ಉತ್ತಮ ಗಾಳಿ, ಬೆಳಕು ಇದ್ದರೆ ಕೊರೊನಾ ಹೆಚ್ಚಾಗಿ ಹರಡಲ್ವಂತೆ!

ನವದೆಹಲಿ, ಮೇ 20: ಉತ್ತಮ, ಗಾಳಿ ಬೆಳಕು ಇರುವ ಪ್ರದೇಶದಲ್ಲಿ ಕೊರೊನಾ ಹರಡುವ ಪ್ರಮಾಣ ಕಡಿಮೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಉತ್ತಮ ಗಾಳಿ-ಬೆಳಕನ್ನು ಹೊಂದಿರುವ ಪ್ರದೇಶಗಳಲ್ಲಿ ಕೋವಿಡ್-19 ವೈರಾಣು ಪ್ರಸರಣದ ಅಪಾಯ ಕಡಿಮೆ ಇರಲಿದೆ ಎಂದು ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿ ತಿಳಿಸಿದೆ.

ಕೋವಿಡ್-19 ಸೋಂಕು ಪ್ರಸರಣ ತಡೆಗಟ್ಟಿ, ಸಾಂಕ್ರಾಮಿಕವನ್ನು ನಿಯಂತ್ರಿಸಿ- ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸೇಷನ್, ಹಾಗೂ ವೆಂಟಿಲೇಷನ್ ಎಂಬ ಶೀರ್ಷಿಕೆಯಡಿ ಸಲಹೆಗಳನ್ನು ನೀಡಿರುವ ಪ್ರಧಾನ ವೈಜ್ಞಾನಿಕ ಸಲಹೆಗಾರರು ಮನೆಯಲ್ಲಿ ಅಥವಾ ಕೆಲಸದ ಸ್ಥಳಗಳಲ್ಲಿ ನಮ್ಮನ್ನು ರಕ್ಷಿಸಿಕೊಳ್ಳುವುದಕ್ಕೆ ಉತ್ತಮ-ಗಾಳಿ ಬೆಳಕು ಸಮುದಾಯ ರಕ್ಷಣೆಯಾಗಿವೆ ಎಂದು ಅವರು ಹೇಳಿದ್ದಾರೆ.

ಸೋಂಕಿತರ ಎಂಜಲು ಅಥವಾ ಮೂಗಿನ ದ್ರವವು ಎರಡು ಮೀಟರ್ ಅಂತರದಲ್ಲಿ ನೆಲದ ಮೇಲೆ ಅಥವಾ ಇನ್ನಾವುದೇ ಮೇಲ್ಮೈಗೆ ಬಿದ್ದರೆ ಆ ಕಣಗಳು ಹತ್ತು ಮೀಟರ್‌ವರೆಗೂ ಗಾಳಿಯಲ್ಲಿ ಪಸರಿಸಬಲ್ಲವು ಎಂದು ಮಾರ್ಗಸೂಚಿ ತಿಳಿಸಿದೆ.

ಸೋಂಕಿತನ ಎಂಜಲು ಹಾಗೂ ಸಿಂಬಳ ವೈರಸ್ ಹರಡುವಿಕೆಯ ಪ್ರಮುಖ ವಾಹಕಗಳಾಗಿದ್ದು, ಯಾವುದೇ ಲಕ್ಷಣಗಳಿಲ್ಲದ ಸೋಂಕಿತ ವ್ಯಕ್ತಿ ಸುಲಭವಾಗಿ ಈ ಮೂಲಕ ವೈರಸ್ ಹರಡಬಹುದಾಗಿದೆ. ಗಾಳಿ ಬೆಳಕು ಯಥೇಚ್ಛವಾಗಿರದ ಸ್ಥಳಗಳಲ್ಲಿ ಸೋಂಕು ಬೇಗನೇ ಹರಡುತ್ತದೆ ಎಂದು ತಿಳಿಸಿದೆ.

 ಗಾಳಿ, ಬೆಳಕು ಇದ್ದಲ್ಲಿ ಸೋಂಕು ಹರಡುವುದು ಕಡಿಮೆ

ಗಾಳಿ, ಬೆಳಕು ಇದ್ದಲ್ಲಿ ಸೋಂಕು ಹರಡುವುದು ಕಡಿಮೆ

ವ್ಯಕ್ತಿಯಿಂದ ವ್ಯಕ್ತಿಗೆ ಕೋವಿಡ್-19 ವೈರಾಣು ಸೋಂಕು ಹರಡುವ ಸಾಧ್ಯತೆ ಉತ್ತಮ ಗಾಳಿ-ಬೆಳಕು ಇದ್ದಲ್ಲಿ ಕಡಿಮೆ ಎಂದು ಪ್ರಧಾನ ವೈಜ್ಞಾನಿಕ ಸಲಹೆಗಾರರು ಹೇಳಿದ್ದಾರೆ.

 ರೋಗದ ಅಪಾಯ ಕಡಿಮೆ

ರೋಗದ ಅಪಾಯ ಕಡಿಮೆ

ವೈರಾಣು ಪ್ರಮಾಣವನ್ನು ಕಡಿಮೆ ಮಾಡುವುದರಲ್ಲಿ ಗಾಳಿ-ಬೆಳಕು ಮಹತ್ವದ ಪಾತ್ರ ವಹಿಸುತ್ತದೆ. ಗಾಳಿ-ಬೆಳಕು ಉತ್ತಮವಾಗಿದ್ದಲ್ಲಿ ರೋಗ ಹರಡುವಿಕೆಯ ಅಪಾಯ ಕಡಿಮೆ ಇದೆ ಎಂದು ಸಲಹೆಗಾರರು ಅಭಿಪ್ರಾಯಪಟ್ಟಿದ್ದಾರೆ. ಕಿಟಕಿಗಳನ್ನು, ಬಾಗಿಲುಗಳನ್ನು ತೆರೆಯುವುದರಿಂದ ವಾಸನೆಯನ್ನು ಹೋಗಲಾಡಿಸಬಹುದೋ ಹಾಗೆಯೇ ಗಾಳಿ ಬೆಳಕುಗಳಿಂದ ವೈರಾಣುಗಳ ಹರಡುವಿಕೆಯನ್ನೂ ಕಡಿಮೆ ಮಾಡಬಹುದಾಗಿದೆ ಎಂದು ಸಲಹೆಯಲ್ಲಿ ವಿವರಿಸಲಾಗಿದೆ.

 ಮನೆ, ಕಚೇರಿಯಲ್ಲಿ ಬೆಳಕನ್ನು ಹೆಚ್ಚಿಸಬೇಕು

ಮನೆ, ಕಚೇರಿಯಲ್ಲಿ ಬೆಳಕನ್ನು ಹೆಚ್ಚಿಸಬೇಕು

ಮನೆ, ಕಚೇರಿ, ಸಾರ್ವಜನಿಕ ಸ್ಥಳಗಳಲ್ಲಿ ಗಾಳಿ-ಬೆಳಕನ್ನು ಹೆಚ್ಚಿಸುವ ಈ ಕ್ರಮವನ್ನು ತುರ್ತಾಗಿ ಕೈಗೊಳ್ಳಬೇಕಿದೆ ಎಂದು ಪ್ರಧಾನ ವೈಜ್ಞಾನಿಕ ಸಲಹೆಗಾರರು ಹೇಳಿದ್ದಾರೆ.

 ಮನೆಯಲ್ಲಿಯೇ ಕೊರೊನಾ ಪರೀಕ್ಷೆ ಮಾಡಿಸಿ

ಮನೆಯಲ್ಲಿಯೇ ಕೊರೊನಾ ಪರೀಕ್ಷೆ ಮಾಡಿಸಿ

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಮತ್ತೊಂದೆಡೆ ಕೊರೊನಾ ಪರೀಕ್ಷೆ ಮಾಡಿಸಿದ ಬಳಿಕ ವರದಿ ಬರುವುದು ತಡವಾಗುತ್ತಿದೆ ಎನ್ನುವ ದೂರುಗಳು ಕೂಡ ಕೇಳಿಬರುತ್ತಿದೆ. ಹೀಗಾಗಿ ನೀವು ಮನೆಯಲ್ಲೇ ಕೊರೊನಾ ಪರೀಕ್ಷೆ ಮಾಡಿ ಎಂದು ಐಸಿಎಂಆರ್ ಸಲಹೆ ನೀಡಿದೆ.

ಕೊರೊನಾ ವಿರುದ್ಧ ನಡೆಯುತ್ತಿರುವ ಯುದ್ಧದಲ್ಲಿ ಹೊಸ ಆಯುಧ ಪತ್ತೆಯಾಗಿದೆ. ಹೌದು, ಕೊರೊನಾ ಪರೀಕ್ಷೆಗಾಗಿ ಈಗ ಚಿಂತೆ ಮಾಡುವ ಅಗತ್ಯವಿಲ್ಲ, ಏಕೆಂದರೆ ನೀವು ಮನೆಯಲ್ಲಿಯೇ ಖುದ್ದಾಗಿ ಕೊರೊನಾ ಪರೀಕ್ಷೆ ಮಾಡಲು ಸಾಧ್ಯವಾಗುತ್ತದೆ. ಈ ಗೃಹಾಧಾರಿತ ಕರೊನಾ ಪರೀಕ್ಷಾ ಕಿಟ್ ಅನ್ನು ಐಸಿಎಂಆರ್ ಸಹ ಅನುಮೋದಿಸಿದೆ. ಕೊವಿಸೆಲ್ಫ್ ಎಂಬ ಹೆಸರಿನ ಟೆಸ್ಟ್‌ ಕಿಟ್‌ಗೆ ಐಸಿಎಂಆರ್‌ ಅನುಮತಿ ನೀಡಿದ್ದು ಇದರ ವಿಧಾನದ ಮೂಲಕ 18 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟವರು ತಮಗೆ ತಾವೇ ಪರೀಕ್ಷೆ ಮಾಡಿಕೊಳ್ಳಬಹುದಾಗಿದೆ.ಹಿರಿಯರ ಸಹಾಯದಿಂದ ಈ ಪರೀಕ್ಷೆಯನ್ನು ಮನೆಯಲ್ಲೇ ಮಾಡಿಕೊಳ್ಳಬಹುದಾಗಿದೆ. ಈ ಕಿಟ್ ಲಭ್ಯವಿದೆ ಎಂದು ಎಲ್ಲರೂ ಬೇಕಾಬಿಟ್ಟಿ ಈ ವಿಧಾನ ಬಳಸುವಂತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+