ಪ್ರಧಾನಿ ಮೋದಿ ‘ಇಸ್ರೋ’ ಸಾಧನೆ ಬಗ್ಗೆ ಹೇಳಿದ್ದೇನು ಗೊತ್ತಾ?
ಭಾರತ ಬಾಹ್ಯಾಕಾಶ ಲೋಕದಲ್ಲಿ ತನ್ನ ಶಕ್ತಿಯನ್ನು ಮತ್ತೊಮ್ಮೆ ಪ್ರದರ್ಶನ ಮಾಡಿದ್ದು, ಈ ಮೂಲಕ ಅಮೆರಿಕದ ನಾಸಾ ಸಂಸ್ಥೆಗೂ ಅಚ್ಚರಿ ಮೂಡಿಸಿದೆ. ಇದುವರೆಗೆ ಭೂಮಿಯ ವಾತಾವರಣ ಬಿಟ್ಟು, ಬಾಹ್ಯಾಕಾಶಕ್ಕೆ ಮನುಷ್ಯರನ್ನ ಕಳುಹಿಸಿದ ಕೆಲವೇ ದೇಶಗಳ ಪಟ್ಟಿಗೆ ಭಾರತ ಕೂಡ ಇದೀಗ ಸೇರಲಿದೆ. ಇದೇ ಸಮಯದಲ್ಲಿ ದೇಶದ ಪ್ರಧಾನಿ, ಇಸ್ರೋ ಸಂಸ್ಥೆ ಮಾಡಿದ ಕಾರ್ಯದ ಬಗ್ಗೆ ಏನ್ ಹೇಳಿದ್ದಾರೆ ಗೊತ್ತಾ?
ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋ ವಿಜ್ಞಾನಿ ಬಳಗ ಮಾಡುವ ಪ್ರತಿ ಸಾಹಸಕ್ಕೂ ಸಾಥ್ ಕೊಡುತ್ತಾರೆ. ಅದರಲ್ಲೂ ಚಂದ್ರಯಾನ ಯೋಜನೆ ಯಶಸ್ಸಿನ ಸಮಯದಲ್ಲೂ ಈ ರೀತಿ ವಿಜ್ಞಾನಿಗಳಿಗೆ ಜೊತೆಯಾಗಿ ನಿಂತಿದ್ದರು ಪ್ರಧಾನಿ ಮೋದಿ. 2019ರಲ್ಲಿ ಯೋಜನೆಯ ಸೋಲಿನ ಸಮಯದಲ್ಲಿ ವಿಜ್ಞಾನಿಗಳಿಗೆ ಧೈರ್ಯ ತುಂಬಿದ್ದರು. ಹಾಗೇ 2023ರಲ್ಲಿ ಇಸ್ರೋ ವಿಜ್ಞಾನಿಗಳು ಗೆದ್ದಾಗ ಅವರ ಬೆನ್ನುತಟ್ಟಿ ಭೇಷ್ ಎಂದರು. ಈಗ, ಭಾರತ ತನ್ನ ಮೊದಲ ಗಗನಯಾನ ಯೋಜನೆಗೆ ಸಜ್ಜಾದ ಸಮಯದಲ್ಲಿ ಮತ್ತೆ ಇಸ್ರೋ ಕುರಿತು ಮಾತನಾಡಿದ್ದಾರೆ ಪ್ರಧಾನಿ ಮೋದಿ.

ಪ್ರಧಾನಿ ಮೋದಿ ಇಸ್ರೋ ಬಗ್ಗೆ ಹೇಳಿದ್ದೇನು?
ಇಸ್ರೋ ಮಾನವ ಸಹಿತ ಗಗನಯಾನ (Gaganyaan Mission) ಯೋಜನೆ ಗೆಲ್ಲಿಸುವ ಸಿದ್ಧತೆ ಭಾಗವಾಗಿ ಇಂದು ಮಹತ್ವದ ಪರೀಕ್ಷೆ ಕೈಗೊಂಡಿತ್ತು. ಅಷ್ಟಕ್ಕೂ ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ ನಡೆಸಿದ, ಇಂದಿನ ಗಗನಯಾನದ ಮೊದಲ ಪ್ರಾಯೋಗಿಕ ಪರೀಕ್ಷಾರ್ಥ ಪ್ರಯೋಗ ಸಕ್ಸಸ್ ಆಗಿದೆ. ಈ ಬಗ್ಗೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು 'ಇಸ್ರೋ ಸಂಸ್ಥೆ ಕೈಗೊಂಡ ಈ ಉಡಾವಣೆ ಮೂಲಕ ಭಾರತದ ಮೊದಲ ಮಾನವ ಸಹಿತ ಬಾಹ್ಯಾಕಾಶ ಯೋಜನೆಗೆ ಮತ್ತೊಂದು ಹೆಜ್ಜೆ ಹತ್ತಿರವಾಗಿದ್ದೇವೆ. ಮಹತ್ವದ ಕಾರ್ಯದಲ್ಲಿ ಪಾಲ್ಗೊಂಡ ವಿಜ್ಞಾನಿಗಳಿಗೆ ಅಭಿನಂದನೆಗಳು' ಎಂದಿದ್ದಾರೆ ಪ್ರಧಾನಿ ನರೇಂದ್ರ ಮೋದಿ.
