Chandrayaan 3: ಚಂದ್ರಯಾನ 3 ಮಿಷನ್‌ನಲ್ಲಿ ಪ್ರಗತಿ, ಅಪ್ಡೇಟ್ ಮಾಹಿತಿ ಕೊಟ್ಟ ಇಸ್ರೋ
ಬೆಂಗಳೂರು, ಡಿಸೆಂಬರ್ 05: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯು ಪ್ರಪಂಚವೇ ಭಾರತದತ್ತ ತಿರುಗಿ ನೋಡುವಂತೆ ಚಂದ್ರಯಾನ 3 ಯಶಸ್ವಿಗೊಳಿಸಿದೆ. ಮುಂದಿನ ಚಂದ್ರಯಾನ ಯೋಜನೆ ಸಕ್ರಿಯಗೊಳಿಸುವ ಭರವಸೆ ನೀಡಿರುವ ಇಸ್ರೋ ಸದ್ಯ ಚಂದ್ರಯಾನ-3 ರ ಪ್ರೊಪಲ್ಷನ್ ಮಾಡ್ಯೂಲ್ (PM) ಅನ್ನು ಚಂದ್ರನ ಸುತ್ತಲಿನ ಕಕ್ಷೆಯಿಂದ ಭೂಮಿಯ ಕಕ್ಷೆಗೆ ಸ್ಥಳಾಂತರಿಸುವಲ್ಲಿ ಪ್ರಗತಿ ಸಾಧಿಸಿದೆ.
ಸದ್ಯ ಚಂದ್ರನ ಕಕ್ಷೆಯಿಂದ ಭೂಮಿಯ ಕಕ್ಷೆಗೆ ಪಿಎಂ ಅನ್ನು ತರಲಾಗಿದೆ. ಇದು ಚಂದ್ರನೂರಿಗೆ ಉಡಾವಣೆಯಾದ ಮಾಡ್ಯೂಲ್‌ಗಳನ್ನು ಮರಳಿ ಭೂಮಿಗೆ ಮರಳಿ ತರಲು ಕಾರ್ಯಾಚರಣೆ ತಂತ್ರಗಳ ಭಾಗವಾಗಿಯೂ ನಿರ್ಣಯಿಸಲ್ಪಡುತ್ತದೆ ಎಂದು ಇಸ್ರೋ ಹೇಳಿ ಕೊಂಡಿದೆ.

ಗಗನನೌಕೆಯ ವಿಕ್ರಮ್ ಲ್ಯಾಂಡರ್ ಮಾಡ್ಯೂಲ್ ಅನ್ನು ಜಿಯೋ ವರ್ಗಾವಣೆ ಕಕ್ಷೆಯಿಂದ (GTO) ಅಂತಿಮ ಚಂದ್ರನ ಧ್ರುವ ವೃತ್ತಾಕಾರದ ಕಕ್ಷೆಗೆ ಕೊಂಡೊಯ್ಯುವುದು ಮತ್ತು ಲ್ಯಾಂಡರ್ ಅನ್ನು ಪ್ರತ್ಯೇಕಿಸುವುದು ಪ್ರೊಪಲ್ಷನ್ ಮಾಡ್ಯೂಲ್ ನ (PM) ಮೂಲ ಉದ್ದೇಶವಾಗಿತ್ತು.
ಶೇಪ್ ಕಾರ್ಯಾಚರಣೆಯ ಉದ್ದೇಶ
ಲ್ಯಾಂಡರ್‌ನಿಂದ ಬೇರ್ಪಟ್ಟ ನಂತರ ಪಿಎಂನಲ್ಲಿನ ಪೇಲೋಡ್ ಸ್ಪೆಕ್ಟ್ರೋ-ಪೋಲಾರಿಮೆಟ್ರಿ ಆಫ್ ಹ್ಯಾಬಿಟಬಲ್ ಪ್ಲಾನೆಟ್ ಅರ್ಥ್ (SHAPE) ಸಹ ಕಾರ್ಯಾಚರಣೆಯ ಯೋಜನೆಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಆರಂಭಿಸಿತು. ಪ್ರಧಾನ ಮಂತ್ರಿಯವರ ಮಿಷನ್ ಅಡಿ ಒಟ್ಟು ಮೂರು ತಿಂಗಳ ಕಾಲ SHAPE ಅನ್ನು ನಿರ್ವಹಿಸುವುದೇ ಇಸ್ರೋದ ಆರಂಭಿಕ ಯೋಜನೆ ಆಗಿತ್ತು.

