Chandrayaan-3: ‘ಚಂದ್ರಯಾನ-3’ ವಸ್ತುಗಳು ಭೂಮಿಯತ್ತ ವಾಪಸ್! ಕಾರಣ ತಿಳಿಯಿರಿ
ಜಗತ್ತಿನ ಬಾಹ್ಯಾಕಾಶ ಲೋಕದಲ್ಲಿ ಭಾರತ ತನ್ನ ಶಕ್ತಿಯ ತೋರಿಸಲು ವೇದಿಕೆ ಒದಗಿಸಿದ್ದು 'ಚಂದ್ರಯಾನ-3' ಯೋಜನೆ. ಹೀಗೆ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಮೊದಲ ಬಾರಿ ಲ್ಯಾಂಡರ್ ಮತ್ತು ರೋವರ್ ಲ್ಯಾಂಡ್ ಮಾಡಿದ, ಮೊಟ್ಟಮೊದಲ ದೇಶ ಎಂಬ ಹೆಗ್ಗಳಿಕೆ ಕೂಡ ಭಾರತಕ್ಕೆ ಸಿಕ್ಕಿತ್ತು. ಆದ್ರೆ ಹೀಗೆ ಚಂದ್ರನ ಮೇಲೆ ನೌಕೆ ತಲುಪಲು ಸಹಾಯ ಮಾಡಿ ಇಸ್ರೋಗೆ ನೆರವಾಗಿದ್ದ ವಸ್ತುಗಳು ಈಗ ಭೂಮಿಗೆ ವಾಪಸ್ ಬರುತ್ತಿವೆಯಂತೆ!
ಅದು ಶತಕೋಟಿ ಭಾರತಿಯರು ತಮ್ಮ ಉಸಿರನ್ನ ಬಿಗಿಹಿಡಿದು ನಿಂತಿದ್ದ ದಿನ. ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಆಗಸ್ಟ್ 23ರಂದು ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ಅಂಗಳಕ್ಕೆ ಇಳಿಸಿತ್ತು. ಕಳೆದ ಬಾರಿ ಭಾರತ ಚಂದ್ರನ ಮೇಲೆ ಲ್ಯಾಂಡರ್ ಇಳಿಸುವಾಗ ಸ್ವಲ್ಪ ಎಡವಟ್ಟಾದ ಹಿನ್ನೆಲೆ 'ಚಂದ್ರಯಾನ-2' ಯೋಜನೆ ಸೋತಿತ್ತು. ಹೀಗಾಗಿ ಈ ಬಾರಿ ಅತ್ಯಾಧುನಿಕ ಮತ್ತು ಎಲ್ಲಾ ರೀತಿಯಲ್ಲೂ ಶಕ್ತಿಶಾಲಿ ವ್ಯವಸ್ಥೆ ಇರುವ ತಂತ್ರಜ್ಞಾನ ಬಳಸಿ ಲ್ಯಾಂಡರ್ ಇಳಿಸಿತ್ತು ಇಸ್ರೋ. ಅಲ್ಲದೆ ಚಂದ್ರನ ಮೇಲೆ ಹಲವು ಧಾತು ಕಂಡುಹಿಡಿದಿತ್ತು ಭಾರತದ ಭಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ. ಹೀಗಿದ್ದಾಗಲೇ ಶಾಕಿಂಗ್ ಸುದ್ದಿ ಮಾನವರಿಗೆ ಈಗ ಸಿಕ್ಕಿದೆ.

