ಶನಿವಾರದಿಂದ ವ್ಯಾಪಕ ಮಳೆಯಾಗುವ ಸಾಧ್ಯತೆ: ಐಎಂಡಿ

ನವದೆಹಲಿ,ಜುಲೈ. 23: ಶನಿವಾರದಿಂದ ಪಶ್ಚಿಮ ಕರಾವಳಿ ಮತ್ತು ಮಧ್ಯ ಭಾರತದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ.

ಮಾನ್ಸೂನ್ ಮಾರುತಗಳು ದಕ್ಷಿಣದ ಕಡೆಗೆ ಚಲಿಸುವ ಸಾಧ್ಯತೆಯಿದೆ. ಇದು ಕಡಿಮೆ ಒತ್ತಡದ ಪ್ರದೇಶವಾಗಿದ್ದು, ಹೆಚ್ಚಿನ ತೇವಾಂಶವು ಕೇಂದ್ರೀಕೃತವಾಗಿರುತ್ತದೆ. ಮಾನ್ಸೂನ್ ಸಮಯದಲ್ಲಿ ಇದು ಸಾಮಾನ್ಯವಾಗಿ ಮಧ್ಯ ಪಾಕಿಸ್ತಾನದಿಂದ ಒಡಿಶಾದವರೆಗೆ ವಿಸ್ತರಿಸುತ್ತದೆ ಮತ್ತು ಇಂಡೋ-ಗಂಗಾ ಬಯಲು ಪ್ರದೇಶವನ್ನು ಆವರಿಸುತ್ತದೆ ಐಎಂಡಿ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಮಾರುತವು ತನ್ನ ಸಾಮಾನ್ಯ ಸ್ಥಾನದಿಂದ ದಕ್ಷಿಣಕ್ಕೆ ಜುಲೈನಲ್ಲಿ ಹೆಚ್ಚಿನ ಸಮಯದಲ್ಲಿ ಬರುತ್ತದೆ. ಇದು ಮಧ್ಯ ಭಾರತದಲ್ಲಿ ತೀವ್ರವಾದ ಮಳೆ ಮತ್ತು ಪ್ರವಾಹಕ್ಕೆ ಕಾರಣವಾಗುತ್ತದೆ. ಆದರೆ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಇಂಡೋ-ಗಂಗಾ ಬಯಲು ಉದ್ದಕ್ಕೂ ಇರುವ ರಾಜ್ಯಗಳಲ್ಲಿ ಶೇ. 40% ಕ್ಕಿಂತ ಹೆಚ್ಚು ಮಳೆ ಕೊರತೆ ಕಂಡು ಬರುತ್ತದೆ.

ಜೂನ್‌ನಲ್ಲಿ ಶೇ. 8% ರಷ್ಟು ಮಳೆಯ ಕೊರತೆಯ ಕಂಡು ಬಂದಿದ್ದು, ಜುಲೈನಲ್ಲಿ ಇದುವರೆಗೆ 10% ಅಧಿಕ ಮಳೆ ದಾಖಲಾಗಿದೆ. ಆದರೆ ಇದು ಕೃಷಿಗೆ ಹೆಚ್ಚಿನ ಅನುಕೂಲವಾಗಿಲ್ಲ. ಶುಕ್ರವಾರದ ವೇಳೆಗೆ ಗಂಗಾನದಿ ಪಶ್ಚಿಮ ಬಂಗಾಳದಲ್ಲಿ 50%, ಜಾರ್ಖಂಡ್‌ನಲ್ಲಿ 51%, ಬಿಹಾರದಲ್ಲಿ 45%, ಪೂರ್ವ ಉತ್ತರ ಪ್ರದೇಶದಲ್ಲಿ 61% ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲಿ 52% ಮಳೆಯ ಕೊರತೆ ಕಂಡು ಬಂದಿದೆ.

ಮತ್ತೊಂದೆಡೆ, ತೆಲಂಗಾಣದಲ್ಲಿ 111% ಹೆಚ್ಚುವರಿ ಮಳೆಯನ್ನು ದಾಖಲಿಸಿದೆ. ಮರಾಠವಾಡದಲ್ಲಿ 73% ಹೆಚ್ಚುವರಿ ಮಳೆಯಾಗಿದೆ. ವಿದರ್ಭಕ್ಕಿಂತ 48% ಹೆಚ್ಚುವರಿಯಾಗಿ ಸೌರಾಷ್ಟ್ರ ಮತ್ತು ಕಚ್‌ನಲ್ಲಿ 79% ಅಧಿಕ ಮಳೆಯಾಗಿದೆ. ದೇಶದಾದ್ಯಂತ ಶೇ.10ರಷ್ಟು ಅಧಿಕ ಮಳೆಯಾಗಿದೆ ಎಂದು ಇಲಾಖೆ ತಿಳಿಸಿದೆ.

 ಮಾನ್ಸೂನ್ ಮಾರುತದ ಮೇಲೆ ಪ್ರಭಾವ

ಮಾನ್ಸೂನ್ ಮಾರುತದ ಮೇಲೆ ಪ್ರಭಾವ

ಸಾಗರದ ಲಕ್ಷಣಗಳು, ಗಾಳಿಯ ಸ್ಥಿತಿ, ಸಮುದ್ರದ ಮೇಲ್ಮೈ ತಾಪಮಾನ, ವಾತಾವರಣದ ಮೋಡವನ್ನು ಪ್ರಚೋದಿಸುವ ಸಾಮರ್ಥ್ಯ, ಮಧ್ಯ ಅಕ್ಷಾಂಶ ವ್ಯವಸ್ಥೆಗಳು ಪೂರ್ವ-ಪಶ್ಚಿಮ ಮಾನ್ಸೂನ್ ಮಾರುತದ ಮೇಲೆ ಪ್ರಭಾವ ಬೀರುತ್ತವೆ ಎಂದು ಭಾರತೀಯ ಹವಾಮಾನ ಇಲಾಖೆಯ ರಾಷ್ಟ್ರೀಯ ಹವಾಮಾನ ಮುನ್ಸೂಚನೆ ಕೇಂದ್ರದ ಹಿರಿಯ ವಿಜ್ಞಾನಿ ಆರ್‌.ಕೆ. ಜೆನಮಣಿ ಹೇಳಿದ್ದಾರೆ.

 ದಕ್ಷಿಣ ಭಾರತದ ಪ್ರಮುಖ ಭಾಗಗಳಲ್ಲಿ ಮಳೆ

ದಕ್ಷಿಣ ಭಾರತದ ಪ್ರಮುಖ ಭಾಗಗಳಲ್ಲಿ ಮಳೆ

ಸಾಮಾನ್ಯವಾಗಿ, ಮಾನ್ಸೂನ್ ಮಾರುತ ಪೂರ್ವ ಭಾಗಕ್ಕೆ ಕೇಂದ್ರಗೊಳ್ಳುತ್ತದೆ. ಕೆಲವೊಮ್ಮೆ ದಕ್ಷಿಣಕ್ಕೆ ಮತ್ತು ಕೆಲವೊಮ್ಮೆ ಉತ್ತರಕ್ಕೂ ಬರುತ್ತದೆ. ಹೀಗಾಗಿ ದಕ್ಷಿಣ ಭಾರತದ ಪ್ರಮುಖ ಭಾಗಗಳಲ್ಲಿ ಬಲವಾದ ಮಾನ್ಸೂನ್‌ ಮಾರುತಕ್ಕೆ ಕಾರಣವಾಗುತ್ತದೆ. ಆದರೆ ಉತ್ತರದ ಚಲನೆಯು ವಿರಾಮದ ಮಾನ್ಸೂನ್ ಸ್ಥಿತಿಗೆ ಮತ್ತು ಹಿಮಾಲಯದ ತಪ್ಪಲಿನಲ್ಲಿ ಭಾರಿ ಮಳೆಗೆ ಕಾರಣವಾಗುತ್ತದೆ. ಇದು ಬ್ರಹ್ಮಪುತ್ರ ನದಿಯಲ್ಲಿ ಪ್ರವಾಹಕ್ಕೆ ಕಾರಣವಾಗುತ್ತದೆ.

 ಮಧ್ಯ ಭಾರತದಲ್ಲಿ ಹೆಚ್ಚು ಮಳೆ

ಮಧ್ಯ ಭಾರತದಲ್ಲಿ ಹೆಚ್ಚು ಮಳೆ

ಜುಲೈ 20 ರಿಂದ 22ರ ಅವಧಿಯಲ್ಲಿ ಇಂಡೋ-ಗಂಗಾ ಬಯಲು ಪ್ರದೇಶದ ರಾಜ್ಯಗಳ ಮೇಲೆ ಸ್ವಲ್ಪ ಮಳೆಯಾಗಿದೆ. ಆದರೆ ಈಗ ಮಾನ್ಸೂನ್ ದಕ್ಷಿಣದ ಕಡೆಗೆ ಚಲಿಸುತ್ತದೆ. ಅಂದರೆ ಉತ್ತರದ ರಾಜ್ಯಗಳು ಮತ್ತು ಇಂಡೋ-ಗಂಗಾ ಬಯಲು ಪ್ರದೇಶದ ಮೇಲೆ ಮಳೆಯು ಕಡಿಮೆಯಾಗುತ್ತದೆ ಮತ್ತು ಮಧ್ಯ ಭಾರತದ ಮೇಲೆ ಹೆಚ್ಚಾಗುತ್ತದೆ. ಜುಲೈ 26 ರ ನಂತರ ಮಾರುತ ಮತ್ತೆ ಉತ್ತರದ ಕಡೆಗೆ ಚಲಿಸುತ್ತದೆ. ಇದು ಮಾನ್ಸೂನ್ ಮಾರುತವನ್ನು ನಿರ್ಧರಿಸುವ ಚಲನೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಹಾನಿರ್ದೇಶಕ ಎಂ. ಮಹಾಪಾತ್ರ ಹೇಳಿದ್ದಾರೆ.

 ಅಧಿಕ ಮಳೆಯಿಂದ ತರಕಾರಿ ಬೆಳೆಗಳು ನಾಶ

ಅಧಿಕ ಮಳೆಯಿಂದ ತರಕಾರಿ ಬೆಳೆಗಳು ನಾಶ

ಅತಿವೃಷ್ಟಿಯಿಂದಾಗಿ ಮಧ್ಯ ಭಾರತದ ಹಲವೆಡೆ ಬೆಳೆಗಳು ನಾಶವಾಗಿವೆ. ಜುಲೈ 8ಕ್ಕೆ ಕೊನೆಗೊಂಡ ವಾರದಲ್ಲಿ ಬೇಸಿಗೆಯ ಮುಖ್ಯ ಬೆಳೆಯಾದ ಭತ್ತವು ಕಳೆದ ವರ್ಷದ ಇದೇ ಅವಧಿಯಲ್ಲಿ ವಿಸ್ತೀರ್ಣದಲ್ಲಿ 24% ನಷ್ಟು ಕುಸಿತವನ್ನು ಕಂಡಿದೆ ಎಂದು ಇತ್ತೀಚಿನ ಲಭ್ಯವಿರುವ ಅಂಕಿ ಅಂಶಗಳು ತೋರಿಸಿದೆ. ತೆಲಂಗಾಣದಲ್ಲಿ ಕಳೆದ ವಾರ ಸುರಿದ ಭಾರಿ ಮಳೆಯಿಂದಾಗಿ ಭಾರೀ ಪ್ರಮಾಣದ ಪ್ರವಾಹ ಉಂಟಾಗಿ ಬೆಳೆ ನಷ್ಟವಾಗಿದೆ. ಮೊನ್ನೆ ಸುರಿದ ಮಳೆಗೆ ರೈತರು ನಷ್ಟ ಅನುಭವಿಸಿದ್ದಾರೆ. ತರಕಾರಿ ಬೆಳೆಗಳು ಅಧಿಕ ಮಳೆ ಕಾರಣ ನಷ್ಟವನ್ನು ಅನುಭವಿಸಿವೆ ಎಂದು ಹೈದರಾಬಾದ್‌ನ ಸುಸ್ಥಿರ ಕೃಷಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ಜಿವಿ ರಾಮಾಂಜನೇಯುಲು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+