Restaurants: ರುಚಿಯಲ್ಲ ಸಮಸ್ಯೆ! ಬೆಂಗಳೂರಿನಲ್ಲಿ ಹೋಟೆಲ್ಗಳು ಮುಚ್ಚುತ್ತಿರುವುದಕ್ಕೆ ಕಾರಣ ಬಿಚ್ಚಿಟ್ಟ ಉದ್ಯಮಿ
Restaurants: ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಹಲವು ಹೋಟೆಲ್ಗಳು ಮುಚ್ಚಲ್ಪಡುತ್ತಿವೆ. ಬೆಂಗಳೂರಿನಲ್ಲಿ ವಿವಿಧ ಪ್ರದೇಶಗಳಲ್ಲಿ ಸಾವಿರಾರು ಹೋಟೆಲ್ಗಳಿವೆ. ವಾರಾಂತ್ಯ ಹಾಗೂ ವಿಶೇಷ ದಿನಗಳಲ್ಲಿ ಬೆಂಗಳೂರಿನ ಹೋಟೆಲ್ಗಳಲ್ಲಿ ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಯುತ್ತದೆ. ಆದರೆ, ಬೆಂಗಳೂರಿನಲ್ಲಿ ಪ್ರಮುಖ ಹೋಟೆಲ್ವೊಂದು ವಿಚಿತ್ರ ಕಾರಣಕ್ಕಾಗಿ ಕ್ಲೋಸ್ ಆಗಿದೆ. ಈ ಬಗ್ಗೆ ಬೆಂಗಳೂರಿನ Roll2Bowl ಸಂಸ್ಥೆಯ ಸಹ-ಸಂಸ್ಥಾಪಕ ಹರ್ಷಿತ್ ಎನ್ನುವವರು ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಲಿಂಕ್ಡ್ಇನ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಬೆಂಗಳೂರಿನಲ್ಲಿ ಹೋಟೆಲ್ಗಳನ್ನು ಯಾಕೆ ಕ್ಲೋಸ್ ಮಾಡಲಾಗುತ್ತಿದೆ ಅಥವಾ ಯಾಕೆ ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎನ್ನುವ ಬಗ್ಗೆ ವಿಶೇಷವಾಗಿದೆ. ಬೆಂಗಳೂರಿನ ಪ್ರಮುಖ ಫೂಡ್ ಡೆಲಿವರಿ ಸಂಸ್ಥೆ ಹಂಚಿಕೊಂಡಿರುವ ಈ ಪೋಸ್ಟ್ ಹಲವರ ಗಮನ ಸೆಳೆದಿದೆ.
ನಾನು ಮುಚ್ಚಲ್ಪಟ್ಟ ಒಂದು ರೆಸ್ಟೋರೆಂಟ್ ಬಗ್ಗೆ ಹೇಳಲಿದ್ದೇನೆ. ಈ ರೆಸ್ಟೋರೆಂಟ್ ಆಹಾರ ಚೆನ್ನಾಗಿರಲಿಲ್ಲ ಎಂಬ ಕಾರಣಕ್ಕೆ ಮುಚ್ಚಲಿಲ್ಲ. ವಾಸ್ತವವಾಗಿ, ಅಲ್ಲಿನ ಆಹಾರ ಅತ್ಯುತ್ತಮವಾಗಿತ್ತು. ರೆಸ್ಟೋರೆಂಟ್ ಮಾಲೀಕರು ಹಲವು ವರ್ಷಗಳ ಕಾಲ ಗ್ರಾಹಕರ ವಿಶ್ವಾಸ ಗಳಿಸಿ, ಉತ್ತಮ ರೆಸಿಪಿಗಳನ್ನು ರೂಪಿಸಿ, ನಿಷ್ಠಾವಂತ ಗ್ರಾಹಕರ ಬಳಗವನ್ನು ಕಟ್ಟಿಕೊಂಡಿದ್ದರು. ಹೆಚ್ಚಿನ ಗ್ರಾಹಕರನ್ನು ತಲುಪಲು ಅವರು ಫುಡ್ ಡೆಲಿವರಿ ವೇದಿಕೆಗೆ ಸೇರಿದರು. ಆರಂಭದಲ್ಲಿ ರೆಸ್ಟೋರೆಂಟ್ ಉತ್ತಮವಾಗಿತ್ತು. ಅಲ್ಲದೆ ಲಾಭದಲ್ಲಿಯೇ ಇತ್ತು. ಆರ್ಡರ್ಗಳು ಹೆಚ್ಚಾದವು. ಆದರೆ ಲಾಭ ಹೆಚ್ಚಾಗಲಿಲ್ಲ. ಪ್ರತಿ ಹೊಸ ಆರ್ಡರ್ಗೆ ಕಮಿಷನ್ ನೀಡಬೇಕಾಗುತ್ತಿತ್ತು. ವ್ಯವಹಾರ ಬೆಳೆದಂತೆ, ನೀಡಬೇಕಾದ ಕಮಿಷನ್ ಕೂಡ ಹೆಚ್ಚಾಯಿತು. ಮೆನು ಬೆಲೆಗಳನ್ನು ಹೆಚ್ಚಿಸಲು ಪ್ರಯತ್ನಿಸಿದರು. ಆದರೆ ಗ್ರಾಹಕರು ದುಬಾರಿಯಾಗಿದೆ ಎಂದು ಭಾವಿಸಿದರು. ಹೀಗಾಗಿ ಮತ್ತೆ ಬೆಲೆಗಳನ್ನು ಕಡಿಮೆ ಮಾಡಬೇಕಾಯಿತು.

ಕೊನೆಗೆ, ಲಾಭದ ಪ್ರಮಾಣವೇ ಉಳಿಯಲಿಲ್ಲ. ಅಂತಿಮವಾಗಿ ರೆಸ್ಟೋರೆಂಟ್ ಬಾಗಿಲು ಮುಚ್ಚಿತು. ಈ ಕಥೆ ನನ್ನ ಮನಸ್ಸಿಗೆ ಹೆಚ್ಚು ತಟ್ಟಿದ್ದು, ಇದು ದುರದೃಷ್ಟಕರ ಘಟನೆ ಎಂಬುದಲ್ಲ. ಇಂತಹ ಘಟನೆಗಳು ಈಗ ಸಾಮಾನ್ಯವಾಗಿವೆ ಎಂಬುದು. Roll2Bowl ಆರಂಭಿಸಿದ ಬಳಿಕ, ಬೆಂಗಳೂರಿನ ಅನೇಕ ರೆಸ್ಟೋರೆಂಟ್ ಮಾಲೀಕರೊಂದಿಗೆ ಮಾತನಾಡಿದ್ದೇನೆ. ಅವರಿಂದ ಇದೇ ರೀತಿಯ ಕಥೆಗಳನ್ನು ಮತ್ತೆ ಮತ್ತೆ ಕೇಳಿದ್ದೇನೆ. ಅವರು ಉತ್ತಮ ಆಹಾರ ತಯಾರಿಸಲು ಸಾಧ್ಯವಾಗದೆ ಸಂಕಷ್ಟದಲ್ಲಿಲ್ಲ. ವ್ಯವಹಾರದ ಲೆಕ್ಕಾಚಾರವೇ ಅವರಿಗೆ ಅನುಕೂಲವಾಗುತ್ತಿಲ್ಲ.
ಇದೇ ಅರಿವಿನಿಂದ ನಾವು Roll2Bowl ಅನ್ನು ಆರಂಭಿಸಿದ್ದೇವೆ. ಪ್ರತಿ ಆರ್ಡರ್ಗೆ ಕಮಿಷನ್ ಪಡೆಯುವ ಬದಲು, ನಾವು ಸರಳವಾದ ಮಾಸಿಕ ಚಂದಾದಾರಿಕೆ (Subscription) ಮಾದರಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಇದರಿಂದ ರೆಸ್ಟೋರೆಂಟ್ಗಳು ತಮ್ಮ ಬೆಲೆ, ಲಾಭದ ಪ್ರಮಾಣ ಮತ್ತು ವ್ಯವಹಾರದ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರುತ್ತವೆ.
ಇಂದು ಬೆಂಗಳೂರಿನ 150ಕ್ಕೂ ಹೆಚ್ಚು ರೆಸ್ಟೋರೆಂಟ್ಗಳು Roll2Bowl ಅನ್ನು ನಂಬಿವೆ. ನಾವು ಇನ್ನೂ ಆರಂಭಿಕ ಹಂತದಲ್ಲಿದ್ದೇವೆ. ಇನ್ನೂ ಕಲಿಯುತ್ತಿದ್ದೇವೆ. ಆದರೆ ರೆಸ್ಟೋರೆಂಟ್ಗಳ ಲಾಭ ಕಡಿಮೆಯಾಗುವುದನ್ನು ನೋಡುತ್ತ ಕುಳಿತುಕೊಳ್ಳುವ ಬದಲು, ಅವುಗಳು ದೀರ್ಘಕಾಲಿಕವಾಗಿ ಬೆಳೆಯಲು ಸಹಾಯ ಮಾಡಬಹುದಾದರೆ, ನಾವು ನಿಜವಾಗಿಯೂ ಅರ್ಥಪೂರ್ಣವಾದ ಕೆಲಸ ಮಾಡುತ್ತಿದ್ದೇವೆ ಎಂದು ಭಾವಿಸುತ್ತೇವೆ.
ನೀವು ರೆಸ್ಟೋರೆಂಟ್ ಹೊಂದಿದ್ದರೆ ಅಥವಾ ಅಂತಹ ಯಾರನ್ನಾದರೂ ತಿಳಿದಿದ್ದರೆ, ನಿಮ್ಮೊಂದಿಗೆ ಮಾತನಾಡಲು ನನಗೆ ಸಂತೋಷವಾಗುತ್ತದೆ ಎಂದೂ ಅವರು ಹೇಳಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಹೋಟೆಲ್ಗಳು ಮುಚ್ಚುತ್ತಿರುವುದಕ್ಕೆ ಆಹಾರ - ರುಚಿ ಕಾರಣವಲ್ಲ ಎನ್ನುವುದು ಸಾಬೀತಾಗಿದೆ ಎನ್ನುತ್ತಿದ್ದಾರೆ ನೆಟ್ಟಿಗರು.












Click it and Unblock the Notifications