Daily Horoscope: ಈ ರಾಶಿಯವರ ಮನದ ಆಸೆ ಈಡೇರುವ ದಿನ, ಪ್ರತಿ ಕೆಲಸದಲ್ಲೂ ಸಿಗುವುದು ಯಶಸ್ಸು

Horoscope July 17: ಶುಕ್ರವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಶುಕ್ರವಾರ ಬೆಳಗ್ಗೆ 10:30 ರಿಂದ ಮಧ್ಯಾಹ್ನ 12:00 ರವರೆಗೆ ಇರುತ್ತದೆ. 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎಂಬ ಪೂರ್ಣ ವಿವರ ತಿಳಿಯಿರಿ.

ಮೇಷ ರಾಶಿ (Aries):

ಇಂದಿನ ದಿನ ಸಂತೋಷದಿಂದ ಕೂಡಿರುತ್ತದೆ. ಮನಸ್ಸಿನ ಆಸೆಗಳು ಈಡೇರುವ ದಿನ. ವೃತ್ತಿ, ವ್ಯವಹಾರದಲ್ಲಿ ಹೊಸ ಮತ್ತು ಭರವಸೆ ಮೂಡುವುದು. ಹೊಸ ಅವಕಾಶಗಳು ಎದುರಾಗುವುದು. ಸರಿಯಾದ ನಿರ್ಧಾರ ಹೊಸ ದಿಕ್ಕಿನತ್ತ ಸಾಗುವಂತೆ ಮಾಡುವುದು.

Horoscope July 17

ವೃಷಭ ರಾಶಿ (Taurus):

ವೃಷಭ ರಾಶಿಯವರಿಗೆ ಒಳ್ಳೆಯ ದಿನವಾಗಲಿದೆ. ವ್ಯವಹಾರವು ಲಾಭದಾಯಕವಾಗಿರುತ್ತದೆ. ಹೂಡಿಕೆಗಳಿಂದ ಲಾಭವಾಗುವುದು. ಹೊಸ ಕೆಲಸ ಆರಂಭಿಸಲು ಸೂಕ್ತವಾದ ದಿನ. ಪ್ರತಿಯೊಂದು ಕೆಲಸವನ್ನು ಪ್ರಾಮಾಣಿಕವಾಗಿ ಪೂರ್ಣಗೊಳಿಸಲು ಪ್ರಯತ್ನಿಸಿದರೆ ಯಶಸ್ಸು ಸಿಗುವುದು.

ಮಿಥುನ ರಾಶಿ (Gemini):

ಮಿಥುನ ರಾಶಿಯವರಿಗೆ ಇಂದು ಸಂತೋಷದ ದಿನವಾಗಿರುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಲಾಭ ದುಪ್ಪಟ್ಟಾಗುವುದು. ಕೆಲಸ ಕಾರ್ಯಗಳನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಿ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದು. ಸಾಲ ನೀಡಿದ ಹಣ ವಾಪಸ್‌ ಬರುವುದು.

ಕರ್ಕಾಟಕ ರಾಶಿ (cancer):

ನಿಮ್ಮ ಆಲೋಚನೆಗಳನ್ನು ಸಕಾರಾತ್ಮಕವಾಗಿರಿಸಿಕೊಳ್ಳಿ. ಹಣದ ಬಗ್ಗೆ ಸರಿಯಾದ ಯೋಜನೆ ಅಗತ್ಯ. ಉದ್ಯೋಗ ಬದಲಾವಣೆ ಬಗ್ಗೆ ಯೋಚನೆ ಇದ್ದರೆ ಇಂದೇ ಸರಿಯಾದ ದಿನ. ಹೊಸ ವ್ಯವಹಾರ ಆರಂಭಿಸುವುದಕ್ಕೂ ಸರಿಯಾದ ದಿನ. ಕುಟುಂಬದ ಬಗ್ಗೆ ಸರಿಯಾದ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ.

ಸಿಂಹ ರಾಶಿ (Leo):

ಸಿಂಹ ರಾಶಿಯವರಿಗೆ ಇಂದು ಒಳ್ಳೆಯ ದಿನವಾಗಿರುತ್ತದೆ. ವ್ಯವಹಾರದಲ್ಲಿ ಕುಟುಂಬದ ಬೆಂಬಲ ಸಿಗುತ್ತದೆ. ನಿಮ್ಮ ಮಾತಿನ ಬಗ್ಗೆ ನಿಗಾ ಇರಲಿ. ವೃತ್ತಿಜೀವನದ ಬಗ್ಗೆ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳಿ. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು.

ಕನ್ಯಾ ರಾಶಿ (virgo):

ಇಡೀ ದಿನ ಸಂತೋಷದಿಂದಲೇ ಸಾಗುವುದು. ನೀವು ಅಂದುಕೊಂಡ ಕೆಲಸ ಸರಾಗವಾಗಿ ನೆರವೇರುವುದು. ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಹೆಚ್ಚು ಉತ್ತಮವಾಗಿರುವುದು. ಅಪೂರ್ಣ ಕೆಲಸಗಳನ್ನು ಪೂರ್ಣಗೊಳಿಸಲು ಇಂದು ಒಳ್ಳೆಯ ದಿನ. ತಾಳ್ಮೆಯಿಂದ ಮುಂದುವರೆದರೆ ಯಶಸ್ಸು ಸಿಗುವುದು.

