ದೇವ್ರನ್ನ ನಂಬಲ್ಲ ಅಂದಿದ್ದ ಉರ್ಫಿ ಜಾವೇದ್ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರ? ರೀಟಾ ಭಾರಧ್ವಾಜ್‌ ಇವರ ಹೊಸ ಹೆಸರಾ?

ಚಿತ್ರ ವಿಚಿತ್ರ ಉಡುಗೆಗಳು, ಮಾದಕತೆ ಮೂಲಕವೇ ಸುದ್ದಿ ಆಗುವ ಉರ್ಫಿ ಜಾವೇದ್‌ ಹಿಂದೂ ಧರ್ಮಕ್ಕೆ ಮತಾಂತರ ಆಗಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ. ಜೊತೆಗೆ ಈಕೆ ತನ್ನ ಹೆಸರನ್ನೂ ಬದಲಿಸಿಕೊಂಡಿದ್ದಾರಂತೆ. ಅಷ್ಟಕ್ಕೂ ನಡೆದಿದ್ದೇನು? ಇದಕ್ಕೆ ಉರ್ಫಿ ಕೊಟ್ಟ ಉತ್ತರ ಏನು..

ಮಾದಕತೆಯಲ್ಲೇ ಮಿಂದೇಳುವ, ಸದಾ ವಿಚಿತ್ರ ಬಟ್ಟೆಯ ಕಾರಣಕ್ಕೆ ಸುದ್ದಿಯಲ್ಲಿರುವ ಉರ್ಫಿ ಜಾವೇದ್‌ ಅಪರೂಪಕ್ಕೆ ಧರ್ಮದ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಹೀಗೆ ಮತಾಂತರಗೊಂಡ ಬಳಿಕ ಇವರ ಹೆಸರೂ ಬದಲಾಗಿದೆಯಂತೆ. ಈಕೆಯ ಹೊಸ ಹೆಸರು ರೀಟಾ ಭಾರದ್ವಾಜ್‌ ಅಂತೆ. ಹೀಗೊಂದು ಸುದ್ದಿ ಕಳೆದ ಕೆಲವು ದಿನಗಳಿಂದ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡ್ತಿದೆ. ಹಾಗೆ ನೋಡಿದರ ಉರ್ಫಿ ಜಾವೇದ್‌ ಹೆಸರಲ್ಲಿ ಮುಸ್ಲಿಂ ಛಾಯೆ ಇದ್ದರೂ ತಾನು ಯಾವ ಧರ್ಮವನ್ನೂ ಅನುರಿಸೋದಿಲ್ಲ ಎಂದು ಅವರು ಈ ವರ್ಷದ ಶುರುವಲ್ಲೇ ಓಪನ್ನಾಗಿ ಹೇಳಿದ್ದರು. ಅದಕ್ಕೂ ಹೆಚ್ಚಾಗಿ ತಾನೊಬ್ಬ ಏಥಿಸ್ಟ್‌ ಅಂದರೆ ದೇವರನ್ನೇ ನಂಬಲ್ಲ ಅಂದಿದ್ದರು. ಅಂಥಾ ನಟಿ ಇದೀಗ ಕನ್ವರ್ಟ್‌ ಆಗಿರೋದು ಅಂದರೆ ಇದರ ಹಿಂದಿನ ಸ್ಟೋರಿ ಏನು ಅನ್ನೋ ಕುತೂಹಲ ಹಲವರಲ್ಲಿದೆ.

Uorfi Javed

ಕಂಟೆಂಟ್‌ ಕ್ರಿಯೇಟರ್‌ ಮಾಡಿರೋ ಅವಾಂತರ

ನಟಿ ಉರ್ಫಿ ಜಾವೇದ್ ಅವರ ಬಗ್ಗೆ ಅವರು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಮತ್ತು ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ ಎಂದು ಸುದ್ದಿ ಹಬ್ಬಿಸಿರೋದು ಒಬ್ಬ ಸೋಷಿಯಲ್‌ ಮೀಡಿಯಾ ಕಂಟೆಂಟ್‌ ಕ್ರಿಯೇಟರ್‌. ಈಕೆಯ ವಿರುದ್ಧ ಉರ್ಫಿ ತೀವ್ರ ಸಿಟ್ಟು, ವ್ಯಂಗ್ಯದಿಂದ ಪ್ರತಿಕ್ರಿಯಿಸಿದ್ದಾರೆ. ತಾನು ಅರೆನಗ್ನ ಬಟ್ಟೆಗಳನ್ನು ಧರಿಸುವುದಾಗಿ ಹೇಳಿದ್ದನ್ನೂ ಅವರು ಖಂಡಿಸಿದ್ದಾರೆ. ಈ ವಿಚಾರದಲ್ಲಿ ತಾನು ಪ್ರತಿಕ್ರಿಯೆ ನೀಡದ ಕಾರಣ ಒಬ್ಬ ಕಂಟೆಂಟ್ ಕ್ರಿಯೇಟರ್ ತನಗೆ ಮಾನಸಿಕವಾಗಿ ನೋವುಂಟು ಮಾಡುವ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದೂ ಉರ್ಫಿ ಹೇಳಿದ್ದಾರೆ.

ಅವಳೊಂದಿಗೆ ರೊಮ್ಯಾಂಟಿಕ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳೋದು ದುಃಸ್ವಪ್ನ: ವಿಜಯ್ ಸೇತುಪತಿ ಈ ಮಾತು ಹೇಳಿದ್ದು ಯಾವ ನಟಿ ಬಗ್ಗೆ?
ಅವಳೊಂದಿಗೆ ರೊಮ್ಯಾಂಟಿಕ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳೋದು ದುಃಸ್ವಪ್ನ: ವಿಜಯ್ ಸೇತುಪತಿ ಈ ಮಾತು ಹೇಳಿದ್ದು ಯಾವ ನಟಿ ಬಗ್ಗೆ?

ಆಗಿದ್ದೇನು?

ತಾನು ಡಿಡಿ ನ್ಯೂಸ್‌ನಲ್ಲಿ ಕೆಲಸ ಮಾಡಿದ್ದಾಗಿ ಉಲ್ಲೇಖಿಸಿರುವ ಮೀತಾ ಚೌಧರಿ ಎಂಬ ಕಂಟೆಂಟ್‌ ಕ್ರಿಯೇಟರ್‌ ಉರ್ಫಿ ಬಗ್ಗೆ ವಿಡಿಯೊ ಒಂದನ್ನು ಹಂಚಿಕೊಂಡಿದ್ದರು. ಅದರಲ್ಲಿ, "ಉರ್ಫಿ ಇಷ್ಟು ಪ್ರಸಿದ್ಧಿಗೆ ಬರಲು ಏಕೈಕ ಕಾರಣ ಅವರು ಅರ್ಧನಗ್ನ ಬಟ್ಟೆಗಳನ್ನು ಧರಿಸುವುದು. ಅದನ್ನು ಹೊರತುಪಡಿಸಿ ಬೇರೆ ಯಾವುದೇ ವಿಶೇಷ ಸಾಧನೆಯನ್ನೂ ಆಕೆ ಮಾಡಿಲ್ಲ. ಸದಾ ಕಡಿಮೆ ಬಟ್ಟೆ ಧರಿಸಿ ಅರೆನಗ್ನರಾಗಿರುತ್ತಾರೆʼ ಎಂದು ಹೇಳಿದ್ದಾರೆ. ಇದೇ ವಿಡಿಯೊದಲ್ಲಿ, ʼಮುಸ್ಲಿಂ ಆಗಿದ್ದ ಉರ್ಫಿ ಈಗ ತನ್ನ ಹೆಸರನ್ನು ರೀಟಾ ಭಾರದ್ವಾಜ್ ಎಂದು ಬದಲಿಸಿಕೊಂಡಿದ್ದಾರೆ. ಅಂದರೆ ಅವರು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆʼ ಎಂದು ಮೀತಾ ಹೇಳಿಕೆ ನೀಡಿದ್ದಾರೆ. ಜೊತೆಗೆ, ಉರ್ಫಿ ಸ್ವಲ್ಪವಾದರೂ ನಾಚಿಕೆ ಮತ್ತು ಸಂಯಮವನ್ನು ಅಳವಡಿಸಿಕೊಳ್ಳಬೇಕು ಎಂದೂ ಹೇಳಿದ್ದಾರೆ.

