Puneeth Rajkumar Satellite: 'ಅಪ್ಪು' ಹೆಸರಿನ ಉಪಗ್ರಹ ಉಡಾವಣೆ ಅಪ್ಡೇಟ್ ಕೊಟ್ಟ ಸಚಿವರು

ಬೆಂಗಳೂರು, ಅಕ್ಟೋಬರ್ 27: ಕರ್ನಾಟಕದಲ್ಲಿ ಸರ್ಕಾರಿ ಶಾಲೆಯ 150 ಮಕ್ಕಳು ತಯಾರಿಸಿರುವ ಸ್ಯಾಂಡಲ್‌ವುಡ್ ನಟ ದಿ.'ಪುನೀತ್ ರಾಜ್‌ಕುಮಾರ್' ಹೆಸರಿನ ಉಪಗ್ರಹವು ಮುಂದಿನ ವರ್ಷ2024ರ ಮಾರ್ಚ್ ತಿಂಗಳಲ್ಲಿ ಉಡಾವಣೆ ಆಗುವ ನಿರೀಕ್ಷೆಗಳು ಇವೆ ಎಂದು ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್‌.ಎಸ್‌.ಬೋಸರಾಜು ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ಗುರುವಾರ ಪುನೀತ್ ಉಪಗ್ರಹ ಯೋಜನೆಯ ಪ್ರಗತಿ ಕುರಿತು ಸಚಿವರು ಗುರುವಾರ ಇಂಡಿಯನ್ ಟೆಕ್ನಾಲಜಿ ಕಾಂಗ್ರೆಸ್ ಅಸೋಸಿಯೇಷನ್ (ITCA) ಸದಸ್ಯರ ಜೊತೆಗೆ ಸಭೆ ನಡೆಸಿ ಮಾತನಾಡಿದರು.

puneeth-rajkumar-name-satellite

ಇಂಡಿಯನ್ ಟೆಕ್ನಾಲಜಿ ಕಾಂಗ್ರೆಸ್ ಸಂಘವು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಚಾರ ಸೊಸೈಟಿ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಅಡಿಯಲ್ಲಿ ಪುನೀತ್ ಉಪಗ್ರಹ ಯೋಜನೆಯನ್ನು ನೋಡಿಕೊಳುತ್ತಿದೆ. ಶಾಲಾ ಮಕ್ಕಳೆ ಉಪಗ್ರಹ ತಯಾರಿಸಿದ್ದಾರೆ.

ಕ್ಯೂಬ್‌ಸ್ಯಾಟ್ ಉಪವ್ಯವಸ್ಥೆಗಳ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ. ವಿದ್ಯಾರ್ಥಿಗಳು ಪುನೀತ್‌ ಉಪಗ್ರಹ (Puneeth satelite) ದಲ್ಲಿ ಸಾಗಿಸಲಿರುವ ದ್ವಿತೀಯ ಪೇಲೋಡ್ ಅನ್ನು ಅಭಿವೃದ್ಧಿಪಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವರು ವಿವರಿಸಿದರು.

ಇಸ್ರೋ ಜತೆ ಸಮನ್ವಯ

ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿರುವ ಕ್ಯೂಬ್‌ಸ್ಯಾಟ್ ಉಪವ್ಯವಸ್ಥೆಗಳ ಮೂಲ ಮಾದರಿಗಳು ಮೌಲ್ಯಮಾಪನ ಮಂಡಳಿಗಳು ಪ್ರಸ್ತುತ ಮೌಲ್ಯೀಕರಣಕ್ಕೆ ಒಳಪಡಿಸಲಾಗುವುದು. ನಂತರ ಅಗತ್ಯ ಬದಲಾವಣೆಗಳನ್ನು ಕಾರ್ಯಗತಗೊಳಿಸಲಾಗುತ್ತದೆ ಎಂದರು.

ಅಗತ್ಯ ಅನುಮೋದನೆಗಳನ್ನು ಪಡೆಯುವಲ್ಲಿ ಇಸ್ರೋ ಜೊತೆ ಸಮನ್ವಯ ಸಾಧಿಸುವಂತೆ ಸಚಿವರು ಇಂಡಿಯನ್ ಟೆಕ್ನಾಲಜಿ ಕಾಂಗ್ರೆಸ್ ಅಸೋಸಿಯೇಷನ್ (ITCA) ನಿರ್ದೇಶಿಸಿದ್ದಾರೆ. ಈ ಯೋಜನೆಯು ವಿದ್ಯಾರ್ಥಿಗಳಿಗೆ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (STEM) ವಿಷಯಗಳಲ್ಲಿ ಆಸಕ್ತಿಯನ್ನು ಬೆಳೆಸುವ ಉಪಗ್ರಹಗಳ ನಿರ್ಮಾಣ ಮತ್ತು ಉಡಾವಣೆಯಲ್ಲಿ ಅನುಭ ಒಗಿಸುತ್ತದೆ ಎಂದು ITCA ತಂಡದ ಸದಸ್ಯರು ಸಚಿವರಿಗೆ ಮಾಹಿತಿ ನೀಡಿದರು.

ಇಂಡಿಯನ್ ಟೆಕ್ನಾಲಜಿ ಕಾಂಗ್ರೆಸ್ ಅಸೋಸಿಯೇಷನ್ 75 ಉಪಗ್ರಹಗಳನ್ನ ಉಡಾವಣೆ ಮಾಡಲಿದೆ. 75 ಉಪಗ್ರಹಗಳ ಪೈಕಿ ಅಪ್ಪು ಹೆಸರಿನ ಒಂದು ಉಪಗ್ರಹವನ್ನು ಸರ್ಕಾರಿ ಶಾಲಾ ಮಕ್ಕಳು ನಿರ್ಮಾಣ ಮಾಡಿದ್ದಾರೆ. ITCA ಜೊತೆ ಒಪ್ಪಂದ್ದಕ್ಕೆ ಕರ್ನಾಟಕ ಸರ್ಕಾರ ಸಹಿ ಹಾಕಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+