ಭಾರತೀಯರೆ ಇಲ್ಲಿ ಕೇಳಿ, ಹೊಸ ವರ್ಷದ ಮೊದಲ ದಿನವೇ ಇಸ್ರೋಗೆ ಸಕ್ಸಸ್!
2023 ಭಾರತೀಯರಿಗೆ & ಭಾರತದ ಬಾಹ್ಯಾಕಾಶ ಲೋಕಕ್ಕೆ ಎಂದೆಂದಿಗೂ ಮರೆಯಲಾಗದು ಎನ್ನಬಹುದು. ಯಾಕಂದ್ರೆ ಭಾರತ ಚಂದ್ರನ ಮೇಲೆ ಮೊದಲ ಬಾರಿಗೆ ಲ್ಯಾಂಡರ್ ಇಳಿಸಿದ್ದು 2023ರಲ್ಲಿ, ಹಾಗೇ ಸೂರ್ಯನ ಅಧ್ಯಯನಕ್ಕೆ ಉಪಗ್ರಹ ಹಾರಿಬಿಟ್ಟಿದ್ದು ಕೂಡ 2023ರಲ್ಲೇ. ಹೀಗೆ ಕಳೆದ ವರ್ಷ ದೊಡ್ಡ ದೊಡ್ಡ ಸಾಧನೆ ಮಾಡಿದ್ದ ಭಾರತೀಯರ ಹೆಮ್ಮೆ 'ಇಸ್ರೋ' ಸಂಸ್ಥೆ ಇದೀಗ 2024ರ ಆರಂಭದ ದಿನವೇ ಬಹುದೊಡ್ಡ ಗುರಿ ತಲುಪಿದೆ!
ಹೌದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಹಾತ್ಮಕಾಂಕ್ಷೆಯ 'ಎಕ್ಸ್-ರೇ ಪೊಲರಿಮೀಟರ್ ಉಪಗ್ರಹ' ಅಂದ್ರೆ 'ಎಕ್ಸ್‌ಪೊಸ್ಯಾಟ್' ಉಪಗ್ರಹ ಉಡಾವಣೆ ಯಶಸ್ವಿಯಾಗಿ ನೆರವೇರಿದೆ. ಅಷ್ಟಕ್ಕೂ ನಿಮಗೆಲ್ಲಾ ತಿಳಿದಿರುವಂತೆ 'ಬ್ಲ್ಯಾಕ್ ಹೋಲ್' ಅಧ್ಯಯನ ತುಂಬ ಮುಖ್ಯವಾಗಿದೆ. ಹೀಗಿದ್ದಾಗ 'ಇಸ್ರೋ' ಸಂಸ್ಥೆ ಈ ಕಪ್ಪುರಂಧ್ರಗಳ ನಿಗೂಢ ಜಗತ್ತಿನ ಕುರಿತು ಆಳವಾದ ಅಧ್ಯಯನ ನಡೆಸಲು ಈ ಯೋಜನೆ ಆರಂಭಿಸಿತ್ತು. ಜೊತೆಗೆ ಎಕ್ಸ್ ರೇ ಮೂಲದ ನಿಗೂಢತೆ ಅರಿಯುವ ಪ್ರಯತ್ನ ಕೂಡ ಸಾಗಲಿದೆ. ಇಷ್ಟೆಲ್ಲಾ ವಿಶೇಷ ಹೊಂದಿರುವ ದೊಡ್ಡ ಉಪಗ್ರಹ ಇಂದು ಆಕಾಶಕ್ಕೆ ಯಶಸ್ವಿಯಾಗಿ ಹಾರಿದೆ.

ಆಕಾಶಕ್ಕೆ ಹಾರಿದ್ದು ಯಾವಾಗ?
ಶ್ರೀಹರಿಕೋಟ ಉಪಗ್ರಹ ಉಡಾವಣಾ ಕೇಂದ್ರದಿಂದ ಈ ಉಪಗ್ರಹವನ್ನು ಹೊತ್ತ ಪಿಎಸ್‌ಎಲ್‌ವಿ (PSLV-C58 XPoSa) ವಾಹಕ ಬೆಳಗ್ಗೆ 9:10ಕ್ಕೆ ಆಕಾಶಕ್ಕೆ ಹಾರಿದೆ. ಇಸ್ರೋದ ಪಿಎಸ್‌ಎಲ್‌ವಿ ಸಿ 58 ಮಿಷನ್ ಎಕ್ಸ್‌ಪೋಸ್ಯಾಟ್ ಉಪಗ್ರಹವನ್ನು ಪೂರ್ವಭಾಗದ ಕೆಳಕಕ್ಷೆಯಲ್ಲಿ ಕೂರಿಸಲಿದೆ. ಕಕ್ಷೆಯಲ್ಲಿನ ಚಲನೆಯ ವೇಗವನ್ನು 350 ಕಿಲೋ ಮೀಟರ್‌ಗೆ ವೃತ್ತಾಕಾರಕ್ಕೆ ಒಗ್ಗಿಸಿಕೊಂಡು 3 ಅಕ್ಷದ ಸ್ಥಿರ ಸ್ಥಿತಿಯಲ್ಲಿ ಪ್ರಯೋಗ ನಿರ್ವಹಿಸಲು ಸಜ್ಜಾಗುತ್ತದೆ ಎಂದು ಇಸ್ರೋ ಮಾಹಿತಿಯನ್ನ ನೀಡಿದೆ. ಈ ಮೂಲಕ ಹೊಸ ವರ್ಷದ ಮೊದಲನೇ ದಿನವೇ ಭರ್ಜರಿ ಗೆಲುವನ್ನ ದಾಖಲಿಸಿ, ಇಡೀ ಜಗತ್ತಿನ ಗಮನ ಸೆಳೆದಿದೆ ನಮ್ಮ ಇಸ್ರೋ.
ಇಸ್ರೋ ಸಾಧನೆಗೆ ತಲೆಬಾಗಿದ ಜಗತ್ತು!
ಒಂದು ಕಾಲದಲ್ಲಿ ಸಣ್ಣ ಸೈಕಲ್ ಮೇಲೆ ರಾಕೆಟ್ ಬಿಡಿಭಾಗ ಹೊತ್ತು ತಂದು ಮೊದಲನೇ ರಾಕೆಟ್ ಉಡಾವಣೆ ಮಾಡಿದ್ದ ನಮ್ಮ ಇಸ್ರೋ, ಇಂದು ದೊಡ್ಡ ಅತಿದೊಡ್ಡ ಯೋಜನೆಗೆ ಕೂಡ ಸೈ ಎನಿಸಿಕೊಳ್ಳುತ್ತಿದೆ. ಅದರಲ್ಲೂ ಚಂದ್ರನ ದಕ್ಷಿಣ ಧ್ರುವದ ಮೇಲೆ ನೌಕೆ ಇಳಿಸಿದ ಮೊದಲನೇ ದೇಶ ಎಂಬ ಹೆಗ್ಗಳಿಕೆ ಕೂಡ ನಮ್ಮ ಇಸ್ರೋಗೆ ಸಿಕ್ಕಿದೆ. ಹೀಗಿದ್ದಾಗ ಜಗತ್ತು ಈಗ ಇಸ್ರೋ ಸಾಧನೆಗೆ ತಲೆಬಾಗಿದೆ.
#WATCH | PSLV-C58 XPoSat Mission launch | Sriharikota, Andhra Pradesh: The launch of the X-Ray Polarimeter Satellite (XPoSat) is set for today at 09:10 am from the first launch-pad, SDSC-SHAR, Sriharikota in Andhra Pradesh.
— ANI (@ANI) January 1, 2024
(Visuals from Satish Dhawan Space Centre) pic.twitter.com/c5LkajQEpU
ಒಟ್ನಲ್ಲಿ ಭಾರತೀಯರಿಗೆ ವರ್ಷದ ಆರಂಭದ ದಿನವೇ ಗುಡ್ ನ್ಯೂಸ್ ಸಿಕ್ಕಿದ್ದು, ಇಸ್ರೋದ ಈ ಸಾಧನೆ ಎಲ್ಲರ ಗಮನ ಸೆಳೆದಿದೆ. ಹಾಗೇ ನಮ್ಮ ಇಸ್ರೋ ಸಾಧನೆ ಮಾಡಿದ ರೀತಿಯನ್ನ ನೋಡಿದರೆ, ಬೇರೆ ಬೇರೆ ದೇಶಗಳು ಕೂಡ ಇನ್ನು ಮುಂದೆ ಇಸ್ರೋ ಜೊತೆಗೆ ದೊಡ್ಡ ದೊಡ್ಡ ಯೋಜನೆಗಳಿಗೆ ಕೈಜೋಡಿಸುವ ಸಾಧ್ಯತೆ ಇದೆ. 2024 ಈ ಮೂಲಕ ದೊಡ್ಡ ಯಶಸ್ಸನ್ನು ಇಸ್ರೋ ಸಂಸ್ಥೆಗೆ ನೀಡಲಿ ಎಂಬುದೇ ಭಾರತೀಯರ ಆಶಯ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications