Toxic ಅಪ್‌ಡೇಟ್ ಕೊಟ್ಟ ಯಶ್: ವೈರಲ್ ಆಯ್ತು ಪೋಸ್ಟ್, ಅಭಿಮಾನಿಗಳ ಸಂಭ್ರಮಾಚರಣೆ ಶುರು
ಇದು ಜಸ್ಟ್ ಸಿನಿಮಾ ಅಪ್‌ಡೇಟ್ ಅಲ್ಲ, ಇಡೀ ಭಾರತೀಯ ಚಿತ್ರರಂಗವೇ ಕಾತರದಿಂದ ಕಾಯುತ್ತಿರುವ ರಾಕಿಂಗ್ ಸ್ಟಾರ್ ಯಶ್ (Rocking Star Yash) ಸೃಷ್ಟಿಸಿರುವ ಹೊಸ ಸೆನ್ಸೇಷನ್. ಕೆಜಿಎಫ್ ಸರಣಿಯ ಮೂಲಕ ಗ್ಲೋಬಲ್ ಮಟ್ಟದಲ್ಲಿ ಧೂಳೆಬ್ಬಿಸಿದ್ದ ರಾಕಿ ಭಾಯ್, ತಮ್ಮ ಮುಂಬರುವ ಹೈ-ವೋಲ್ಟೇಜ್ ಆಕ್ಷನ್ 'ಟಾಕ್ಸಿಕ್' (Toxic: A Fairy Tale for Grown-ups) ಚಿತ್ರದ ಮೂಲಕ ಮತ್ತೊಂದು ಮೈಲಿಗಲ್ಲು ಸೃಷ್ಟಿಸಲು ಸಜ್ಜಾಗಿದ್ದಾರೆ. ಈ ಬಗ್ಗೆ ಯಶ್ ತಮ್ಮದೇ ರಗಡ್ ಶೈಲಿಯಲ್ಲಿ ಕೊಟ್ಟಿರುವ ಒಂದು ಪೋಸ್ಟ್ ಇಂಟರ್ನೆಟ್ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.
ಯಶ್ ಪೋಸ್ಟ್‌ನಲ್ಲೇನಿದೆ?
ಎಕ್ಸ್‌ನಲ್ಲಿ ಯಶ್ ಅವರನ್ನು ಟ್ಯಾಗ್ ಮಾಡಿ, "ವೇರ್ ಆರ್ ದಿ ಲೇಡೀಸ್ ಯಶ್?" (ನಾಯಕಿಯರು ಎಲ್ಲಿದ್ದಾರೆ?) ಎಂದು ಸಿನಿಮಾ ಸ್ಟೈಲ್‌ನಲ್ಲೇ ಪ್ರಶ್ನಿಸಲಾಗಿತ್ತು. ಈ ಅಖಾಡಕ್ಕೆ ಖುದ್ದಾಗಿ ಎಂಟ್ರಿ ಕೊಟ್ಟ ರಾಕಿಂಗ್ ಸ್ಟಾರ್ ತಮ್ಮ ಮಾಸ್ ಡೈಲಾಗ್ ಮೂಲಕ ರಿಪ್ಲೈ ಕೊಟ್ಟಿದ್ದಾರೆ. "Calm down! Ladies take time to come!" (ಶಾಂತರಾಗಿರಿ! ಲೇಡೀಸ್ ಬರಲು ಸ್ವಲ್ಪ ಸಮಯ ತಗೋತಾರೆ!) ಎಂದು ಬರೆಯುವ ಮೂಲಕ ಯಶ್ ಇಡೀ ಸೋಷಿಯಲ್ ಮೀಡಿಯಾವನ್ನು ಶೇಕ್ ಮಾಡಿದ್ದಾರೆ. ಇದರ ಜೊತೆಗೆ ನಾಳೆ (ಜುಲೈ 1) ಬೆಳಗ್ಗೆ 11:33ಕ್ಕೆ ಬಿಗ್ ಕೌಂಟ್‌ಡೌನ್ ಶುರುವಾಗಲಿದೆ ಎಂಬ ಸುಳಿವನ್ನೂ ನೀಡಿದ್ದಾರೆ.

ಗೀತು ಮೋಹನ್‌ದಾಸ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಟಾಕ್ಸಿಕ್' ಕೇವಲ ಯಶ್ ಅವರ ಮಾಸ್ ಆಕ್ಷನ್ ಅಷ್ಟೇ ಅಲ್ಲ, ಚಿತ್ರದಲ್ಲಿ ಭಾರತೀಯ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್‌ಗಳ ದಂಡೇ ಇರಲಿದೆ ಎಂಬುದು ಈ ಪೋಸ್ಟ್‌ನಿಂದ ಬಹಿರಂಗವಾಗಿದೆ. ನಾಳೆ ಬೆಳಗ್ಗೆ 11:33ಕ್ಕೆ ಚಿತ್ರದಲ್ಲಿ ನಟಿಸುತ್ತಿರುವ ಪ್ರಮುಖ ನಾಯಕಿಯರ ರಗಡ್ ಲುಕ್ ಅಥವಾ ವಿಶೇಷ ಟೀಸರ್ ಅನಾವರಣಗೊಳ್ಳುವ ಸಾಧ್ಯತೆ ಇದೆ.
Calm down !
— Yash (@TheNameIsYash) June 30, 2026
Ladies take time to come!
Tomorrow, 01-07-2026, 11:33 AM, https://t.co/LSFY5GBDAc #ToxicTheMovie https://t.co/19Yi1cZxCr
ಮೂಲಗಳ ಪ್ರಕಾರ, ಈ ಚಿತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದ ನಟಿಯರ ದೊಡ್ಡ ತಾರಾಬಳಗವೂ ಇದೆ. ನಯನತಾರಾ ಇಂಟರ್ನ್ಯಾಷನಲ್ ಮಾಫಿಯಾ ಕ್ವೀನ್ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಕಿಯಾರಾ ಅಡ್ವಾಣಿ ಅತ್ಯಂತ ಸ್ಟೈಲಿಶ್ ಹಾಗೂ ಕಿಲ್ಲರ್ ಲುಕ್‌ನ 'ನಾದಿಯಾ' ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹುಮಾ ಖುರೇಷಿ ರಗಡ್ ಆಕ್ಷನ್ ಅವತಾರದಲ್ಲಿ 'ಎಲಿಜಬೆತ್' ಆಗಿ ಅಬ್ಬರಿಸಲಿದ್ದಾರೆ. ರುಕ್ಮಿಣಿ ವಸಂತ್ ಈ ಚಿತ್ರದಲ್ಲಿ 'ಮೆಲಿಸ್ಸಾ' ಎಂಬ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಳೆ ಬಿಡುಗಡೆಯಾಗಲಿರುವ ಝಲಕ್‌ನಲ್ಲಿ ಈ ನಾಯಕಿಯರ ಪಾತ್ರಗಳ ಅಧಿಕೃತ ಪರಿಚಯವಾಗುವ ನಿರೀಕ್ಷೆಯಿದ್ದು, ಯಶ್ ಫ್ಯಾನ್ಸ್‌ಗೆ ಇದೊಂದು ಹಬ್ಬವಾಗಲಿದೆ.
ಮಾನ್‌ಸ್ಟರ್ ಮೈಂಡ್ಸ್ ಆಫ್ ಟಾಕ್ಸಿಕ್
ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಸ್ವಂತ ಸಂಸ್ಥೆ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ಭಾರಿ ಬಜೆಟ್‌ನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿವೆ. ರವಿ ಬಸ್ರೂರ್ ಅವರ ಹಿನ್ನೆಲೆ ಸಂಗೀತ ಮತ್ತು ಮೈ ಜುಂ ಎನಿಸುವ ಸಾಹಸ ದೃಶ್ಯಗಳು ಚಿತ್ರದ ಹೈಲೈಟ್ ಆಗಿರಲಿವೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲಕ್ಕೆ ಚಿತ್ರೀಕರಣಗೊಂಡಿರುವ ಈ ಗ್ಯಾಂಗ್‌ಸ್ಟರ್ ಸಿನಿಮಾ, ಬಹುಭಾಷೆಗಳಲ್ಲಿ ಆಗಸ್ಟ್ 26ರಂದು ವಿಶ್ವದಾದ್ಯಂತ ಬೆಳ್ಳಿಪರದೆಗೆ ಅಪ್ಪಳಿಸಲು ಸಜ್ಜಾಗುತ್ತಿದೆ. ಅಲ್ಲಿಯವರೆಗೆ ನಾಳೆ ಬೆಳಗ್ಗೆ 11:33ಕ್ಕೆ ಬರುವ ಧೂಳೆಬ್ಬಿಸುವ 'ಲೇಡೀಸ್ ಬಿಗ್ ಅಪ್‌ಡೇಟ್' ನೋಡಲು ಇಡೀ ಭಾರತೀಯ ಚಿತ್ರರಂಗವೇ ಕಾಯುತ್ತಿದೆ.













Click it and Unblock the Notifications