎಂದ ನೆಟ್ಟಿಗರು

ಉದ್ಯೋಗದ ಸಂದರ್ಶನ ಹಾಗೂ ವೃತ್ತಿಪರ ನಡವಳಿಕೆಗಳ ಕುರಿತಾದ ಚರ್ಚೆಯೊಂದರಲ್ಲಿ ನೆಟ್ಟಿಗರು ತಮಗಾದ ಕೆಟ್ಟ ಅನುಭವಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ತಪ್ಪು ಮಾಡಿದಾಗಲೂ "ಕ್ಷಮೆ ಕೇಳದಿರುವುದು ಅತ್ಯಂತ ದೊಡ್ಡ ರೆಡ್ ಫ್ಲಾಗ್ (ಅಪಾಯದ ಮುನ್ಸೂಚನೆ)," ಎಂದು ಒಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ.

ಇದೇ ವೇಳೆ ಮತ್ತೊಬ್ಬರು ಪ್ರತಿಕ್ರಿಯಿಸಿ, "ನನ್ನ ಸ್ನೇಹಿತನೊಬ್ಬ ವ್ಯವಸ್ಥೆ ಮಾಡಿದ್ದ ಸಂದರ್ಶನಕ್ಕೆ ನಾನು ಹೋಗಿದ್ದೆ. ಆದರೆ ಅಲ್ಲಿನ ಸಂಸ್ಥಾಪಕರೇ (Founder) ನನ್ನನ್ನು ನೋಡಿ 'ನಾವು ಯಾಕೆ ಭೇಟಿಯಾಗುತ್ತಿದ್ದೇವೆ?' ಎಂದು ಕೇಳಿದರು! ಅವರಿಗೆ ಸಂದರ್ಶನದ ವಿಷಯವೇ ಗೊತ್ತಿರಲಿಲ್ಲ. ಆ ಇಂಟರ್ವ್ಯೂ ನನ್ನ ಇಡೀ ಜೀವನದ ಅತ್ಯಂತ ಕೆಟ್ಟ ಅನುಭವವಾಗಿತ್ತು," ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಇನ್ನಷ್ಟು ಸಾಮಾಜಿಕ ಜಾಲತಾಣ ಬಳಕೆದಾರು, ಅಭ್ಯರ್ಥಿಯನ್ನು ಕಾಯಿಸಿ ಕ್ಷಮೆ ಕೇಳದೇ ಇರುವುದು ಕೆಲವರು ತಮ್ಮ ಅಧಿಕಾರವನ್ನು ತೋರಿಸುವ ಒಂದು ರೀತಿಯ ವರ್ತನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸೂಚನೆ: ಈ ವರದಿ ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಹಂಚಿಕೊಳ್ಳಲಾದ ಪೋಸ್ಟ್ ಹಾಗೂ ಅದರ ಮೇಲಿನ ಸಾರ್ವಜನಿಕರ ಪ್ರತಿಕ್ರಿಯೆಗಳ ಆಧಾರಿತವಾಗಿದೆ. ಪೋಸ್ಟ್‌ನಲ್ಲಿರುವ ಎಲ್ಲ ಹೇಳಿಕೆಗಳನ್ನು ಸ್ವತಂತ್ರವಾಗಿ ಪರಿಶೀಲಿಸಲಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+