ಮಧ್ಯರಾತ್ರಿಯಲ್ಲೂ ಮಹಿಳೆಯರು ನಿರ್ಭಯವಾಗಿ ಓಡಾಡುವ ನಗರ! ವೈರಲ್ ವಿಡಿಯೋ ನೋಡಿ ನೆಟ್ಟಿಗರ ಮೆಚ್ಚುಗೆ

ಇಂದಿಗೂ ದೇಶದ ಹಲವು ನಗರಗಳಲ್ಲಿ ಮಧ್ಯರಾತ್ರಿಯ ನಂತರ ಮಹಿಳೆಯರು ಒಬ್ಬರೇ ಹೊರಗೆ ಓಡಾಡುವುದು ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯದಲ್ಲ ಎಂಬ ಭಾವನೆ ಹಾಗೆ ಉಳಿದಿದೆ. ಆದರೆ, ದೇಶದ ಪ್ರಮುಖ ಆರ್ಥಿಕ ರಾಜಧಾನಿ ಮುಂಬೈನಲ್ಲಿ ರಾತ್ರಿ 12.30ರ ಸಮಯದಲ್ಲೂ ಮಹಿಳೆಯರು ಯಾವುದೇ ಭಯವಿಲ್ಲದೆ, ಅತ್ಯಂತ ನಿರ್ಭಯವಾಗಿ ರಸ್ತೆಗಳಲ್ಲಿ ಸಂಚರಿಸುತ್ತಿರುವ ದೃಶ್ಯವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಮುಂಬೈನ ಈ ಸುರಕ್ಷಿತ ವಾತಾವರಣವು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದ್ದು, ಡಿಜಿಟಲ್ ಜಗತ್ತಿನಲ್ಲಿ ಮಹಿಳಾ ಸುರಕ್ಷತೆಯ ಕುರಿತು ಮತ್ತೊಮ್ಮೆ ಆಳವಾದ ಚರ್ಚೆಯನ್ನು ಹುಟ್ಟುಹಾಕಿದೆ.

ಮಧ್ಯರಾತ್ರಿ ಮುಂಬೈ ರೈಲು ನಿಲ್ದಾಣದಲ್ಲಿ ಯುವತಿಯ ಅನುಭವ: ಇನ್‌ಸ್ಟಾಗ್ರಾಂ ವಿಡಿಯೋ ವೈರಲ್!

ಇನ್‌ಸ್ಟಾಗ್ರಾಂ ಬಳಕೆದಾರರಾದ ಅದಿತಿ ಠಾಕೂರ್ ಎಂಬುವವರು ಮಧ್ಯರಾತ್ರಿ ಮುಂಬೈನ ರೈಲು ನಿಲ್ದಾಣದಲ್ಲಿ ತಮಗಾದ ಸುರಕ್ಷಿತ ಅನುಭವದ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ರಾತ್ರಿ ಸುಮಾರು 12.30ರ ವೇಳೆಗೆ ಮುಂಬೈನ ಮರೀನ್ ಲೈನ್ಸ್ ರೈಲ್ವೆ ನಿಲ್ದಾಣದಲ್ಲಿದ್ದ ಅವರು, ಅಲ್ಲಿ ಪೊಲೀಸ್ ಸಿಬ್ಬಂದಿ ಸಕ್ರಿಯವಾಗಿ ಕರ್ತವ್ಯ ನಿರ್ವಹಿಸುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಿದ್ದಾರೆ. ಪೊಲೀಸರ ಇರುವಿಕೆಯಿಂದಾಗಿ ತಮಗೆ ಆ ಸಮಯದಲ್ಲಿ ಯಾವುದೇ ರೀತಿಯ ಭಯವಾಗುತ್ತಿಲ್ಲ ಎಂದು ಅವರು ಆ ವಿಡಿಯೋದಲ್ಲಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

Viral Video

"ಇದಕ್ಕೇ ಮುಂಬೈ ಕನಸಿನ ನಗರ"

