New year 2024: ಬ್ರಿಗೇಡ್ ರೋಡ್‌ನಲ್ಲಿ ಜೋಡಿಗಳಿಗೆ ಸೇಫ್ಟಿ ವ್ಯವಸ್ಥೆ- ಏನಿದು?
ಬೆಂಗಳೂರು, ಡಿಸೆಂಬರ್, 15: 2024 ಅನ್ನು ಸ್ವಾಗತ ಮಾಡಲು ಕೇಲವೇ ದಿನಗಳು ಮಾತ್ರ ಬಾಕಿ ಇವೆ. ಅದರಲ್ಲೂ ಹೊಸವರ್ಷಕ್ಕೆ ಬೆಂಗಳೂರಿನ ಈ ರೋಡ್‌ಗಳೇ ಹೈಲೇಟ್ಸ್ ಆಗಿವೆ. ಈ ರಸ್ತೆಗಳಲ್ಲೇ ದೊಡ್ಡ ಮಟ್ಟದಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಮಾಡುತ್ತಾರೆ. ಅಲ್ಲದೆ ಈ ಸ್ಥಳಗಳಲ್ಲಿ ಕಳೆದ ವರ್ಷ ಕೆಲವು ಕಿರಿಕ್‌ಗಳು ಕೂಡ ಆಗಿರುವ ವರದಿಯಾಗಿವೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ, ಅದರಲ್ಲೂ ಜೋಡಿಗಳಿಗೆ ಯಾವುದೇ ತೊಂದರೆಯಾಗದಂತೆ ಈ ರಸ್ತೆಯಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷ ಸಂಭ್ರಮಾಚರಣೆಗೆ ಹೋಗುವ ಜೋಡಿಗಳಿಗೆ ಬೆಂಗಳೂರು ಪೊಲೀಸರು ಸಿಹಿ ಸುದ್ದಿ ನೀಡಲು ಪ್ಲಾನ್ ಮಾಡಿಕೊಂಡಿದ್ದಾರೆ. ಬ್ರಿಗೇಡ್ ರೋಡ್‌ನಲ್ಲಿ ಜೋಡಿಗೆ ಈ ಬಾರಿ ಪ್ರತ್ಯೇಕವಾದ ಮಾರ್ಗ ಮಾಡಿಕೊಟ್ಟು ಸಂಭ್ರಮಾಚರಣೆಗೆ ಅನುವು ಮಾಡಿಕೊಡಲು ಬೆಂಗಳೂರು ಪೊಲೀಸರು ನಿರ್ಧಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಬಾರಿ ಹೊಸ ವರ್ಷ ಸಂಭ್ರಮಾಚರಣೆ ವೇಳೆ ಕೆಲ ಪುಂಡರು ಜನರ ಗುಂಪಿನಲ್ಲಿ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ್ದು, ಅಲ್ಲದೆ ಅಲ್ಲಲ್ಲಿ ಸಣ್ಣಪುಟ್ಟ ಅಹಿತಕರ ಘಟನೆಗಳು ನಡೆದ ಉದಾಹರಣೆಗಳಿವೆ.
ಆದ್ದರಿಂದ ಈ ಬಾರಿ ಹೊಸ ವರ್ಷ ಸಂಭ್ರಮಾಚರಣೆಗೆ ಬರುವ ಜೋಡಿಗೆಂದೇ ಪ್ರತ್ಯೇಕ ಮಾರ್ಗ ಮಾಡಿ ಅಲ್ಲಿಯೇ ಹೊಸ ವರ್ಷ ಸಂಭ್ರಮಾಚರಣೆ ಮಾಡಿಕೊಳ್ಳಲು ವಿಶೇಷ ವ್ಯವಸ್ಥೆ ಕಲ್ಪಿಸಲು ಚಿಂತನೆ ನಡೆಸಲಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಪೊಲೀಸ್ ಆಯುಕ್ತರಿಂದ ಪ್ರಮುಖ ಸೂಚನೆಗಳು
ಹೊಸ ವರ್ಷ ಸಮೀಪದಲ್ಲಿರುವಾಗಲೇ ಬೆಂಗಳೂರಿನಲ್ಲಿ ಡ್ರಗ್ಸ್ ದಂಧೆ ಹೆಚ್ಚಾಗಿದೆ. ಈ ವರ್ಷ ದಾಖಲೆ ಮಟ್ಟದಲ್ಲಿ ಪೊಲೀಸರು ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ದಿನೇ ದಿನೇ ಹೆಚ್ಚು ಪ್ರಮಾಣದಲ್ಲಿ ಡ್ರಗ್ಸ್ ಸಪ್ಲೈ ಆಗುತ್ತಿದೆದೆ. ಹೀಗಾಗಿ ನಗರ ಪೊಲೀಸ್ ಆಯುಕ್ತರು ಸಿಟಿ ಪೊಲೀಸರಿಗೆ ಹೊಸ ಟಾಸ್ಕ್ ನೀಡಿದ್ದಾರೆ. ಗಾಂಜಾ ಹಾಗೂ ಡ್ರಗ್ಸ್ ಹೆಚ್ಚಾಗಿ ಸಪ್ಲೈ ಆಗುವ ಸ್ಥಳಗಳ ಮಾಹಿತಿ ಕಲೆ ಹಾಕಲು ಸೂಚನೆ ನೀಡಿದ್ದಾರೆ.
ಈಗಾಗಲೇ ಸೆಂಟ್ರಲ್ ಜೈಲಿನಿಂದ ಒಂದೇ ತಿಂಗಳಲ್ಲಿ 103 ಮಂದಿ ಫೆಡ್ಲರ್ಸ್ ಬಿಡುಗಡೆ ಆಗಿದ್ದಾರೆ. ರಿಲೀಸ್ ಆದವರಲ್ಲಿ 12 ಮಂದಿ ನೈಜೀರಿಯನ್ ಪ್ರಜೆಗಳಿದ್ದಾರೆ. ರಿಲೀಸ್ ಆದವರ ಮೇಲೆ ನಿಗಾ ಇಡಲು ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ ಅವರು ಸೂಚನೆ ನೀಡಿದ್ದಾರೆ. ಆಯಾ ವಿಭಾಗದಲ್ಲಿ ಬಿಡುಗಡೆ ಆಗಿ ಬಂದಿರುವ ಡ್ರಗ್ ಫೆಡ್ಲರ್ಗಳ ಲಿಸ್ಟ್ ಮಾಡಲು ಇನ್ಸ್ಪೆಕ್ಟರ್ಗಳಿಗೆ ತಿಳಿಸಲಾಗಿದೆ.
ಅವರನ್ನು ಸ್ಟೇಷನ್‌ಗೆ ಕರೆಸಿ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ಕೊಡಿ. ಪ್ರಮುಖವಾಗಿ ನೈಜೀರಿಯನ್ ಪ್ರಜೆಗಳು ವಾಸವಿರುವ ಸ್ಥಳಗಳಲ್ಲಿ ಮಫ್ತಿ ಕಾರ್ಯಾಚರಣೆ ಮಾಡಿ. ರೆಸಾರ್ಟ್, ರೇವ ಪಾರ್ಟಿ ಸ್ಥಳ, ಫಾರ್ಮ್ ಹೌಸ್, ಸ್ಟಾರ್ ಹೋಟೆಲ್, ಪಬ್ ಬಾರ್ಗಳ ಮಾಲೀಕರನ್ನ ಕರೆಸಿ ಎಚ್ಚರಿಕೆ ನೀಡಿ ಎಂದು ಸೂಚಿಸಿದ್ದಾರೆ.












Click it and Unblock the Notifications