• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೀನಾ ಹೊಸ ಗ್ರಾಮ: ಪ್ರಧಾನಿ ಮೌನಮುರಿಯಲು ಕಾಂಗ್ರೆಸ್ ಒತ್ತಾಯ

|
Google Oneindia Kannada News

ನವದೆಹಲಿ ನವೆಂಬರ್ 18: ಭಾರತದ ಭೂಮಿಯನ್ನು ಆಕ್ರಮಿಸಿಕೊಂಡಿರುವ ಚೀನಾ ಭೂತಾನ್ ಗಡಿ ಪ್ರಾಂತ್ಯದಲ್ಲಿ ನಾಲ್ಕು ಗ್ರಾಮಗಳನ್ನು ನಿರ್ಮಾಣ ಮಾಡಿದೆ. ಇದನ್ನು ವಿರೋಧ ಪಕ್ಷ ಕಾಂಗ್ರೆಸ್ ಗುರುವಾರ ಖಂಡಿಸಿದೆ. ಚೀನಾ ಗಡಿಯಲ್ಲಿ ಮೋದಿ ಸರ್ಕಾರ ನಿರ್ಲಜ್ಜವಾಗಿ ರಾಷ್ಟ್ರೀಯ ಭದ್ರತೆಯೊಂದಿಗೆ ಅಕ್ಷಮ್ಯ ರಾಜಿ ಮಾಡಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಕಿಡಿ ಕಾರಿದೆ. ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮೌನವಾಗಿರುವುದು ಬೇಸರ ತಂದಿದೆ ಎಂದು ಕಾಂಗ್ರೆಸ್ ಹೇಳಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಗೌರವ್ ವಲ್ಲಭ್, 'ಡೋಕ್ಲಾಮ್ ಬಳಿ ಚೀನಾ ನಾಲ್ಕು ಗ್ರಾಮಗಳನ್ನು ನಿರ್ಮಿಸಿ ಸುಮಾರು 100 ಚದರ ಕಿಲೋಮೀಟರ್ ಭೂಮಿಯನ್ನು ಆಕ್ರಮಿಸಿಕೊಂಡಿದೆ, ಆದರೂ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮೌನವಾಗಿದೆ. ಈ ಬಗ್ಗೆ ಸರ್ಕಾರ ಮತ್ತು ಪ್ರಧಾನಿ ಇನ್ನು ಮುಂದೆ ಮುಚ್ಚಿಡುವಂತಿಲ್ಲ. ಈ ಬಗ್ಗೆ ಅವರೇ ಉತ್ತರಿಸಬೇಕು' ಎಂದಿದ್ದಾರೆ.

ಇದೀಗ ಬಿಡುಗಡೆಯಾಗಿರುವ ಹೊಸ ಉಪಗ್ರಹ ಚಿತ್ರಗಳಿಂದ ಚೀನಾ ಭೂತಾನ್ ಪ್ರದೇಶದಲ್ಲಿ ಈ ಹಿಂದೆ ಚೀನಾದ ಹಲವು ಗ್ರಾಮಗಳನ್ನು ನಿರ್ಮಿಸಿರುವುದು ಸ್ಪಷ್ಟವಾಗಿದೆ ಎಂದು ಕಾಂಗ್ರೆಸ್ ವಕ್ತಾರ ಗೌರವ್ ವಲ್ಲಭ್ ಹೇಳಿದ್ದಾರೆ. ಹೊಸ ಉಪಗ್ರಹ ಚಿತ್ರದಲ್ಲಿ ಸುಮಾರು 100 ಕಿಮೀ (25,000 ಎಕರೆ) ಪ್ರದೇಶದಲ್ಲಿ ಹಲವಾರು ಹಳ್ಳಿಗಳು ಗೋಚರಿಸುತ್ತವೆ. ಇದೆಲ್ಲವೂ ಮೇ 2020 ರ ನಂತರ ಸಂಭವಿಸಿದೆ. 2017 ರಲ್ಲಿ ಭಾರತ ಮತ್ತು ಚೀನಾ ಡೋಕ್ಲಾಮ್‌ನಲ್ಲಿ ಮುಖಾಮುಖಿಯಾಗಿದ್ದವು ಎಂದು ಅವರು ಹೇಳಿದರು. ಈಗ ಚೀನಾ ಅಲ್ಲಿ ಹಳ್ಳಿಗಳನ್ನು ನಿರ್ಮಿಸಿದೆ. ಈ ಹೊಸ ನಿರ್ಮಾಣವು ಭಾರತಕ್ಕೆ ತುಂಬಾ ಆತಂಕಕಾರಿಯಾಗಿದೆ. ಇದರಿಂದ ಗಡಿಯಲ್ಲಿರುವ ನಮ್ಮ ಸೈನಿಕರಿಗೆ ತೊಂದರೆಯಾಗಲಿದೆ ಎಂದರು.

