ISRO Gaganyaan: ಗಗನಕ್ಕೆ ಹಾರಲಿದೆ ಭಾರತ, ಹೇಗಿದೆ ಇಸ್ರೋ ಸಿದ್ಧತೆ?
ಭಾರತ ಆರ್ಥಿಕವಾಗಿ ಮಾತ್ರವಲ್ಲದೆ ಬಾಹ್ಯಾಕಾಶ ಕ್ಷೇತ್ರದಲ್ಲೂ ಪ್ರಬಲವಾಗಿ ಬೆಳೆಯುತ್ತಿದೆ. ಅದ್ರಲ್ಲೂ ಚಂದ್ರಯಾನ-3 ಯಶಸ್ಸು ಭಾರತಕ್ಕೆ ಮತ್ತಷ್ಟು ಹುಮ್ಮಸ್ಸು ತುಂಬಿದೆ. ಹೀಗಾಗಿ ಹೊಸ ಹೊಸ ಯೋಜನೆಗಳಿಗೆ ಇಸ್ರೋ ವಿಜ್ಞಾನಿಗಳು ಸಿದ್ಧತೆ ನಡೆಸಿದ್ದಾರೆ. ಇದೇ ಹೊತ್ತಲ್ಲಿ ಶತಕೋಟಿ ಭಾರತೀಯರಿಗೆ ಸಿಹಿಸುದ್ದಿ ಸಿಕ್ಕಿದ್ದು, ಇಸ್ರೋ ಹೊಸ ಇತಿಹಾಸ ನಿರ್ಮಾಣಕ್ಕಾಗಿ ಪಣತೊಟ್ಟು ನಿಂತಿದೆ.
ಅಂದಹಾಗೆ ಚಂದ್ರನ ಅಧ್ಯಯನ ಹಾಗೂ ಸೂರ್ಯನ ಅಧ್ಯಯನದ ಬಳಿಕ ಈಗ ಇಸ್ರೋಗೆ ಬೇರೆಯದ್ದೇ ಆಲೋಚನೆ ಹೊಳೆದಿದೆ. ಮಹತ್ವಾಕಾಂಕ್ಷೆಯ ಮಾನವ ಸಹಿತ ಗಗನಯಾನ ಯೋಜನೆಗೆ ಇಸ್ರೋ ಸಿದ್ಧತೆ ನಡೆಸಿದ್ದು, ಈ ಕುರಿತು ಬಿಗ್ ಅಪ್‌ಡೇಟ್ ನೀಡಿದೆ. ಅಮೆರಿಕ ಮೂಲದ ನಾಸಾ ಸಾಲಿಗೆ ಈಗಾಗಲೇ ಸೇರಿರುವ ಇಸ್ರೋ ಮತ್ತೊಂದು ಯೋಜನೆ ಮೂಲಕ ಇತಿಹಾಸ ನಿರ್ಮಿಸಲು ಮುಂದಾಗಿದೆ. ಹಾಗಾದರೆ ಭಾರತ ಬಾಹ್ಯಾಕಾಶಕ್ಕೆ ಮನುಷ್ಯರನ್ನು ಯಾವಾಗ ಕಳುಹಿಸಲಿದೆ? ಗಗನಯಾನ ಯೋಜನೆಗೆ ತಯಾರಿ ಹೇಗೆ ಸಾಗಿದೆ?

ಇದೇ ತಿಂಗಳು ಸಿಗಲಿದೆ ಸಿಹಿಸುದ್ದಿ!
ಹೌದು, ಈ ತಿಂಗಳ ಅಂತ್ಯಕ್ಕೆ ಮಾನವ ಸಹಿತ ಬಾಹ್ಯಾಕಾಶ ಯೋಜನೆ ಗಗನಯಾನದ ಬಗ್ಗೆ ದೊಡ್ಡ ಅಪ್‌ಡೇಟ್ ಸಿಗಲಿದೆ. ಏಕೆಂದರೆ ಅಕ್ಟೋಬರ್ ಅಂತ್ಯಕ್ಕೆ ಗಗನಯಾನ ಯೋಜನೆಗೆ ಸಂಬಂಧಿಸಿದಂತೆ ಕ್ರ್ಯೂ ಎಸ್ಕೇಪ್ ಸಿಸ್ಟಮ್ ಟೆಸ್ಟ್‌ಗೆ ಇಸ್ರೋ ಸಿದ್ಧವಾಗಿದೆ. ಇದಕ್ಕಾಗಿ ಭಾರತದ ನೌಕಾಸೇನೆ, ವಾಯು ಸೇನೆ ಕೂಡ ಕೈಜೋಡಿಸಿದೆ. ಕ್ರ್ಯೂ ಎಸ್ಕೇಪ್ ಸಿಸ್ಟಮ್ ಕಾರ್ಯಕ್ಷಮತೆ ತೋರಿಸುವ ಫ್ಲೈಟ್ ಟೆಸ್ಟ್ ವೆಹಿಕಲ್ ಅಬಾರ್ಟ್ ಮಿಷನ್-1 (ಟಿವಿ-ಡಿ1)ನ ಸಿದ್ಧತೆ ವೇಗವಾಗಿ ಸಾಗಿದೆ ಎಂದು ಇಸ್ರೋ ಸಂಸ್ಥೆ ತಿಳಿಸಿದೆ. ಪರೀಕ್ಷಾರ್ಥ ವಾಹನ ಟಿವಿ-ಡಿ1 ಒಂದೇ ಹಂತದ ರಾಕೆಟ್ ಆಗಿದ್ದು ಕ್ರ್ಯೂ ಎಸ್ಕೇಪ್ ಸಿಸ್ಟಮ್ ಪರೀಕ್ಷೆಗಾಗಿ ಇದನ್ನ ಅಭಿವೃದ್ಧಿಪಡಿಸಿದೆ ಇಸ್ರೋ.
ಇಸ್ರೋಗೆ ಇದು ಅಗ್ನಿ ಪರೀಕ್ಷೆ!
ಗಗನಯಾನದ ಸಮಯದಲ್ಲಿ ಗಗನಯಾತ್ರಿಗಳು ಕುಳಿತುಕೊಳ್ಳುವ ಕ್ರ್ಯೂ ಸುಮಾರು 17 ಕಿ.ಮೀ ಎತ್ತರದಲ್ಲಿ ಬೇರೆಯಾಗುತ್ತದೆ. ಈ ಪ್ರಕ್ರಿಯೆ ನಂತರ ಪ್ಯಾರಾಚ್ಯೂಟ್ ತೆರೆಯಲಿದೆ, ನಂತರ ನಿಧಾನವಾಗಿ ಕ್ರ್ಯೂ ಮಾಡ್ಯೂಲ್ ಅನ್ನ ಸಮುದ್ರದ ಮೇಲೆ ಇಳಿಸಲಾಗುತ್ತದೆ. ಈ ಪ್ರಕ್ರಿಯೆ ಮುಗಿದ ಬಳಿಕ ಭಾರತೀಯ ನೌಕಾಪಡೆಯ ಹಡಗು ಮತ್ತು ಮುಳುಗು ತಜ್ಞರ ತಂಡದ ಜೊತೆ ಬಂಗಾಳ ಕೊಲ್ಲಿಯಲ್ಲಿ ಕ್ರ್ಯೂ ಮಾಡ್ಯೂಲ್‌ನ ಮತ್ತೆ ವಶಕ್ಕೆ ಪಡೆಯಲು ಯೋಜಿಸಲಾಗಿದೆ. ಇನ್ನು ಗಗನಯಾನ ಯೋಜನೆಗೆ ಈ ಪ್ರಕ್ರಿಯೆ ನಿರ್ಣಾಯಕ, ಯಾಕೆ ಗೊತ್ತಾ? ಅಕಸ್ಮಾತ್ ರಾಕೆಟ್ ಉಡಾವಣೆ ಸಮಯದಲ್ಲಿ ದೋಷ ಕಂಡುಬಂದು ವಿಜ್ಞಾನಿಗಳಿಗೆ ಜೀವ ಹಾನಿಯ ಸಾಧ್ಯತೆ ಹೆಚ್ಚು. ಹೀಗಿದ್ದಾಗ ವಿಜ್ಞಾನಿಗಳ ಜೀವ ಉಳಿಸಲು ಈ ಪರೀಕ್ಷೆ ಅತಿ ಮುಖ್ಯ.
ನೌಕಾಸೇನೆ ಜೊತೆಗೆ ವಾಯುಸೇನೆ ಸಾಥ್!