ತುಲಾ ರಾಶಿ (Libra):

ಕೆಲಸ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುವುದು. ವೃತ್ತಿಜೀವನದಲ್ಲಿ ಅರ್ಥಪೂರ್ಣ ಬದಲಾವಣೆಗಳಾಗುವುದು. ಇಂದು ನಿಮ್ಮ ಯೋಜನೆಗಳಲ್ಲಿ ಕೆಲವು ಸಣ್ಣ ಬದಲಾವಣೆಗಳನ್ನು ಮಾಡುವ ಮೂಲಕ ಲಾಭ ಪಡೆದುಕೊಳ್ಳಬಹುದು.ಕೆಲಸದಲ್ಲಿ ಬಡ್ತಿಯ ಅವಕಾಶವಿದೆ. ಮನೆಯಲ್ಲಿ ಸಂತೋಷಕರ ವಾತಾವರಣ ಇರುವುದು.

ವೃಶ್ಚಿಕ ರಾಶಿ (Scorpio):

ಆಸ್ತಿಯಲ್ಲಿ ಹೂಡಿಕೆ ಮಾಡಲು ಇದು ಒಳ್ಳೆಯ ದಿನ. ಹಿರಿಯರ ಸಲಹೆ ಪ್ರಯೋಜನಕಾರಿಯಾಗಿರುವುದು. ಹಠಾತ್ ಆರ್ಥಿಕ ಲಾಭಗಳಾಗುವುದು. ಬುದ್ಧಿವಂತಿಕೆಯಿಂದ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ. ಉದ್ಯೋಗದಲ್ಲಿರುವವರಿಗೆ ಗಮನಾರ್ಹ ಜವಾಬ್ದಾರಿಗಳು ಸಿಗಬಹುದು.

ಧನು ರಾಶಿ (Sagitarius):

ರಾಜಕೀಯ ಚಟುವಟಿಕೆಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ. ಇಂದು ನಿಮ್ಮ ಗೌರವ ಕೂಡಾ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳಿಗೆ ಅನುಕೂಲಕರ ದಿನವಾಗಿರಲಿದೆ. ಕುಟುಂಬದಲ್ಲಿ ಪರಸ್ಪರ ಸಾಮರಸ್ಯ ಇರುತ್ತದೆ. ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುವುದು.

ಮಕರ ರಾಶಿ (Capricorn):

ಹೊಸ ಅವಕಾಶ ಸಿಗುವುದು. ಮೇಲಧಿಕಾರಿಗಳಿಂದ ಕೆಲಸಕ್ಕೆ ಪ್ರಶಂಸೆ ಸಿಗುವುದು. ಏನೇ ಕೆಲಸ ಮಾಡಿದರೂ ಯಶಸ್ಸು ನಿಮ್ಮದಾಗುವುದು. ಸಂಬಳ ಹೆಚ್ಚಳವಾಗುವ ಸಾಧ್ಯತೆಯೂ ಇದೆ. ಮನಸ್ಸಿನ ಸಂತೋಷ ಹೆಚ್ಚಾಗುವುದು.

ಕುಂಭ ರಾಶಿ (Aquarius):

ಇಂದು ನಿಮಗೆ ಉತ್ತಮ ದಿನವಾಗಿರುತ್ತದೆ. ಕೆಲಸದಲ್ಲಿ ನಿರೀಕ್ಷಿತ ಯಶಸ್ಸನ್ನು ಸಾಧಿಸುವಿರಿ. ಕುಟುಂಬ ಸದಸ್ಯರ ಸಾಧನೆ ಸಂತೋಷವನ್ನು ತರುತ್ತದೆ. ಸಕಾರಾತ್ಮಕ ಚಿಂತನೆಯು ನಿಮ್ಮ ಕೆಲಸಗಳನ್ನು ಪೂರ್ಣಗೊಳಿಸಲು ಸಹಾಯ ಮಾಡುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭವಾಗುವ ಸಾಧ್ಯತೆಗಳಿವೆ.

ಮೀನ ರಾಶಿ (Pisces):

ಉತ್ಸಾಹದಿಂದ ಕೂಡಿರುವ ದಿನವಾಗಿರುತ್ತದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸುವಿರಿ. ಸ್ನೇಹಿತರ ಭೇಟಿ ಸಂತೋಷ ತರುವುದು. ಪ್ರಮುಖ ಯೋಜನೆಗಳನ್ನು ಕೆಲವು ದಿನಗಳವರೆಗೆ ಮುಂದೂಡಬೇಕಾಗಬಹುದು. ಹೊಸ ಜವಾಬ್ದಾರಿಗಳು ಹೆಗಲೇರುವುದು.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+