ISRO recruitment: ಇಸ್ರೋದಲ್ಲಿ 224 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ-ತಿಂಗಳ ಸಂಬಳ ಎಷ್ಟು?
ISRO recruitment: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ದಲ್ಲಿ 224 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಹಾಗಾದರೆ ಯಾವೆಲ್ಲ ಹುದ್ದೆಗಳು ಭರ್ತಿ ಇವೆ ಹಾಗೂ ತಿಂಗಳ ಸಂಬಳ ಎಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಇಂಜಿನಿಯರ್, ತಾಂತ್ರಿಕ ಸಹಾಯಕರು, ಡ್ರಾಫ್ಟ್‌ಮ್ಯಾನ್, ಡ್ರೈವರ್ ಸೇರಿದಂತೆ ಒಟ್ಟು 224 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಸೈಂಟಿಸ್ಟ್ ಇಂಜಿನಿಯರ್ -5, ಟೆಕ್ನಿಕಲ್ ಸಹಾಯಕ - 55, ಸೈಂಟಿಫಿಕ್ ಸಹಾಯಕ -6, ಲೈಬ್ರರಿ ಅಸಿಸ್ಟಂಟ್ - 1,
ಟೆಕ್ನಿಷಿಯನ್ ಬಿ ಮತ್ತು ಡ್ರಾಫ್ಟ್ ಮ್ಯಾನ್ ಬಿ - 142, ಫೈರ್ ಮ್ಯಾನ್ ಎ -3, ಕುಕ್ - 4, ಡ್ರೈವರ್ - 8 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ ವಿವರ: ಸೈಂಟಿಸ್ಟ್ ಇಂಜಿನಿಯರ್ ಹುದ್ದೆಗೆ ಅಭ್ಯರ್ಥಿಗಳು ಬಿಇ, ಬಿಟೆಕ್, ಎಂಇ ಅಥವಾ ಎಂಟೆಕ್, ಎಂಎಸ್ಸಿ ಪದವಿ ಪಡೆದಿರಬೇಕು. ಟೆಕ್ನಿಕಲ್ ಸಹಾಯಕರ ಹುದ್ದೆಗೆ ಅಭ್ಯರ್ಥಿ ಇಂಜಿನಿಯರಿಂಗ್ ಡಿಪ್ಲೊಮಾ ಪದವಿ, ಸೈಂಟಿಫಿಕ್ ಸಹಾಯಕರ ಹುದ್ದೆಗೆ ಬಿಎಸ್ಸಿ ಪದವಿ, ಲೈಬ್ರರಿ ಸಹಾಯಕರ ಹುದ್ದೆಗೆ ಪದವಿ ಅಥವಾ ಸ್ನಾತಕೋತ್ತರ ಪದವಿ, ಟೆಕ್ನಿಷಿಯನ್ ಬಿ ಮತ್ತು ಡ್ರಾಫ್ಟ್ ಮ್ಯಾನ್ ಬಿ, ಫೈರ್ ಮ್ಯಾನ್ ಎ, ಕುಕ್, ಡ್ರೈವರ್ ಹುದ್ದೆಗೆ ಅಭ್ಯರ್ಥಿಗಳು 10ನೇ ತರಗತಿ ಅಥವಾ ಐಟಿಐ ಉತ್ತೀರ್ಣರಾಗಿರಬೇಕು.
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ವಯೋಮಿತಿಯನ್ನು ಹೊಂದಿರಬೇಕು. ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.
ಅರ್ಜಿ ಸಲ್ಲಿಕೆ ಮಾಹಿತಿ: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಸೈಂಟಿಸ್ಟ್, ಇಂಜಿನಿಯರ್, ಟೆಕ್ನಿಕ್ ಮತ್ತು ಸೈಂಟಿಫಿಕ್ ಸಹಾಯಕರ ಹುದ್ದೆಗೆ ಅಭ್ಯರ್ಥಿಗಳು 250 ರೂಪಾಯಿ ಅರ್ಜಿ ಶುಲ್ಕ ಮತ್ತು 750 ರೂಪಾಯಿ ಪ್ರೊಸೆಸಿಂಗ್ ಶುಲ್ಕ ಪಾವತಿಸಬೇಕು. ಉಳಿದ ಹುದ್ದೆಗೆ ಅರ್ಜಿ ಶುಲ್ಕ 100 ರೂಪಾಯಿ ಆಗಿದ್ದು, ಪ್ರೊಸೆಸಿಂಗ್ ಶುಲ್ಕ 500 ರೂಪಾಯಿ ಆಗಿದೆ, ಮಹಿಳಾ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಕಲಚೇತನರಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ, ಕಂಪ್ಯೂಟರ್ ಆಧಾರಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಈ ಹುದ್ದೆಗೆ ಅಭ್ಯರ್ಥಿಗಳು ಫೆಬ್ರವರಿ 10ರಿಂದ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಮಾರ್ಚ್ 1 ಆಗಿದೆ. ಈ ಹುದ್ದೆ ಕುರಿತ ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ಅಭ್ಯರ್ಥಿಗಳು isro.gov.in ಈ ವೆಬ್ಸ್ಟ್ಗೆಗೆ ಭೇಟಿ ನೀಡಬಹುದಾಗಿದೆ.












Click it and Unblock the Notifications