BMRCL: ಬೆಂಗ್ಳೂರಿಗೆ ಚೀನಾದಿಂದ ಮೆಟ್ರೋ ಮೂಲ ಮಾದರಿಯ ರೈಲು, ಇದರ ಉದ್ಘಾಟನೆ ಹಾಗೂ ಸಂಚಾರ ಮಾರ್ಗಗಳ ವಿವರ ತಿಳಿಯಿರಿ

ಬೆಂಗಳೂರು, ಡಿಸೆಂಬರ್‌, 14: ರಾಜ ರಾಜಧಾನಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಆರಂಭವಾದಾಗಿನಿಂದ ಉದ್ಯೋಗಿಗಳು, ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರಿಗೂ ಕೂಡ ತುಂಬಾ ಉಪಯುಕ್ತವಾದಂತಾಗಿದೆ. ಇದರಿಂದ ಸಮಯ ಉಳಿತಾಯವಾಗಲಿದ್ದು, ಭಾರೀ ಜನಮನ್ನಣೆಯನ್ನು ಪಡೆಯುತ್ತಲೇ ಬಂದಿದೆ. ಇದೀಗ ಮೆಟ್ರೋ ಹಳದಿ ಮಾರ್ಗದ ಮೂಲ ಮಾದರಿಯ ರೈಲು ಚೀನಾದಿಂದ ಗುರುವಾರ (ಡಿಸೆಂಬರ್‌ 14) ಬರಲಿದೆ ಎಂದು BMRCL ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಿಆರ್‌ಆರ್‌ಸಿ ರೋಲಿಂಗ್‌ ಕೋಚ್‌ಗಳು 2024ರ ಜನವರಿ ತಿಂಗಳಿನಲ್ಲಿ ನಗರಕ್ಕೆ ಬರಲಿವೆ. ಬಳಿಕ ಪರೀಕ್ಷೆ, ಜೋಡಣೆ ಕಾರ್ಯಗಳು ನಡೆಯಲಿವೆ. ಮೆಟ್ರೋ ಮೂಲ ಮಾದರಿಯ ಈ ರೈಲನ್ನು ಪಡೆದ ನಂತರ ಪ್ರಾಯೋಗಿಕ ಸಂಚಾರ ನಡೆಸಲು ಮತ್ತು ವಾಣಿಜ್ಯ ಕಾರ್ಯಾಚರಣೆಗಳಿಗೆ ಅನುಮೋದನೆ ಪಡೆಯಲು ಕನಿಷ್ಠ 3 ತಿಂಗಳುಗಳ ಕಾಲ ಕಾಲಾವಕಾಶ ಬೇಕಾಗುತ್ತದೆ ಎಂದು ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿ.ಎಲ್‌.ಯಶವಂತ ಚವಾಣ್‌ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

BMRCL: Metro prototype train shipped to Bengaluru from china, know details

ಈ ರೈಲು ಹಳದಿ ಮಾರ್ಗವು ಆರ್‌ವಿ ರಸ್ತೆ-ಸಿಲ್ಕ್‌ ಬೋರ್ಡ್‌ ಜಂಕ್ಷನ್‌-ಎಲೆಕ್ಟ್ರಾನಿಕ್‌ ಸಿಟಿ ಮೂಲಕ ಬೊಮ್ಮಸಂದ್ರ ಸಂಪರ್ಕ ಸಾಧಿಸಲಿದೆ. 19.15 ಕಿಲೋ ಮೀಟರ್‌ ದೂರದ ಈ ಮೆಟ್ರೋ ಮಾರ್ಗವು ಮುಂದಿನ ಲೋಕಸಭಾ ಚುನಾವಣೆಯ ನಂತರವೇ ಪ್ರಾರಂಭಗೊಳ್ಳುವ ನಿರೀಕ್ಷೆಯಿದೆ. 2024ರ ಜೂನ್‌ ವೇಳೆಗೆ ಉದ್ಘಾಟನೆಗೊಳ್ಳುವ ಸಾಧ್ಯತೆಯಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮೈಸೂರು-ಬೆಂಗಳೂರು ಪ್ರತಿ 10 ನಿಮಿಷಕ್ಕೊಮ್ಮೆ ರೈಲು

