30 ವರ್ಷಗಳ ನಂತರ ಒಂದಾದ ಪ್ರೇಮಿಗಳು: ಜಾಲಿ ರೈಡ್‌ನಲ್ಲಿರುವ ಜೋಡಿಯ ಇಂಟ್ರಸ್ಟಿಂಗ್ ಸ್ಟೋರಿ!
ಹುಬ್ಬಳ್ಳಿ, ಮೇ 21: ಪ್ರೀತಿ ಮಾಯೆ ಹುಷಾರು ಈ ಹಾಡನ್ನು ಪ್ರತಿಯೊಬ್ಬರು ಕೇಳಿರುತ್ತಾರೆ. ಪ್ರೀತಿ ಎಂಬುದೇ ಹಾಗೆ ಯಾವಾಗ ಎಲ್ಲಿ ಹುಟ್ಟತ್ತದೆ, ಎಲ್ಲಿ ಅಂತ್ಯ ಆಗತ್ತದೆ ಅಂತಾ, ಮತ್ತೆ ಮರಳಿ ಎಲ್ಲಿ ಚಿಗುರೊಡೆಯತ್ತದೆ ಅಂತಾ ಹೇಳೋದು ತೀರಾ ಕಷ್ಟ. ಪ್ರೀತಿಗೆ ಯಾವುದೇ ಜಾತಿ, ವಯಸ್ಸು, ಬೇಧ ಎಂಬುದು ಇಲ್ಲವೇ ಇಲ್ಲ. ಹೀಗಾಗಿ ಪ್ರೀತಿ ಎನ್ನುವುದೇ ಒಂಥರಾ ಮಾಯೆ.
ಒಮ್ಮೆ ನಾವು ಜೀವನದಲ್ಲಿ ಪ್ರೀತಿ ಮಾಡಿದರೆ ಅದನ್ನಾ ಮರಿಬೇಕು ಅಂದರೆ ನಮ್ಮ ಉಸಿರು ನಿಂತ ಮೇಲೆಯೇ ಹಾಗೆಯೇ ಇಲ್ಲೊಂದು ಜೋಡಿ ಕಾಲೇಜು ದಿನಗಳಲ್ಲಿ ಪರಸ್ಪರ ಮನಸಾರೆ ಪ್ರೀತಿ ಮಾಡಿದ್ದರು. ಆದರೆ ಎರಡು ಕುಟುಂಬಗಳ ನಡುವೆ ಭಿನ್ನಾಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಇಬ್ಬರು ಕೂಡಾ ಬೇರೆ ಬೇರೆ ಮದುವೆಯಾಗಿ ದೂರಾಗಿದ್ದರು. ಆದರೆ ಇದೆಲ್ಲ ಕಳೆದು 30 ವರ್ಸದ ನಂತರದಲ್ಲಿ ಮತ್ತೆ ಈ ಪ್ರೇಮಿಗಳು ಒಂದಾಗಿದ್ದು ಇದೀಗ ಮತ್ತೆ ಪ್ರೀತಿ ಎಂಬ ಪ್ರೇಮಕೋಕದಲ್ಲಿ ಸ್ವಚ್ಛಂದವಾಗಿ ಹಾರಡುತ್ತಿದ್ದಾರೆ.

ಇಯಾನ್ ಹಾಗೂ ಹೇಲನ್ ಅಂತಾ ತೈವಾನ್ ದೇಶದ ಕೀಲುಂಗ್ ನಗರದವರು ಇವರಿಬ್ಬರ ವಯಸ್ಸು 60. ಕಳೆದ ಮೂವತ್ತು ವರ್ಷದ ಹಿಂದೆ ಕಾಲೇಜು ಸಮಯದಲ್ಲಿ ಇವರಿಬ್ಬರ ನಡುವೆ ಪ್ರೇಮಾಂಕುರ ಆಗಿತ್ತು. ಆದರೆ ಮನೆಯಲ್ಲಿ ಇವರ ಪ್ರೀತಿಗೆ ಒಪ್ಪದೆ ಇದ್ದಾಗ ಇಬ್ಬರು ಬೇರೆ ಬೇರೆ ಮದುವೆ ಆಗಿ ದೂರವಾಗಿದ್ದರು, ಇಷ್ಟೆಲ್ಲ ಕಳೆದರು ಕೂಡಾ ಇವರ ನಡುವೆ ಇದ್ದ ಪ್ರೀತಿ ಮಾತ್ರ ಕಡಿಮೆ ಆಗದ ಕಾರಣ ಇದೀಗ ಮೂವತ್ತು ವರ್ಷಗಳ ನಂತರ ಯಾರ ಏನು ಅಂದುಕೊಂಡರೂ ಪರವಾಗಿಲ್ಲ ನಾವು ಜೊತೆಯಾಗಿಯೇ ಇರೋಣಾ ಅಂತಾ ಮತ್ತೆ ಒಂದಾಗಿ ಪ್ರೇಮಲೋಕದಲ್ಲಿ ದೇಶ ದೇಶ ಸುತ್ತುತ್ತಿದ್ದಾರೆ.
ಸದ್ಯ ಈ ಜೋಡಿ ಇದೀಗ ತೈವಾನ್ ದೇಶದಿಂದ ಭಾರತಕ್ಕೆ ಬಂದಿದ್ದು, ಭಾರತದಲ್ಲಿನ ಪ್ರಸಿದ್ಧ ಸ್ಥಳಗಳನ್ನು ನೋಡಲು ಬೈಕ್‌ನಲ್ಲಿ ಪ್ರತಿದಿನ 8 ಗಂಟೆ ಸವಾರಿ ಮಾಡುತ್ತಿದ್ದಾರೆ. ಇಂಡಿಯಾ ಅಂದ್ರೆ ನಮಗೆ ತುಂಬಾ ಇಷ್ಟ ಅದರಲ್ಲೂ ಗೋವಾ, ಹಂಪಿ,ಹಾಗೂ ಇನ್ನಿತರ ಪ್ರಮುಖ ಸ್ಥಳಗಳನ್ನು ನೋಡಲು ನಾವು ಉತ್ಸುಕರಾಗಿದ್ದೇವೆ. ನಮಗೆ ವಯಸ್ಸಾಗಿದೆ ಹೊರತು ನಮ್ಮ ಪ್ರೀತಿಗಲ್ಲ ಅಂತಾ ಇಯಾನ್ ಪ್ರಿಯತಮೆ ಹೇಲನ್ ಹೇಳಿದ್ದಾರೆ.

ಪ್ರೀತಿಗೆ ಸಾವಿಲ್ಲ ಅದಕ್ಕೆ ಯಾವುದೇ ರೀತಿಯಾದ ಜಾತಿ, ಧರ್ಮ, ವಯಸ್ಸಿನ, ಬೇಧವಿಲ್ಲ ಎಂಬುದನ್ನು ಈ ಜೋಡಿಗಳು ಮತ್ತೆ ಸಾಬೀತು ಮಾಡಿದ್ದು, ಇದೀಗ ಇವರು ಹಮ್ಮಿಕೊಂಡಿರುವ ಪ್ರೇಮಲೋಕದ ಪಯಣಕ್ಕೆ ಯಾವುದೇ ಅಡ್ಡಿ ಆಂತಕ ಇರದೇ ಸಾಗಲಿ ಎನ್ನುವುದೇ ಎಲ್ಲರ ಆಶಯ.












Click it and Unblock the Notifications