ಇಸ್ರೋ ವಿಜ್ಞಾನಿಗೆ ವಂಚನೆ: ಆರೋಪಿಗಳ ಜಾಮೀನು ಅರ್ಜಿ ತಿರಸ್ಕಾರ
ಬೆಂಗಳೂರು, ಡಿಸೆಂಬರ್ 25: ಬೆಂಗಳೂರಿನ ಇಸ್ರೊದಲ್ಲಿ ಕೆಲಸ ಮಾಡುತ್ತಿದ್ದ ವಿಜ್ಞಾನಿಯೊಬ್ಬರಿಗೆ ಉಚಿತ ಆಹಾರ ನೀಡುವ ಸಂಸ್ಥೆ ಹೆಸರು ಹೇಳಿಕೊಂಡು ವಂಚನೆ ಮಾಡಿದ್ದ ಆರೋಪದ ಮೇಲೆ ದೆಹಲಿ ಮೂಲದ ಇಬ್ಬರು ಯುವಕರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಿಟಿ ಸಿವಿಲ್ ಕೋರ್ಟ್ ತಿರಸ್ಕರಿಸಿದೆ.
ದೆಹಲಿ ಮೂಲದ ಕುಲದೀಪ್ ಸಿಂಗ್ (25) ಮತ್ತು ಗುರುಪ್ರೀತ್ ಸಿಂಗ್ (24) ಆರೋಪಿಗ ವಂಚನೆ ಮಾಡಿದ್ದ ಆರೋಪಿಗಳು. ವಿಜ್ಞಾನಿ ನೀಡಿದ ದೂರಿನ ಆಧಾರದ ಮೇಲೆ ಮಾರತ್ತಹಳ್ಳಿ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಅಪರಾದ ಪ್ರಕರಣ ದಾಖಲಿಸಿಕೊಂಡಿದ್ದರು.

ನಿಸ್ವಾರ್ಥ ಸೇವೆಯ 'ಲಂಗರ್'ಗೆ ದೇಣಿಗೆ ನೀಡುವ ನೆಪದಲ್ಲಿ ಬೆಂಗಳೂರಿನಲ್ಲಿ ಇಸ್ರೋದಲ್ಲಿ ಕೆಲಸ ಮಾಡುತ್ತಿದ್ದ ವಿಜ್ಞಾನಿಯೊಬ್ಬರಿಗೆ ಇವರಿಬ್ಬರು ವಂಚಿಸಿದ್ದರು. ಪ್ರಕರಣ ದಾಖಲಾಗಿದ್ದು, ಇವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಸ್ವೀಕರಿಸಿಲ್ಲ ಎಂದು TNIE ವರದಿ ಮಾಡಿದೆ.
2023ರ ಆಗಸ್ಟ್ 17 ರಂದು ಸಿಖ್ ಸಮುದಾಯದ ಅಪರಿಚಿತ ವ್ಯಕ್ತಿಯೊಬ್ಬರು ಲಂಗರ್ ಚಾರಿಟಿಗೆ ದೇಣಿಗೆ ನೀಡುವಂತೆ ಕೋರಿ ಇಸ್ರೋ ವಿಜ್ಞಾನಿಯ ನಿವಾಸಕ್ಕೆ ಆಗಮಿಸಿದ್ದರು. ಅವರಿಗೆ ದೇಣಿಗೆ ನೀಡಲು ಇವರು (ದೂರುದಾರ ವಿಜ್ಞಾನಿ) ನಿರಾಕರಿಸಿದರು. ನಂತರ, ವಿಜ್ಞಾನಿ ತನ್ನ ಮೊಬೈಲ್ ಫೋನ್‌ನ ಕೀಪ್ಯಾಡ್ ಅನ್ನು ಅನ್ಲಾಕ್ ಮಾಡುತ್ತಿರುವುದನ್ನು ನೋಡಿದ ಆರೋಪಿಯು ದೂರುದಾರರಿಗೆ ಕುಡಿಯುವ ನೀರು ನೀಡುವಂತೆ ಮನವಿ ಮಾಡಿದರು.
ಲಾಕ್ ತೆರೆದು ಹಣ ಪಾವತಿ, ದೂರು ದಾಖಲು
ದೂರುದಾರರು ನೀರು ತರಲು ಒಳಗೆ ಹೋದಾಗ, ಆರೋಪಿಗಳು ದೂರುದಾರರ ಮೊಬೈಲ್ ಫೋನ್ ತೆಗೆದುಕೊಂಡು ಲಾಕ್ ಓಪನ್ ಮಾಡಿ 41,800 ರೂ.ಪಾವತಿಸಿಕೊಂಡಿದ್ದರು. ಮರುದಿನ ಆಗಸ್ಟ್ 18 ರಂದು ಈ ಘಟನೆ ಕುರಿತು ವಿಜ್ಞಾನಿ ರಾಷ್ಟ್ರೀಯ ಪೋರ್ಟಲ್ ಸೈಬರ್ ಕ್ರೈಂಗೆ ದೂರು ನೀಡಿದ್ದರು.
ಪ್ರಕರಣವು ಕೋರ್ಟ್ ಮೆಟ್ಟಿಲೇರಿದ್ದು, ಅಪರಾಧಿಗಳು ನ್ಯಾಯಾಲಯದ ಮುಂದೆ ತಾವು ನಿರಪರಾಧಿಗಳು ಎಂದು ಹೇಳಿಕೊಂಡಿದ್ದಾರೆ. ದೂರುದಾರರು ಸ್ವಯಂ ಪ್ರೇರಿತವಾಗಿ ಹಣವನ್ನು ಕಳುಹಿಸಿದ್ದಾರೆ. ಅಲ್ಲದೆ, ಘಟನೆಯು ಆಗಸ್ಟ್ 17 ರಂದು ಸಂಭವಿಸಿದೆ ಎಂದು ಹೇಳಲಾಗಿದೆ, ಆದರೆ ದೂರು ದಾಖಲಿಸಿರುವುದು ಅಕ್ಟೋಬರ್ 11 ರಂದು ದೂರು ದಾಖಲಿಸಲಾಗಿದೆ. ಇಷ್ಟು ವಿಳಂಬವಾಗಿದೆ ಎಂದು ವಿಚಾರವಣೆ ವೇಳೆ ತಿಳಿಸಿದರು.

