ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತಿಯಾದ ಮೊಬೈಲ್ ಬಳಕೆಯಿಂದ ಗಂಡ-ಹೆಂಡತಿ ಸಂಬಂಧ ಹಾಳು!

|
Google Oneindia Kannada News

ನವದೆಹಲಿ, ಡಿಸೆಂಬರ್ 13: ಜಗತ್ತಿನಲ್ಲಿ ಸ್ಮಾರ್ಟ್‌ಫೋನ್‌ಗಳ ಪ್ರಯೋಜನಗಳು ಮತ್ತು ದುಷ್ಪರಿಣಾಮಗಳ ಸುತ್ತಲಿನ ಚರ್ಚೆಯು ಎಂದಿಗೂ ಮುಗಿಯೋದಿಲ್ಲ. ಒಂದೆಡೆ ಗ್ಯಾಜೆಟ್ ದೂರದಲ್ಲಿರುವ ಜನರನ್ನು ಹತ್ತಿರಕ್ಕೆ ಸೇರಿಸಿದರೆ, ಇನ್ನೊಂದು ಕಡೆ ಜೊತೆಗಿರುವ ದಂಪತಿ ಮಧ್ಯೆಯೇ ಅಂತರವನ್ನು ಸೃಷ್ಟಿಸುತ್ತದೆ ಎಂಬುದಾಗಿ ಹೇಳಲಾಗುತ್ತಿದೆ.

ಭಾರತದಲ್ಲಿನ ಶೇ.88ರಷ್ಟು ದಂಪತಿಗಳು ತಮ್ಮ ಸ್ಮಾರ್ಟ್‌ಫೋನ್‌ಗಳ ಅತಿಯಾದ ಬಳಕೆಯಿಂದಾಗಿ ವೈವಾಹಿಕ ಬದುಕನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಚೀನಾದ ಸ್ಮಾರ್ಟ್‌ಫೋನ್ ತಯಾರಕ ವಿವೊದ ಹೊಸ ಅಧ್ಯಯನ ಬಹಿರಂಗಪಡಿಸಿದೆ.

Missed Call ಕೊಟ್ಟು 50 ಲಕ್ಷ ರೂ. ದೋಚಿದ ಖದೀಮರು!Missed Call ಕೊಟ್ಟು 50 ಲಕ್ಷ ರೂ. ದೋಚಿದ ಖದೀಮರು!

ವಿವೋ ಸೈಬರ್ ಮೀಡಿಯಾ ರಿಸರ್ಚ್ (CMR) ಸಹಯೋಗದೊಂದಿಗೆ 'ಸಂಗಾತಿ ಸಂಬಂಧಗಳ ಮೇಲೆ ಸ್ಮಾರ್ಟ್‌ಫೋನ್‌ಗಳ ಪ್ರಭಾವ' ಶೀರ್ಷಿಕೆಯಡಿ ವಿವೋದ 'ಸ್ವಿಚ್ ಆಫ್' ಅಧ್ಯಯನದ ನಾಲ್ಕನೇ ಆವೃತ್ತಿಯನ್ನು ಸೋಮವಾರ ಬಿಡುಗಡೆ ಮಾಡಲಾಗಿದೆ. ಈ ಸಮೀಕ್ಷೆಯು ಹೇಳುವುದೇನು? ಗಂಡ-ಹೆಂಡತಿ ಜಗಳಕ್ಕೆ ಮೊಬೈಲ್ ಹೇಗೆ ಕಾರಣವಾಗುತ್ತೆ? ದಾಂಪತ್ಯ ಬದುಕಿಗೆ ಸ್ಮಾರ್ಟ್‌ಫೋನ್‌ಗಳು ಹೇಗೆ ಕೊಕ್ಕೆ ಹಾಕುತ್ತಿವೆ? ಸಮರಸ ಜೀವನಕ್ಕೆ ಮೊಬೈಲ್ ಅಡ್ಡಗಾಲು ಹಾಕುತ್ತಿರುವುದು ಹೇಗೆ ಎಂಬುದನ್ನು ಈ ಸಮೀಕ್ಷೆಯ ಮೂಲಕ ತಿಳಿದುಕೊಳ್ಳಿ.

