Bengaluru-Mysuru Expressway: ಹೆದ್ದಾರಿಯಲ್ಲಿ ನಿಂತವರ ಮೇಲೆ ದರೊಡೆಕೋರರ ದಾಳಿ, ಹಣ ಚಿನ್ನ ಕಸಿದು ಪರಾರಿ, ಎಚ್ಚರಿಕೆ
ಸೋಮವಾರ ಬೆಳಗ್ಗೆ ದಶಪಥ ರಸ್ತೆ ಮೂಲಕ ಮೈಸೂರಿಗೆ ವಾಪಸ್ಸಾಗುತ್ತಿದ್ದ ದಂಪತಿಗೆ ಅಪಾಯವೊಂದು ಎದುರಾಗಿದೆ. ಹಣ, ಚಿನ್ನಭಾರಣ ಕಳೆದುಕೊಂಡಿದ್ದಾರೆ. ಪ್ರಕರಣ ರಾಮನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಬೆಂಗಳೂರು, ಮಾರ್ಚ್ 15: ಬೆಂಗಳೂರು-ಮೈಸೂರು ಎಪ್ರೆಸ್ ವೇ ಓಡಾವವರೆ ಎಚ್ಚರವಹಿಸಬೇಕು. ಒಂದು ವೇಳೆ ದಶಪಥ ರಸ್ತೆಯಲ್ಲಿ ಹಗಲೇ ಆಗಲಿ, ರಾತ್ರಿ ಹೊತ್ತೇ ಆಗಲಿ ನೀವು ನಿಂತಿದ್ದೆ ಆದರೆ ದರೋಡೆಕೋರರ ದಾಳಿಗೆ ತುತ್ತಾಗಬೇಕಾಗುತ್ತದೆ.
ಹೌದು, ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ಬೆಂಗಳೂರು-ಮೈಸೂರು ಎಪ್ರೆಸ್ ವೇ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಿದೆ. ಇದೀಗ ದರೋಡೆ ವಿಚಾರವಾಗಿ ಮತ್ತೆ ಸುದ್ದಿಯಾಗಿದೆ.

ಬೆಂಗಳೂರು-ಮೈಸೂರು ನೂತನ ಎಕ್ಸ್‌ಪ್ರೆಸ್‌ವೇನಲ್ಲಿ ಕಾರು ಕೆಟ್ಟು ನಿಂತಿದ್ದರಿಂದ ರಸ್ತೆಯಲ್ಲಿ ಸಹಾಯಕ್ಕಾಗಿ ಕಾಯುತ್ತಿದ್ದ ದಂಪತಿಯನ್ನು ದರೋಡೆಕೋರರು ಬೆದರಿಸಿ ಚಿನ್ನಾಭರಣ, ನಗದು ದೋಚಿದ ಘಟನೆ ವರದಿಯಾಗಿದೆ.
ಸೋಮವಾರ ಬೆಳಗ್ಗೆ ದಶಪಥ ರಸ್ತೆ ಮೂಲಕ ತಮ್ಮ ಸ್ನೇಹಿತರೊಬ್ಬರನ್ನು ನಾಯಂಡಹಳ್ಳಿಗೆ ಬಿಡಲು ದಂಪತಿ ಬೆಂಗಳೂರಿಗೆ ಬಂದಿದ್ದರು. ಬಳಿಕ ಮೈಸೂರಿಗೆ ವಾಪಾಸಾಗುತ್ತಿದ್ದರು. ಆಗ ದಶಪಥ ರಸ್ತೆಯಲ್ಲಿ ಕಾರು ಕೆಟ್ಟು ನಿಂತಿದ್ದ ಸ್ಥಳದಲ್ಲಿ ದಂಪತಿ ಕಡೆಗೆ ಸ್ಕೂಟರ್‌ನಲ್ಲಿ ಬಂದ ದುಷ್ಕರ್ಮಿಗಳು, ಚಾಕುವಿನಿಂದ ದಂಪತಿಗೆ ಬೆದರಿಸಿದ್ದಾರೆ. ಬಳಿಕ ಅವರ ಬಳಿ ಇದ್ದ 2.5 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದು ಹಣ ದೋಚಿ ಪರಾರಿಯಾದ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ಬಳಿ ಹೆದ್ದಾರಿಯಲ್ಲಿ ನಡೆದಿದೆ.