ಆರೋಪಿಗಳ ವಾದದಲ್ಲಿ ಹುರುಳಿಲ್ಲ
64ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಕಲ್ಪನಾ ಎಂಎಸ್ ಅವರು, ದೂರುದಾರ ವಿಜ್ಞಾನಿಗಳು ರಾಷ್ಟ್ರೀಯ ಸೈಬರ್ ಕ್ರೈಮ್ ಪೋರ್ಟಲ್‌ಗೆ ತಕ್ಷಣವೇ ದೂರು ದಾಖಲಿಸಿದ್ದಾರೆ. ನೀವು ಅವರ ಮನೆಯಲ್ಲಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಕ್ರಮ ಕೈಗೊಳ್ಳುವಲ್ಲಿ ವಿಳಂಬವಾಗಿದೆ ಎಂಬ ಆರೋಪಿಗಳ ವಾದದಲ್ಲಿ ಹುರುಳಿಲ್ಲ ಎಂದು ಅಭಿಪ್ರಾಯಪಟ್ಟರು.
ಪ್ರಕರಣದ ತನಿಖೆ ಕೈಗೊಂಡಿರುವ ಅಧಿಕಾರಿಗಳು ಕೋರ್ಟ್‌ಗೆ ವರದಿ ನೀಡಿದ್ದು. ಅದರಲ್ಲಿ ಯುಪಿಐ ವಹಿವಾಟು ಪರಿಶೀಲಿಸಿದ ನಂತರ ನಾಲ್ಕು ವಹಿವಾಟುಗಳ ಮೂಲಕ 41,800 ರೂಪಾಯಿ ವರ್ಗಾವಣೆ ಆಗಿದೆ. ಈ ಸಂಬಂಧ ಅರ್ಜಿದಾರರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದರು.
ಅರ್ಜಿದಾರರು ಇದೇ ರೀತಿಯ ಸೈಬರ್ ಅಪರಾಧಗಳಲ್ಲಿ ಭಾಗಿಯಾಗಿರಬಹುದು ಎಂದು ಪೊಲೀಸರು ಆತಂಕ ವ್ಯಕ್ತಪಡಿಸಿದ್ದಾರೆ ಮತ್ತು ವಿವರವಾದ ವಿಚಾರಣೆಯ ಅಗತ್ಯವಿದೆ ಎಂದು ನ್ಯಾಯಾಲಯ ತಿಳಿಸಿತು. ಅರ್ಜಿದಾರರು ದೇಣಿಗೆ ಕೋರಿದ್ದ ದೂರುದಾರರನ್ನು ಸಂಪರ್ಕಿಸಿದ್ದೇವೆ. ಅವರು ಯಾವ ದಾಖಲೆ ನೀಡಿಲ್ಲ ಎಂಬುದನ್ನು ಕೋರ್ಟ್ ಮಗನಿಸಿದೆ. ದೂರುದಾರರ ಪರವಾಗಿ ನೀಡಿದ ರಶೀದಿಯ ಪ್ರತಿ ಇರಬೇಕೆಂದು ಕೋರ್ಟ ತಿಳಿಸಿದೆ.












Click it and Unblock the Notifications