ಮನಸು ಮುರಿಯುವುದೇ ಮೊಬೈಲ್ ಬಳಕೆ?

ಮನಸು ಮುರಿಯುವುದೇ ಮೊಬೈಲ್ ಬಳಕೆ?

ಅತಿಯಾದ ಮೊಬೈಲ್ ಬಳಕೆಯು ದಂಪತಿಗಳ ಮನಸು ಮುರಿಯುವಂತೆ ಮಾಡುತ್ತದೆಯೇ ಎಂಬ ಅನುಮಾನಗಳನ್ನು ಹೆಚ್ಚುವಂತೆ ಮಾಡಿದೆ. ಈ ಸಂಬಂಧ ಅಧ್ಯಯನಕ್ಕಾಗಿ ಕಂಪನಿಯು ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ, ಹೈದರಾಬಾದ್, ಬೆಂಗಳೂರು, ಅಹಮದಾಬಾದ್ ಮತ್ತು ಪುಣೆಯಾದ್ಯಂತ 1000ಕ್ಕೂ ಹೆಚ್ಚು ಗ್ರಾಹಕರನ್ನು ಸಮೀಕ್ಷೆಯಲ್ಲಿ ಪ್ರಶ್ನೆ ಮಾಡಲಾಗಿದೆ. ಈ ಪೈಕಿ ಹೈದರಾಬಾದ್, ಬೆಂಗಳೂರು, ಅಹಮದಾಬಾದ್ ಮತ್ತು ಪುಣೆಯಲ್ಲಿ ಸ್ಮಾರ್ಟ್‌ಫೋನ್ ಸಾಧನಗಳ ಅತಿಯಾದ ಬಳಕೆಯಿಂದಾಗಿ ವಿವಾಹಿತ ದಂಪತಿಗಳ ಸಂಬಂಧಗಳಲ್ಲಿನ ನಡವಳಿಕೆ ಮತ್ತು ಮಾನಸಿಕ ಬದಲಾವಣೆಗಳ ಮೇಲೆ ಅಧ್ಯಯನವನ್ನು ಕೇಂದ್ರೀಕರಿಸಲಾಗಿದೆ.

ಹೆಂಡತಿಯೂ ಇರಲಿ, ಮೊಬೈಲ್ ಇರಲಿ!

ಹೆಂಡತಿಯೂ ಇರಲಿ, ಮೊಬೈಲ್ ಇರಲಿ!

ತಮ್ಮ ಜೀವನ ಸಂಗಾತಿ ಜೊತೆಗಿರುವ ಸಂದರ್ಭಗಳಲ್ಲೂ ಸ್ಮಾರ್ಟ್‌ಫೋನ್‌ಗಳಿಗೆ ಅಂಟಿಕೊಳ್ಳುವ ದಂಪತಿಗಳಿದ್ದಾರೆ. ಈ ಕುರಿತು ಅಧ್ಯಯನದ ಸಮಯದಲ್ಲಿ ಸಮೀಕ್ಷೆಗೆ ಒಳಗಾದ ಶೇ.67ರಷ್ಟು ಭಾರತೀಯ ವಿವಾಹಿತ ದಂಪತಿಗಳು ತಮ್ಮ ಸಂಗಾತಿಯೊಂದಿಗೆ ಸಮಯ ಕಳೆಯುವಾಗಲೂ ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಬಳಸುವುದಾಗಿ ಒಪ್ಪಿಕೊಂಡಿದ್ದಾರೆ. ಈ ಮಧ್ಯೆ ಪ್ರತಿಕ್ರಿಯಿಸಿದವರಲ್ಲಿ ಶೇಕಡಾ 66ರಷ್ಟು ಜನರು ಸ್ಮಾರ್ಟ್‌ಫೋನ್‌ಗಳಿಂದ ತಮ್ಮ ಸಂಗಾತಿಯೊಂದಿಗಿನ ಸಂಬಂಧವನ್ನು ದುರ್ಬಲಗೊಳಿಸಿದ್ದಾರೆ ಎಂದು ಬಹಿರಂಗವಾಗಿ ಹೇಳಿದ್ದಾರೆ.

