ಸೆಪ್ಟೆಂಬರ್ 17 ರವರೆಗೆ ಈ ರಾಜ್ಯಗಳಿಗೆ ಅತ್ಯಧಿಕ ಮಳೆ, ರೆಡ್‌ ಅಲರ್ಟ್‌!

ನವದೆಹಲಿ, ಸೆಪ್ಟೆಂಬರ್‌ 15: ಉತ್ತರಾಖಂಡ ಮತ್ತು ಉತ್ತರ ಪ್ರದೇಶಗಳು ಸೆಪ್ಟೆಂಬರ್ 17 ರಂದು ಅತ್ಯಂತ ಭಾರೀ ಮಳೆಗೆ ಸಾಕ್ಷಿಯಾಗಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ( ಐಎಂಡಿ) ಬುಧವಾರ ತಿಳಿಸಿದೆ.

ಸೆಪ್ಟೆಂಬರ್ 15ರಿಂದ 17 ರವರೆಗೆ ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ, ಸೆಪ್ಟೆಂಬರ್ 14ರಂದು ವಾಯುವ್ಯ ಮಧ್ಯಪ್ರದೇಶದಲ್ಲಿ, ಸೆಪ್ಟೆಂಬರ್ 15 ರಂದು ಈಶಾನ್ಯ ರಾಜಸ್ಥಾನದಲ್ಲಿ ಮತ್ತು ಸೆಪ್ಟೆಂಬರ್ 15 ರಂದು ಗುಜರಾತ್ ಪ್ರದೇಶದಲ್ಲಿ ಅತಿ ಹೆಚ್ಚು ಮಳೆ ಬೀಳಲಿದೆ. ಮಧ್ಯ ಮಹಾರಾಷ್ಟ್ರ ಮತ್ತು ಕೊಂಕಣ ಮತ್ತು ಗೋವಾದ ಘಾಟ್ ಪ್ರದೇಶಗಳು ಸೆಪ್ಟೆಂಬರ್ 15 ರಿಂದ16 ರ ಅವಧಿಯಲ್ಲಿ ಅತಿ ಹೆಚ್ಚು ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉತ್ತರ ಪ್ರದೇಶ, ಉತ್ತರಾಖಂಡ, ವಾಯವ್ಯ ಮಧ್ಯಪ್ರದೇಶ, ಈಶಾನ್ಯ ರಾಜಸ್ಥಾನ, ಗುಜರಾತ್, ಮಧ್ಯ ಮಹಾರಾಷ್ಟ್ರದ ಘಾಟ್ ಪ್ರದೇಶಗಳು, ಕೊಂಕಣ ಮತ್ತು ಗೋವಾದಲ್ಲಿ ಸೆಪ್ಟೆಂಬರ್ 15ರಿಂದ17 ರವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ನೀಡಿದೆ. ಸೆಪ್ಟೆಂಬರ್ 17 ರಂದು ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಅತಿ ಹೆಚ್ಚು ಮಳೆಯಾಗಲಿದ್ದು, ರೆಡ್ ಅಲರ್ಟ್ ನೀಡಿದೆ.

 ಸೆಪ್ಟೆಂಬರ್ 17 ರಂದು ಉತ್ತರಾಖಂಡದಲ್ಲಿ ಮಳೆ

ಸೆಪ್ಟೆಂಬರ್ 17 ರಂದು ಉತ್ತರಾಖಂಡದಲ್ಲಿ ಮಳೆ

ಸೆಪ್ಟೆಂಬರ್‌ 16 ನಡುವೆ ಉತ್ತರಾಖಂಡ ಮತ್ತು ಉತ್ತರ ಪ್ರದೇಶದ ಮೇಲೆ ಮತ್ತು 15 ಸೆಪ್ಟೆಂಬರ್‌ನಲ್ಲಿ ಪಶ್ಚಿಮ ಮಧ್ಯಪ್ರದೇಶದಲ್ಲಿ ಗುಡುಗು ಮತ್ತು ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇನ್ನೂ ಸೆಪ್ಟೆಂಬರ್ 17 ರಂದು ಉತ್ತರಾಖಂಡ ಮತ್ತು ಉತ್ತರ ಪ್ರದೇಶದ ಮೇಲೆ ಭಾರೀ ಮಳೆಯಾಗುವ ಸಾಧ್ಯತೆಯಿದೆ.

 ಉತ್ತರಾಖಂಡ, ಪಶ್ಚಿಮ ಉತ್ತರ ಪ್ರದೇಶದಲ್ಲಿ ಮಳೆ

ಉತ್ತರಾಖಂಡ, ಪಶ್ಚಿಮ ಉತ್ತರ ಪ್ರದೇಶದಲ್ಲಿ ಮಳೆ

ಸೆಪ್ಟೆಂಬರ್ 15ರಂದು ಈಶಾನ್ಯ ಮಧ್ಯಪ್ರದೇಶದಲ್ಲಿ, ಸೆಪ್ಟೆಂಬರ್ 15 ಮತ್ತು 16 ರಂದು ವಾಯುವ್ಯ ಮಧ್ಯಪ್ರದೇಶದಲ್ಲಿ ಮತ್ತು ಸೆಪ್ಟೆಂಬರ್ 18 ರಂದು ಉತ್ತರಾಖಂಡ ಮತ್ತು ಪಶ್ಚಿಮ ಉತ್ತರ ಪ್ರದೇಶದ ಮೇಲೆ ಭಾರೀ ಬೀಳುವ ಸಾಧ್ಯತೆಯಿದೆ. 15 ಸೆಪ್ಟೆಂಬರ್‌ನಲ್ಲಿ ಹರಿಯಾಣ ಮತ್ತು ಪೂರ್ವ ರಾಜಸ್ಥಾನದ ಮೇಲೆ, 16 ಮತ್ತು 17 ಸೆಪ್ಟೆಂಬರ್, 2022 ರಂದು ಹಿಮಾಚಲ ಪ್ರದೇಶದ ಮೇಲೆ ಪ್ರತ್ಯೇಕವಾದ ಭಾರೀ ಮಳೆ ಮತ್ತು ಗುಡುಗು, ಮಿಂಚು ಸಹಿತ ಸಾಧಾರಣ ಮಳೆ. ಸೆಪ್ಟೆಂಬರ್ 15ರಂದು ಪೂರ್ವ ರಾಜಸ್ಥಾನದಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ.

 16 ರಂದು ಬಿಹಾರದ ಮೇಲೆ ಗುಡುಗು ಸಹಿತ ಮಳೆ

16 ರಂದು ಬಿಹಾರದ ಮೇಲೆ ಗುಡುಗು ಸಹಿತ ಮಳೆ

ಸೆಪ್ಟೆಂಬರ್ 15ರಂದು ಜಾರ್ಖಂಡ್ ಮತ್ತು ಗಂಗಾನದಿ ಪಶ್ಚಿಮ ಬಂಗಾಳದ ಮೇಲೆ, 15 ರಂದು ಸೌರಾಷ್ಟ್ರ ಮತ್ತು ಕಚ್‌ನಲ್ಲಿ, ಸೆಪ್ಟೆಂಬರ್ 15 ಮತ್ತು 16 ರಂದು ಬಿಹಾರದ ಮೇಲೆ ಗುಡುಗು ಮತ್ತು ಮಿಂಚು ಸಹಿತ ಸಾಧಾರಣ ಮಳೆ ಬೀಳುತ್ತದೆ. ಇದೇ ರೀತಿಯ ಪರಿಸ್ಥಿತಿಗಳು ಸೆಪ್ಟೆಂಬರ್ 16ರಂದು ಹಿಮಾಲಯ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ, ಸೆಪ್ಟೆಂಬರ್ 18ರಂದು ಒಡಿಶಾದ ಮೇಲೆ, ಸೆಪ್ಟೆಂಬರ್ 18 ರಂದು ಛತ್ತೀಸ್‌ಗಢದ ಮೇಲೆ ಮತ್ತು 15ರಂದು ಮಧ್ಯ ಮಹಾರಾಷ್ಟ್ರ ಮತ್ತು ಕೊಂಕಣ ಮತ್ತು ಗೋವಾದ ಘಾಟ್ ಪ್ರದೇಶಗಳ ಮೇಲೆ ಮಳೆ ಬೀಳಲಿದೆ.

 ಇಂದು ನಾಳೆ ಮಹಾರಾಷ್ಟ್ರ ಗೋವಾದಲ್ಲಿ ಮಳೆ

ಇಂದು ನಾಳೆ ಮಹಾರಾಷ್ಟ್ರ ಗೋವಾದಲ್ಲಿ ಮಳೆ

ಸೆಪ್ಟೆಂಬರ್ 15ರಂದು ಗುಜರಾತ್ ಪ್ರದೇಶದಲ್ಲಿ ಮತ್ತು ಸೆಪ್ಟೆಂಬರ್ 15-16ರ ಅವಧಿಯಲ್ಲಿ ಮಧ್ಯ ಮಹಾರಾಷ್ಟ್ರ ಮತ್ತು ಕೊಂಕಣ ಮತ್ತು ಗೋವಾದ ಘಾಟ್ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.16ರಂದು ಅರುಣಾಚಲ ಪ್ರದೇಶದ ಮೇಲೆ ಮತ್ತು 15 ರಿಂದ 16 ರಂದು ಅಸ್ಸಾಂ ಮತ್ತು ಮೇಘಾಲಯ ಮತ್ತು ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಭಾರೀ ಮಳೆ ಮತ್ತು ಗುಡುಗು, ಮಿಂಚು ಸಹಿತ ಸಾಧಾರಣ ಮಳೆಯಾಗಲಿದೆ. ಮುಂದಿನ 5 ದಿನಗಳಲ್ಲಿ ದಕ್ಷಿಣ ಭಾರತದಲ್ಲಿ ಕಡಿಮೆ ಮಳೆಯ ಬೀಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+