ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿನಲ್ಲಿ ಒಂದೇ ದಿನ ಸುರಿದ ಮಳೆ ಸೃಷ್ಟಿಸಿದ ಅವಾಂತರವೆಷ್ಟು?

|
Google Oneindia Kannada News

ಚೆನ್ನೈ, ನವೆಂಬರ್ 02: ತಮಿಳುನಾಡಿನಲ್ಲಿ ವರುಣ ಅಬ್ಬರ ಜೋರಾಗಿದೆ. ಮಂಗಳವಾರ ರಾತ್ರಿಯಿಂದ ಚೆನ್ನೈ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರಾರಂಭವಾಗಿರುವ ಮಳೆಯು ಹೊಸ ದಾಖಲೆ ಬರೆದಿದೆ. ನಗರ ಮತ್ತು ಹೊರವಲಯದಲ್ಲಿರುವ ಹಲವಾರು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿ ಬಿಟ್ಟಿದ್ದು, ಮಳೆ ಸಂಬಂಧಿತ ಘಟನೆಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

ಮೂರು ದಶಕಗಳಲ್ಲಿ ಮೊದಲ ಬಾರಿಗೆ, ಪ್ರಮುಖ ಪ್ರದೇಶವಾದ ನುಂಗಂಬಾಕ್ಕಂನಲ್ಲಿ ಒಂದೇ ದಿನ 8 ಸೆ.ಮೀ ಮತ್ತು ಉಪನಗರ ರೆಡ್ ಹಿಲ್ಸ್ 13 ಸೆ.ಮೀ, ಪೆರಂಬೂರ್‌ನಲ್ಲಿ 12 ಸೆ.ಮೀ ಮಳೆಯು ದಾಖಲಾಗಿದೆ.

ತಮಿಳುನಾಡು; ಭಾರೀ ಮಳೆ ಹಲವು ಶಾಲೆಗಳಿಗೆ ರಜೆ ಘೋಷಣೆತಮಿಳುನಾಡು; ಭಾರೀ ಮಳೆ ಹಲವು ಶಾಲೆಗಳಿಗೆ ರಜೆ ಘೋಷಣೆ

ಕಳೆದ ಅಕ್ಟೋಬರ್ 29 ರಂದು ತಮಿಳುನಾಡಿನಲ್ಲಿ ಈಶಾನ್ಯ ಮಾನ್ಸೂನ್ ಮಳೆ ಪ್ರಾರಂಭವಾಗಿದೆ. ತಮಿಳುನಾಡಿನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಕಾವೇರಿ ಡೆಲ್ಟಾ ಪ್ರದೇಶ ಮತ್ತು ಕನ್ಯಾಕುಮಾರಿಯಂತಹ ಕರಾವಳಿ ಪ್ರದೇಶಗಳಲ್ಲಿ 1 ರಿಂದ 9 ಸೆ.ಮೀಟರ್ ಮಳೆಯಾಗಿರುವುದು ಗೊತ್ತಾಗಿದೆ. ಈ ಮಳೆಯ ಹಿನ್ನೆಲೆಯಲ್ಲಿ ಇಲ್ಲಿ ಎರಡು ಸುರಂಗಮಾರ್ಗಗಳನ್ನು ಮುಚ್ಚಲಾಗಿದ್ದು, ನಗರದಲ್ಲಿ ಸಂಚಾರ ದಟ್ಟಣೆ ಮತ್ತು ವಾಹನಗಳ ನಿಧಾನ ಸಂಚಾರಕ್ಕೆ ಸಾಕ್ಷಿಯಾಗಿದೆ.

ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದ ಸಿಎಂ ಸ್ಟಾಲಿನ್

ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದ ಸಿಎಂ ಸ್ಟಾಲಿನ್

ತಮಿಳುನಾಡಿನಲ್ಲಿ ಮುಂಗಾರು ಪೂರ್ವ ಸಿದ್ಧತೆ ಕುರಿತು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಅಧಿಕಾರಿಗಳು ಒಗ್ಗಟ್ಟಾಗಿ ಕೆಲಸ ಮಾಡುವಂತೆ ಸೂಚನೆ ನೀಡಿದರು. ಮಳೆಗೆ ಸಂಬಂಧಿಸಿದ ದೂರುಗಳ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಅಣ್ಣಾ ಸಲೈ ಬಳಿ ರಾತ್ರೋರಾತ್ರಿ ಸುರಿದ ಧಾರಾಕಾರ ಮಳೆಯಿಂದ ಉತ್ತರ ಚೆನ್ನೈನ ಹಲವು ಭಾಗಗಳು, ದಕ್ಷಿಣ ಮತ್ತು ಉತ್ತರ ಭಾಗದಲ್ಲಿರುವ ಅನೇಕ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿತ್ತು. ರಾಜ್ಯದ ಇತರೆ ಭಾಗಗಳಲ್ಲೂ ಇದೇ ರೀತಿಯ ಸನ್ನಿವೇಶ ಸೃಷ್ಟಿಯಾಗಿದೆ.

ನವೆಂಬರ್ 1ರಂದೇ ನುಂಗಂಬಾಕ್ಕಂನಲ್ಲಿ ಮಳೆ ದಾಖಲೆ

ನವೆಂಬರ್ 1ರಂದೇ ನುಂಗಂಬಾಕ್ಕಂನಲ್ಲಿ ಮಳೆ ದಾಖಲೆ

ಚೆನ್ನೈ ನಗರಕ್ಕೆ ಸಂಬಂಧಿಸಿದಂತೆ, ನವೆಂಬರ್ 1ರಂದು ನುಂಗಂಬಾಕ್ಕಂನಲ್ಲಿ 8 ಸೆ.ಮೀ ಭಾರಿ ಮಳೆ ದಾಖಲಾಗಿದೆ. ಇದು ಕಳೆದ 30 ವರ್ಷಗಳಲ್ಲಿ ಮೊದಲ ಗರಿಷ್ಠ ಹಾಗೂ ಕಳೆದ 72 ವರ್ಷಗಳಲ್ಲಿ ಮೂರನೇ ಗರಿಷ್ಠ ದಾಖಲೆಯ ಮಳೆ ಎಂದು ಪ್ರಾದೇಶಿಕ ಹವಾಮಾನ ಕೇಂದ್ರದ ಹವಾಮಾನ ಇಲಾಖೆಯ ಉಪ ಮಹಾನಿರ್ದೇಶಕ ಎಸ್. ಬಾಲಚಂದ್ರನ್ ತಿಳಿಸಿದರು. 1990ರಲ್ಲಿ ನಗರದಲ್ಲಿ 13 ಸೆ.ಮೀ ಮಳೆಯಾಗಿದ್ದು, 1964 ರಲ್ಲಿ 11 ಸೆ.ಮೀ ಮಳೆ ಆಗಿತ್ತು. ಈ ಎರಡೂ ಮಳೆಗಳು ಅದೇ ವರ್ಷದ ನವೆಂಬರ್ 1ರಂದೇ ಆಗಿದ್ದವು ಎಂದು ಹೇಳಿದರು.

ತಮಿಳುನಾಡಿನಲ್ಲಿ ಮಳೆ ಸಂಬಂಧಿತ ಘಟನೆಯಲ್ಲಿ ಇಬ್ಬರು ಸಾವು

ತಮಿಳುನಾಡಿನಲ್ಲಿ ಮಳೆ ಸಂಬಂಧಿತ ಘಟನೆಯಲ್ಲಿ ಇಬ್ಬರು ಸಾವು

ಕಳೆದ ರಾತ್ರಿ ಸುರಿದ ಧಾರಾಕಾರ ಮಳೆ ನಡುವೆ ವ್ಯಕ್ತಿಯೊಬ್ಬರು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ. ನಗರದ ಉತ್ತರ ಪ್ರದೇಶದ ಪುಲಿಯಾಂತೋಪ್‌ನಲ್ಲಿ ವಸತಿ ಕಟ್ಟಡದ ಭಾಗಗಳು ಕುಸಿದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಉಪನಗರದಲ್ಲಿ ವಿದ್ಯುತ್ ಸ್ಪರ್ಶದಿಂದ ಹಸುವೊಂದು ಮೃತಪಟ್ಟಿದೆ. ಉತ್ತರ ಚೆನ್ನೈನ ಕೆಲವು ಭಾಗಗಳಲ್ಲಿ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಚೆನ್ನೈ, ಕಾಂಚೀಪುರಂ, ತಿರುವಳ್ಳೂರು ಮತ್ತು ಚೆಂಗಲ್‌ಪೇಟೆ ಸೇರಿದಂತೆ ಕನಿಷ್ಠ 8 ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಚಂಡಮಾರುತದ ಪರಿಚಲನೆಯು ಉತ್ತರ ಶ್ರೀಲಂಕಾ ಮತ್ತು ಅದರ ನೆರೆಹೊರೆಯಲ್ಲಿ ಕೆಳಮಟ್ಟದಲ್ಲಿದೆ. ಈಶಾನ್ಯ ಮಾರುತಗಳು ಉತ್ತರ ತಮಿಳುನಾಡು ಮತ್ತು ಪಕ್ಕದ ಕರಾವಳಿ ಪ್ರದೇಶಗಳಲ್ಲಿ ಉದ್ದಕ್ಕೂ ಮತ್ತು ಹೊರಗೆ ಮುಂದುವರಿಯುತ್ತದೆ ಎಂದು ಹವಾಮಾನ ವರದಿಯು ತಿಳಿಸಿದೆ.

ಚೆನ್ನೈನಲ್ಲಿ ಶೇ.75ರಷ್ಟು ಮಳೆ ನೀರು ಚರಂಡಿ ಕಾಮಗಾರಿ ಪೂರ್ಣ

ಚೆನ್ನೈನಲ್ಲಿ ಶೇ.75ರಷ್ಟು ಮಳೆ ನೀರು ಚರಂಡಿ ಕಾಮಗಾರಿ ಪೂರ್ಣ

ಚೆನ್ನೈ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ಶೇ.75ರಷ್ಟು ಮಳೆ ನೀರು ಚರಂಡಿ ಕಾಮಗಾರಿ ಪೂರ್ಣಗೊಂಡಿದೆ ಎಂದು ಪೌರಾಡಳಿತ ಸಚಿವ ಕೆ.ಎನ್.ನೆಹರು ತಿಳಿಸಿದ್ದಾರೆ. ಈ ಹಿಂದೆ ಮಿಡ್‌ಟೌನ್ ಜಿಎನ್ ಚೆಟ್ಟಿ ರಸ್ತೆಯಂತಹ ಹಲವಾರು ಪ್ರದೇಶಗಳು ಒಳಚರಂಡಿ ಸುಧಾರಣೆ ಕಾರ್ಯದ ದೃಷ್ಟಿಯಿಂದ ಜಲಾವೃತವಾಗುವುದನ್ನು ಕಂಡಿಲ್ಲ ಎಂದು ಹೇಳಿದರು. ಹಿಂದಿನ ವರ್ಷಗಳಲ್ಲಿ ಮಳೆಗಾಲದಲ್ಲಿ ಪ್ರವಾಹಕ್ಕೆ ಸಾಕ್ಷಿಯಾದ ಪ್ರದೇಶಗಳನ್ನು ಹಿಂದೂ ಧಾರ್ಮಿಕ ಮತ್ತು ದತ್ತಿ ಸಚಿವ ಪಿ ಕೆ ಶೇಖರ್ ಬಾಬು ಪಟ್ಟಿ ಮಾಡಿದ್ದಾರೆ. ಮಳೆನೀರು ಚರಂಡಿ ಕಾಮಗಾರಿಯ ಉನ್ನತೀಕರಣ ಮತ್ತು ಸುಧಾರಣೆಯ ಅನುಷ್ಠಾನದ ದೃಷ್ಟಿಯಿಂದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನೀರಿನ ನಿಶ್ಚಲತೆ ಇಲ್ಲ ಎಂದು ಒತ್ತಿ ಹೇಳಿದ್ದಾರೆ.

ಗ್ರೇಟರ್ ಚೆನ್ನೈ ಕಾರ್ಪೊರೇಷನ್ ಅಧಿಕಾರಿಗಳು ಹಲವಾರು ಪ್ರದೇಶಗಳನ್ನು ಪರಿಶೀಲಿಸಿದರು ಮತ್ತು ಪೂರ್ವಸಿದ್ಧತಾ ಕ್ರಮಗಳು ಮತ್ತು ಮಳೆನೀರು ಚರಂಡಿ ಕಾಮಗಾರಿಯ ದೃಷ್ಟಿಯಿಂದ ಕೆಕೆ ನಗರದಂತಹ ಪ್ರದೇಶಗಳಲ್ಲಿ ಮಳೆ ನೀರು ನಿಂತಿಲ್ಲ ಎಂದು ಹೇಳಿದರು. ಪ್ರವಾಹಕ್ಕೆ ಒಳಗಾಗುವ ಪ್ರದೇಶಗಳಲ್ಲಿ ಅಧಿಕಾರಿಗಳು ಪ್ರವಾಹ ನಿಗಾ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ.

ಒಂದೇ ತಿಂಗಳಿನಲ್ಲಿ 20 ಸೆಂ.ಮೀ ಮಳೆ

ಒಂದೇ ತಿಂಗಳಿನಲ್ಲಿ 20 ಸೆಂ.ಮೀ ಮಳೆ

ಕಳೆದ ಅಕ್ಟೋಬರ್ 1 ರಿಂದ ನವೆಂಬರ್ 1 ರವರೆಗೆ ಚೆನ್ನೈ ಜಿಲ್ಲೆಯಲ್ಲಿ 20 ಸೆಂ.ಮೀ ಮಳೆಯಾಗಿದೆ ಎಂದು ಶ್ರೀ ಬಾಲಚಂದ್ರನ್ ಹೇಳಿದ್ದಾರೆ. ಈ ಅವಧಿಯಲ್ಲಿ ಸರಾಸರಿ 28 ಸೆಂ.ಮೀ ಮಳೆ ಆಗಬೇಕಾಗಿದ್ದು, ಸಾಮಾನ್ಯಕ್ಕಿಂತ 29 ಶೇಕಡಾ ಕಡಿಮೆಯಾಗಿದೆ. ಆದಾಗ್ಯೂ, ಅಕ್ಟೋಬರ್ 1 ರಿಂದ 31ರ ನಡುವಿನ ಅವಧಿಯನ್ನು ಪರಿಗಣಿಸಿದಾಗ ನಗರದಲ್ಲಿ 14 ಸೆಂ.ಮೀ ಮಳೆಯಾಗಿದ್ದು, ಸಾಮಾನ್ಯವಾಗಿ 27 ಸೆಂ.ಮೀ ಮಳೆಯಾಗಬೇಕಾಗಿದ್ದು ಸಾಮಾನ್ಯವಾಗಿತ್ತು, ಆದರೆ ಅದಕ್ಕಿಂತ ಶೇ.48ರಷ್ಟು ಕಡಿಮೆಯಾಗಿದೆ. ಪ್ರಸ್ತುತ ಒಂದೇ ದಿನದ ಮಳೆಯು ಆ ಅಂತರವನ್ನು ಶೇಕಡಾ ಶೇ.18 ರಷ್ಟು ಕಡಿಮೆ ಮಾಡಿದೆ.

ಮುಂದಿನ 3 ದಿನಗಳವರೆಗೆ, ತಮಿಳುನಾಡು ಪುದುಚೇರಿ-ಕಾರೈಕಲ್‌ನ ಹೆಚ್ಚಿನ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಮುಂದಿನ 24 ಗಂಟೆಗಳ ಅವಧಿಯಲ್ಲಿ, ಚೆನ್ನೈ, ಕಾಂಚೀಪುರಂ, ತಿರುವಳ್ಳೂರು, ಚೆಂಗಲ್‌ಪೇಟ್ ಮತ್ತು ವೆಲ್ಲೂರ್ ಸೇರಿದಂತೆ ಉತ್ತರದ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕಾವೇರಿ ನದಿ ಪ್ರದೇಶದಲ್ಲಿ ರಾಮನಾಥಪುರ ಮತ್ತು ಶಿವಗಂಗೆ ವ್ಯಾಪ್ತಿಗೆ ಒಳಪಡುವ ಜಿಲ್ಲೆಗಳ ಒಂದೆರಡು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

English summary
Heavy Rain in Tamil Nadu: two persons were killed in rain related incident in Chennai. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X