Pushpak: ಚಳ್ಳಕೆರೆಯಿಂದ ಇಸ್ರೋ ಸ್ವದೇಶಿ ಗಗನ ನೌಕೆ 'ಪುಷ್ಪಕ್' ಉಡಾವಣೆ
ಚಿತ್ರದುರ್ಗ, ಮಾರ್ಚ್ 22: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶುಕ್ರವಾರ (ಮಾರ್ಚ್ 22) ಚಿತ್ರದುರ್ಗ ಸಮೀಪದ ಚಳ್ಳಕೆರೆಯಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ (ಎಟಿಆರ್) ತನ್ನ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನ (ಆರ್‌ಎಲ್‌ವಿ), ಪುಷ್ಪಕ್ ಅನ್ನು ಉಡಾವಣೆ ಮಾಡಿದೆ.
ಆರ್‌ಎಲ್‌ವಿಯನ್ನು ಶುಕ್ರವಾರ ಬೆಳಗ್ಗೆ 7 ಗಂಟೆಗೆ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ. ಚಳ್ಳಕೆರೆ ರನ್ ವೇಯಿಂದ ಬೆಳಗ್ಗೆ 7 ಗಂಟೆ ಸುಮಾರಿಗೆ ರಾಕೆಟ್ ಉಡಾವಣೆಯಾಗಿದೆ. ಇದು ಆರ್‌ಎಲ್‌ವಿಯ ಮೂರನೇ ಲ್ಯಾಂಡಿಂಗ್ ಮಿಷನ್. ಬಾಹ್ಯಾಕಾಶ ಸಂಸ್ಥೆ ಹಿಂದಿನ ಕಾರ್ಯಾಚರಣೆಗಳನ್ನು 2016 ಮತ್ತು ಕಳೆದ ವರ್ಷ ಏಪ್ರಿಲ್‌ನಲ್ಲಿ ಯಶಸ್ವಿಯಾಗಿ ನಡೆಸಿತ್ತು.

ರಾಮಾಯಣದಲ್ಲಿ ಹೆಸರಿಸಲಾದ ಪೌರಾಣಿಕ ಬಾಹ್ಯಾಕಾಶ ನೌಕೆ ಪುಷ್ಪಕ ವಿಮಾನದ ಹೆಸರನ್ನು ಇದಕ್ಕೆ ಇಡಾಲಾಗಿದೆ. ಉಡಾವಣಾ ವಾಹನವನ್ನು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಮೂಲಕ ಸುಮಾರು 4.5 ಕಿಮೀ ಎತ್ತರಕ್ಕೆ ಕೊಂಡೊಯ್ಯಲಾಯಿತು. ಬಳಿಕ ಪೂರ್ವನಿರ್ಧರಿತ ಪಿಲ್‌ಬಾಕ್ಸ್ ನಿಯತಾಂಕಗಳನ್ನು ಸರಿಯಾಗಿಸಿದ ನಂತರ ಉಡಾವಣೆ ಮಾಡಲಾಗಿದೆ.
ISRO ಪ್ರಕಾರ, ಈ ಮಿಷನ್ "ಬಾಹ್ಯಾಕಾಶಕ್ಕೆ ಕಡಿಮೆ ವೆಚ್ಚದ ಪ್ರವೇಶವನ್ನು ಸಕ್ರಿಯಗೊಳಿಸಲು ಸಂಪೂರ್ಣ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನಕ್ಕಾಗಿ ಅಗತ್ಯ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಬಾಹ್ಯಾಕಾಶ ಸಂಸ್ಥೆಯ ಪ್ರಯತ್ನಗಳ ಭಾಗವಾಗಿದೆ".
RLV-LEX-02 Experiment:
— ISRO (@isro) March 22, 2024
🇮🇳ISRO nails it again!🎯
Pushpak (RLV-TD), the winged vehicle, landed autonomously with precision on the runway after being released from an off-nominal position.
🚁@IAF_MCC pic.twitter.com/IHNoSOUdRx
"ಪುಷ್ಪಕ್ ಉಡಾವಣಾ ವಾಹನವು ಬಾಹ್ಯಾಕಾಶ ಪ್ರವೇಶವನ್ನು ಅತ್ಯಂತ ಕೈಗೆಟುಕುವಂತೆ ಮಾಡಲು ಭಾರತದ ದಿಟ್ಟ ಪ್ರಯತ್ನವಾಗಿದೆ. ಇದು ಭಾರತದ ಭವಿಷ್ಯದ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನವಾಗಿದೆ. ಅದು ಅತ್ಯಂತ ದುಬಾರಿ ಭಾಗ, ಮೇಲಿನ ಹಂತ, ಎಲ್ಲಾ ದುಬಾರಿ ಎಲೆಕ್ಟ್ರಾನಿಕ್ಸ್ ಅನ್ನು ಹೊಂದಿದೆ. ಅದನ್ನು ಸುರಕ್ಷಿತವಾಗಿ ಭೂಮಿಗೆ ಮರಳಿ ತರುವ ಮೂಲಕ ಮರುಬಳಕೆ ಮಾಡಬಹುದಾಗಿದೆ" ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದಾರೆ.
ಇದು ಕಕ್ಷೆಯೊಳಗಿನ ಉಪಗ್ರಹಗಳಿಗೆ ಇಂಧನ ತುಂಬುವುದು ಅಥವಾ ನವೀಕರಣಕ್ಕಾಗಿ ಕಕ್ಷೆಯಿಂದ ಉಪಗ್ರಹಗಳನ್ನು ಹಿಂಪಡೆಯುವುದನ್ನು ಸಹ ಮಾಡಬಹುದು. ಭಾರತವು ಬಾಹ್ಯಾಕಾಶ ಅವಶೇಷಗಳನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತದೆ ಮತ್ತು ಪುಷ್ಪಕ್ ಅದರತ್ತ ಇಟ್ಟಿರುವ ಒಂದು ದಿಟ್ಟ ಹೆಜ್ಜೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಫೆಬ್ರವರಿಯಲ್ಲಿ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರು ತಿರುವನಂತಪುರದ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಂದಾಜು ವೆಚ್ಚದ ಆರ್‌ಎಲ್‌ವಿ ಮಿಷನ್ ಬಗ್ಗೆ ವಿವರಿಸಿದ್ದರು.












Click it and Unblock the Notifications