ಮಧ್ಯರಾತ್ರಿ 12.30ಕ್ಕೆ ಮುಂಬೈನ ಮರೀನ್ ಲೈನ್ಸ್ ರೈಲು ನಿಲ್ದಾಣದಿಂದ ಅದಿತಿ ಎಂಬ ಯುವತಿ ಹಂಚಿಕೊಂಡಿರುವ ಮಾತುಗಳು ಈಗ ಎಲ್ಲರ ಗಮನ ಸೆಳೆಯುತ್ತಿವೆ. "ಬೇರೆ ನಗರಗಳಲ್ಲಿದ್ದರೆ ಈ ಹೊತ್ತಿಗೆ ಮುಖ ಮುಚ್ಚಿಕೊಂಡು ಓಡಾಡಬೇಕಿತ್ತು. ನಮ್ಮ ಬಟ್ಟೆ, ನಮ್ಮ ರೂಪವೇ ತಪ್ಪು ಎಂದು ಸಮಾಜ ನಂಬಿಸಿರುವ ಈ ಕಾಲದಲ್ಲಿ, ಮುಂಬೈ ಮಾತ್ರ ಮಧ್ಯರಾತ್ರಿಯಲ್ಲೂ ಹೆಣ್ಣುಮಕ್ಕಳಿಗೆ ಅತ್ಯುತ್ತಮವಾದ ಸುರಕ್ಷತೆ ನೀಡಿದೆ. ಲೋಕಲ್ ಟ್ರೈನ್‌ನಲ್ಲಿ ಹೆಣ್ಣುಮಕ್ಕಳು ಧೈರ್ಯದಿಂದ ಹೋಗುತ್ತಿದ್ದಾರೆ. ಇಲ್ಲಿ ಹಗಲು-ರಾತ್ರಿ ಎನ್ನದೆ ನಾವು ಕನಸು ಕಾಣಬಹುದು ಮತ್ತು ಅದನ್ನು ಬೆನ್ನಟ್ಟಬಹುದು," ಎಂದು ಮುಂಬೈನ ನೈಟ್‌ಲೈಫ್ ಮತ್ತು ಸುರಕ್ಷತೆಯನ್ನು ಅವರು ಕೊಂಡಾಡಿದ್ದಾರೆ.

ವೈರಲ್ ವಿಡಿಯೋ: ನ್ಯೂಜೆರ್ಸಿಯ ತರಕಾರಿ ಸ್ಟೋರ್ ಮುಂದೆ ಜನಸಾಗರ! 'ಅಮೆರಿಕನ್ ಸಬ್ಜಿ ಮಂಡಿ' ಎಂದ ನೆಟ್ಟಿಗರು
ವೈರಲ್ ವಿಡಿಯೋ: ನ್ಯೂಜೆರ್ಸಿಯ ತರಕಾರಿ ಸ್ಟೋರ್ ಮುಂದೆ ಜನಸಾಗರ! 'ಅಮೆರಿಕನ್ ಸಬ್ಜಿ ಮಂಡಿ' ಎಂದ ನೆಟ್ಟಿಗರು

ನೆಟ್ಟಿಗರಿಂದ ಭಾರೀ ಮೆಚ್ಚುಗೆ

ವೈರಲ್ ಟ್ರೆಂಡ್: ಮುಂಬೈ ನಗರದ ಭದ್ರತೆ ಮತ್ತು ರಾತ್ರಿ ಜೀವನವನ್ನು ಬಿಂಬಿಸುವ ವಿಡಿಯೋವೊಂದು ಇಂಟರ್ನೆಟ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿದ್ದು, ನೆಟ್ಟಿಗರ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ನಗರವಲ್ಲ ಅದೊಂದು ಭಾವನೆ: ಮುಂಬೈ ತಮಗಿರುವ ಆತ್ಮೀಯತೆ ನೆನಪಿಸಿಕೊಂಡ ಒಬ್ಬರು, "ಮುಂಬೈ ಕೇವಲ ಒಂದು ನಗರವಲ್ಲ, ಅದು ಒಂದು ಭಾವನೆ" ಎಂದು ಪ್ರತಿಕ್ರಿಯಿಸಿದ್ದಾರೆ.