ಕಾದಿದೆಯಾ ದೊಡ್ಡ ಗಂಡಾಂತರ?
ಹೌದು 'ಚಂದ್ರಯಾನ-3' (Chandrayaan-3) ಯೋಜನೆ ಯಶಸ್ಸಿಗೆ ದುಡಿದಿದ್ದ ಯಂತ್ರ ಈಗ ತಲೆನೋವು ತಂದಿದೆ ಅಂತಾ ಹೇಳಲಾಗ್ತಿದೆ. ಚಂದ್ರಯಾನ-3 ಯೋಜನೆ ಲ್ಯಾಂಡರ್ ಮತ್ತು ರೋವರ್ ಹೊತ್ತು, ಉಡಾವಣೆ ಆಗಿದ್ದ 'ಎಲ್‌ವಿಎಂ3 ಎಂ4' ಉಡಾವಣಾ ವಾಹನದ ಬಿಡಿ ಭಾಗ ಈಗ ಟೆನ್ಷನ್ ಕೊಡುತ್ತಿದೆ. ಇದು, ಭೂಮಿ ವಾತಾವರಣಕ್ಕೆ ಮರಳಿದೆ ಅಂತಾ ಇಸ್ರೋ ತಿಳಿಸಿದೆ. ಹಾಗಾದರೆ ಇದರಿಂದ ಭೂಮಿ ಮೇಲೆ ಏನಾದರೂ ಅಪಾಯ ಆಗುತ್ತಾ? ಇದನ್ನು ನಿಯಂತ್ರಿಸಲು ಇಸ್ರೋ ವಿಜ್ಞಾನಿಗಳು ಮಾಡಿರುವ ಪ್ಲ್ಯಾನ್ ಏನು?
ವಿಜ್ಞಾನಿಗಳ ಪ್ಲ್ಯಾನ್ ಏನು ಗೊತ್ತಾ?
ಅಷ್ಟಕ್ಕೂ 'ಎಲ್‌ವಿಎಂ3 ಎಂ4' ಉಡಾವಣಾ ವಾಹನದ ಬಿಡಿ ಭಾಗ ಭೂಮಿಗೆ ಅಪ್ಪಳಿಸಿದರೆ ಯಾವುದೇ ಅಪಾಯ ಇಲ್ಲ ಎನ್ನಲಾಗಿದೆ. ಹೀಗೆ ಆ ಬಿಡಿಭಾಗವು ಭೂಮಿಗೆ ಅಪ್ಪಳಿಸಿದರೂ ಅದು ಸಾಗರಕ್ಕೆ ಬೀಳುವಂತೆ ನಿಯಂತ್ರಿಸಲಾಗಿದೆ ಅಂತ ಮಾಹಿತಿ ನೀಡಲಾಗಿದೆ. ಈ ಹಿನ್ನೆಲೆ ಅಪ್ಪಳಿಸುವ ತೀವ್ರತೆ ತಗ್ಗಿಸುವ ದೃಷ್ಟಿಯಿಂದ ಅದರಲ್ಲಿ ಇಂಧನವನ್ನು ಖಾಲಿ ಮಾಡಲಾಗಿದ್ದು ಕ್ಷಣಕ್ಷಣಕ್ಕೂ ವಿಜ್ಞಾನಿಗಳು ಅಲರ್ಟ್ ಆಗಿದ್ದಾರೆ. ಈ ಮೂಲಕ ಯಾವುದೇ ಅಪಾಯಗಳೂ ಸಂಭವಿಸದ ರೀತಿ ಪರಿಸ್ಥಿತಿ ನಿಯಂತ್ರಿಸಲಾಗುತ್ತಿದೆ.

ಒಟ್ನಲ್ಲಿ ಭಾರತಕ್ಕೆ ಕೀರ್ತಿ ತಂದುಕೊಟ್ಟ 'ಚಂದ್ರಯಾನ-3' ಯೋಜನೆ ಇಸ್ರೋ ಸಂಸ್ಥೆಯ ಹಾಗೂ ಇಸ್ರೋ ವಿಜ್ಞಾನಿಗಳ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ. ಹೀಗಾಗಿ ಈಗ ಜಗತ್ತಿನ ಹಲವು ದೇಶಗಳು ಭಾರತದ ಇಸ್ರೋ ಸಂಸ್ಥೆ ಜೊತೆ ಕೈಜೋಡಿಸಿ ಕೆಲಸ ಮಾಡೋಕೆ ಕೂಡ ಮುಂದೆ ಬರುತ್ತಿವೆ. ಆದರೆ ಇದೇ ಸಮಯದಲ್ಲಿ ಸಣ್ಣ ಸಮಸ್ಯೆ ಒಂದು ಎದುರಾಗಿತ್ತು. ಈ ಸಮಸ್ಯೆಗೆ ಕೂಡ ಈಗ ಮದ್ದು ಹುಡುಕಿದ್ದಾರೆ ನಮ್ಮ ದೇಶದ ಬಾಹ್ಯಾಕಾಶ ವಿಜ್ಞಾನಿಗಳು.












Click it and Unblock the Notifications