ಲ್ಯಾಂಡರ್ ಉಡಾವಣಾ ವಾಹನ ಮಾರ್ಕ್-3 ಇದು ಭೂಮಿ ಮತ್ತು ಚಂದ್ರನ ಕ್ಷೆಗಳ ಪೈಕಿಯಲ್ಲಿ ಒಂದು ತಿಂಗಳ ಕಾರ್ಯಾಚರಣೆ ನಡೆಸಿದ ನಂತರವು 100 ಕೆಜಿಗೂ ಹೆಚ್ಚು ಇಂಧನ ಮಿಷನ್‌ಗೆ ಬಿಟ್ಟಿದೆ. ಇದರಿಂದಾಗಿ ಭೂಮಿಯ ಕಕ್ಷೆಗೆ ಪಿಎಂ ಇಳಿಸಲು ಸಾಧ್ಯವಾಗಿದೆ. ಭವಿಷ್ಯದಲ್ಲಿ ಚಂದ್ರನ ಕಾರ್ಯಾಚರಣೆಗಳಿಗೆ ಹೆಚ್ಚುವರಿ ಮಾಹಿತಿ ಪಡೆಯಲು ಇಸ್ರೋ ಹೆಚ್ಚುವರಿ ಇಂಧನ ಬಳಕೆ ಮಾಡಲಿದೆ ಎಂದು ಸಂಸ್ಥೆ ತಿಳಿಸಿದೆ.
ಮಾಡ್ಯೂಲ್ ಮರಳಿ ತರಲು ಪಥ ರೂಪಿಸಲು ಚಿಂತನೆ
ಭೂಮಿಯಿಂದ ನಿರಂತರವಾಗಿ ಪಿಎಂ ಅನ್ನು ಇಸ್ರೋ ವೀಕ್ಷಣೆ ಮಾಡುತ್ತಿರುತ್ತದೆ. ಪ್ರೊಪಲ್ಷನ್ ಮಾಡ್ಯೂಲ್ ಅನ್ನು ಭೂ ಕಕ್ಷೆಗೆ ಮರಳಿ ತಂದು ಇಂಧನದ ಅಂದಾಜು ಲಭ್ಯತೆಯನ್ನು ಖಚಿತಪಡಿಸಿಕೊಂಡಿದೆ. ಇನ್ನು ಮುಂದೆ ಇದು ಚಂದ್ರನ ಮೇಲ್ಮೈಗೆ ಅಪ್ಪಳಿಸುವುದಿಲ್ಲ. ಜೊತೆಗೆ ಭೂಮಿಯ ಭೂಸ್ಥಿರ ಕಕ್ಷೆಯನ್ನು ಪ್ರವೇಶಿಸುವುದಿಲ್ಲ. ಯಾವುದೇ ಅಪಾಯ ಇಲ್ಲದ್ದನ್ನು ಗಮನಿಸಿರುವ ಇಸ್ರೋ ವಿವಿಧ ಅಂಶಗಳ ಆಧಾರದ ಮೇಲೆ ಮಾಡ್ಯೂಲ್ ಅನ್ನು ಹಿಂತಿರುಗುವ ಪಥವನ್ನು ರೂಪಿಸುತ್ತಿದೆ ಎಂದು ತಿಳಿದು ಬಂದಿದೆ.
ಟ್ರಾನ್ಸ್ ಅರ್ಥ್ ಇಂಜೆಕ್ಷನ್ (TEI) ಅನ್ನು ಮೊದಲ ಕಕ್ಷೆಗೆ ಅಕ್ಟೋಬರ್ 13 ರಂದು ನಡೆಸಲಾಯಿತು. ನಂತರ ಪ್ರೊಪಲ್ಷನ್ ಮಾಡ್ಯೂಲ್ ಚಂದ್ರನ ಕಕ್ಷೆಯಿಂದ ಹೊರ ಬಂದು ಭೂಮಿಯ ಸುತ್ತ ಸುತ್ತುತ್ತಿದೆ. ನವೆಂಬರ್ 22 ರಂದು 1.54 ಲಕ್ಷ ಕಿಮೀ ಎತ್ತರದಲ್ಲಿ ತನ್ನ ಮೊದಲ ಪೆರಿಜಿ (ಪಿಎಂ ಭೂಮಿಗೆ ಹತ್ತಿರವಿರುವ ಕಕ್ಷೆಯಲ್ಲಿನ ಬಿಂದು) ದಾಟಿದೆ ಎಂದು ಇಸ್ರೋ ತಿಳಿಸಿದೆ.
ಜುಲೈನಲ್ಲಿ ಚಂದ್ರಯಾನ 3 ಉಡಾವಣೆ
ಜುಲೈ 14 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾದ ಚಂದ್ರಯಾನ-3, ಆಗಸ್ಟ್ 23 ರಂದು ಚಂದ್ರನ ಮೇಲೆ ಸುಸೂತ್ರವಾಗಿ ಮೃಧುವಾಗಿ ಲ್ಯಾಂಡ್ ಆಯಿತು. ಈ ಮೂಲಕ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದ ಮೊದಲ ದೇಶ ಭಾರತ ಎಂಬ ಖ್ಯಾತಿಗೆ ದೇಶ ಪಾತ್ರವಾಯಿತು.
ನಂತರ ಲ್ಯಾಂಡರ್ ಮತ್ತು ರೋವರ್‌ನಲ್ಲಿರುವ ಉಪಕರಣಗಳು ಚಂದ್ರನ ಮೇಲೆ ಉದ್ದೇಶಿತ ಪ್ರಯೋಗಗಳನ್ನು ನಡೆಸಿದವು.












Click it and Unblock the Notifications