ಚಲಿಸುತ್ತಿದ್ದ ಬೈಕ್ ಮೇಲೆ ಯುವ ಜೋಡಿಯ ಮುತ್ತಿನ ಗಮ್ಮತ್ತು- ಕೊನೆಗೆ ತಂದಿದ್ದು ಆಪತ್ತು!

ರಾಜಸ್ಥಾನದ ಅಜ್ಮೀರ್‌ನಲ್ಲಿ ಯುವ ಜೋಡಿಯೊಂದು ಬೈಕ್‌ನಲ್ಲಿ ಅಶ್ಲೀಲವಾಗಿ ವರ್ತಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಜ್ಮೀರ್ ಫೆಬ್ರವರಿ 8: ದೇಶದಲ್ಲಿ ಕಾರು, ಬೈಕ್, ಸೈಕಲ್ ಎನ್ನದೇ ಯುವ ಜೋಡಿಗಳು ಅಸಭ್ಯವಾಗಿ ವರ್ತಿಸುವ ವಿಡಿಯೋಗಳು ಹೆಚ್ಚಾಗಿ ವೈರಲ್ ಆಗುತ್ತಿವೆ. ಸಂಚಾರ ನಿಯಮಗಳನ್ನು ಪಾಲಿಸದೇ ವರ್ತಿಸುತ್ತಿರುವ ಪ್ರೇಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಸದ್ಯದ ವಿಡಿಯೋಗಳಿಂದ ಅಗತ್ಯವಾಗಿದೆ ಎಂದೆನಿಸದೇ ಇರದು. ಲಕ್ನೋ ನಂತರ ರಾಜಸ್ಥಾನದ ಅಜ್ಮೀರ್‌ನಲ್ಲಿ ಯುವ ಜೋಡಿಯೊಂದು ಬೈಕ್‌ನಲ್ಲಿ ಅಶ್ಲೀಲವಾಗಿ ವರ್ತಿಸಿದೆ. ಹಿಂಬದಿ ಸವಾರರು ಈ ದೃಶ್ಯವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ.

ಇತ್ತೀಚೆಗೆ ಬೈಕ್ ಮೇಲೆ ರೋಮ್ಯಾನ್ಸ್ ಮಾಡುವುದು ಟ್ರೆಂಡ್ ಆದಂತಿದೆ. ಯುವ ಜೋಡಿಗಳು ಬೈಕ್ ಮೇಲೆ ಕುಳಿತು ಹೆಲ್ಮೆಟ್ ಕೂಡ ಧರಿಸದೆ ಪ್ರೀತಿಯಲ್ಲಿ ಮುಳುಗಿರುವುದು ಸಾಮಾನ್ಯವಾದಂತೆ ವೈರಲ್ ವಿಡಿಯೋಗಳಿಂದ ಸ್ಪಷ್ಟವಾಗುತ್ತಿದೆ. 5 ಸೆಕೆಂಡುಗಳ ವೈರಲ್ ವಿಡಿಯೋವೊಂದರಲ್ಲಿ ಇದೇ ತರನಾದ ದೃಶ್ಯ ಕಂಡುಬಂದಿದೆ. ಅಜ್ಮೀರ್‌ದ ಕಾಲೇಜು ಕ್ರಾಸ್‌ರೋಡ್ಸ್‌ನಿಂದ ನೌಸರ್ ಕಣಿವೆ ಕಡೆಗೆ ಪ್ರಯಾಣಿಸುವ ರಸ್ತೆಯಲ್ಲಿ ದಂಪತಿ ಪರಸ್ಪರ ತಬ್ಬಿಕೊಂಡು ಪ್ರಯಾಣ ಮಾಡಿದ್ದಾರೆ. ಈ ಘಟನೆ ಸೋಮವಾರ ಫೆಬ್ರವರಿ 6 ರಂದು ನಡೆದಿದೆ ಎನ್ನಲಾಗಿದೆ.

Romance of a young couple on a moving bike: Video!

ವಿಡಿಯೊ ವೈರಲ್ ಆದ ತಕ್ಷಣ, ಅಜ್ಮೀರ್‌ನ ಕ್ರಿಶ್ಚಿಯನ್ ಗಂಜ್ ಪೊಲೀಸ್ ಠಾಣೆಯು ಸವಾರನ ವಿರುದ್ಧ ಐಪಿಸಿ ಸೆಕ್ಷನ್ 336- (ಜೀವಕ್ಕೆ ಅಪಾಯ), 279- (ನಿರ್ಲಕ್ಷ್ಯದ ಕೃತ್ಯ) ಮತ್ತು 294- (ಸಾರ್ವಜನಿಕ ಸ್ಥಳದಲ್ಲಿ) ಅಶ್ಲೀಲ ಕೃತ್ಯ ಎಸಗುವ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಜೊತೆಗೆ ಪೊಲೀಸರು ಬೈಕ್ ಕೂಡ ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಸವಾರನನ್ನು ಫೇ ಸಾಗರ್ ರಸ್ತೆಯ ನಿವಾಸಿ ಸಾಹಿಲ್ ಎಂದು ಗುರುತಿಸಲಾಗಿದೆ.

Romance of a young couple on a moving bike: Video!

ಕಳೆದ ತಿಂಗಳ ಆರಂಭದಲ್ಲಿ, ಲಕ್ನೋದ ನವಾಬ್ಸ್ ನಗರದಲ್ಲಿ ಜೋಡಿ ಸಾರ್ವಜನಿಕವಾಗಿ ಪ್ರದರ್ಶನ ನೀಡುವಂತೆ ಮೈಮರೆತಿದ್ದರು. ಈ ದೃಶ್ಯ ಲಕ್ನೋದ ಐಷಾರಾಮಿ ಪ್ರದೇಶವಾದ ಲೋಹಿಯಾ ಪಥ್‌ನಿಂದ ತೆಗೆಯಲಾಗಿದೆ ಎಂದು ಹೇಳಲಾಗಿದೆ. ವೈರಲ್ ಕ್ಲಿಪ್‌ನಲ್ಲಿ, ದಂಪತಿಗಳು ಕಾರಿನ ಸನ್‌ರೂಫ್‌ನಲ್ಲಿ ರೋಮ್ಯಾನ್ಸ್ ಮಾಡುತ್ತಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+