ಇಸ್ರೋದ ನೂತನ ಉಪಗ್ರಹದಿಂದ ಗಡಿಯಾಚೆಗಿನ ಕಣ್ಗಾವಲಿಗೆ ಆನೆಬಲ

Subscribe to Oneindia Kannada

ಶ್ರೀಹರಿಕೋಟಾ, ಜನವರಿ 12: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು ಯಶಸ್ವಿಯಾಗಿ ಕಾರ್ಟೋಸ್ಯಾಟ್ - 2 ಸರಣಿಯ ಉಪಗ್ರಹವನ್ನು ಉಡಾವಣೆ ಮಾಡಿದೆ.

ಈ ಉಡಾವಣೆ ಭಾರತದ ಪಾಲಿಗೆ ಹಲವು ಅವಕಾಶಗಳನ್ನುತೆರದಿಡಲಿದೆ. ಬಹುಮುಖ್ಯವಾಗಿ ಈ ಉಪಗ್ರಹ ಗಡಿಯಾಚೆ ಹದ್ದಿನ ಕಣ್ಣಿಡಲು ಸಹಾಯ ಮಾಡಲಿದೆ.

ಶತಕ ಬಾರಿಸಿದ ಇಸ್ರೋ, 100ನೇ ಉಪಗ್ರಹ ಯಶಸ್ವೀ ಉಡಾವಣೆ

'ಕಾರ್ಟೋಸ್ಯಾಟ್ -2' ಸರಣಿಯ ಕಣ್ಗಾವಲು ಉಪಗ್ರಹಗಳು ಭಾರತದ ನೆರೆ ರಾಷ್ಟ್ರಗಳ ನೆಲದ ಮೇಲೆ ಕಣ್ಣಿಡಲಿವೆ. ಇದೇ ಸರಣಿಯ ಉಪಗ್ರಹಗಳ ಸಹಾಯ ಪಡೆದು 2016ರಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡಲಾಗಿತ್ತು. ಸೇನೆಯ ಕಮಾಂಡೋಗಳು ಗಡಿ ದಾಟಿ ಪಾಕಿಸ್ತಾನದ ನೆಲಕ್ಕೆ ಹೋಗಿ ಉಗ್ರರ ನೆಲೆಗಳನ್ನು ನಾಶಪಡಿಸಿದ್ದರು.

 India's Eye Across Border Strengthens As ISRO Launches Cartosat-2

ಇದೀಗ ಕಾರ್ಟೋಸ್ಯಾಟ್ - 2 ಸರಣಿಗೆ ಮತ್ತೊಂದು ಉಪಗ್ರಹ ಕಕ್ಷೆಗೆ ಸೇರ್ಪಡೆಯಾಗಿದ್ದು ಭಾರತದ ಕಣ್ಗಾವಲು ವ್ಯವಸ್ಥೆಗೆ ಮತ್ತಷ್ಟು ಶಕ್ತಿಯುತವಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಗಡಿ ಮೇಲೆ ಕಣ್ಗಾವಲು ಇಡುವುದರ ಜತೆಗೆ ಪಟ್ಟಣಗಳ ಪ್ಲಾನಿಂಗ್ ಗೂ ಇದು ಸಹಾಯಕವಾಗಲಿದೆ.

ಕರಾವಳಿ, ರಸ್ತೆ ಸಂಪರ್ಕ, ನೀರಾವರಿ ಹಂಚಿಕೆ, ಭೂಮಿಯ ಬಳಕೆ ಮೊದಲಾದವಗಳ ನಿರೀಕ್ಷಣೆಗೆ ಕಾರ್ಟೋಸ್ಯಾಟ್ ಸಹಾಯ ಮಾಡಲಿದೆ.

ಸಂಕ್ರಾಂತಿ ವಿಶೇಷ ಪುಟ

ಕಾರ್ಟೋಸ್ಯಾಟ್ ನಿಗದಿತ ಪ್ರದೇಶದ ಹೈ ರೆಸಲ್ಯೂಷನ್ ಚಿತ್ರಗಳನ್ನು ನೀಡಲಿದೆ. ಇದಕ್ಕಾಗಿ ಮಲ್ಟಿ ಸ್ಪೆಕ್ಟ್ರಲ್ ಕ್ಯಾಮೆರಾಗಳು ಇದರಲ್ಲಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian Space Research Organisation successfully launches 100th satellite ‘Cartosat-2’ series from Satish Dhawan Space Centre at Sriharikota. The surveillance satellite from the "Cartosat 2" series for earth observation will keep an eye on India's hostile neighbours.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