Get Updates
Get notified of breaking news, exclusive insights, and must-see stories!

Chandrayaan 3: ‘ಚೆಸ್’ ಮಾಸ್ಟರ್ ಭೇಟಿ ಮಾಡಿದ ‘ಮೂನ್’ ಮಾಸ್ಟರ್!

ಚೆನ್ನೈ: ಭಾರತ ಹಾಗೂ ಭಾರತೀಯರು ಎಲ್ಲಾ ಕ್ಷೇತ್ರದಲ್ಲೂ ನಂಬರ್ 1. ಹೀಗಾಗಿ ಇಡೀ ಜಗತ್ತು ಭಾರತವನ್ನು ಅತಿ ಪ್ರೀತಿಯಿಂದ ಕಾಣುತ್ತದೆ. ಅದರಲ್ಲೂ ಮೊನ್ನೆ ಮೊನ್ನೆ ನಮ್ಮ ದೇಶ 'ಚಂದ್ರಯಾನ-3' ಯೋಜನೆ ಮೂಲಕ ಜಗತ್ತಿನ ಮನಸ್ಸು ಗೆದ್ದಿದೆ. ಇದರ ಜೊತೆಗೆ ಚೆಸ್ ವಿಭಾಗದಲ್ಲಿ ಭಾರತದ ಹೆಮ್ಮೆಯ ಪುತ್ರ ಪ್ರಜ್ಞಾನಂದ ಅವರು ಭಾರತೀಯರ ಗೌರವ ಮತ್ತಷ್ಟು ಹೆಚ್ಚುವಂತೆ ಮಾಡಿದ್ದಾರೆ. ಹೀಗೆ ಇಂದು 'ಚೆಸ್' ಮಾಸ್ಟರ್ ಮತ್ತು 'ಮೂನ್' ಮಾಸ್ಟರ್ ಒಂದಾಗಿದ್ದರು.

ಹೌದು, ಇಸ್ರೋ ಮುಖ್ಯಸ್ಥ ಎಸ್‌. ಸೋಮನಾಥ್ ಅವರು ಭಾರತದ ಚೆಸ್‌ ಗ್ರ್ಯಾಂಡ್ ಮಾಸ್ಟರ್‌ ಪ್ರಜ್ಞಾನಂದ ಮನೆಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ರು. ತಮಿಳುನಾಡು ರಾಜಧಾನಿಯಾದ ಚೆನ್ನೈನಲ್ಲಿ ಇರುವ ಪ್ರಜ್ಞಾನಂದ ಅವರ ಮನೆಗೆ ಇಂದು ಇಸ್ರೋ ಮುಖ್ಯಸ್ಥ ಸೋಮನಾಥ್ ವಿಸಿಟ್ ಕೊಟ್ಟರು. ಅಲ್ಲದೆ ಪ್ರಜ್ಞಾನಂದ ಅವರಿಗೆ ಜಿಎಸ್‌ಎಲ್‌ವಿ ರಾಕೆಟ್‌ನ, ಪ್ರತಿಕೃತಿ ನೀಡಿ ಶುಭ ಕೋರಿದ್ದಾರೆ. ಈ ಮೂಲಕ 'ಚಂದ್ರ' & 'ಚೆಸ್'ನ ಸಮಾಗಮಕ್ಕೆ ಭಾರತವು ಇಂದು ಸಾಕ್ಷಿಯಾಗಿತ್ತು.

ISRO Chief Gifts Chess Prodigy R Praggnanandhaa A Miniature Replica of GSLV Rocket

ಖುಷಿ ಹಂಚಿಕೊಂಡ ಪ್ರಜ್ಞಾನಂದ!

ಇನ್ನು ಚೆನ್ನೈನ ಪ್ರಜ್ಞಾನಂದ ಮನೆಗೆ ಭೇಟಿ ನೀಡಿದ್ದ ವೇಳೆ ಪ್ರಜ್ಞಾನಂದ ಕುಟುಂಬದವರು ಖುಷಿಯಾಗಿ ಇಸ್ರೋ ಮುಖ್ಯಸ್ಥ ಎಸ್‌. ಸೋಮನಾಥ್ ಅವರನ್ನು ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಪ್ರಜ್ಞಾನಂದ ಅವ್ರು ತಾವು 'ಚೆಸ್' ಟೂರ್ನಮೆಂಟ್‌ಗಳಲ್ಲಿ ಗೆದ್ದ ಬಹುಮಾನ ತೋರಿಸಿ ಸೋಮನಾಥ್ ಅವರ ಜೊತೆಯಲ್ಲಿ ಖುಷಿ ಹಂಚಿಕೊಂಡರು. ಈ ವೇಳೆ ಪ್ರಜ್ಞಾನ್‌ ರೋವರ್‌ ನಿದ್ದೆಗೆ ಜಾರಿದೆ, ಆದರೆ ಚೆಸ್‌ ಆಟಗಾರ ಪ್ರಜ್ಞಾನಂದ ಮುಂದಿನ ದಿನಗಳಲ್ಲಿ ಭಾರತ ಹಾಗೂ ಭಾರತೀಯರನ್ನ ಇನ್ನಷ್ಟು ಹೆಮ್ಮೆಪಡಿಸಲಿದ್ದಾರೆ ಎಂದರು.

ಜಗತ್ತಿನ ನಂ. 1 ಚೆಸ್‌ ಆಟಗಾರನಾಗಿ...

ಭಾರತ ಚೆಸ್ ವಿಭಾಗದಲ್ಲೂ ದೊಡ್ಡ ಹೆಸರು ಗಳಿಸುತ್ತಿದೆ. ಅದರಲ್ಲೂ ದಕ್ಷಿಣ ಭಾರತದ ಪ್ರತಿಭೆ ಪ್ರಜ್ಞಾನಂದ ಅವರು ಇಡೀ ಜಗತ್ತೇ ಮತ್ತೆ ಭಾರತದ ಕಡೆಗೆ ತಿರುಗಿ ನೋಡುವಂತೆ ಮಾಡುತ್ತಿದ್ದಾರೆ. ಹೀಗಾಗಿ ಇದೀಗ ಇಸ್ರೋ ಮುಖ್ಯಸ್ಥರು ಕೂಡ ಈ ಸಾಧಕನ ಮನೆಯಲ್ಲಿ, ಅವರನ್ನು ಭೇಟಿ ಮಾಡಿ ಖುಷಿ ಹಂಚಿಕೊಂಡಿದ್ದಾರೆ. ಅಲ್ಲದೆ ಪ್ರಜ್ಞಾನಂದ ಅವರ ಸಾಧನೆ ಹೆಮ್ಮೆ ಮೂಡಿಸುತ್ತೆ, ಶೀಘ್ರವೇ ಪ್ರಜ್ಞಾನಂದ ಜಗತ್ತಿನ ನಂ. 1 ಚೆಸ್‌ ಆಟಗಾರನಾಗಿ ಹೊರ ಹೊಮ್ಮಲಿ ಎಂದು ಆಶಿಸುವೆ ಅನ್ನುತ್ತಾ ಶುಭ ಕೋರಿದರು ಇಸ್ರೋ ಮುಖ್ಯಸ್ಥ.

ಒಟ್ನಲ್ಲಿ ಭಾರತದ 'ಮೂನ್' ಮಾಸ್ಟರ್, ಇಂದು 'ಚೆಸ್' ಮಾಸ್ಟರ್ ಅವರನ್ನು ಮೀಟ್ ಮಾಡಿ ಶುಭ ಕೋರಿದ್ದಾರೆ. ಈ ಮೂಲಕ ದಕ್ಷಿಣ ಭಾರತದ ಇಬ್ಬರು ಪ್ರತಿಭೆಗಳು ಭಾರತದ ಗೌರವವನ್ನು ಜಗತ್ತಿನ ಉದ್ದಗಲಕ್ಕೂ ಹಬ್ಬಿಸುತ್ತಿದ್ದಾರೆ. ಭಾರತ ಬಾಹ್ಯಾಕಾಶ ಲೋಕದಲ್ಲಿ ಮಿನುಗಲು ಇಸ್ರೋ ಕಾರಣವಾಗಿದ್ರೆ, ಚೆಸ್ ವಿಭಾಗದಲ್ಲಿ ಮಿಂಚಲು ಪ್ರಜ್ಞಾನಂದ ಅವರ ಕೊಡುಗೆ ಮಹತ್ವದ್ದು. ಅಲ್ಲದೆ ವಿಶ್ವನಾಥನ್ ಆನಂದ್ ಅವರ ಬಳಿಕ ಪ್ರಜ್ಞಾನಂದ ಅವರ ಮೂಲಕ ಭಾರತ ಮತ್ತೊಮ್ಮೆ ಜಗತ್ತಿನ ಚೆಸ್ ಲೋಕ ಆಳುವ ನಿರೀಕ್ಷೆ ಮೂಡಿದೆ.

ISRO Chief Gifts Chess Prodigy R Praggnanandhaa A Miniature Replica of GSLV Rocket

ಶಾಶ್ವತ ನಿದ್ದೆಗೆ ಜಾರಿದ ಭಾರತದ ಲ್ಯಾಂಡರ್

'ಚಂದ್ರಯಾನ-3' ಯೋಜನೆ ಮೂಲಕ ಭಾರತ ಚಂದ್ರನ ಮೇಲೆ ಇಳಿಸಿರುವ ಲ್ಯಾಂಡರ್ ಮತ್ತು ರೋವರ್ ಈಗಾಗಲೇ ಶಾಶ್ವತವಾಗಿ ನಿದ್ದೆ ಜಾರಿವೆ. ಹೀಗಾಗಿ ಭಾರತದ ಯೋಜನೆ, ಒಂದು ದೊಡ್ಡ ಯಶಸ್ಸಿನ ನಂತರ ಅಂತ್ಯ ಕಂಡಿದೆ. ಚಂದ್ರನ ಮೇಲೆ ಭೂಮಿಯ ರೀತಿಯ ವಾತಾವರಣ ಇಲ್ಲ, ಹೀಗಾಗಿ ಅಲ್ಲಿ ಸೂರ್ಯನ ಶಾಖ ಬಿದ್ದರೆ ಅತಿ ಬಿಸಿ. ಹಾಗೇ ಸೂರ್ಯನು ಮುಳುಗಿದ್ರೆ ಅತಿಯಾದ ಚಳಿ ಇರುತ್ತೆ. ಹೀಗಾಗಿ ಚಂದ್ರನ ಮೇಲೆ ಸುಮಾರು -120 ರಿಂದ -200 ಡಿಗ್ರಿ ಮೈಕೊರೆವ ಚಳಿ ನಡುವೆ, ಶಾಶ್ವತ ನಿದ್ದೆಗೆ ಜಾರಿದೆ ಭಾರತದ 'ವಿಕ್ರಮ್' ಲ್ಯಾಂಡರ್ & 'ಪ್ರಜ್ಞಾನ್‌' ರೋವರ್.

ಇಂದು ಭಾರತದ ಚೆಸ್ ಮಾಸ್ಟರ್ ಭೇಟಿ ಮಾಡಿರುವ ವೇಳೆ ಇಸ್ರೋ ಅಧ್ಯಕ್ಷರು ಕೂಡ ಈ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಪ್ರಜ್ಞಾನ್ ರೋವರ್ ಸಾಧನೆಯನ್ನ ಮೆಲುಕು ಹಾಕಿ, ಈ ಸಂದರ್ಭದಲ್ಲೇ ಪ್ರಜ್ಞಾನಂದಗೆ ಶುಭ ಕೋರಿದ್ದಾರೆ. ಭಾರತದ ಇಸ್ರೋ 'ಚಂದ್ರಯಾನ-3' ಯೋಜನೆ ಮೂಲಕ ಆಗಸ್ಟ್ 23ರಂದು ವಿಕ್ರಮ್‌ ಲ್ಯಾಂಡರ್‌ನ ಚಂದ್ರನ ಅಂಗಳಕ್ಕೆ ಇಳಿಸಿತ್ತು. ಬಳಿಕ ಸುಮಾರು 14 ದಿನ ಕಾಲ ಭಾರತದ ಇಸ್ರೋ ನಿರ್ಮಿಸಿದ್ದ ಲ್ಯಾಂಡರ್ ಮತ್ತು ರೋವರ್ ಒಟ್ಟಾಗಿ ಕೆಲಸ ಮಾಡಿದ್ದವು. ಈಗ ಚಂದ್ರನ ದಕ್ಷಿಣ ಧ್ರುವದ ಮೇಲೆ ಶಾಶ್ವತವಾಗಿ ನಿದ್ದೆಗೆ ಜಾರಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+