ISRO: 2025ಕ್ಕೆ ಮಾನವ ಅಂತರಿಕ್ಷಯಾನ ಜಾರಿ: ಇಸ್ರೋ ಜತೆ ಪ್ರಧಾನಿ ಮೋದಿ ಸಭೆಯ ಅಂಶಗಳು ಇವು
ಬೆಂಗಳೂರು, ಅಕ್ಟೋಬರ್ 17: ಭಾರತದ ಮೊದಲ ಮಾನವ ಸಹಿತ ಅಂತರಿಕ್ಷಯಾನ ಮುಂದಿನ 2025ರಲ್ಲಿ ಜಾರಿ ಆಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಮಾಹಿತಿ ನೀಡಿದ್ದಾರೆ.
ಚಂದ್ರಯಾನ ಯಶಸ್ಸಿನ ನಂತರದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಸಂಸ್ಥೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಈ ಸಭೆಯಲ್ಲಿ ಮುಂದಿನ 2025ರಿಂದ ಹದಿನೈದು ವರ್ಷಗಳ ಕಾಲ ಭಾರತ ಬಾಹ್ಯಾಕಾಶ ವಿಚಾರದಲ್ಲಿ ಮಾಡಬೇಕಿರುವ ಸಾಧನೆಗಳನ್ನು ಇಸ್ರೋ ಅಧಿಕಾರಿಗಳು ಮತ್ತು ಪ್ರಧಾನಿ ಮೋದಿ ಚರ್ಚಿಸಿದರು.

ಮುಂದಿನ 2025ರಲ್ಲಿ ಮಾನವ ಸಹಿತ ಅಂತರಿಕ್ಷಯಾನದ ಪ್ರಕ್ರಿಯೆ ಆರಂಭವಾಗಲಿದೆ. ನಂತರ 2040ರ ಹೊತ್ತಿಗೆ ಭೂಮಿಯಿಂದ ಚಂದ್ರನ ಅಂಗಳಕ್ಕೆ ಮೊದಲ ಬಾರಿಗೆ ಮಾನವನನ್ನು ಕಳಹಿಸುವ ಯೋಜನೆಗಳನ್ನು ಸಾಧಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋಗೆ ತಿಳಿಸಿದ್ದಾರೆ. ಸಭೆ ಬಳಿಕೆ ಬಿಡುಗಡೆಯಾದ ಪ್ರಧಾನಿ ಮೋದಿ ಕಾರ್ಯಾಲಯ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನೂ 'ಗಗನ್ ಯಾನ್ ಮಿಷನ್' ಭಾಗವಾಗಿ ಅಕ್ಟೋಬರ್ 21ರಂದು ಶ್ರೀಹರಿಕೋಟಾದ ಬಾಹ್ಯಾಕಾಶದಿಂದ ಬೆಳಗ್ಗೆ 7ರಿಂದ 9ರವರೆಗೆ ಪರೀಕ್ಷಾ ವಾಹಕ ಉಡಾವಣೆಗೊಳಿಸುವ ಮುಖೇನ ಮಾನವ ಸಹಿತ ಹಾರಾಟ ಪರೀಕ್ಷೆ ನಡೆಸುವುದು ಸೇರಿದಂತೆ ಯೋಜನೆ ಇನ್ನಿತರ ಅಂಶಗಳು ಕುರಿತು ಮಾಹಿತಿ ಪಡೆದ ಪ್ರಧಾನಿ ಮೋದಿಯವರು ಕೆಲವು ನಿರ್ದೇಶನಗಳನ್ನು ಇಸ್ರೋಗೆ ನೀಡಿದರು.
ಚಂದ್ರಾನ್ವೇಷಣೆ, ಬೇರೆ ಗ್ರಹಗಳ ಕಾರ್ಯಾಚರಣೆಯ ಮಾಹಿತಿ
ಬಾಹ್ಯಾಕಾಶದಲ್ಲಿನ ಭವಿಷ್ಯ, ಮುಂದಾಗಬೇಕಾದ ಕೆಲಸಗಳ ಜತೆ ಜತೆಗೆ ವೀನಸ್ (ಶುಕ್ರ) ಆರ್ಬಿಟರ್ ಮಿಷನ್, ಮಾರ್ಸ್ ಲ್ಯಾಂಡರ್ ಒಳಗೊಂಡಂತೆ ಬೇರೆ ಬೇರೆ ಗ್ರಹಗಳ ಕಾರ್ಯಾಚರಣೆ, ಚಂದ್ರನ ಮೇಲಿನ ಅನ್ವೇಷಣೆ ಮುಂದುವರಿಸುವುದು ಕುರಿತಂತೆ ವಿವಿಧ ಕೆಲಸಗಳನ್ನು ಮಾಡುವ ಕುರಿತು ಇಸ್ರೋ ವಿಜ್ಞಾನಿಗಳನ್ನು ಪ್ರಧಾನಿ ಮೋದಿ ಕೇಳಿದರು.

2040ರ ಹೊತ್ತಿಗೆ ಮಾನವ ಸಹಿತ ಅಂತರಿಕ್ಷ ಉಡಾವಣೆ ಆಗಬೇಕಿದೆ. ಇದಕ್ಕು ಮೊದಲು 2035ರಲ್ಲಿ ಭಾರತೀಯ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸಬೇಕು. ಇವೆರೆಡು ಗುರಿಗಳನ್ನು ಹೊಂದಬೇಕು ಎಂದು ಪ್ರಧಾನಿ ಮೋದಿ ಇಸ್ರೋ ಅಧ್ಯಕ್ಷರಿಗೆ ಮತ್ತು ವಿಜ್ಞಾನಿಗಳಿಗೆ ಅವರು ನಿರ್ದೇಶಿಸಿದರು. ಇದರೊಂದಿಗೆ ವಿವಿಧ ವಿಚಾರಗಳು ಕುರಿತು ಪ್ರಧಾನಿ ಮೋದಿಯವರು ಚರ್ಚೆ ನಡೆಸಿದರು ಎಂದು ಕಾರ್ಯಾಲಯ ಮಾಹಿತಿ ನೀಡಿದೆ.












Click it and Unblock the Notifications