ಮಹಿಳಾ ಸುರಕ್ಷತೆಗೆ ಫುಲ್ ಮಾರ್ಕ್ಸ್: ಇನ್ನೊಬ್ಬರು, "ಮಧ್ಯರಾತ್ರಿಯಲ್ಲೂ ಮಹಿಳೆಯರು ಸುರಕ್ಷಿತವಾಗಿ ಸಂಚರಿಸುವುದು ಮುಂಬೈನ ದೊಡ್ಡ ವಿಶೇಷತೆ" ಎಂದು ಹೇಳಿದ್ದಾರೆ.

ಮತ್ತೊಬ್ಬ ಬಳಕೆದಾರರು, "ಲೋಕಲ್ ರೈಲುಗಳಲ್ಲಿ ವಿಪರೀತ ಜನಸಂದಣಿ ಇದ್ದರೂ, ಜನರಿಗೆ ಸುರಕ್ಷತೆಯ ಭಾವನೆ ನೀಡುವ ಶಕ್ತಿ ಮುಂಬೈಗೆ ಇದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನೋರ್ವರು, "ರಾತ್ರಿ ಸಮಯದಲ್ಲೂ ಪೊಲೀಸ್ ಸಿಬ್ಬಂದಿಯ ಕರ್ತವ್ಯ ನಿರ್ವವಹಿಸುವುದು ಹಾಗೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಯೇ ಜನರಿಗೆ ಧೈರ್ಯ ನೀಡುತ್ತಿದೆ" ಎಂದು ಬರೆದುಕೊಂಡಿದ್ದಾರೆ.

18 ವರ್ಷದ ಇಂಜಿನಿಯರಿಂಗ್‌ಗೆ ಟಾಟಾ ಬೈ: 40ರ ಹರೆಯದಲ್ಲಿ ವೈದ್ಯಕೀಯ ಲೋಕಕ್ಕೆ ಕಾಲಿಟ್ಟ ಜಾನ್ಹವಿ ರಾವ್ ಅವರ ಸಾಧನೆಯ ಹಾದಿ
18 ವರ್ಷದ ಇಂಜಿನಿಯರಿಂಗ್‌ಗೆ ಟಾಟಾ ಬೈ: 40ರ ಹರೆಯದಲ್ಲಿ ವೈದ್ಯಕೀಯ ಲೋಕಕ್ಕೆ ಕಾಲಿಟ್ಟ ಜಾನ್ಹವಿ ರಾವ್ ಅವರ ಸಾಧನೆಯ ಹಾದಿ

ಸಾಮಾಜಿಕ ಜಾಲತಾಣದಲ್ಲಿ ಚರ್ಚೆ

ಈ ವಿಡಿಯೋಗೆ ಸಾವಿರಾರು ಲೈಕ್‌ಗಳು ಹಾಗೂ ಕಾಮೆಂಟ್‌ಗಳು ಬಂದಿದ್ದು, ಮಹಿಳೆಯರ ಸುರಕ್ಷತೆ, ಸಾರ್ವಜನಿಕ ಸಾರಿಗೆ ಹಾಗೂ ಮಹಾನಗರಗಳ ಕಾನೂನು-ಸುವ್ಯವಸ್ಥೆ ಕುರಿತು ಚರ್ಚೆಗೆ ಕಾರಣವಾಗಿದೆ.

ಗಮನಿಸಿ: ಈ ವರದಿ ವೈರಲ್ ಆಗಿರುವ ಸಾಮಾಜಿಕ ಜಾಲತಾಣದ ವಿಡಿಯೋ ಹಾಗೂ ಅದರ ಮೇಲಿನ ಸಾರ್ವಜನಿಕರ ಪ್ರತಿಕ್ರಿಯೆಗಳ ಆಧಾರಿತವಾಗಿದೆ. ವಿಡಿಯೋದಲ್ಲಿನ ಎಲ್ಲ ಹೇಳಿಕೆಗಳನ್ನು ಸ್ವತಂತ್ರವಾಗಿ ಪರಿಶೀಲಿಸಲಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+