ಇತ್ತೀಚಿಗೆ ಓಪನ್ ಸೋರ್ಸ್ ಇಂಟೆಲಿಜೆನ್ಸ್ ಡಿಟ್ರೆಸ್ಫಾ ಉಪಗ್ರಹ ಚಿತ್ರಗಳನ್ನು ಹಂಚಿಕೊಂಡ ನಂತರ ಈ ಪ್ರಶ್ನೆಗಳು ಉದ್ಬವಿಸಿವೆ. ಕಳೆದ ಒಂದು ವರ್ಷದಲ್ಲಿ ಭೂತಾನ್ ಪ್ರದೇಶದಲ್ಲಿ ಚೀನಾ ಸೇನೆಯು ನಾಲ್ಕು ಗ್ರಾಮಗಳನ್ನು ನಿರ್ಮಿಸಿದೆ. ಚೀನಾದ 100 ಕಿಮೀ ಪ್ರದೇಶದಲ್ಲಿ ಮೂರ್ನಾಲ್ಕು ಹಳ್ಳಿಗಳನ್ನು ನಿರ್ಮಿಸಿದೆ ಮತ್ತು ಇಲ್ಲಿ ದೊಡ್ಡ ಪ್ರಮಾಣದಲ್ಲಿ ಸೈನಿಕರನ್ನು ನಿಯೋಜಿಸಿದೆ ಎಂದು ಹೇಳಲಾಗುತ್ತದೆ. ಈ ಸಂಪೂರ್ಣ ಪ್ರದೇಶವು ಚಿಕನ್ ನೆಕ್ ಆಫ್ ಇಂಡಿಯಾ ಎಂದು ಕರೆಯಲ್ಪಡುವ ಸಿಲಿಗುರಿ ಕಾರಿಡಾರ್ ಬಳಿ ಇದೆ.

ಭೂತಾನ್ ನೆಲದಲ್ಲಿ ಚೀನಾ ಗ್ರಾಮಗಳ ನಿರ್ಮಾಣ ಭಾರತಕ್ಕೆ ಹೊಸ ತಲೆನೋವು ತಂದಿಟ್ಟಿದೆ. ಏಕೆಂದರೆ ಐತಿಹಾಸಿಕವಾಗಿ ಭೂತಾನ್‌ಗೆ ತನ್ನ ಬಾಹ್ಯ ಸಂಬಂಧ ನೀತಿಯ ಬಗ್ಗೆ ಸಲಹೆ ನೀಡಿರುವ ಭಾರತವು ಅದರ ಸಶಸ್ತ್ರ ಪಡೆಗಳಿಗೆ ತರಬೇತಿ ನೀಡುವುದನ್ನು ಮುಂದುವರೆಸಿದೆ. ಭೂತಾನ್ ತನ್ನ ಭೂ ಗಡಿಗಳ ಬಗ್ಗೆ ಮರು ಮಾತುಕತೆ ನಡೆಸಲು ಚೀನಾದಿಂದ ನಿರಂತರ ಒತ್ತಡವನ್ನು ಎದುರಿಸುತ್ತಿದೆ. ಈ ಒಪ್ಪಂದದ ಬಾಹ್ಯರೇಖೆಗಳನ್ನು ಎಂದಿಗೂ ಸಂಪೂರ್ಣವಾಗಿ ವಿವರಿಸಲಾಗಿಲ್ಲ. ತನ್ನ ನೆಲದಲ್ಲಿ ಈ ಹೊಸ ಹಳ್ಳಿಗಳ ನಿರ್ಮಾಣ ಮಾಡುತ್ತಿರುವುದು ಒಪ್ಪಂದದ ಒಂದು ಭಾಗವಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

Chinas new village: Congress says PM cannot keep silence

ಭೂತಾನ್ ಪ್ರಾಂತ್ಯದಲ್ಲಿ ಚೀನಾ ಸೇನಾ ಪಡೆಗಳು 2020ರ ಮೇ ತಿಂಗಳಿನಿಂದ 2021ರ ನವೆಂಬರ್ ತಿಂಗಳ ನಡುವೆ ನಾಲ್ಕು ಗ್ರಾಮಗಳನ್ನು ನಿರ್ಮಿಸಿದೆ. ಡೋಕ್ಲಾಮ್ ಪ್ರಸ್ಥಭೂಮಿಯ ಸಮೀಪದಲ್ಲಿ ಚೀನಾ ಗ್ರಾಮವನ್ನು ನಿರ್ಮಿಸುತ್ತಿದೆ ಎಂದು ಕಳೆದ ವರ್ಷ ಎನ್‌ಡಿಟಿವಿ ವರದಿ ಮಾಡಿತ್ತು, ಅಲ್ಲಿ ಚೀನಾ ಮತ್ತು ಭಾರತೀಯ ಮಿಲಿಟರಿಗಳು 2017 ರಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ಹೊಂದಿದ್ದವು. ಚೀನಾದ ಸರ್ಕಾರಿ ಮಾಧ್ಯಮದೊಂದಿಗೆ ಹಿರಿಯ ಪತ್ರಕರ್ತರೊಬ್ಬರು ಪೋಸ್ಟ್ ಮಾಡಿದ ಉಪಗ್ರಹದ ಚಿತ್ರಗಳಿಂದ ಈ ಗ್ರಾಮವು 2 ಕಿಲೋಮೀಟರ್ ಭೂತಾನ್ ಪ್ರದೇಶದೊಳಗೆ, ಡೋಕ್ಲಾಮ್‌ಗೆ ಬಹಳ ಹತ್ತಿರದಲ್ಲಿದೆ ಎಂಬುದನ್ನು ತೋರಿಸುತ್ತಿದೆ.

English summary
China has settled three villages near Doklam while occupying India's land. The main opposition party Congress has said this on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X