Last night: ಫಸ್ಟ್ ನೈಟ್ ರೂಮಿಗೆ ಹೋದ ನವ ದಂಪತಿ ನಿಗೂಢ ಸಾವು.. ಡೆತ್ ರಿಪೋರ್ಟ್‌ನಲ್ಲಿತ್ತು ಶಾಕಿಂಗ್ ಸುದ್ದಿ
ಲಕ್ನೋ ಜೂನ್ 5: ಉತ್ತರ ಪ್ರದೇಶ ರಾಜ್ಯದಲ್ಲಿ ಮೊದಲ ರಾತ್ರಿಯ ಕೊಠಡಿಯಲ್ಲಿ ನವ ದಂಪತಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಭಾರೀ ಆಘಾತವನ್ನುಂಟು ಮಾಡಿದೆ. ಅವರ ಸಾವಿಗೆ ಕಾರಣವೇನು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮೃತರನ್ನು 22 ವರ್ಷದ ಪ್ರತಾಪ್ ಯಾದವ್ ಮತ್ತು 20 ವರ್ಷದ ಪುಷ್ಪಾ ಎಂದು ಗುರುತಿಸಲಾಗಿದೆ. ಪ್ರತಾಪ್ ಯಾದವ್ ಉತ್ತರ ಪ್ರದೇಶದ ಬೈರಾಚ್‌ನವರು. ಇವರಿಬ್ಬರು ಮೇ 30 ರಂದು ವಿವಾಹವಾದರು. ಮೊದಲರಾತ್ರಿ ನಿಗಧಿಯಾಗಿತ್ತು. ಇವರಿಬ್ಬರು ಫಸ್ಟ್ ನೈಟ್ ರೂಮಿಗೆ ಹೋಗಿದ್ದು ಅಷ್ಟೆ ಮತ್ತೆ ವಾಪಸ್ ಬರಲೇ ಇಲ್ಲ.

ಮರುದಿನ ಬೆಳಗ್ಗೆ ಬಹಳ ಹೊತ್ತಾದರೂ ಇಬ್ಬರೂ ಹೊರಗೆ ಬರದ ಕಾರಣ ಸಂಬಂಧಿಕರು ಗಾಬರಿಯಾಗಿದ್ದಾರೆ. ಬಳಿಕ ಅವರು ಕೂಗಿ ಕರೆದಿದ್ದಾರೆ. ಇಬ್ಬರೂ ಮಾತನಾಡಿಲ್ಲ. ಮದುವೆ ಮನೆಯಲ್ಲಿ ಇದ್ದ ಸಂಬಂಧಿಕರಿಗೆ ಭಯ ಹೆಚ್ಚಾಗಿದೆ. ಏನೇ ಮಾಡಿದರೂ ದಂಪತಿಗಳು ಪ್ರತಿಕ್ರಿಯೆ ನೀಡಿಲ್ಲ. ಭಯಗೊಂಡ ಪೋಷಕರು ಬೇರೆ ದಾರಿ ಇಲ್ಲದೆ ಬಾಗಿಲನ್ನು ಒಡೆದಿದ್ದಾರೆ.
ಬಾಗಿಲು ಒಡೆದು ನೋಡಿದಾಗ ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ. ಸಂಬಂಧಿಕರು ತಕ್ಷಣ ದಂಪತಿಯನ್ನು ಆಸ್ಪತ್ರೆಗೆ ಕರೆದೊಯ್ದು ನೋಡಿದಾಗ ಅವರು ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಹೃದಯಾಘಾತದಿಂದ ಸಾವನ್ನಪ್ಪಿದ್ದರೂ ಇಬ್ಬರಿಗೂ ಏಕಕಾಲದಲ್ಲಿ ಹೃದಯಾಘಾತವಾಗಿದ್ದು ಹೇಗೆ ಎಂಬ ಅನುಮಾನ ಮೂಡಿದೆ. ಅಲ್ಲದೆ, ರಾತ್ರಿಯ ಊಟದಲ್ಲಿ ಇಬ್ಬರಿಗೆ ಯಾರಾದರೂ ವಿಷ ಬೆರೆಸಿದ್ದಾರೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ವೇಳೆ ದಂಪತಿಯ ಆಂತರಿಕ ಅಂಗಾಂಗಗಳನ್ನು ಪೊಲೀಸರು ಪರೀಕ್ಷೆಗಾಗಿ ಸಂಗ್ರಹಿಸಿದ್ದಾರೆ. ಮತ್ತು ಕೊಠಡಿಯನ್ನು ಪರಿಶೀಲಿಸಿದಾಗ ಸೀಲಿಂಗ್ ಫ್ಯಾನ್ ಇಲ್ಲದಿರುವುದು ಕಂಡುಬಂದಿದೆ. ಅಲ್ಲದೆ, ವೆಂಟಿಲೇಷನ್ ಕೊರತೆಯಿಂದ ಉಸಿರುಗಟ್ಟಿ ಸಾವನ್ನಪ್ಪಿರಬಹುದು ಎಂಬ ದೃಷ್ಟಿಯಿಂದಲೂ ತನಿಖೆ ನಡೆಯುತ್ತಿದೆ.
ಇಬ್ಬರ ಮರಣೋತ್ತರ ಪರೀಕ್ಷೆಯ ವರದಿಯನ್ನು ಅವಲೋಕಿಸಿದಾಗ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಹಾಗಾಗಿ ಗಾಳಿಯಾಡದ ಕೊಠಡಿಯಲ್ಲಿ ಉಸಿರುಗಟ್ಟಿ ಇಬ್ಬರೂ ಸಾವನ್ನಪ್ಪಿರಬಹುದು ಎನ್ನಲಾಗಿದೆ. ಅವರ ದೇಹದಲ್ಲಿ ಯಾವುದೇ ಗಾಯಗಳಿಲ್ಲ ಅಥವಾ ಇಬ್ಬರನ್ನು ಬಲವಂತವಾಗಿ ಕೋಣೆಗೆ ತಳ್ಳಲಾಗಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನವವಿವಾಹಿತರು ತಮ್ಮ ಜೀವನವನ್ನು ಪ್ರಾರಂಭಿಸುವ ಮೊದಲು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಆದರೆ ಅವರ ಸಂಬಂಧಿಕರು ಯಾರೂ ದೂರು ದಾಖಲಿಸಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮೊದಲ ರಾತ್ರಿ ಕೋಣೆಗೆ ಹೋದ ದಂಪತಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಭಾರೀ ದುರಂತಕ್ಕೆ ಕಾರಣವಾಗಿದೆ.
ಯುಪಿಯಲ್ಲಿ ಹೃದಯಾಘಾತದಿಂದ ಹಲವಾರು ಜನ ಸಾವು
ಉತ್ತರ ಪ್ರದೇಶದ ಕಾನ್ಪುರದಲ್ಲಿ ಒಂದೇ ದಿನದಲ್ಲಿ (ಜನವರಿ 6) 25 ಮಂದಿಗೆ ಹೃದಯಾಘಾತ ಮತ್ತು ಬ್ರೈನ್ ಸ್ಟ್ರೋಕ್‌ನಿಂದ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದಲ್ಲಿ ಚಳಿಗಾಳಿ ದಿನದಿಂದ ದಿನಕ್ಕೆ ಮಾರಕವಾಗಿ ಕಾನ್ಪುರದಲ್ಲಿ ಜನವರಿ 6ರಂದು 25 ಮಂದಿ ಹೃದಯಾಘಾತ ಮತ್ತು ಬ್ರೈನ್ ಸ್ಟ್ರೋಕ್‌ನಿಂದ ಸಾವನ್ನಪ್ಪಿದ್ದಾರೆ. ಇವರಲ್ಲಿ ಹದಿನೇಳು ಮಂದಿ ವೈದ್ಯಕೀಯ ನೆರವು ನೀಡುವ ಮುನ್ನವೇ ಸಾವನ್ನಪ್ಪಿದ್ದರು.
ವೈದ್ಯರ ಪ್ರಕಾರ, ಶೀತದ ಗಾಳಿಯಿಂದ ರಕ್ತದೊತ್ತಡವು ಹಠಾತ್ ಹೆಚ್ಚಳವಾಗಿ ರಕ್ತ ಹೆಪ್ಪುಗಟ್ಟುವಿಕೆಯಿಂದ ಹೃದಯಾಘಾತ ಮತ್ತು ಮೆದುಳಿನ ಅಟ್ಯಾಕ್ಗೆ ಕಾರಣವಾಗುತ್ತದೆ. ಹೃದ್ರೋಗ ಸಂಸ್ಥೆಯ ನಿಯಂತ್ರಣ ಕೊಠಡಿಯ ಪ್ರಕಾರ, ಜನವರಿ 6ರಂದು 723 ಹೃದ್ರೋಗಿಗಳು ತುರ್ತು ಮತ್ತು ಒಪಿಡಿಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಈ ಪೈಕಿ 41 ಮಂದಿ ಚಿಂತಾಜನಕ ಸ್ಥಿತಿಯಲ್ಲಿರುವ ರೋಗಿಗಳನ್ನು ದಾಖಲಿಸಲಾಗಿತ್ತು. ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಏಳು ಹೃದ್ರೋಗಿಗಳು ಚಳಿಯಿಂದ ಸಾವನ್ನಪ್ಪಿದ್ದರು.












Click it and Unblock the Notifications