ಸಾಮಾನ್ಯವಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಜನಮನ್ನಣೆ ಪಡೆದಿದೆ. 5-6 ನಿಮಿಷಗಳ ಒಳಗೆ ಮೆಟ್ರೋ ನಿಲ್ದಾಣಗಳಿಗೆ ಬಂದು ತಲುಪುತ್ತವೆ. ಕೆಲವು ಬಾರಿ ಮಾತ್ರ ಸ್ವಲ್ಪ ತಡವಾಗುತ್ತದೆ ಅಷ್ಟೇ. ಹಾಗೆಯೇ ಇದೀಗ ಮೆಟ್ರೋದಂತೆಯೇ ಮೈಸೂರು-ಬೆಂಗಳೂರು ನಡುವೆ ಪ್ರತಿ 10 ನಿಮಿಷಗಳಿಗೊಮ್ಮೆ ರೈಲು ಓಡಿಸಲು ಇಲಾಖೆ ಮುಂದಾಗಿದೆ.

ಈ ಎರರು ನಗರಗಳ ನಡೆಸುವ 10 ನಿಮಿಷಗಳಿಗೊಮ್ಮೆ ರೈಲು ಓಡಿಸುವ ಬಗ್ಗೆ ರೈಲ್ವೆ ಇಲಾಖೆ ನಿರ್ಧಾರ ಮಾಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪ್ರಯಾಣ ಮೂಲ ಸೌಕರ್ಯವನ್ನು ಹೆಚ್ಚಿಸುವ ಹಾಗೂ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಇದು ಮಹತ್ವದ ಸೂಕ್ತ ಕ್ರಮವಾಗಲಿದೆ. ಅಲ್ಲದ ಇದರಿಂದ ಬೃಹತ್‌ ನಗರಗಳ ನಡುವೆ ಪ್ರಯಾಣಿಕರಿಗೆ ತ್ವರಿತ, ಸುರಕ್ಷಿತ ಮತ್ತು ಹೆಚ್ಚು ಆರಾಮದಾಯಕ ಪ್ರಯಾಣದ ಅನುಭವ ದೊರೆಯಲಿದೆ ಎನ್ನುವ ಅಭಿಪ್ರಾಯಗಳು ಕೇಳಿಬಂದಿವೆ ಅಂತಾ ಟಿವಿ 9 ಕನ್ನಡ ವರದಿ ಮಾಡಿದೆ.

ಹೀಗೆ 10 ನಿಮಿಷಗಳಿಗೊಮ್ಮೆ ರೈಲುಗಳು ಸಂಚಾರ ಮಾಡಲು ಸಾಧ್ಯವೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ. ಮೆಟ್ರೋ ರೈಲುಗಳು ಅಂತೂ ಬರೀ ಬೆಂಗಳೂರಿನಲ್ಲಿ ಮಾತ್ರ ಸಂಚಾರ ಮಾಡುತ್ತಿರುತ್ತವೆ. ಆದರೆ ರೈಲು ಬೇರೆ, ಬೇರೆ ಜಿಲ್ಲೆ, ಸೇರಿದಂತೆ ರಾಜ್ಯಗಳಿಗೂ ಸಂಚಾರ ಮಾಡುತ್ತವೆ. ಮತ್ತೊಂದೆಡೆ 10 ನಿಮಿಷದೊಳಗೆ ಈ ರೈಲುಗಳು ನಿರ್ಗಮಿಸಿದರೆ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗಲಿದೆ ಎನ್ನುವ ಅಭಿಪ್ರಾಯಗಳು ಕೇಳಿಬಂದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+