ಘಟನೆ ಬಳಿಕ ಸಂತ್ರಸ್ತರು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಸಹಾಯವಾಣಿಗೆ ಕರೆ ಮಾಡಿದ್ದಾರೆ, ಪ್ರಯೋಜನವಾಗಿಲ್ಲ. ನಂತರ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಪ್ರಕರಣ ರಾಮನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ. ರಸ್ತೆಯಲ್ಲೇ ಕೆಟ್ಟು ಅಡ್ಡಾ ದಿಡ್ಡಿ ನಿಂತಿದ್ದ ಕಾರನ್ನು ರಸ್ತೆಬದಿಗೆ ಎಳೆಯಲು ಸಹ ಯಾರು ಇಲ್ಲದೇ ದಂಪತಿ ವೈದ್ಯಕೀಯ ಪ್ರತಿನಿಧಿ ಲೋಹಿತ್ ರಾವ್ ಅವರ ಪತ್ನಿ ಮತ್ತು ತಂತ್ರಜ್ಞ ನವೀನ್ ಪರದಾಡಿದ್ದಾರೆ.
ಬೆಳಗಿನ ಜಾವ ಆಗಿದ್ದರಿಂದ ಬೀದಿ ದೀಪಗಳು ಸಮರ್ಪಕವಾಗಿರಲಿಲ್ಲ. ಗಸ್ತಿನಲ್ಲಿ ಯಾರು ಇರಲಿಲ್ಲ ಎನ್ನಲಾಗಿದೆ. ಸುರಕ್ಷತಾ ಕೊರತೆಯಿಂದಾಗಿ ಘಟನೆ ಸಂಭವಿಸಿದೆ. ಆರೋಪಿಗಳು ಸರ್ವಿಸ್ ರಸ್ತೆಯಿಂದ ಹೆದ್ದಾರಿ ಪ್ರವೇಶಿಸಿ ಬಳಿಕ ಕಾರಿನ ಬಳಿಗೆ ಬಂದು ವಿಂಡ್‌ಶೀಲ್ಡ್‌ಗೆ ಬಡಿಯಲು ಪ್ರಾರಂಭಿಸಿದರು. ಅವರಲ್ಲಿ ಒಬ್ಬರು ಖಾಕಿ ಬಣ್ಣದ ಪ್ಯಾಂಟ್‌ಗಳನ್ನು ಧರಿಸಿದ್ದರಿಂದ, ನಾವು ಅವರನ್ನು ಪೊಲೀಸರು ಎಂದು ತಪ್ಪಾಗಿ ಭಾವಿಸಿ ಕಾರಿನಿಂದ ಕೆಳಗಿಳಿದೆವು ಎಂದು ಲೋಹಿತ್ ರಾವ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನಮಗೆ ಬೇರೆ ಆಯ್ಕೆ ಇರದಿದ್ದರಿಂದ ಎಲ್ಲಾ ಬೆಲೆಬಾಳುವ ವಸ್ತುಗಳನ್ನು ಖದೀಮರಿಗೆ ನೀಡಬೇಕಾಯಿತು ಎಂದು ಅವರು ತಿಳಿಸಿದರು. ಪೊಲೀಸರು ಮೂವರು ಆರೋಪಿಗಳನ್ನು ಹಾಜರುಪಡಿಸಿದ್ದಾರೆ. ಆದರೆ ಅವರನ್ನು ಸಂತ್ರಸ್ತರು ಗುರುತಿಸಲಿಲ್ಲ. ದರೋಡೆ ಮಾಡಿದ ದರೋಡೆ ಕೋರರ ವೃತ್ತಿಪರರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications