TVK ವಿಜಯ್ ಪಕ್ಷದಲ್ಲೇ ಲಂಚದಾಟ? ಗುತ್ತಿಗೆದಾರರಿಂದ ₹1.30 ಲಕ್ಷ ಪಡೆದ ನಾಯಕ; ವಿಡಿಯೋ ವೈರಲ್

ಚೆನ್ನೈ: ರಾಜ್ಯವನ್ನು ಭ್ರಷ್ಟಾಚಾರ ಮುಕ್ತಗೊಳಿಸಲಾಗುವುದು. ಯಾರೇ ಭ್ರಷ್ಟಾಚಾರದಲ್ಲಿ ಭಾಗಿಯಾದರೂ ಸಹಿಸಲ್ಲ ಎಂದಿದ್ದ ತಮಿಳುನಾಡು ಮುಖ್ಯಮಂತ್ರಿ ಸಿ. ವಿಜಯ್ ಜೋಸೆಫ್ ಅವರ ಪಕ್ಷದ ನಾಯಕನೇ ಗುತ್ತಿಗೆದಾರರನಿಂದ ಲಂಚ ಪಡೆದಿದ್ದಾನೆ. ಲಂಚ ಪಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ಹಿಂದೆ ಲಂಚ ನೀಡುವಂತೆ ರೈತರಿಗೆ ಬೆದರಿಸಿದ್ದ ಟಿವಿಕೆ ಜಂಟಿ ಕಾರ್ಯದರ್ಶಿಯನ್ನು ಪಕ್ಷವು ವಜಾಗೊಳಿಸಲಾಗಿತ್ತು. ಇದೀಗ ಸಿಎಂ ವಿಜಯ್ ಅವರು ಏನು ಮಾಡುತ್ತಾರೆ? ಎಂದು ಕಾಯುತ್ತಿದ್ದಾರೆ.

ಪಾರದರ್ಶಕ ಆಡಳಿತ ನೀಡಬೇಕೆಂದು ಮುಂದಾದ ಸಿಎಂ ಸಿ.ವಿಜಯ್ ಅವರ ಪಕ್ಷದ ನಾಯಕನಿಂದ ಭ್ರಷ್ಟಾಚಾರ ನಡೆದಿದೆ. ಮಾಂಬಾಕ್ಕಂ ಮತ್ತು ಚೆಂಗಲ್ಪಟ್ಟು ಪೂರ್ವ ಜಿಲ್ಲಾ ಜಂಟಿ ಕಾರ್ಯದರ್ಶಿ ಟಿವಿಕೆ ಪಂಚಾಯತ್ ಅಧ್ಯಕ್ಷ ವೀರಾ ಅವರು ಗುತ್ತಿಗೆದಾರರಿಂದ ಬರೋಬ್ಬರಿ 1.30 ಲಕ್ಷ ಲಂಚ ಸ್ವೀಕರಿಸಿದ್ದಾರೆ. ಅವರು ಹಣ ಪಡೆಯುವ ವಿಡಿಯೋ ಸೆರೆ ಹಿಡಿಯಲಾಗಿದ್ದು, ವೈರಲ್ ಆಗುತ್ತಿದೆ.

TVK Leader Veera

ರಾಜ್ಯದಲ್ಲಿ ಭ್ರಷ್ಟಾಚಾರ ವಿರುದ್ಧ ಸಮರ ಸಾರಿದ್ದ ಸಿಎಂ ವಿಜಯ್ ಅವರು, ಯಾರೇ ಭ್ರಷ್ಟಾಚಾರದಲ್ಲಿ ತೊಡಗಿದರು ಸಾಕ್ಷಿ ಸಮೇತ ಹಿಡಿದುಕೊಟ್ಟವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದರು. ಅಷ್ಟರ ಮಟ್ಟಿಗೆ ಆಡಳಿತದಲ್ಲಿ ಸುಧಾರಣೆ ತರಲು ಅವರು ಶ್ರಮಿಸುತ್ತಿದ್ದಾರೆ. ಇತ್ತ ಅವರ ಟಿವಿಕೆ ಪಕ್ಷದ ನಾಯಕರಿಂದ ಭ್ರಷ್ಟಾಚಾರ ನಡೆದಿದ್ದು ಆನ್‌ಲೈನ್‌ನಲ್ಲಿ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ.

ಭ್ರಷ್ಟಾಚಾರ: ಸಹಾಯವಾಣಿ ಮೂಲಕ ದೂರು ನೀಡಲು ಅವಕಾಶ

ಜನರು ಯಾವ ಅಧಿಕಾರಿಗೂ ಲಂಚ ನೀಡಬೇಕು. ಲಂಚ ಕೇರಳಿದರೆ ಈ ರಾಜ್ಯವನ್ನು ವಿಜಯ್ ಆಳುತ್ತಿದ್ದಾರೆ ಎಂದು ಹೇಳುವಂತೆ ಸಿಎಂ ವಿಜಯ್ ಜನರಿಗೆ ತಿಳಿಸಿದ್ದರು. ಯಾವ ಇಲಾಖೆಗಳಲ್ಲೂ ಭ್ರಷ್ಟಾಚಾರ ನಡೆಯಬಾರದು. ಒಂದು ವೇಳೆ ನಡೆದರೆ ಯಾರೇ ಆಗಲಿ ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ತಿಳಿಸಿದ್ದರು. ಭ್ರಷ್ಟಾಚಾರ ತಡೆಗೆ ದೂರು ನೀಡಲು ಸಹಾಯವಾಣಿ 1800-123-4567 ಆರಂಭಿಸಿದ್ದಾರೆ. ಇ-ಮೇಲ್ ([email protected]) ಮೂಲಕ ಸಹ ದೂರು ನೀಡಬಹುದಾಗಿದೆ.

ಲಂಚಕ್ಕೆ ಬೇಡಿಕೆ ಇಟ್ಟ ಅಧಿಕಾರಿ 6ಗಂಟೆಯಲ್ಲೇ ವಜಾ

ಈ ಹಿಂದೆ ಕಡಲೂರು ಜಿಲ್ಲೆಯ ಕಟ್ಟುಮನ್ನಾರ್ಕೋವಿಲ್ ಬಳಿಯ ಕರುಣಾಕರನಲ್ಲೂರಿನ ಪುಲವೇಂದ್ರನ್ ಕಟ್ಟುಮನ್ನಾರ್ಕೋವಿಲ್ ಬಳಿಯ ಕಂದಮಂಗಲಂ ನರೈಕ್ಕಲ್ ಕರೆಯಲ್ಲಿ ಕಂದಾಯ ಇಲಾಖೆಯ ಅನುಮತಿ ಪಡೆದು ಮಣ್ಣು ತೆಗೆಸುತ್ತಿದ್ದ ರೈತರಿಂದ 1 ಲಕ್ಷ ರೂಪಾಯಿಗೆ ಅಧಿಕಾರಿ ಬೇಡಿಕೆ ಇಟ್ಟಿದ್ದರು. ರೈತರನ್ನು ಬೆದರಿಸಿದ್ದ ಅಧಿಕಾರಿ ಅನುಮತಿ ಇದ್ದರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಜನರು ಪುಲವೇಂದ್ರನ್ ಕಾರಿನ ಗಾಜು ಒಡೆದಿದ್ದರು. ಪೊಲೀಸರು ಎರಡು ಕಡೆಯವರನ್ನು ಸಮಾಧಾನ ಮಾಡಿದ್ದರು.

ಪುಲವೇಂದ್ರನ್ ವಿರುದ್ಧ ಟಿವಿಕೆ ಪಕ್ಷಕ್ಕೂ ದೂರು ನೀಡಲಾಗಿತ್ತು. ದೂರು ಸ್ವೀಕರಿಸಿದ ಕೇವಲ ಆರು ಗಂಟೆಗಳಲ್ಲಿ ಆತನನ್ನು ಕೆಲಸದಿಂದಲೇ ವಜಾಗೊಳಿಸಲಾಯಿತು. ಈ ಮೂಲಕ ಭ್ರಷ್ಟಾಚಾರ ಯಾರೇ ಮಾಡಿದರೂ ಅದನ್ನು ಸಹಿಸುವುದಿಲ್ಲ. ಜನರಿಗೆ ಉತ್ತಮ ಸೇವೆ ನೀಡುವಂತೆ ಟಿವಿಕೆ ಸಂದೇಶ ರವಾನಿಸಿತ್ತು. ಇದೀಗ ಅಂಥದ್ದೆ ಮತ್ತೊಂದು ಪ್ರಕರಣ ನಡೆದಿದೆ. ಈ ಬಗ್ಗೆ ಸಿಎಂ ಕೈಗೊಳ್ಳುವ ನಿರ್ಧಾರದ ಮೇಲೆ ಕುತೂಹಲ ನೆಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+