ಈಗ ಇಸ್ರೋ ಸಂಸ್ಥೆ ನಡೆಸುತ್ತಿರುವ ಕ್ರ್ಯೂ ಎಸ್ಕೇಪ್ ಸಿಸ್ಟಮ್ ಟೆಸ್ಟ್‌ಗೆ, ಭಾರತದ ನೌಕಾಸೇನೆ ಕೈಜೋಡಿಸಿದೆ. ಇದರ ಜೊತೆ ಭಾರತ ಗಗನಯಾನ ಯೋಜನೆ ಕೈಗೊಳ್ಳಲು ಪ್ರಮುಖವಾಗಿ ಬೇಕಿರುವ ಪೈಲಟ್ ಕಂ ಬಾಹ್ಯಾಕಾಶ ವಿಜ್ಞಾನಿಗಳನ್ನು ಭಾರತದ ಹೆಮ್ಮೆಯ ವಾಯುಸೇನೆ ಇದೀಗ ಸಜ್ಜುಗೊಳಿಸುತ್ತಿದೆ. ಇಸ್ರೋ ಗಗನಯಾನ ಯೋಜನೆಗೆ ಅಂತಾನೇ ಇಬ್ಬರು ಯುವ ಪೈಲಟ್‌ಗಳನ್ನ ಆಯ್ಕೆ ಮಾಡಿಕೊಳ್ಳಲಾಗಿತ್ತು. ಅವರಿಗೆ ರಷ್ಯಾದಲ್ಲಿ ಬಾಹ್ಯಾಕಾಶ ವಿಜ್ಞಾನ ಮತ್ತು ತುರ್ತು ಸಂದರ್ಭದಲ್ಲಿ ಬದುಕಿ ಉಳಿಯುವ ತಂತ್ರಗಳ ಬಗ್ಗೆ ತರಬೇತಿ ನಿಡಲಾಗಿದೆ. ಇದೀಗ ಆ ಯುವ ವಿಜ್ಞಾನಿಗಳು ಯಾರು ಎಂಬುದನ್ನೂ ಇಸ್ರೋ ಸಂಸ್ಥೆ ತೋರಿಸಿದೆ.
For the first time, we got to see the astronaut/vyomnaut designates for #Gaganyaan's first crewed mission in a video posted by IAF yesterday! #ISRO
— ISRO Spaceflight (@ISROSpaceflight) October 4, 2023
These two will be the first Indians to be launched to space on an Indian rocket from Indian soil! 🇮🇳
For now, their… pic.twitter.com/98yoGkHjmJ
ಹೌದು, ಹೀಗೆ ಇಸ್ರೋ ಹಂಚಿಕೊಂಡಿರುವ ಪೋಸ್ಟ್‌ನಲ್ಲಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಭಾರತೀಯ ವಾಯುಪಡೆ ರೆಕಾರ್ಡ್ ಮಾಡಿದೆ ಎನ್ನಲಾಗಿದೆ. ಭಾರತ ಮತ್ತು ಇಸ್ರೋ ಸಂಸ್ಥೆಗೆ ಬಹುಮುಖ್ಯವಾಗಿರುವ ಗಗನಯಾನ ಯೋಜನೆಗಾಗಿ ಬಾಹ್ಯಾಕಾಶಕ್ಕೆ ರೆಕ್ಕೆ ಕಟ್ಟಿಕೊಂಡು ಹಾರಲಿರುವ ವಿಜ್ಞಾನಿಗಳು ಇವರೇ ಆಗಿದ್ದಾರೆ ಎಂಬುದು ವಿಶೇಷ. ಇವರಿಗೆ ನಮ್ಮ ಬೆಂಗಳೂರಲ್ಲಿ ಕಠಿಣ ತರಬೇತಿ ನೀಡಲಾಗುತ್ತಿದೆ. ಆದರೆ ಭದ್ರತಾ ದೃಷ್ಟಿಯಿಂದ ಈ ಯುವ ವಿಜ್ಞಾನಿಗಳ ಮುಖ ತೋರಿಸಿಲ್ಲ. ಒಟ್ನಲ್ಲಿ ಇಡೀ ದೇಶ ಒಗ್ಗಟ್ಟಿನಿಂದ ಗಗನಯಾನ ಯೋಜನೆ ಸಜ್ಜಾಗಿ ನಿಂತಿದ್ದು, ಈ ಬಾರಿಯೂ ಸಕ್ಸಸ್ ಗ್ಯಾರಂಟಿ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications