ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶಾದ್ಯಂತ ಇಲ್ಲಿಯವರೆಗೆ 21 ಕೋಟಿ ಕೊರೊನಾ ಲಸಿಕೆ ವಿತರಣೆ

|
Google Oneindia Kannada News

ನವದೆಹಲಿ, ಮೇ 20: ದೇಶದಲ್ಲಿ ಎಷ್ಟು ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ, ಮುಂದಿನ ದಿನಗಳಲ್ಲಿ ಎಷ್ಟು ಲಸಿಕೆಯನ್ನು ನೀಡಲಾಗುತ್ತದೆ ಎನ್ನುವ ಕುರಿತು ಹೊಸ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಲಸಿಕೆ ಹಾಕುವುದು ಸಾಂಕ್ರಾಮಿಕ ರೋಗದ ನಿಯಂತ್ರಣ ಮತ್ತು ನಿರ್ವಹಣೆಗಾಗಿ ಟೆಸ್ಟ್, ಟ್ರ್ಯಾಕ್, ಟ್ರೀಟ್ ಹಾಗ ಕೋವಿಡ್ ತಡೆಗೆ ಅನುಸರಿಸಬೇಕಾದ ಕ್ರಮಗಳು ಭಾರತ ಸರ್ಕಾರದ ಸಮಗ್ರ ಕಾರ್ಯತಂತ್ರದ ಅವಿಭಾಜ್ಯ ಭಾಗವಾಗಿದೆ.

ಉತ್ತಮ ಗಾಳಿ, ಬೆಳಕು ಇದ್ದರೆ ಕೊರೊನಾ ಹೆಚ್ಚಾಗಿ ಹರಡಲ್ವಂತೆ!ಉತ್ತಮ ಗಾಳಿ, ಬೆಳಕು ಇದ್ದರೆ ಕೊರೊನಾ ಹೆಚ್ಚಾಗಿ ಹರಡಲ್ವಂತೆ!

ದೇಶಾದ್ಯಂತ ಲಸಿಕೆ ನೀಡುವ ಚಾಲನೆಯ ಭಾಗವಾಗಿ, ಭಾರತ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೋವಿಡ್ ಲಸಿಕೆಗಳನ್ನು ಉಚಿತವಾಗಿ ನೀಡುವ ಮೂಲಕ ಬೆಂಬಲ ನೀಡುತ್ತಿದೆ.

More Than 21 Crore Vaccine Doses Provided To States, UTs

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಲಸಿಕೆಗಳನ್ನು ನೇರವಾಗಿ ಖರೀದಿಸಲು ಭಾರತ ಸರ್ಕಾರವು ಸಹಕರಿಸುತ್ತಿದೆ.

ಕೋವಿಡ್ -19 ಲಸಿಕೆಯ ಉದಾರೀಕೃತ ಮತ್ತು ವೇಗವರ್ಧಿತ ಹಂತ 3ರ ಕಾರ್ಯತಂತ್ರದ ಅನುಷ್ಠಾನವು ಮೇ 1, 2021 ರಿಂದ ಪ್ರಾರಂಭವಾಗಿದೆ. ಇದರಲ್ಲಿ, ಪ್ರತಿ ತಿಂಗಳು ಒಟ್ಟು ಕೇಂದ್ರ ಔಷಧ ಪ್ರಯೋಗಾಲಯದ (ಸಿಡಿಎಲ್) ತೆರವುಗೊಳಿಸಿದ ಯಾವುದೇ ಉತ್ಪಾದಕರ ಲಸಿಕೆ ಡೋಸ್ ಗಳನ್ನು ಸರ್ಕಾರದಿಂದ ಖರೀದಿಸಲಾಗುವುದು. ಈ ಪ್ರಮಾಣಗಳನ್ನು ಈ ಹಿಂದೆ ಮಾಡಿದಂತೆ ಕೇಂದ್ರವು ರಾಜ್ಯ ಸರ್ಕಾರಗಳಿಗೆ ಸಂಪೂರ್ಣವಾಗಿ ಉಚಿತವಾಗಿ ನೀಡುತ್ತಿದೆ.

ಇನ್ನೂ ಸುಮಾರು 2.00 ಕೋಟಿ (1,97,70,555) ಕೋವಿಡ್ ಲಸಿಕೆ ಡೋಸ್ ಗಳನ್ನು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ನೀಡಬೇಕಿವೆ. ಇದಲ್ಲದೆ, ಸುಮಾರು 26 ಲಕ್ಷ (25,98,760) ಲಸಿಕೆ ಪ್ರಮಾಣಗಳು ಮುಂದಿನ 3 ದಿನಗಳಲ್ಲಿ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳನ್ನು ತಲುಪಲಿವೆ.

ಭಾರತ ಸರ್ಕಾರವು ಇಲ್ಲಿಯವರೆಗೆ ಉಚಿತ ರೀತಿ ಮಾರ್ಗದ ಮೂಲಕ ಮತ್ತು ನೇರ ರಾಜ್ಯ ಖರೀದಿ ವಿಭಾಗದ ಮೂಲಕ 21 ಕೋಟಿಗಿಂತ ಹೆಚ್ಚು ಲಸಿಕೆ ಡೋಸುಗಳನ್ನು (21,07,31,130) ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಒದಗಿಸಿದೆ. ಇದರಲ್ಲಿ, ಒಟ್ಟು ಬಳಕೆ (ವ್ಯರ್ಥಗಳು ಸೇರಿದಂತೆ) 19,09,60,575 ಡೋಸ್ ಗಳು (ಇಂದು ಬೆಳಗ್ಗೆ 8 ಗಂಟೆಗೆ ಲಭ್ಯವಿರುವ ಮಾಹಿತಿಯ ಪ್ರಕಾರ) ಆಗಿವೆ.

English summary
Vaccination is an integral pillar of the comprehensive strategy of Government of India for containment and management of the pandemic, along with Test, Track, Treat and COVID Appropriate Behaviour. As part of the nationwide vaccination drive, Government of India has been supporting the States and UTs by providing them COVID Vaccines free of cost.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X