This launch takes us one step closer to realising India’s first human space flight program, Gaganyaan. My best wishes to our scientists at @isro. https://t.co/6MO7QE1k2Z
— Narendra Modi (@narendramodi) October 21, 2023
ತಾಂತ್ರಿಕ ಸಮಸ್ಯೆ ಎದುರಾಗಿತ್ತು!
ಗಗನಯಾನ ಯೋಜನೆಯ ಮೊದಲನೇ ಪ್ರಾಯೋಗಿಕ ಪರೀಕ್ಷಾರ್ಥ ಉಡಾವಣೆಯು ಸಕ್ಸಸ್ ಆಗಿದೆ. ಆದ್ರೆ 'ಇಸ್ರೋ' ವಿಜ್ಞಾನಿಗಳು ಉಡಾವಣೆಗೆ ಮುಂದಾದ ಸಮಯದಲ್ಲಿ ಕೆಲವಾರು ತಾಂತ್ರಿಕ ಸಮಸ್ಯೆ ಎದುರಾಗಿತ್ತು. ತಾಂತ್ರಿಕ ದೋಷ ಕಾರಣ, ಪರೀಕ್ಷಾರ್ಥ ಪ್ರಯೋಗ ಕೆಲ ಸಮಯ ತಡವಾಗಿತ್ತು. ಆದರೂ ತಾಂತ್ರಿಕ ದೋಷ ಸರಿಪಡಿಸಿ, ಇಂದು ಬೆಳಗ್ಗೆ ಸರಿಯಾಗಿ 10 ಗಂಟೆ ವೇಳೆಗೆ TV-D1 ರಾಕೆಟ್ ಉಡಾವಣೆ ಮಾಡಿತ್ತು ನಮ್ಮ ಇಸ್ರೋ. ಈಗ ವಿಜ್ಞಾನಿಗಳ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ ಪ್ರಧಾನಿ ಮೋದಿ. ಈ ಮೂಲಕ ಇಸ್ರೋ ವಿಜ್ಞಾನಿಗಳಿಗೂ ಮತ್ತಷ್ಟು ಹುಮ್ಮಸ್ಸು ಸಿಕ್ಕಂತಾಗಿದೆ.

ಇಸ್ರೋ ಸಕ್ಸಸ್.. ಭಾರತಕ್ಕೆ ಹೆಮ್ಮೆ..!
ಇನ್ನು ಉಡಾವಣೆ ಬಳಿಕ, ಯಶಸ್ವಿಯಾಗಿ ಹಾರಾಟ ನಡೆಸಿದ ಗಗನನೌಕೆ ಸೇಫ್ ಲ್ಯಾಂಡಿಂಗ್ ಆಗಿದೆ ಎಂದು ಇಸ್ರೋ ತಿಳಿಸಿದೆ. ಅಂದಹಾಗೆ, ಬೆಳಗ್ಗೆ 8.45ಕ್ಕೆ ಮಾನವ ರಹಿತ ಪರೀಕ್ಷಾರ್ಥ ವಾಹನ ಉಡಾವಣೆಗೆ ಇಸ್ರೋ ವಿಜ್ಞಾನಿಗಳು ಸಜ್ಜಾಗಿದ್ದರು. ಅದಕ್ಕೂ ಮೊದಲು 8.30ಕ್ಕೆ ಈ ಸಮಯ ಫಿಕ್ಸ್ ಆಗಿತ್ತು. ಆದ್ರೆ ದಿಢೀರ್ ಸಮಯ ಬದಲಾವಣೆ ಮಾಡಲಾಗಿತ್ತು. ಈ ಸಮಯ ಬದಲಾದ ನಂತರ ಕೊನೇ ಕ್ಷಣದಲ್ಲಿ ಇಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಮತ್ತೆ ಕೆಲ ಕಾಲ ಸ್ಥಗಿತ ಮಾಡಿದ್ದರು. ಕೊನೆಗೆ ಎಲ್ಲ ತಾಂತ್ರಿಕ ದೋಷ ಸರಿಪಡಿಸಿದ ಇಸ್ರೋ ವಿಜ್ಞಾನಿಗಳು, ಯಶಸ್ವಿಯಾಗಿ ಪರೀಕ್ಷಾರ್ಥ ಪ್ರಯೋಗ ನಡೆಸಿದರು.