ಉರ್ಫಿ ಕೆಂಡಾಮಂಡಲ

ಈ ಆರೋಪಗಳಿಗೆ ಉರ್ಫಿ ಜಾವೇದ್ ತಕ್ಷಣವೇ ಉತ್ತರ ನೀಡಿದ್ದಾರೆ. ತನ್ನ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಈಗ ಅಳಿಸಲ್ಪಟ್ಟಿರುವ ಆ ವಿಡಿಯೊವನ್ನು ಹಂಚಿಕೊಂಡು, ʼತಮ್ಮನ್ನು ಪತ್ರಕರ್ತೆ ಎಂದು ಕರೆದುಕೊಳ್ಳುವವರು ಇಷ್ಟು ತಪ್ಪು ಮಾಹಿತಿಯನ್ನು ಹೇಗೆ ಹಂಚಿಕೊಳ್ಳುತ್ತಾರೆ? ಆಂಟಿ, ಸ್ವಲ್ಪವಾದರೂ ಮಾಹಿತಿ ಪರಿಶೀಲಿಸಿ. ನಾನು ನನ್ನ ಹೆಸರನ್ನಾಗಲಿ, ಧರ್ಮವನ್ನಾಗಲಿ ಬದಲಿಸಿಕೊಂಡಿಲ್ಲ. ನಾನು ಯಾವುದೇ ಧರ್ಮವನ್ನು ನಂಬುವುದಿಲ್ಲ. ನನ್ನ ಬಟ್ಟೆಗಳಷ್ಟೇ ಅಲ್ಲ, ಮಾತಿನಲ್ಲೂ ನಾನು ಮುಕ್ತವಾಗಿರುತ್ತೇನೆ. ಆದರೆ ಇಂದು ಅದಕ್ಕೆ ಮನಸ್ಸಿಲ್ಲ. ಒಮ್ಮೆ ಗೂಗಲ್‌ನಲ್ಲಿ ಹುಡುಕಿ ನಾನು ಎಷ್ಟು ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದ್ದೇನೆ ಎಂದು ನೋಡಿ. ಟೀಕೆ ಮಾಡಬೇಕಾದರೆ ಮಾಡಿ, ಆದರೆ ಸುಳ್ಳು ಸುದ್ದಿಗಳನ್ನು ಹರಡಬೇಡಿ. ನಿಮ್ಮ ಬಗ್ಗೆ ನಾನು ಅದೇ ರೀತಿ ಹೇಳಲು ಸಾಧ್ಯವಿಲ್ಲ, ಏಕೆಂದರೆ ಅದರಲ್ಲಿ ಯಾರಿಗೂ ಆಸಕ್ತಿ ಇಲ್ಲ" ಎಂದು ಉರ್ಫಿ ಸಿಟ್ಟಿಗೆದ್ದು ಪ್ರತಿಕ್ರಿಯೆ ನೀಡಿದ್ದಾರೆ.

Rashmika Mandanna: ಕನ್ನಡದ ರಶ್ಮಿಕಾ ಮಂದಣ್ಣಗೆ ಬಾಲಿವುಡ್ ಸೆಟ್ ಆಗಲ್ವಾ? ಖ್ಯಾತ ಲೇಖಕಿಯ ಹೇಳಿಕೆಗೆ ಗರಂ ಆದ ಫ್ಯಾನ್ಸ್
Rashmika Mandanna: ಕನ್ನಡದ ರಶ್ಮಿಕಾ ಮಂದಣ್ಣಗೆ ಬಾಲಿವುಡ್ ಸೆಟ್ ಆಗಲ್ವಾ? ಖ್ಯಾತ ಲೇಖಕಿಯ ಹೇಳಿಕೆಗೆ ಗರಂ ಆದ ಫ್ಯಾನ್ಸ್

ಕೃತಕ ಸ್ತನಕ್ಕಾಗಿ ಸರ್ಜರಿ ಮಾಡಿಸಿಲ್ಲ

ಉರ್ಫಿ ಅವರಿಗೆ ಬಂದಿದ್ದ ಕೆಲವು ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನೂ ಹಂಚಿಕೊಂಡಿದ್ದಾರೆ. ʼಮೀತಾ ಚೌಧರಿ ಆಂಟಿಗೆ ನನ್ನ ಪ್ರತಿಕ್ರಿಯೆ ತುಂಬಾ ಬೇಸರ ತಂದಿದೆ. ಆದರೆ ಅವರ ಹೇಳಿಕೆಗಳು ಹಾಗಿದ್ದವು. ನಾನು ಯಾವುದೇ ಕೃತಕ ಸ್ತನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿಲ್ಲ. ಅವರ ಮುಖವೇ ವಯಸ್ಸಿನಿಂದ ಬದಲಾಗಿರುವುದರಿಂದ ಅವರಿಗೆ ಅದೇ ವಿಷಯದ ಮೇಲೆ ಹೆಚ್ಚು ಆಸಕ್ತಿ ಇರಬಹುದು. ಆಂಟಿ ನನಗೆ ತುಂಬಾ ಮಾನಸಿಕವಾಗಿ ನೋವುಂಟು ಮಾಡುವ ಸಂದೇಶಗಳನ್ನು ಕಳುಹಿಸಿದರು. ಅವನ್ನು ಇಲ್ಲಿ ಹಂಚಿಕೊಳ್ಳಲು ಸಾಧ್ಯವಿಲ್ಲ. ನಂತರ ಅವರು ತಮ್ಮ ವಿಡಿಯೊವನ್ನು ಅಳಿಸಿ ನನ್ನನ್ನು ಬ್ಲಾಕ್ ಮಾಡಿದರು. ನಾನು ಅವರಿಗೆ ಅವಮಾನ ಮಾಡುವುದಿಲ್ಲ, ಏಕೆಂದರೆ ಅವರು ನನ್ನ ತಾತನಂತೆಯೇ ಕಾಣುತ್ತಾರೆʼ ಎಂದು ವ್ಯಂಗ್ಯವಾಗಿ ಝಾಡಿಸಿದ್ದಾರೆ.

(ಬರಹ: ಭವಾನಿ ಭಟ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+