ಮೊಬೈಲ್ ಓಕೆ, ಮಡದಿ ಇನ್ಯಾಕೆ?

ಮೊಬೈಲ್ ಓಕೆ, ಮಡದಿ ಇನ್ಯಾಕೆ?

ಸುಮಾರು ಶೇ.70 ಪ್ರತಿಶತ ಜನರು ತಮ್ಮ ಸ್ಮಾರ್ಟ್‌ಫೋನ್ ಬಳಸುವಾಗ ಸಂಗಾತಿಯು ಅಡ್ಡಿಪಡಿಸಿದರೆ ಅವರು ಕಿರಿಕಿರಿಗೊಳ್ಳುತ್ತಾರೆ ಎಂದು ಒಪ್ಪಿಕೊಂಡಿದ್ದಾರೆ. ವಾಸ್ತವವಾಗಿ ಶೇ.69 ಪ್ರತಿಶತದಷ್ಟು ದಂಪತಿಗಳು ತಮ್ಮ ಸಂಗಾತಿಯೊಂದಿಗೆ ಮಾತನಾಡುವಾಗ ಅವರ ಬಗ್ಗೆ ಗಮನ ಹರಿಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಈ ಸಂಬಂಧ ಪ್ರತಿಕ್ರಿಯೆ ನೀಡಿದವರಲ್ಲಿ ಶೇ.84 ಪ್ರತಿಶತದಷ್ಟು ಜನರು ತಮ್ಮ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸುತ್ತಾರೆ. ವೈಯಕ್ತಿಕ ಹೊಂದಾಣಿಕೆಯು ಹೆಚ್ಚು ವಿಶ್ರಾಂತಿ ನೀಡುತ್ತವೆ. ಆದರೆ ಅವರು ಕಡಿಮೆ ಸಮಯವನ್ನು ಕಳೆಯುತ್ತಾರೆ ಎಂದು ಅಧ್ಯಯನವು ಬಹಿರಂಗಪಡಿಸಿದೆ.

ಸ್ಮಾರ್ಟ್‌ಫೋನ್‌ಗಳಿಂದ ಗಂಡ-ಹೆಂಡತಿ ಸಂಬಂಧ ಹಾಳು!

ಸ್ಮಾರ್ಟ್‌ಫೋನ್‌ಗಳಿಂದ ಗಂಡ-ಹೆಂಡತಿ ಸಂಬಂಧ ಹಾಳು!

ಸ್ಮಾರ್ಟ್‌ಫೋನ್‌ಗಳ ಬಳಕೆಯಿಂದ ಎದುರಿಸುತ್ತಿರುವ ಸಮಸ್ಯೆಗಳನ್ನು ಜನರು ಒಪ್ಪಿಕೊಂಡಿದ್ದು, ಬದಲಾವಣೆಗೆ ಸಿದ್ಧರಾಗುತ್ತಿದ್ದಾರೆ. ಶೇ.88ರಷ್ಟು ಮಂದಿ ಸ್ಮಾರ್ಟ್‌ಫೋನ್‌ಗಳ ಹೆಚ್ಚಿದ ಬಳಕೆಯಿಂದ ತಮ್ಮ ಸಂಗಾತಿಯೊಂದಿಗಿನ ಸಂಬಂಧವನ್ನು ಹಾಳು ಮಾಡಿಕೊಳ್ಳುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಶೇ.90ರಷ್ಟು ಜನರು ತಮ್ಮ ಸಂಗಾತಿಯೊಂದಿಗೆ ಅರ್ಥಪೂರ್ಣ ಮಾತುಕತೆಗೆ ಹೆಚ್ಚು ಬ್ರೇಕ್ ಹಾಕಿದಂತೆ ಆಗುತ್ತದೆ.

ಈ ಅಧ್ಯಯನದ ಕುರಿತು ಮಾತನಾಡಿದ ವಿವೋ ಇಂಡಿಯಾದ ಬ್ರ್ಯಾಂಡ್ ಸ್ಟ್ರಾಟಜಿ ಮುಖ್ಯಸ್ಥ ಯೋಗೇಂದ್ರ ಶ್ರೀರಾಮುಲು, "ಇಂದಿನ ಜೀವನದಲ್ಲಿ ಸ್ಮಾರ್ಟ್‌ಫೋನ್‌ನ ಮಹತ್ವವು ನಿರ್ವಿವಾದವಾಗಿದೆ. ಆದರೆ ಅತಿಯಾದ ಬಳಕೆಯ ಬಗ್ಗೆ ಬಳಕೆದಾರರು ಜಾಗರೂಕರಾಗಿರಬೇಕು. ಜವಾಬ್ದಾರಿಯುತ ಬ್ರ್ಯಾಂಡ್ ಆಗಿ, ನಮ್ಮ ಪ್ರೀತಿಪಾತ್ರರೊಂದಿಗೆ ಸಮಯ ಕಳೆಯುವುದರ ಪ್ರಾಮುಖ್ಯತೆಯನ್ನು ನಾವು ಒತ್ತಿಹೇಳುತ್ತೇವೆ," ಎಂದರು.

ಮೊಬೈಲ್ ಬಳಕೆ ಕೆಟ್ಟದ್ದಲ್ಲ, ಅತಿಯಾದ ಬಳಕೆ ಒಳ್ಳೆಯದ್ದಲ್ಲ!

ಮೊಬೈಲ್ ಬಳಕೆ ಕೆಟ್ಟದ್ದಲ್ಲ, ಅತಿಯಾದ ಬಳಕೆ ಒಳ್ಳೆಯದ್ದಲ್ಲ!

ಸ್ಮಾರ್ಟ್‌ಫೋನ್‌ಗಳು ಬಹಳಷ್ಟು ವಿಷಯಗಳಲ್ಲಿ ಸಹಾಯ ಮಾಡುತ್ತವೆ. ತಂತ್ರಜ್ಞಾನದ ಯುಗವನ್ನು ಗಮನಿಸಿದರೆ ಜನರು ಗ್ಯಾಜೆಟ್ ಅನ್ನು ಬಳಸುವುದರಿಂದ ತಮ್ಮನ್ನು ಸಂಪೂರ್ಣವಾಗಿ ನಿರ್ಬಂಧಿಸಲು ಯಾವುದೇ ಮಾರ್ಗಗಳಿಲ್ಲ. ಆದರೆ ಅದಕ್ಕೆ ಅಂಟಿಕೊಳ್ಳುವುದರಿಂದ ನಿಯಂತ್ರಿಸುವುದು ಮತ್ತು ಎಲ್ಲರಿಗೂ ಸಮಯವನ್ನು ಮೀಸಲಿಡುವುದು ಅವಶ್ಯಕವಾಗಿದೆ.

ಅಧ್ಯಯನದ ಪ್ರಕಾರ, "ಶೇ.89 ಪ್ರತಿಶತದಷ್ಟು ಜನರು ತಮ್ಮ ಸಂಗಾತಿಯೊಂದಿಗೆ ತಮ್ಮ ಬಾಂಧವ್ಯವನ್ನು ಬಲಪಡಿಸಲು ಸ್ಮಾರ್ಟ್‌ಫೋನ್‌ಗಳಲ್ಲಿ ಕಳೆಯುವ ಸಮಯವನ್ನು ಕಡಿಮೆ ಮಾಡಲು ಬಯಸುತ್ತಾರೆ. ಮತ್ತೊಂದೆಡೆ ಶೇ.91ರಷ್ಟು ಜನರು ತಮ್ಮ ಸಂಗಾತಿಯೊಂದಿಗೆ ಹೆಚ್ಚು ಸಮಯವನ್ನು ಕಳೆಯುವುದರಿಂದ ಜೀವನದಲ್ಲಿ ತಮ್ಮ ಸಂತೃಪ್ತಿ ಸುಧಾರಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ."

English summary
88% Indian married couples feel smartphone is spoiling their relationship finds Vivo study.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X