TV D1 Test Flight
— ISRO (@isro) October 21, 2023
Lift-off images pic.twitter.com/oitmEa5Hza
ಚಂದ್ರನ ಅಧ್ಯಯನ, ಸೂರ್ಯನ ಅಧ್ಯಯನದ ಬಳಿಕ ಈಗ ಇಸ್ರೋ ಬೇರೆಯದ್ದೆ ಗುರಿಯನ್ನ ಹೊಂದಿದೆ. ಮಹತ್ವಾಕಾಂಕ್ಷೆಯ ಮಾನವ ಸಹಿತ ಗಗನಯಾನ ಯೋಜನೆಗೆ, ಇಸ್ರೋ ಸಿದ್ಧತೆ ನಡೆಸಿದೆ. ಇಂದು ಅದರಲ್ಲಿ ದೊಡ್ಡ ಸಕ್ಸಸ್ ಕೂಡ ಕಂಡಿದ್ದು, ಮೊದಲ ಹೆಜ್ಜೆಯಲ್ಲಿ ಈ ಮೂಲಕ ಇತಿಹಾಸ ನಿರ್ಮಿಸಿದೆ ಇಸ್ರೋ. ಪರೀಕ್ಷಾರ್ಥ ವಾಹನ ಟಿವಿ-ಡಿ1 ಒಂದೇ ಹಂತದ ರಾಕೆಟ್ ಆಗಿದ್ದು, ಕ್ರ್ಯೂ ಎಸ್ಕೇಪ್ ಸಿಸ್ಟಮ್ ಪರೀಕ್ಷೆಗಾಗಿ ಇದನ್ನ ಅಭಿವೃದ್ಧಿಪಡಿಸಿತ್ತು ಇಸ್ರೋ. ಅಂದರೆ ಈ ಪರೀಕ್ಷಾರ್ಥ ಪ್ರಯೋಗವೇ ಗಗನಯಾನ ಯೋಜನೆಗೆ ಮೊದಲ ಹೆಜ್ಜೆಯಾಗಿದೆ.
ಇಡೀ ಜಗತ್ತು ಇಸ್ರೋಗೆ ಫಿದಾ!
ಗಗನಯಾನದ ಸಮಯದಲ್ಲಿ ಗಗನಯಾತ್ರಿಗಳು ಕುಳಿತುಕೊಳ್ಳುವ ಕ್ರ್ಯೂ ಸುಮಾರು 17 ಕಿ.ಮೀ. ಎತ್ತರದಲ್ಲಿ ಬೇರೆಯಾಗಿಸುವ ಪ್ಲ್ಯಾನ್ ಇತ್ತು. ಪ್ರಕ್ರಿಯೆ ನಂತರ ಪ್ಯಾರಾಚ್ಯೂಟ್ ತೆರೆಯಲಿದೆ, ಬಳಿಕ ನಿಧಾನವಾಗಿ ಕ್ರ್ಯೂ ಮಾಡ್ಯೂಲ್ ಅನ್ನ ಸಮುದ್ರದ ಮೇಲೆ ಇಳಿಸುತ್ತೇವೆ ಎಂದು ಇಸ್ರೋ ಮಾಹಿತಿ ನೀಡಿತ್ತು. ಇದೀಗ ಎಲ್ಲವೂ ಅಂದುಕೊಂಡಂತೆ ನಡೆದಿದೆ ಎನ್ನಲಾಗಿದ್ದು, ಇದರ ಬಗ್ಗೆ ಇಸ್ರೋ ಇನ್ನಷ್ಟೇ ಅಧಿಕೃತ ಮಾಹಿತಿ ನೀಡಬೇಕಿದೆ. ಹೀಗೆ, ಅಮೆರಿಕದ ನಾಸಾ ಸೇರಿ ಇಡೀ ಜಗತ್ತು ಇಸ್ರೋ ಮಾಹಿತಿಗಾಗಿ ಕಾಯುತ್ತಿದೆ. ಭಾರತಕ್ಕೆ ಈಗ, ಮತ್ತೊಂದು ಇತಿಹಾಸ ನಿರ್ಮಿಸಿದ ಹೆಮ್ಮೆಯ ಗರಿ ಸಿಕ್ಕಿದೆ.












Click it and Unblock the Notifications